ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ: ಮಹಾವೀರ ಜಯಂತಿ

Team Udayavani, Apr 23, 2019, 3:12 PM IST

ಮುಂಬಯಿ: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ವತಿಯಿಂದ ಮಹಾವೀರ ಜಯಂತಿ ಆಚರಣೆಯು ಎ. 17ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂಬ್ರಾದ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.

ಪ್ರಾರಂಭದಲ್ಲಿ ಭಗವಾನ್‌ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಪೂಜೆ ಹಾಗೂ ಭಗವಾನ್‌ ಬಾಹುಬಲಿಗೆ ಪಾದಪೂಜೆ, ಭಗವಾನ್‌ ಮಹಾವೀರ ಸ್ವಾಮಿಯ ಬಿಂಬದ ಪಲ್ಲಕ್ಕಿ ಉತ್ಸವ ನಡೆಯಿತು. ಪಲ್ಲಕಿಯನ್ನು ವಾದ್ಯ, ಬ್ಯಾಂಡ್‌ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ದೇವರಿಗೆ ವಿಶೇಷ ಅಭಿಷೇಕ, ವಿವಿಧ ದ್ರವ್ಯಾಭಿಷೇಕ, ಚತುಷೊRàನ ಕಲಶಾಭಿಷೇಕ, ಪೂರ್ಣಕುಂಭ ಕಲಶಾಭಿಷೇಕ, ನಾಮಕರಣ ವಿಧಿ-ವಿಧಾನಗಳನ್ನು ಕಾರ್ಕಳ ಪರಪ್ಪಾಡಿಯ ಜಿನಸೇನ ಇಂದ್ರರು ನೆರವೇರಿಸಿ ಆಶೀರ್ವದಿಸಿದರು.

ಯಾದಪ್ಪ ಕೋರಿ ಹಾಗೂ ವಿಜಯಮಾಲಾ ಕೋರಿ ಅವರು ಸೌದ್ಧರ್ಮೇಂದ್ರ ಹಾಗೂ ಶಚೀದೇವಿಯಾಗಿ ಮಹಾವೀರ ಸ್ವಾಮಿಗೆ ವಿವಿಧ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ರಾಜೇಂದ್ರ ಹೆಗ್ಗಡೆ, ರತ್ನಾಕರ ಅಜ್ರಿ, ಸನತ್‌ ಕುಮಾರ್‌ ಜೈನ್‌, ನೇಮಿರಾಜ್‌ ಜೈನ್‌, ಉದಯ ಅಧಿಕಾರಿ, ವಾರಿಸೇನ ಜೈನ್‌, ಸುರೇಶ್‌ ಬಲ್ಲಾಳ್‌, ರಘುವೀರ್‌ ಹೆಗ್ಡೆ, ಪ್ರವೀಣ್‌ಚಂದ್ರ ಜೈನ್‌, ಲೋಕನಾಥ್‌ ಜೈನ್‌, ಜಯರಾಜ್‌ ಜೈನ್‌, ಜಯಶ್ರೀ ಜೈನ್‌, ರಿಯಾನ್ಸ್‌ ಜೈನ್‌, ವಸಂತಿ ಜೈನ್‌, ಅವರು ವಿವಿಧ ಅಭಿಷೇಕಗಳನ್ನು ನೆರವೇರಿಸಿ ಸಹಕರಿಸಿದರು.

ಪ್ರಫುಲ್ಲಾ ಮುನಿರಾಜ್‌ ಜೈನ್‌ ಹಾಗೂ ಕುಮೋದಿನಿ ಮಹಾವೀರ್‌ ಜೈನ್‌ ಅವರು ಜನ್ಮ ಕಲ್ಯಾಣ ವಿಧಿ-ವಿಧಾನಗಳನ್ನು ನೆರವೇರಿಸಿದರು. ಉದಯ ಅತಿಕಾರಿ ಮಹಾ ಮಂಗಳಾರತಿಗೈದರು. ಉದಯ ಹೆಗ್ಗಡೆ, ಕು| ಶ್ರಾವ್ಯಾ, ಸುಜಯ್‌ ಎಲ್‌. ಜೈನ್‌, ಸುಪ್ರಿಯಾ ಆರ್‌. ಹೆಗ್ಗಡೆ, ಮಲ್ಲಿಕಾ ಜೆ. ಜೈನ್‌, ವಿನೋದಾ ಜೈನ್‌, ಪದ್ಮಪ್ರಿಯಾ ಬಲ್ಲಾಳ್‌ ಅವರು ಜಿನಗೀತೆಗಳನ್ನು ಹಾಡಿದರು.

ಹಿಮ್ಮೇಳದಲ್ಲಿ ಮಾ| ಪ್ರಥಮ್‌ ಬಲ್ಲಾಳ್‌ ಹಾರ್ಮೋನಿಯಂನಲ್ಲಿ, ಅಶೋಕ್‌ ಅವರು ತಬಲಾದಲ್ಲಿ ಸಹಕರಿಸಿದರು. ಮುಂಬ್ರಾ ಬಾಹುಬಲಿ ಮಂದಿರ ಟ್ರಸ್ಟ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು. ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ವತಿಯಿಂದ ಮಂದಿರದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ವಸಂತಿ ಜೈನ್‌ ಪರಿವಾರದ ಸೇವಾರ್ಥಕವಾಗಿ ಭೋಜನದ ವ್ಯವಸ್ಥೆ ನಡೆಯಿತು. ಕು| ಡಿಂಪಲ್‌ ರಾಜೇಂದ್ರ ಬಲ್ಲಾಳ್‌ ಅವರು ಬೆಳಗ್ಗೆಯ ಉಪಾಹಾರದ ವ್ಯವಸ್ಥೆ ಮಾಡಿದ್ದರು. ರಾಜವರ್ಮ ಜೈನ್‌ ಪರಿವಾರದವರಿಂದ ಮಂದಿರದ ದೇವರಿಗೆ ತೊಟ್ಟಿಲನ್ನು ಸಮರ್ಪಿಸಲಾಯಿತು.

ಅಖೀಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಅಧ್ಯಕ್ಷ ಮುನಿರಾಜ ಅಜಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗೌರವ ಪ್ರಧಾನ ಕಾರ್ಯದರ್ಶಿ ಪವನಂಜಯ ಬಲ್ಲಾಲ್‌ ನಿರ್ವಹಿಸಿದರು. ಜತೆ ಕಾರ್ಯದರ್ಶಿ ರಘುವೀರ್‌ ಹೆಗ್ಗಡೆ ವಂದಿಸಿದರು. ಮನೀಶ್‌ ಹೆಗ್ಗಡೆ, ಪದ್ಮರಾಜ್‌ ಹೆಗ್ಡೆ, ಮಹಾವೀರ್‌ ಎಂ. ಜೈನ್‌, ವಿನಯಾ ಪ್ರಮಥ್‌ ಬಂಗ, ಉದಯ ಅತಿಕಾರಿ ಸಹಕರಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

  • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

  • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

  • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

  • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

  • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...