ಕೋವಿಡ್‌-19ಗೆ ಸಂಭಾವ್ಯ ಚಿಕಿತ್ಸೆ  ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು

 ಭಾರತೀಯ ಮೂಲದ ಬಾಲಕಿಯ ಮಹಾನ್‌ ಸಾಧನೆ

Team Udayavani, Nov 28, 2020, 4:08 PM IST

ಕೋವಿಡ್‌-19ಗೆ ಸಂಭಾವ್ಯ ಚಿಕಿತ್ಸೆ  ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು

ಮಹಾಮಾರಿ ಕೊರೊನಾಗೆ ಸೂಕ್ತ ಔಷಧದ ಹುಡುಕಾಟ ಇನ್ನೂ ನಡೆಯುತ್ತಿದೆ. ದೇಶ ವಿದೇಶೀಯ ಪ್ರಸಿದ್ಧ ಔಷಧದ ಕಂಪೆನಿಗಳು ಕಳೆದ 11 ತಿಂಗಳುಗಳಿಂದ  ಹಗಲಿರುಳು ಪ್ರಯತ್ನಿಸುತ್ತಿದ್ದರೂ ಇದುವರೆಗೂ ಸೂಕ್ತ ಔಷಧ ಮಾರುಕಟ್ಟೆಗೆ ಬಂದಿಲ್ಲ.

ಈ ನಡುವೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 14 ವರ್ಷದ ಬಾಲಕಿ ಅನಿಕಾ ಚೆಬ್ರೊಲು ಅಮೋಘ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿಂದ್ದಾಳೆ. 3 ಎಂ ಚಾಲೆಂಜ್‌ ವೆಬ್‌ಸೈಟ್‌ ಮಾಹಿತಿ ಪ್ರಕಾರ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗಕ್ಕೆ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು  ಎನ್ನಲಾಗಿದೆ.

14ರ ಪೋರಿಯ ಅಮೋಘ ಸಾಧನೆ

ಅಮೆರಿಕದ ಟೆಕ್ಸಾಸ್‌ನ ಫ್ರಿಸ್ಕೋನಲ್ಲಿ ನೆಲೆಸಿರುವ ಅನಿಕಾ ಚೆಬ್ರೊಲು ಅವರು ಕೋವಿಡ್‌-19 ಸಂಭಾವ್ಯ ಚಿಕಿತ್ಸೆ ಒದಗಿಸುವ ಸಂಶೋಧನೆಗಾಗಿ 25,000 (18 ಲಕ್ಷ ರೂ.) ಡಾಲರ್‌ ಬಹುಮಾನ ಹಾಗೂ 3 ಎಂ ಯಂಗ್‌ ಸೈಂಟಿಸ್ಟ್ ಚಾಲೆಂಜ್‌ ಗೆದ್ದಿದ್ದಾರೆ.  ಪ್ರೊಟೀನ್‌ ಸ್ಟ್ರೈಕ್ಸ್‌ ಸಂಶೋಧನೆ ಮಾಡಿ ಕೋವಿಡ್‌- 19ಗೆ ಸಂಭಾವ್ಯ ಆ್ಯಂಟಿ ವೈರಲ್‌ ಡ್ರಗ್‌ ಕಂಡು ಹಿಡಿದಿದ್ದು, ಸಿಲಿಕೋ ಮೆಥೆಡೋಲಾಜಿ ಬಳಸಿ ಈ ಔಷಧವನ್ನು ಆನ್ವೇಷಿಸಿದ್ದಾರೆ.

ಸಾಂಕ್ರಾಮಿಕ ರೋಗ ಪತ್ತೆಗೆ ಮದ್ದರೆಯುವ ಪ್ರಯತ್ನ

ಕೊರೊನಾ ಬರುವುದಕ್ಕೂ ಮುಂಚೆಯೆ ಅನಿಕಾ, ಈ ಕುರಿತು ಸಂಶೋಧನೆ ಆರಂಭಿಸಿದ್ದರು.  ಮೊದಲು ಸಿಸನಲ್‌ ಫ್ಲೂ (ಶೀತಜ್ವರ) ಅನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತ ಅಧ್ಯಯನ ನಡೆಸಿದ್ದ ಅನಿಕಾಳ ಯೋಜನೆ ಈಗ ಕೊರೊನಾ ಸಾಂಕ್ರಾಮಿಕ ರೋಗಕ್ಕೆ  ಔಷಧ ಕಂಡುಹಿಡಿಯುವ ದಾರಿಯಲ್ಲಿ ಸಾಗಿದೆ.  ಸೋಂಕಿಗೆ ಚಿಕಿತ್ಸೆ ಅಭಿವೃದ್ಧಿಪಡಿಸಲು ಹಲವು ಕಂಪ್ಯೂಟರ್‌ ಪ್ರೋಗ್ರಾಂಗಳನ್ನು ಬಳಸಿಕೊಂಡು ವೈರಸ್‌ನ ಯಾವ ಭಾಗಕ್ಕೆ, ಹೇಗೆ ಅಣುವನ್ನು ಬಂಧಿಸಬಹುದು ಎಂದು ಅನಿಕಾ ತಿಳಿದುಕೊಂಡಿದ್ದಾರೆ.

ಚಿಕಿತ್ಸೆ ಕಂಡುಹಿಡಿಯುವಲ್ಲಿ ಸಹಕಾರಿ

ಸಾರ್ಸ್‌-ಕೋವಿಡ್‌- 2 ವೈರಸ್‌ ನ ಸ್ಟ್ರೈಕ್‌ ಪ್ರೋಟಿನ್‌ಗೆ ಅಂಟುವ ಪ್ರಮುಖ ಸಂಯುಕ್ತವನ್ನು ಅಭಿವೃದ್ಧಿಪಡಿಸಿರುವ ನನ್ನ ಪ್ರಯತ್ನ ಸಾಗರದಲ್ಲಿ ಒಂದು ಹನಿಯಂತೆ ಅನಿಸಿದರೂ ಅದು ಮುಂದೆ ಉಪಯೋಗಕ್ಕೆ ಬರಬಹುದು. ನಾನು ಹೇಗೆ ಈ ಅಣುವನ್ನು ಅಭಿವೃದ್ಧಿಪಡಿಸಿದೆ ಎಂಬುದು ವೈರಾಲಾಜಿಸ್ಟ್ ಮತ್ತು ಔಷಧ ಅಭಿವೃದ್ಧಿ ತಜ್ಞರ ಜತೆ ಸೇರಿದಾಗ ಈ ವೈರಸ್‌ಗೆ ಚಿಕಿತ್ಸೆ ಕಂಡುಹಿಡಿಯುವಲ್ಲಿ ಸಹಾಯಮಾಡಬಹುದು ಎಂದು ಅನಿಕಾ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ  ತಿಳಿಸಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಳಾಗುವ ಆಸೆ

ಮುಂದೊಂದು ದಿನ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಳಾಗಬೇಕೆಂಬ ಎಂಬ ಮಹದಾಸೆಯನ್ನಿಟ್ಟುಕೊಂಡಿರುವ ಅನಿಕಾಳಿಗೆ  ವಿಜ್ಞಾನದ ಮೇಲೆ ಪ್ರೀತಿ ಮತ್ತು ಉತ್ಸಾಹ  ಬರಲು ಅವರ ತಾತ ಕಾರಣ ಎನ್ನುತ್ತಾಳೆ.  ತಾತಾ ನನಗೆ ಆವರ್ತಕ ಕೋಷ್ಟಕ ಮತ್ತು ಇತರ ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳುವಂತೆ ಮಾಡಿದರು. ನಾನು ಬೆಳೆಯುತ್ತ ವಿಜ್ಞಾನದೆಡೆಗೆ ಆಸಕ್ತಿ ಬೆಳೆಸಿಕೊಂಡೆ ಎನ್ನುತ್ತಾಳೆ ಯುವ ವಿಜ್ಞಾನಿ ಅನಿಕಾ.

ಟಾಪ್ ನ್ಯೂಸ್

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.