ಆಹಾರ್‌ ಕಾರ್ಯಕಾರಿ ಸಮಿತಿ: 11ನೇ ಮಾಸಿಕ ಸಭೆ


Team Udayavani, Dec 6, 2017, 4:22 PM IST

04-Mum03a.jpg

ಮುಂಬಯಿ: ಆಹಾರ್‌ನ ಕಾರ್ಯಕಾರಿ ಸಮಿತಿಯ 11ನೇ ಮಾಸಿಕ ಸಭೆಯು ನ. 27 ರಂದು ಕುರ್ಲಾ ಪೂರ್ವದಲ್ಲಿರುವ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ವಲಯ  ಆರರ ಪ್ರಾಯೋಜಕತ್ವದಲ್ಲಿ ಉಪಾಧ್ಯಕ್ಷ ಅಮರ್‌ ಎಸ್‌. ಶೆಟ್ಟಿ ಮತ್ತು ತಂಡದವರ ಆಯೋಜನೆಯಲ್ಲಿ ಜರಗಿತು.

ವಲಯ 11ರ ಉಪಾಧ್ಯಕ್ಷ ಅಮರ್‌ ಎಸ್‌. ಶೆಟ್ಟಿ ಅವರು ಸ್ವಾಗತಿಸಿ ಸಭೆಯ ಉದ್ದೇಶವನ್ನು ವಿವರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಹಾರ್‌ನ ಅಧ್ಯಕ್ಷ ಆದರ್ಶ್‌ ಶೆಟ್ಟಿ  ಅವರು, ನವೆಂಬರ್‌ನಲ್ಲಿ ನಿಯೋಗವು ಕೈಗೊಂಡಿರುವ ಕಾರ್ಯಕ್ರಮ ಹಾಗೂ ಅವುಗಳ ಬೆಳವಣಿಗೆಯನ್ನು ವಿವರಿಸಿ, ಕೇಂದ್ರ ಸರಕಾರವು ಜಿಎಸ್‌ಟಿ ಕೌನ್ಸಿಲ್‌ನ ಮೂಲಕ ಜಿಎಸ್‌ಟಿಯಲ್ಲಿ ಆದ ಕಡಿತವನ್ನು ಶ್ಲಾಘಿಸಿದರು. ನಮ್ಮ ಬೇಡಿಕೆ ಶೇ. 18ರಿಂದ ಶೇ. 12ಕ್ಕೆ ಇಳಿಸುವುದಾಗಿತ್ತು. ಜಿಎಸ್‌ಟಿ ಕೌನ್ಸಿಲ್‌ ಅದನ್ನು ಶೇ. 5ಕ್ಕೆ ಇಳಿಸಿದೆ. ಇದನ್ನು ಆಹಾರ್‌ ನಿಯೋಗವು ಮುಕ್ತವಾಗಿ ಸ್ವೀಕರಿಸಿದೆ. ನಿಜವಾದ ಲೆಕ್ಕಪತ್ರದೊಂದಿಗೆ ಗ್ರಾಹಕರಿಂದ ಶೇ. 5 ರಷ್ಟು ಜಿಎಸ್‌ಟಿ ಸಂಗ್ರಹಿಸಿ   ಸಮಯಕ್ಕೆ ಸರಿಯಾಗಿ ಸರಕಾರಕ್ಕೆ ಪಾವತಿಸಿ. ನಾವೆಲ್ಲ ಕಳೆದುಕೊಂಡಿರುವ ವ್ಯಾಪಾರವನ್ನು ಮತ್ತೆ ಪಡೆಯಬೇಕು. ತೆರಿಗೆಯನ್ನು ಸರಿಯಾದ ಸಮಯದಲ್ಲಿ ಪಾವತಿಸದೇ ಇದ್ದಲ್ಲಿ ತೆರಿಗೆ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಾಗಿ ಬರಬಹುದು. ಕೆಲವು ಹೊಟೇಲ್‌ಗ‌ಳಲ್ಲಿ ಜಿಎಸ್‌ಟಿ ನಂಬರ್‌ ಇಲ್ಲದೆಯೆ ಜಿಎಸ್‌ಟಿ ದರವನ್ನು ಲಗತ್ತಿಸುತ್ತಾರೆ. ಇದು ಖಂಡನೀಯ. ದಯವಿಟ್ಟು ಇದರಿಂದ ದೂರವಿರಿ. ಪ್ರತಿಯೊಬ್ಬ ಹೊಟೇಲಿಗರು ತಮ್ಮ ಜಿಎಸ್‌ಟಿ ನಂಬರ್‌ನ್ನು ಹೊಟೇಲಿನ ಪ್ರಮುಖ ಜಾಗದಲ್ಲಿ ಖಡ್ಡಾಯವಾಗಿ ಪ್ರದರ್ಶಿಸತಕ್ಕದ್ದು. ಆಹಾರ್‌ ನಿಯೋಗವು ರಾಜ್ಯ ವಿತ್ತ ಸಚಿವ ಸುಧೀರ್‌ ಮುಂಗತ್ತಿವಾರ್‌ ಹಾಗೂ ಸಂಸತ್‌ ಸಚಿವ ಗೋಪಾಲ್‌ ಶೆಟ್ಟಿ ಅವರನ್ನು ಭೇಟಿಯಾಗಿ, ಪುಷ್ಪಗುತ್ಛ ನೀಡಿ ಜಿಎಸ್‌ಟಿಯ ಕಡಿತಕ್ಕಾಗಿ ನಿಯೋಗವು ಕೃತಜ್ಞತೆ ಸಲ್ಲಿಸಿದೆ. ಹೈದ್ರಾಬಾದ್‌ ಉಚ್ಚ ನ್ಯಾಯಾಲಯದ ಎಂಆರ್‌ಪಿ ನಿರ್ಣಯದ ಬಗ್ಗೆ ಮಾಹಿತಿ ನೀಡಿದ ಅವರು, ಹೊಟೇಲ್‌ಗ‌ಳಲ್ಲಿ ಎಂಆರ್‌ಪಿಗಿಂತ ಅಧಿಕ ಚಾರ್ಜ್‌ ಮಾಡಬಹುದಾಗಿದೆ. ಆದರೆ ಪಾರ್ಸೆಲ್‌ಗ‌ಳಿಗೆ ಎಂಆರ್‌ಪಿಗಿಂತ ಹೆಚ್ಚಾಗಿ ಶುಲ್ಕ ವಿಧಿಸುವ ಹಾಗಿಲ್ಲ. ನಾಗಪುರ ಮುನ್ಸಿಪಾಲ್‌ ವೇಜಸ್‌ ವಿಚಾರಣೆಯನ್ನು ಜನವರಿ 19ಕ್ಕೆ ಮುಂದೂಡಲಾಗಿದೆ. ಘನತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿ, ಆದ್ರì ಮತ್ತು ಶುಷ್ಕ ಕಸಗಳನ್ನು ಪ್ರತ್ಯೇಕವಾಗಿ ಬೇಪರ್ಡಿಸಿ  ಮಹಾನಗರ ಪಾಲಿಕೆಗೆ ಕೊಡತಕ್ಕದ್ದು. ಘನತ್ಯಾಜ್ಯದ ಬಗ್ಗೆ ನಮ್ಮ ನಿಯೋಗವು ಹೊಸ ಪ್ರಸ್ತಾಪವೊಂದನ್ನು ಮುನ್ಸಿಪಾಲ್‌ ಕಮಿಷನರ್‌ಗೆ ಸಲ್ಲಿಸಲಾಗುವುದು ಎಂದು ನುಡಿದರು.

ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಸಲಹೆ ಗಾರರುಗಳಾದ ಸುಧಾಕರ ವೈ ಶೆಟ್ಟಿ ಅವರು, ಸಲಹೆ-ಸೂಚನೆಗಳನ್ನು ನೀಡಿ, ಆಹಾರ್‌ ಅಧ್ಯಕ್ಷ ಆದರ್ಶ್‌ ಶೆಟ್ಟಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ, ಕಳೆದ 3 ವರ್ಷಗಳ ಅವರ ಕಾರ್ಯಾವಧಿಯಲ್ಲಿ ಬಹ ಳಷ್ಟು ಅಭಿವೃದ್ಧಿಪರ ಕಾರ್ಯಗಳು ನಡೆದಿರುವುದು ಅಭಿನಂದನೀಯವಾಗಿದೆ ಎಂದರು. 

ಆಹಾರ್‌ನ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸುನೀಲ್‌ ಶೆಟ್ಟಿ ಅವರು ಮಾತನಾಡಿ, ಡಿಸೆಂಬರ್‌ 21ರಂದು ನಡೆಯುವ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಎಲ್ಲರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿದರು.

ಆಹಾರ್‌ನ ಉಪಾಧ್ಯಕ್ಷರುಗಳಾದ ವಲಯ ಒಂದರ ಉಪಾಧ್ಯಕ್ಷ ಮಹೇಂದ್ರ ಕರ್ಕೇರ, ವಲಯ ಎರಡರ ಉಪಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ವಿಜಯ್‌ ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಸುನೀಲ್‌ ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ರವೀಂದ್ರನಾಥ್‌ ನೀರೆ, ವಲಯ ಆರರ ಉಪಾಧ್ಯಕ್ಷ ಅಮರ್‌ ಶೆಟ್ಟಿ, ವಲಯ ಏಳರ ಉಪಾಧ್ಯಕ್ಷ ರಾಜನ್‌ ಶೆಟ್ಟಿ, ವಲಯ ಎಂಟರ ಉಪಾಧ್ಯಕ್ಷ ಜಗದೀಶ್‌ ಶೆಟ್ಟಿ, ವಲಯ ಒಂಭತ್ತರ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ವಲಯ ಹತ್ತರ ಉಪಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಅವರು ತಮ್ಮ ತಮ್ಮ ವಲಯಗಳ ಸದಸ್ಯರ ಸೇರ್ಪಡೆ ಮತ್ತು ಸಾಧನೆಗಳನ್ನು ವಿವರಿಸಿದರು.

ಸಭೆಯಲ್ಲಿ ಪಾಲ್ಗೊಂಡ ವಿವಿಧ ಮಳಿಗೆಗಳ ಪ್ರಾಯೋಜಕರನ್ನು ಗೌರವ ಕಾರ್ಯದರ್ಶಿ ವಿಶ್ವಪಾಲ್‌ ಎಸ್‌. ಶೆಟ್ಟಿ ಅವರು ಪರಿಚಯಿಸಿದರೆ, ಅಧ್ಯಕ್ಷ ಆದರ್ಶ್‌ ಶೆಟ್ಟಿ ಅವರು ಅವರು ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಆರ್‌. ಶೆಟ್ಟಿ ವಂದಿಸಿದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.