ದೇಶ ಕಾಯ್ದ ವೀರ ಯೋಧನಿಗೊಂದು ಸೆಲ್ಯೂಟ್‌


Team Udayavani, Jan 20, 2021, 7:18 PM IST

A salute to a heroic warrior

ಮುಂಬಯಿ: ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಜನಿಸಿ, ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ನಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿಸಿ, ದೇಶ ಕಾಯುವ ಸೇನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅಪ್ರತಿಮ ಶೌರ್ಯಸಾಧಕ ದಿ| ಕ್ಯಾಪ್ಟನ್‌ ಗೋಪಾಲ ಎನ್‌. ಶೆಟ್ಟಿಯವರು ಇಂದು ನಮ್ಮೊಂದಿಗಿರುತ್ತಿದ್ದರೆ ಅವರ ಜನ್ಮಶತಮಾನದ ಸಂತಸದ ಕ್ಷಣಗಳು ಇನ್ನಷ್ಟು ಅಪ್ಯಾಯ ಮಾನವಾಗಿರುತ್ತಿತ್ತು. ಅವರು ನಮ್ಮನ್ನಗಲಿ ಈಗಾಗಲೇ 21 ವರ್ಷಗಳು ಸಂದಿದ್ದು, ಶಿರ್ಡಿ ಸೈನಿಕ ಫಾರ್ಮ್ನಲ್ಲಿರುವ ಮನೆಯಲ್ಲಿ ಜ. 21ರಂದು ಅವರ ನೂರನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಜರಗಲಿದೆ.

ಸುಮಾರು 28 ವರ್ಷ ದೇಶ ಸೇವೆಗೈದ ಅವರ ಧೀಮಂತ ಜೀವನದ ನೆನಪು ಸದಾ ಕಾಡುತ್ತಿರುತ್ತದೆ. ಬಾಲ್ಯದಲ್ಲಿಯೇ ಸೇನೆಯ ಮೇಲೆ ಅತೀವ ಆಸಕ್ತಿ ಹೊಂದಿದ್ದ ಗೋಪಾಲ ಶೆಟ್ಟಿ ಅವರು 10ನೇ ತರಗತಿ ಮುಗಿಸಿ ಮುಂಬಯಿಗೆ ತೆರಳಿ, ನಾಸಿಕ್‌ ಸಮೀಪದ ದೇವಲಾಲಿಯಲ್ಲಿ ಸೇನಾ ತರಬೇತಿ ಪಡೆದುಕೊಂಡು 1940ರಲ್ಲಿ ಸೇನೆಯಲ್ಲಿ ಹವಾಲ್ದಾರ್‌ ಹುದ್ದೆ ಪಡೆದುಕೊಂಡರು.

ಮುಂದೆ ಶೆಟ್ಟಿಯವರ ಜೀವನದಲ್ಲಿ ನಡೆದಿರುವುದೆಲ್ಲವೂ ಅದ್ಭುತ, ರೋಚಕ ಹಾಗೂ ಸಾಧನೆಯ ಮಜಲುಗಳು. ಕಠಿನ ಪರಿಶ್ರಮದ ಮೂಲಕ ಗೆರಿಲ್ಲಾ ಯುದ್ಧತಂತ್ರ, ಜಂಗಲ್‌ವಾರ್‌, ಕಮಾಂಡೋ ಕಾರ್ಯಾಚರಣೆಯಂತಹ ಹಲವು ಸೇನಾ ಕೌಶಲಗಳಲ್ಲಿ ಪಳಗಿದ್ದ ಶೆಟ್ಟಿಯವರು 1944ರಲ್ಲಿ ರಾವಲ್ಪಿಂಡಿಯ (ಈಗ ಪಾಕಿಸ್ಥಾನಕ್ಕೆ ಸೇರಿದೆ) ಬ್ರಿಟಿಷ್‌ ರೆಜಿಮೆಂಟಿಗೆ ಭಡ್ತಿ ಹೊಂದಿದ್ದರು. ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದರು. ಸುಭಾಷ್‌ಚಂದ್ರ ಬೋಸ್‌ ನೇತೃತ್ವದಲ್ಲಿ ನಡೆದಿದ್ದ ಕೊರಿಯಾ ಯುದ್ಧದ ಸಂದರ್ಭದಲ್ಲಿ ಶೆಟ್ಟಿಯವರು ಜಪಾನ್‌ ಸೇನೆಗೆ ಸೆರೆ ಸಿಕ್ಕಿ ಯುದ್ಧ ಕೈದಿಯಾಗಿ ಸೆರೆಮನೆವಾಸ ಅನುಭವಿಸಿದ್ದರು. ಸೇನಾ ಕ್ಷೇತ್ರದಲ್ಲಿ ಇವರು ತೋರಿಸಿದ ಅತ್ಯದ್ಭುತ ಪ್ರೌಢಿಮೆಗಾಗಿ ದೇಶದ ಪ್ರಥಮ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ್‌ ಅವರಿಂದ “ಮೆನ್ಶನ್‌ ಇನ್‌ ಡಿಸ್ಪ್ಯಾಚಸ್‌’ ಗೌರವ ಪಡೆದುಕೊಂಡಿದ್ದರು. ಅದಾಗಲೇ ಕ್ಯಾಪ್ಟನ್‌ ಹುದ್ದೆಗೆ ಭಡ್ತಿ ಪಡೆದಿದ್ದ ಗೋಪಾಲ ಶೆಟ್ಟಿ ಪೋರ್ಚುಗೀಸರಿಂದ ಗೋವಾ ವಿಮುಕ್ತಿಗಾಗಿ ನಡೆದ 24 ಗಂಟೆಗಳ ಯುದ್ಧದಲ್ಲಿ ಪಾಲ್ಗೊಂಡಿದ್ದರು. 1962ರಲ್ಲಿ ಚೀನ ವಿರುದ್ಧದ ಯುದ್ಧದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆಗ ಅವರು ಸುಬೇದಾರ್‌ ಮೇಜರ್‌ ಹುದ್ದೆಯಲ್ಲಿದ್ದರು. 1965ರಲ್ಲಿ ನಡೆದಿದ್ದ ಭಾರತ-ಪಾಕಿಸ್ಥಾನ ಯುದ್ಧದ ವೇಳೆ ಕ್ಯಾ| ಶೆಟ್ಟಿಯವರು ಸಿಕ್ಕಿಂನಲ್ಲಿ ಬೇಹುಗಾರಿಕಾ ಸೇನಾ ತುಕಡಿಯಲ್ಲಿದ್ದರು. ಆ ಯುದ್ಧದ ಸಂದರ್ಭದಲ್ಲಿ ಶೆಟ್ಟಿಯವರು ಪಾಕ್‌ ವೈಮಾನಿಕ ದಾಳಿಗೆ ತುತ್ತಾಗಿ, ಗಂಭೀರ ಗಾಯಗೊಂಡು ಜಲಂಧರ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ದೇಶಕ್ಕಾಗಿ ವಿಶಿಷ್ಟ ಸೇವೆಗೈದ ಕ್ಯಾ| ಗೋಪಾಲ ಶೆಟ್ಟಿಯವರಿಗೆ 1967ರಲ್ಲಿ ರಾಷ್ಟ್ರಪತಿ ಡಾ| ಜಾಕಿರ್‌ ಹುಸೇನ್‌ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಿದ್ದರು. ದೇಶ ರಕ್ಷಣೆಯ ಹಲವು ಸಂದರ್ಭಗಳಲ್ಲಿ ಅಪಾ ಯಕಾರಿ ಸನ್ನಿವೇಶಗಳನ್ನೂ ಲೆಕ್ಕಿಸದೆ ಮುನ್ನುಗ್ಗಿ ಎದುರಾಳಿಗಳ ಹುಟ್ಟಡಗಿಸಿದ್ದ ಕ್ಯಾ| ಶೆಟ್ಟಿ ಅವರಿಗೆ ಗಾಯಗೊಂಡ ಬಳಿಕ ಸೇನೆಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಆದರೆ ದೇಶಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರಿಗೆ ನಿವೃತ್ತಿ ಬಳಿಕವೂ ಕೆಲವು ಶೌರ್ಯ ಪ್ರಶಸ್ತಿಗಳು ಬಂದಿವೆ. ಒಂದೊಮ್ಮೆ ಕ್ಯಾ| ಗೋಪಾಲ ಶೆಟ್ಟಿಯವರು ಬದುಕಿದ್ದರೆ ಅವರಿಗೆ ಈಗ ನೂರರ ಸಂಭ್ರಮ. ಅವರಿಲ್ಲದಿದ್ದರೂ ಅವರು ದೇಶಕ್ಕಾಗಿ ಸಲ್ಲಿಸಿದ ಅತ್ಯಮೂಲ್ಯ ಸೇವೆ ಶತಮಾನ ಕಳೆದರೂ ನೆನಪಿನಲ್ಲಿ ಉಳಿಯುವಂತಹುದ್ದಾಗಿದೆ. ಆದ್ದರಿಂದ ದೇಶ ಕಾಯ್ದ ಅವರಿಗೆ ದೇಶಪ್ರೇ ಮಿಗಳಿಂದ ಮತ್ತೂಮ್ಮೆ ಸೆಲ್ಯೂಟ್‌. ಕ್ಯಾ| ಗೋಪಾಲ ಶೆಟ್ಟಿಯವರು ಜೀವಿತಾವಧಿಯಲ್ಲಿ ವಾಸ್ತವ್ಯ ಹೂಡಿದ್ದ ಮನೆ ಶಿರ್ಡಿಯಲ್ಲಿದೆ. ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು, ಏಳು ಮಂದಿ ಮೊಮ್ಮಕ್ಕಳು, ಇಬ್ಬರು ಮರಿಮೊಮ್ಮಕ್ಕಳು ಇದ್ದಾರೆ. ಅವರ ಪುಣ್ಯತಿಥಿ ನ. 7ರಂದು ಶಿರ್ಡಿಗೆ ಹತ್ತಿರದ ಮನೆಯಲ್ಲಿರುವ ಸಮಾಧಿಗೆ ಕುಟುಂಬಿಕರು ಪುಷ್ಪನಮನ ಸಲ್ಲಿಸುತ್ತಾರೆ.ಉಡುಪಿ ಜಿಲ್ಲೆಯ ಪೆರ್ಡೂರು ಗ್ರಾಮದಲ್ಲಿ ಜನಿಸಿ, ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ನಲ್ಲಿ ಎಸೆಸೆಲ್ಸಿ ವಿದ್ಯಾಭ್ಯಾಸ ಮುಗಿಸಿ, ದೇಶ ಕಾಯುವ ಸೇನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅಪ್ರತಿಮ ಶೌರ್ಯಸಾಧಕ ದಿ| ಕ್ಯಾಪ್ಟನ್‌ ಗೋಪಾಲ ಎನ್‌. ಶೆಟ್ಟಿಯವರು ಇಂದು ನಮ್ಮೊಂದಿಗಿರುತ್ತಿದ್ದರೆ ಅವರ ಜನ್ಮಶತಮಾನದ ಸಂತಸದ ಕ್ಷಣಗಳು ಇನ್ನಷ್ಟು ಅಪ್ಯಾಯ ಮಾನವಾಗಿರುತ್ತಿತ್ತು. ಅವರು ನಮ್ಮನ್ನಗಲಿ ಈಗಾಗಲೇ 21 ವರ್ಷಗಳು ಸಂದಿದ್ದು, ಶಿರ್ಡಿ ಸೈನಿಕ ಫಾರ್ಮ್ನಲ್ಲಿರುವ ಮನೆಯಲ್ಲಿ ಜ. 21ರಂದು ಅವರ ನೂರನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಜರಗಲಿದೆ.

ಸುಮಾರು 28 ವರ್ಷ ದೇಶ ಸೇವೆಗೈದ ಅವರ ಧೀಮಂತ ಜೀವನದ ನೆನಪು ಸದಾ ಕಾಡುತ್ತಿರುತ್ತದೆ. ಬಾಲ್ಯದÇÉೇ ಸೇನೆಯ ಮೇಲೆ ಅತೀವ ಆಸಕ್ತಿ ಹೊಂದಿದ್ದ ಗೋಪಾಲ ಶೆಟ್ಟಿ ಅವರು 10ನೇ ತರಗತಿ ಮುಗಿಸಿ ಮುಂಬಯಿಗೆ ತೆರಳಿ, ನಾಸಿಕ್‌ ಸಮೀಪದ ದೇವಲಾಲಿಯಲ್ಲಿ ಸೇನಾ ತರಬೇತಿ ಪಡೆದುಕೊಂಡು 1940ರಲ್ಲಿ ಸೇನೆಯಲ್ಲಿ ಹವಾಲ್ದಾರ್‌ ಹುದ್ದೆ ಪಡೆದುಕೊಂಡರು. ಮುಂದೆ ಶೆಟ್ಟಿಯವರ ಜೀವನದಲ್ಲಿ ನಡೆದಿರುವುದೆಲ್ಲವೂ ಅದ್ಭುತ, ರೋಚಕ ಹಾಗೂ ಸಾಧನೆಯ ಮಜಲುಗಳು. ಕಠಿನ ಪರಿಶ್ರಮದ ಮೂಲಕ ಗೆರಿಲ್ಲಾ ಯುದ್ಧತಂತ್ರ, ಜಂಗಲ್‌ವಾರ್‌, ಕಮಾಂಡೋ ಕಾರ್ಯಾಚರಣೆಯಂತಹ ಹಲವು ಸೇನಾ ಕೌಶಲಗಳಲ್ಲಿ ಪಳಗಿದ್ದ ಶೆಟ್ಟಿಯವರು 1944ರಲ್ಲಿ ರಾವಲ್ಪಿಂಡಿಯ (ಈಗ ಪಾಕಿಸ್ಥಾನಕ್ಕೆ ಸೇರಿದೆ) ಬ್ರಿಟಿಷ್‌ ರೆಜಿಮೆಂಟಿಗೆ ಭಡ್ತಿ ಹೊಂದಿದ್ದರು.

ಇದನ್ನೂ ಓದಿ:ಯೋಗಿ ವೇಮನ ಭಾರತೀಯ ತತ್ವಜ್ಞಾನಿ

ಎರಡನೇ ಮಹಾಯುದ್ಧದಲ್ಲಿ ಭಾಗಿಯಾಗಿದ್ದರು. ಸುಭಾಷ್‌ಚಂದ್ರ ಬೋಸ್‌ ನೇತೃತ್ವದಲ್ಲಿ ನಡೆದಿದ್ದ ಕೊರಿಯಾ ಯುದ್ಧದ ಸಂದರ್ಭದಲ್ಲಿ ಶೆಟ್ಟಿಯವರು ಜಪಾನ್‌ ಸೇನೆಗೆ ಸೆರೆ ಸಿಕ್ಕಿ ಯುದ್ಧ ಕೈದಿಯಾಗಿ ಸೆರೆಮನೆವಾಸ ಅನುಭವಿಸಿದ್ದರು. ಸೇನಾ ಕ್ಷೇತ್ರದಲ್ಲಿ ಇವರು ತೋರಿಸಿದ ಅತ್ಯದ್ಭುತ ಪ್ರೌಢಿಮೆಗಾಗಿ ದೇಶದ ಪ್ರಥಮ ರಾಷ್ಟ್ರಪತಿ ಡಾ| ರಾಜೇಂದ್ರ ಪ್ರಸಾದ್‌ ಅವರಿಂದ “ಮೆನ್ಶನ್‌ ಇನ್‌ ಡಿಸ್ಪ್ಯಾಚಸ್‌’ ಗೌರವ ಪಡೆದುಕೊಂಡಿದ್ದರು. ಅದಾಗಲೇ ಕ್ಯಾಪ್ಟನ್‌ ಹುದ್ದೆಗೆ ಭಡ್ತಿ ಪಡೆದಿದ್ದ ಗೋಪಾಲ ಶೆಟ್ಟಿ ಪೋರ್ಚುಗೀಸರಿಂದ ಗೋವಾ ವಿಮುಕ್ತಿಗಾಗಿ ನಡೆದ 24 ಗಂಟೆಗಳ ಯುದ್ಧದಲ್ಲಿ ಪಾಲ್ಗೊಂಡಿದ್ದರು. 1962ರಲ್ಲಿ ಚೀನ ವಿರುದ್ಧದ ಯುದ್ಧದಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆಗ ಅವರು ಸುಬೇದಾರ್‌ ಮೇಜರ್‌ ಹುದ್ದೆಯಲ್ಲಿದ್ದರು. 1965ರಲ್ಲಿ ನಡೆದಿದ್ದ ಭಾರತ-ಪಾಕಿಸ್ಥಾನ ಯುದ್ಧದ ವೇಳೆ ಕ್ಯಾ| ಶೆಟ್ಟಿಯವರು ಸಿಕ್ಕಿಂನಲ್ಲಿ ಬೇಹುಗಾರಿಕಾ ಸೇನಾ ತುಕಡಿಯಲ್ಲಿದ್ದರು. ಯುದ್ಧದ ಸಂದರ್ಭದಲ್ಲಿ ಶೆಟ್ಟಿಯವರು ಪಾಕ್‌ ವೈಮಾನಿಕ ದಾಳಿಗೆ ತುತ್ತಾಗಿ, ಗಂಭೀರ ಗಾಯಗೊಂಡು ಜಲಂಧರ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ದೇಶಕ್ಕಾಗಿ ವಿಶಿಷ್ಟ ಸೇವೆಗೈದ ಕ್ಯಾ| ಗೋಪಾಲ ಶೆಟ್ಟಿಯವರಿಗೆ 1967ರಲ್ಲಿ ರಾಷ್ಟ್ರಪತಿ ಡಾ| ಜಾಕಿರ್‌ ಹುಸೇನ್‌ ವಿಶಿಷ್ಟ ಸೇವಾ ಪದಕ ನೀಡಿ ಗೌರವಿಸಿದ್ದರು. ದೇಶ ರಕ್ಷಣೆಯ ಹಲವು ಸಂದರ್ಭಗಳಲ್ಲಿ ಅಪಾ ಯಕಾರಿ ಸನ್ನಿವೇಶಗಳನ್ನೂ ಲೆಕ್ಕಿಸದೆ ಮುನ್ನುಗ್ಗಿ ಎದುರಾಳಿಗಳ ಹುಟ್ಟಡಗಿಸಿದ್ದ ಕ್ಯಾ| ಶೆಟ್ಟಿ ಅವರಿಗೆ ಗಾಯಗೊಂಡ ಬಳಿಕ ಸೇನೆಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಆದರೆ ದೇಶಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರಿಗೆ ನಿವೃತ್ತಿ ಬಳಿಕವೂ ಕೆಲವು ಶೌರ್ಯ ಪ್ರಶಸ್ತಿಗಳು ಬಂದಿವೆ. ಒಂದೊಮ್ಮೆ ಕ್ಯಾ| ಗೋಪಾಲ ಶೆಟ್ಟಿಯವರು ಬದುಕಿದ್ದರೆ ಅವರಿಗೆ ಈಗ ನೂರರ ಸಂಭ್ರಮ. ಅವರಿಲ್ಲದಿದ್ದರೂ ಅವರು ದೇಶಕ್ಕಾಗಿ ಸಲ್ಲಿಸಿದ ಅತ್ಯಮೂಲ್ಯ ಸೇವೆ ಶತಮಾನ ಕಳೆದರೂ ನೆನಪಿನಲ್ಲಿ ಉಳಿಯುವಂತಹುದ್ದಾಗಿದೆ. ಆದ್ದರಿಂದ ದೇಶ ಕಾಯ್ದ ಅವರಿಗೆ ದೇಶಪ್ರೇ ಮಿಗಳಿಂದ ಮತ್ತೂಮ್ಮೆ ಸೆಲ್ಯೂಟ್‌. ಕ್ಯಾ| ಗೋಪಾಲ ಶೆಟ್ಟಿಯವರು ಜೀವಿತಾವಧಿಯಲ್ಲಿ ವಾಸ್ತವ್ಯ ಹೂಡಿದ್ದ ಮನೆ ಶಿರ್ಡಿಯಲ್ಲಿದೆ. ಅವರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು, ಏಳು ಮಂದಿ ಮೊಮ್ಮಕ್ಕಳು, ಇಬ್ಬರು ಮರಿಮೊಮ್ಮಕ್ಕಳು ಇದ್ದಾರೆ. ಅವರ ಪುಣ್ಯತಿಥಿ ನ. 7ರಂದು ಶಿರ್ಡಿಗೆ ಹತ್ತಿರದ ಮನೆಯಲ್ಲಿರುವ ಸಮಾಧಿಗೆ ಕುಟುಂಬಿಕರು ಪುಷ್ಪನಮನ ಸಲ್ಲಿಸುತ್ತಾರೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.