Udayavni Special

ಅಂಬೇಡ್ಕರ್‌ ಅವರ ಸಾಮಾಜಿಕ ಸುಧಾರಣೆ ಮಾದರಿ: ಸಂಸದ ಗೋಪಾಲ್‌ ಶೆಟ್ಟಿ


Team Udayavani, Apr 15, 2021, 12:04 PM IST

Ambedkar’s Social Reform Model

ಮುಂಬಯಿ: ಕಾಂದಿವಲಿ ಪಶ್ಚಿಮದ ಫತೇಹ್‌ಭಾಗ್‌ನ ಶತಾಬ್ದಿ ಆಸ್ಪತ್ರೆ ಯಲ್ಲಿ ಬುಧವಾರ ಬೆಳಗ್ಗೆ ಸಂವಿಧಾನ ಶಿಲ್ಪಿ, ಭಾರತರತ್ನ ಡಾ| ಬಿ. ಆರ್‌. ಅಂಬೇಡ್ಕರ್‌ ಅವರ 130ನೇ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ಉತ್ತರ ಮುಂಬಯಿ ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರು ಆಸ್ಪತ್ರೆ ಆವರಣದಲ್ಲಿನ ಡಾ| ಬಿ. ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಹಾರಾರ್ಪಣೆಗೈದು ಮಾತನಾಡಿ, ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಡಾ| ಅಂಬೇಡ್ಕರ್‌ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಕಾರಣ ನಾವು ಇಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಸ್ಪೃಶ್ಯತೆಯಿಂದ ಮುಕ್ತರಾಗಿ ಸ್ವತಂತ್ರರಾಗಿ ಬದುಕುತ್ತಿದ್ದೇವೆ. ಉದ್ಯಮ, ವೈಯಕ್ತಿಕ ಅಥವಾ ಸಾಮಾಜಿಕ ನ್ಯಾಯಕ್ಕಾಗಿ ಧೈರ್ಯಶಾಲಿಗಳಾಗಿ ದಿಟ್ಟತನದಿಂದ ಹೋರಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಯಾವತ್ತೂ ಹಿಂಜರಿಯಬಾರದು. ವಿಷಯ ಸತ್ಯವಾಗಿದ್ದರೆ ಅದನ್ನು ಎಂದೂ ಮುಚ್ಚಿಡದೆ, ಸಹಿಸಿ ಸುಮ್ಮನಿರಬಾರದು. ನಿರ್ಭೀತರಾಗಿ ಎದೆಗಾರಿಕೆಯಿಂದ ಪ್ರತಿಭಟಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದಾಗ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ತಿಳಿಸಿ, ಇತ್ತೀಚೆಗೆ ದಹಿಸರ್‌ನ ಹೊಟೇಲ್‌ಗೆ ನುಗ್ಗಿ ಹೊಟೇಲ್‌ ಮಾಲಕರ ಮೇಲೆ ಮಾರಣಾಂತಿಕ ಹಲ್ಲೆಗೈದು ಕರ್ತವ್ಯ ಲೋಪವೆಸಗಿದ ಪಾನಮತ್ತ ಪೊಲೀಸರೊಬ್ಬರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ರವೀಂದ್ರ ಎಸ್‌. ಶೆಟ್ಟಿ ಮತ್ತು ಎರ್ಮಾಳ್‌ ಹರೀಶ್‌ ಶೆಟ್ಟಿ ಅವರ ಸಮಯ ಪ್ರಜ್ಞೆಯನ್ನು ಅಭಿನಂದಿಸಿದರು.

ಅಧಿಕಾರಿಗಳ ಕರ್ತವ್ಯಗಳನ್ನು ಪ್ರಾಮಾ ಣಿಕರಾಗಿ ಮಾಡಲು ಜನತೆ ಸಹಕರಿಸಬೇಕೇ ಹೊರತು ಜನರ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರಿಗಳಿಗೆ ಅವಕಾಶ ನೀಡಬಾರದು. ಇದರಿಂದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರ ಬಹುದು. ಅಂಬೇಡ್ಕರ್‌ ಅವರಿಗೆ ಭಾರತದ ಪರಮೋಚ್ಚ ನಾಗರಿಕ ಪುರಸ್ಕಾರ ಭಾರತರತ್ನ ನೀಡಿ ಗೌರವಿಸಿದಂತೆ, ನಮ್ಮ ಆಸುಪಾಸಿನಲ್ಲಿ ಸಾಮಾಜಿಕ ಕಾಳಜಿಯೊಂದಿಗೆ ತಮ್ಮಿಂದಾದ ಸಾಧನೆಗೈದ ಸಾಧಕರಿಗೂ ಸ್ಥಾನೀಯ ಜಿಲ್ಲಾಡಳಿತ, ಜನಪ್ರತಿನಿಧಿಗಳು ಗೌರವ ನೀಡಿದಾಗ ಅವರಲ್ಲಿ ಸೇವಾ ಉತ್ಸಾಹ ಇಮ್ಮಡಿಗೊಂಡು ಅವರು ಮತ್ತಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಕ ವಾಗುತ್ತದೆ. ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮಗಳನ್ನು ರಚಿಸಲು ಅಂಬೇಡ್ಕರ್‌ ಅವರು ಸಮರ್ಥರಾಗಿ ಶ್ರಮಿಸಿದ ಪರಿಣಾಮವಾಗಿ ನಾವು ಇಂದು ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿದೆ ಎಂದು ಅವರು ತಿಳಿಸಿದರು.

ಅಭಿನಂದನೆ

ಶಾಸಕ ಸುನೀಲ್‌ ರಾಣೆ, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಣೇಶ್‌ ಕಾಂಕರ್‌, ಉಪಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿ, ವಿನೋದ್‌ ಶೆØಲಾರ್‌, ಬಂಟ್ಸ್‌ ಸಂಘ ಮುಂಬಯಿ ಜತೆ ಕೋಶಾಧಿಕಾರಿ ಮುಂಡಪ್ಪ ಎಸ್‌. ಪಯ್ಯಡೆ‌, ಇಂಡಿಯನ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ ವಲಯ 10ರ ಕಾರ್ಯಾಧ್ಯಕ್ಷ ಡಾ| ಸತೀಶ್‌ ಶೆಟ್ಟಿ ಉಪಸ್ಥಿತರಿದ್ದು ವಲಯ 10ರ ಮಾಜಿ ಕಾರ್ಯಾಧ್ಯಕ್ಷ ರವೀಂದ್ರ ಎಸ್‌. ಶೆಟ್ಟಿ ಕರ್ನಿರೆ ಇವರಿಗೆ “ಧೈರ್ಯವಂತ ಸಾಧಕ ಮೆಚ್ಚುಗೆ ಗೌರವ’ ಪ್ರದಾನ ಮಾಡಿ ಅಭಿನಂದಿಸಿದರು.
ಚಿತ್ರ- ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : ಸ್ಥಳಕ್ಕೆ ಬಾರದ ಅರೋಗ್ಯ ಇಲಾಖೆ ಸಿಬಂದಿಗಳು

ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : ಅರೋಗ್ಯ ಇಲಾಖೆ ಸಿಬಂದಿಗಳ ವಿರುದ್ಧ ಆಕ್ರೋಶ

jhyhdtyryhr

ಮೂಢನಂಬಿಕೆಗಳಿಗೆ ಕಿವಿಗೊಡದೆ ಲಸಿಕೆ ಪಡೆಯೋಣ : ಡಾ| ಜೆರಾಲ್ಡ್ ಲೋಬೊ

fgdfgdddf

ಕೋವಿಡ್ ನಿರ್ವಹಣೆ : ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ್ ಖರ್ಗೆ 6 ಸಲಹೆ  

ಗೋಶಾಲೆಯೊಳಗೊಂದು ಕೋವಿಡ್‌ ಕೇರ್‌ ಸೆಂಟರ್‌: ಗುಜರಾತ್‌ನಲ್ಲಿದೆ ವಿಶೇಷ ಆರೈಕೆ ಕೇಂದ್ರ

ಗೋಶಾಲೆಯೊಳಗೊಂದು ಕೋವಿಡ್‌ ಕೇರ್‌ ಸೆಂಟರ್‌: ಗುಜರಾತ್‌ನಲ್ಲಿದೆ ವಿಶೇಷ ಆರೈಕೆ ಕೇಂದ್ರ

MEILನಿಂದ ಆಸ್ಪತ್ರೆಗಳಿಗೆ ನಿತ್ಯ 500ರಿಂದ 600 ಉಚಿತ ಆಕ್ಸಿಜನ್ ಸಿಲಿಂಡರ್ ರವಾನೆಗೆ ಸಿದ್ಧತೆ

MEILನಿಂದ ಆಸ್ಪತ್ರೆಗಳಿಗೆ ನಿತ್ಯ 500ರಿಂದ 600 ಉಚಿತ ಆಕ್ಸಿಜನ್ ಸಿಲಿಂಡರ್ ರವಾನೆಗೆ ಸಿದ್ಧತೆ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ghjghjfghjfg

ಲಾಕ್ ಡೌನ್ ಗೆ ಸ್ವಯಂ ಪ್ರೇರಿತರಾಗಿ ಸಹಕರಿಸಿ: ಜನತೆಗೆ ಸುರೇಶ್ ಕುಮಾರ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhairappa

“ಭೈರಪ್ಪನವರು ತಮ್ಮದೇ ಆದ ಒಂದು ಶೈಲಿಯನ್ನು ಹೊಂದಿದ್ದಾರೆ”

“Saves Many Lives from Blood Donation”

“ರಕ್ತದಾನದಿಂದ ಹಲವು ಜೀವಗಳ ರಕ್ಷಣೆ”

covid Lockdown

ಕೋವಿಡ್ ಲಾಕ್‌ಡೌನ್‌: ಸಂಕಷ್ಟದಲ್ಲಿ ಚೆಂಡು ಹೂ ಬೆಳೆಗಾರರು

Mumbai theater artist

ಮುಂಬಯಿ ರಂಗಕಲಾವಿದ, ನಿರ್ದೇಶಕ ಸುಂದರ್‌ ಮೂಡಬಿದ್ರೆ ಅವರಿಗೆ ಸಮ್ಮಾನ

Suresh Kotyan appeals for medical help

ಸುರೇಶ್‌ ಕೋಟ್ಯಾನ್‌ ವೈದ್ಯಕೀಯ ನೆರವಿಗೆ ಮನವಿ

MUST WATCH

udayavani youtube

ಬಾಕಿ ಉಳಿದ ಐಪಿಎಲ್ ಪಂದ್ಯಗಳ ಗತಿ ಏನು ?

udayavani youtube

ಕೋವಿಡ್ ಬಗ್ಗೆ ಭಯ ಬೇಡ. ಆದರೆ ಎಚ್ಚರಿಕೆ ಇರಲಿ

udayavani youtube

ಮೂಡಿಗೆರೆ ಆಸ್ಪತ್ರೆಯಲ್ಲಿ ಊಟ-ತಿಂಡಿ ಸರಿಯಿಲ್ಲ

udayavani youtube

ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ: ವಿಟ್ಲದಲ್ಲಿ ಪೊಲೀಸರಿಂದ ದಾಳಿಯ

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

ಹೊಸ ಸೇರ್ಪಡೆ

Covid Care Center

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸೌಲಭ್ಯ ಕಲ್ಪಿಸಿ: ಜಿಲ್ಲಾಧಿಕಾರಿ

ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : ಸ್ಥಳಕ್ಕೆ ಬಾರದ ಅರೋಗ್ಯ ಇಲಾಖೆ ಸಿಬಂದಿಗಳು

ಮನೆಯ ಹಿತ್ತಲಲ್ಲೇ ಸೋಂಕಿತ ಮಹಿಳೆ ಸಾವು : ಅರೋಗ್ಯ ಇಲಾಖೆ ಸಿಬಂದಿಗಳ ವಿರುದ್ಧ ಆಕ್ರೋಶ

jhyhdtyryhr

ಮೂಢನಂಬಿಕೆಗಳಿಗೆ ಕಿವಿಗೊಡದೆ ಲಸಿಕೆ ಪಡೆಯೋಣ : ಡಾ| ಜೆರಾಲ್ಡ್ ಲೋಬೊ

The Corona flag

ಮನೆ ಮುಂದೆ ಕೊರೊನಾ ಬಾವುಟ

Ventilator, a regular call to the warroom for oxygen

ವೆಂಟಿಲೇಟರ್‌, ಆಕ್ಸಿಜನ್‌ಗಾಗಿ ವಾರ್‌ರೂಂಗೆ ನಿತ್ಯ ಕರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.