Udayavni Special

ಬಡವರ ಕಣ್ಣೀರೊರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ: ಹರೀಶ್‌ ಜಿ. ಅಮೀನ್‌

Team Udayavani, Jul 23, 2021, 12:37 PM IST

anivasi kannadiga  news

ಮುಂಬಯಿ: ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ಇದರ ವತಿಯಿಂದ ಸಮಾಜದ ದಾನಿಗಳ ಸಂಪೂರ್ಣ ಸಹಕಾರದಿಂದ ಅಸೋಸಿಯೇಶನ್‌ನ 22 ಸ್ಥಳೀಯ ಕಚೇರಿಯಲ್ಲಿ  ಸಮಾಜದ ಅಸಹಾಯಕ ಕುಟುಂಬದವರಿಗೆ ಅಹಾರ ಕಿಟ್‌ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜು. 18ರಂದು ಬಿಲ್ಲವರ ಅಸೋಸಿಯೇಶನ್‌ ಕಾಂದಿವಲಿಯ ಸ್ಥಳೀಯ ಕಚೇರಿಯಲ್ಲಿ  ಸಮಾಜ ಬಾಂಧವರಿಗೆ ಆಹಾರ ಕಿಟ್‌ ವಿತರಣೆ ಜರಗಿತು.

ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್‌ ಅಧ್ಯಕ್ಷ ಹರೀಶ್‌ ಜಿ. ಅಮೀನ್‌ ಮಾತನಾಡಿ, ಬಿಲ್ಲವರ ಅಸೋಸಿಯೇಶನ್‌ ಕೊರೊನಾ ಮಹಾಮಾರಿಯಿಂದ ತೊಂದರೆಗೀಡಾದ ಕುಟುಂಬದವರಿಗೆ ಆರಂಭ ದಿಂದಲೂ ವಿವಿಧ ರೂಪಗಳಲ್ಲಿ  ಸಹಕರಿಸಿದೆ. ಈ ವರೆಗೆ 900 ಮಂದಿಗೆ ಆಹಾರದ ಕಿಟ್‌ ನೀಡಿದ್ದೇವೆ. ಈ ಕಾರ್ಯಕ್ರಮಗಳಿಗೆ ಎಲ್ಲ  ದಾನಿಗಳ ಅಪಾರ ಸಹಕಾರ ದೊರಕಿದೆ. ಅಸೋಸಿಯೇಶನಿನ 89 ವರ್ಷಗಳ ಇತಿಹಾಸದಲ್ಲಿ ಜನಪರ ಸೇವೆಯಲ್ಲಿ ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ. ಸಂದರ್ಭ ಒದಗಿದಾಗ ಅಸೋಸಿಯೇಶನಿನ ಪದಾಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ. ದಿ| ಜಯ ಸಿ. ಸುವರ್ಣ ಅವರು ನಮಗೆ ಸ್ಫೂರ್ತಿದಾಯಕರಾಗಿದ್ದು, ಅವರ ಮಾರ್ಗದರ್ಶನ ನಮಗೆ ಸಮಾಜ ಸೇವೆಗೆ ಉತ್ತೇಜನ ನೀಡಿದೆ. ಬಡವರ ಕಣ್ಣೀರೊರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ. ನಿಮ್ಮ ಸಹಕಾರ ನಮಗೆ ಸದಾ ಸಿಗುತ್ತಿರಲಿ. ಭವಿಷ್ಯದಲ್ಲೂ ನಮ್ಮಿಂದ ಸಾಧ್ಯವಾದಷ್ಟು ಸಹಕಾರ ನೀಡಲಿದ್ದೇವೆ. ಜು. 24ರಂದು ಬಿಲ್ಲವ ಭವನದಲ್ಲಿ  ರಕ್ತದಾನ ಶಿಬಿರ ಜರಗಲಿದೆ. ಇದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಬಿಲ್ಲವರ ಅಸೋಸಿ ಯೇಶನಿನ ಕಾಂದಿವಲಿಯ ಸ್ಥಳೀಯ ಕಚೇರಿಯ ಪ್ರತಿನಿಧಿ ಹರೀಶ್‌ ಪೂಜಾರಿ ಮಾತನಾಡಿ, ದಿ| ಜಯ ಸಿ. ಸುವರ್ಣ ಅವರ ಮಾರ್ಗದರ್ಶನದಂತೆ ಮುನ್ನಡೆಯುವ ಯುವ ಅಧ್ಯಕ್ಷರು ನಮ್ಮ ಸಮಾಜಕ್ಕೆ ದೊರಕಿ¨ªಾರೆ. ಅವರಿಗೆ ನಾವು ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದರು.

ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಯೋಗೇಶ್‌ ಕೆ. ಹೆಜ್ಮಾಡಿ ಮಾತನಾಡಿ, ಈ ಕಾರ್ಯಕ್ರಮ ನೋಡಿ ಬಹಳ ಸಂತೋಷವಾಗಿದೆ. ಕಾರಣ ನಮ್ಮ ಸ್ಥಳೀಯ ಕಚೇರಿಯ ಆಹಾರ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ನೂತನ ಅಧ್ಯಕ್ಷ ಹರೀಶ್‌ ಜಿ. ಅಮೀನ್‌, ನಮ್ಮ ಮಾರ್ಗ

ದರ್ಶಕರು ಸ್ವರ್ಗೀಯ ಜಯ ಸಿ. ಸುವರ್ಣರ ಸೊಸೆ ನಿಶಿತಾ ಎಸ್‌. ಸುವರ್ಣ ಹಾಗೂ ಪುತ್ರ ಸೂರ್ಯ ಕಾಂತ್‌ ಜಯ ಸುವರ್ಣ ಅವರನ್ನು ಸಮ್ಮಾನಿಸುವ ಭಾಗ್ಯ ಕಾಂದಿವಲಿ ಸ್ಥಳೀಯ ಕಚೇರಿಗೆ ಸಿಕ್ಕಿದೆ. ಗುರುದೇವರ ಅನುಗ್ರಹದಿಃದ ಉತ್ತಮ ಸಮಾಜಪರ ಸೇವೆ ಮಾಡುವುದಕ್ಕೆ ಸಮಾಜ ಬಾಂಧವರ ಸಹಕಾರ ದೊರಕುತ್ತಿದೆ. ಅಧ್ಯಕ್ಷರಿಗೆ ಕಾಂದಿವಲಿಯ ಸ್ಥಳೀಯ ಕಚೇರಿಯ ಸರ್ವ ಸದಸ್ಯರೆಲ್ಲರ ಸಂಪೂರ್ಣ ಸಹಕಾರ ಇದೆ ಎಂದು ತಿಳಿಸಿದರು.

ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ, ಭಾರತ್‌ ಬ್ಯಾಂಕ್‌ನ ನಿರ್ದೇಶಕರಾದ ಗಂಗಾಧರ ಜೆ. ಪೂಜಾರಿ ಅವರು ನೂತನ ಅಧ್ಯಕ್ಷರಾದ ಹರೀಶ್‌ ಜಿ. ಅಮೀನ್‌ ಅವರನ್ನು ಅಭಿನಂದಿಸಿದರು. ನಿಶಿತಾ ಎಸ್‌. ಸುವರ್ಣ ಹಾಗೂ ಅವರ ಪತಿ ಸೂರ್ಯಕಾಂತ್‌ ಜಯ ಸುವರ್ಣ ಅವರನ್ನು ಸ್ಥಳೀಯ ಕಚೇರಿಯ ಜತೆ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಕಾರ್ಯಕರ್ತರಾದ ವಾರಿಜಾ ಶೇಖರ್‌ ಕರ್ಕೇರ, ಹರೀಶ್‌ ಜಿ. ಅಮೀನ್‌ ಅಭಿನಂದಿಸಿದರು.

ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಶಂಕರ್‌ ಡಿ. ಪೂಜಾರಿ, ಜತೆ ಕಾರ್ಯದರ್ಶಿ ಹರೀಶ್‌ ಜಿ. ಸಾಲ್ಯಾನ್‌, ಕೇಶವ ಕೆ. ಕೋಟ್ಯಾನ್‌, ಕಾಂದಿವಲಿ ಸ್ಥಳೀಯ ಕಚೇರಿಯ ಪ್ರತಿನಿಧಿ ಹರೀಶ್‌ ಪೂಜಾರಿ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್‌ ಅಂಚನ್‌, ಯುವಕ ವಿಭಾಗದ ಮಾಜಿ ಕಾರ್ಯಾಧ್ಯಕ್ಷ ನೀಲೇಶ್‌ ಪಲಿಮಾರ್‌, ಅತಿಥಿ ದೀಪಕ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಂದಿವಲಿಯ ಸ್ಥಳೀಯ ಕಚೇರಿ ಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್‌ ಎಂ. ಪೂಜಾರಿ, ಕೋಶಾಧಿಕಾರಿ ರಮೇಶ ಬಂಗೇರ, ಕಾರ್ಯಕರ್ತ ರಾದ ವಿಲಾಸ್‌ ಪೂಜಾರಿ, ಶೈಲೇಶ್‌ ಪೂಜಾರಿ,

ಯಮುನಾ ಸಾಲ್ಯಾನ್‌, ಸುಜಾತಾ ಪೂಜಾರಿ. ಜಯರಾಮ್‌ ಪೂಜಾರಿ, ವಿದ್ಯಾ ಆರ್‌. ಅಮೀನ್‌, ಅನಿತಾ ಪೂಜಾರಿ ಮೊದಲಾದವರು ಸಹಕರಿಸಿದರು.

ಟಾಪ್ ನ್ಯೂಸ್

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

cfgdfr5r

ವಲಸೆ ಕಾರ್ಮಿಕರಿಗೆ ಸಮುದಾಯ ಭವನಗಳೇ ನೆಲೆ

ರಷ್ಯಾ: ಪೆರ್ಮ್ ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಗುಂಡಿನ ದಾಳಿ, ಎಂಟು ವಿದ್ಯಾರ್ಥಿಗಳು ಸಾವು

ರಷ್ಯಾ: ಪೆರ್ಮ್ ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಗುಂಡಿನ ದಾಳಿ, ಎಂಟು ವಿದ್ಯಾರ್ಥಿಗಳು ಸಾವು

ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗದಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೇಘನ್ ಎಚ್.ಕೆ

ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದ ಮೈಸೂರಿನ ಮೇಘನ್ ಎಚ್.ಕೆ

ವಿದೇಶಿ ಏಜೆನ್ಸಿಗಳಿಗೆ ರಕ್ಷಣಾ ಮಾಹಿತಿ ನೀಡುತ್ತಿದ್ದ ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಬಂಧನ

ವಿದೇಶಿ ಏಜೆನ್ಸಿಗಳಿಗೆ ರಕ್ಷಣಾ ಮಾಹಿತಿ ನೀಡುತ್ತಿದ್ದ ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಬಂಧನ

dfsdfe

“ಸಮಯ ಎಲ್ಲದ್ದಕ್ಕೂ ಉತ್ತರ ನೀಡಲಿದೆ”: ಐಟಿ ದಾಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ  

karmanye vadhikaraste sloka

ಶ್ರೀಕೃಷ್ಣ ವಾಣಿ ದರ್ಶನ: ಮರ್ಡರ್‌ ಮಿಸ್ಟರಿ ಬಿಡುಗಡೆಗೆ ರೆಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಳ್ಕುಂಜೆಯವರ ಬರಹಗಳು ಸಮಾಜಕ್ಕೆ ಮಾರ್ಗದರ್ಶಕ: ಮುರಳಿ ಕೆ. ಶೆಟ್ಟಿ

ಬಳ್ಕುಂಜೆಯವರ ಬರಹಗಳು ಸಮಾಜಕ್ಕೆ ಮಾರ್ಗದರ್ಶಕ: ಮುರಳಿ ಕೆ. ಶೆಟ್ಟಿ

ಥಾಣೆ ಸ್ಥಳೀಯ ಸಮಿತಿಯಿಂದ ಸಮಾಜ ಬಾಂಧವರಿಗೆ ಆಹಾರದ ಕಿಟ್‌ ವಿತರಣೆ

ಥಾಣೆ ಸ್ಥಳೀಯ ಸಮಿತಿಯಿಂದ ಸಮಾಜ ಬಾಂಧವರಿಗೆ ಆಹಾರದ ಕಿಟ್‌ ವಿತರಣೆ

ಅಧ್ಯಕ್ಷರಾಗಿ ಸಮಾಜ ಸೇವಕ ಹರೀಶ್‌ ಜಿ. ಅಮೀನ್‌ ಪುನರಾಯ್ಕೆ

ಅಧ್ಯಕ್ಷರಾಗಿ ಸಮಾಜ ಸೇವಕ ಹರೀಶ್‌ ಜಿ. ಅಮೀನ್‌ ಪುನರಾಯ್ಕೆ

ವಿಶ್ವವಿದ್ಯಾನಿಲಯದ ಗೌರವ ಎಲ್ಲ ಗೌರವಗಳಿಗಿಂತ ಶ್ರೇಷ್ಠ: ಕುಸುಮೋದರ ಡಿ. ಶೆಟ್ಟಿ

ವಿಶ್ವವಿದ್ಯಾನಿಲಯದ ಗೌರವ ಎಲ್ಲ ಗೌರವಗಳಿಗಿಂತ ಶ್ರೇಷ್ಠ: ಕುಸುಮೋದರ ಡಿ. ಶೆಟ್ಟಿ

ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತಿ ಆಚರಣೆ

ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜಯಂತಿ ಆಚರಣೆ

MUST WATCH

udayavani youtube

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರಿಂದ ಸೈಕಲ್ ಜಾಥಾ

udayavani youtube

LIVE : ವಿಧಾನಸಭೆ​ ಕಲಾಪ ನೇರ ಪ್ರಸಾರ | Session 20-09-2021

udayavani youtube

ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು: ಇದಕ್ಕೆ ಕಾರಣವೇನು?

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

ಹೊಸ ಸೇರ್ಪಡೆ

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

cfgdfr5r

ವಲಸೆ ಕಾರ್ಮಿಕರಿಗೆ ಸಮುದಾಯ ಭವನಗಳೇ ನೆಲೆ

ರಷ್ಯಾ: ಪೆರ್ಮ್ ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಗುಂಡಿನ ದಾಳಿ, ಎಂಟು ವಿದ್ಯಾರ್ಥಿಗಳು ಸಾವು

ರಷ್ಯಾ: ಪೆರ್ಮ್ ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಗುಂಡಿನ ದಾಳಿ, ಎಂಟು ವಿದ್ಯಾರ್ಥಿಗಳು ಸಾವು

ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗದಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೇಘನ್ ಎಚ್.ಕೆ

ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದ ಮೈಸೂರಿನ ಮೇಘನ್ ಎಚ್.ಕೆ

thumakuru news

ಉದ್ಯೋಗಕ ಕೌಶಲ್ಯ, ತರಬೇತಿ ಸಹಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.