Udayavni Special

ಕಾರ್ಯಕ್ರಮಗಳು ಧಾರ್ಮಿಕ ಪ್ರಜ್ಞೆ ಬೆಳೆಸುವ ವಾಹಿನಿಯಾಗಿರಲಿ: ರಮೇಶ್‌ ಪೂಜಾರಿ

ಶ್ರೀಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಶ್ರೀಗಳ ಷಷ್ಠಬ್ದ ಸಂಭ್ರಮ: ಅರ್ವತ್ತು ಕಾರ್ಯಕ್ರಮಗಳ ಉದ್ಘಾಟನೆ

Team Udayavani, Mar 6, 2021, 7:17 PM IST

ಕಾರ್ಯಕ್ರಮಗಳು ಧಾರ್ಮಿಕ ಪ್ರಜ್ಞೆ ಬೆಳೆಸುವ ವಾಹಿನಿಯಾಗಿರಲಿ: ರಮೇಶ್‌ ಪೂಜಾರಿ

ನವಿಮುಂಬಯಿ: ಶ್ರೀಕ್ಷೇತ್ರ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ ವತಿಯಿಂದ ಒಡಿಯೂರು ಶ್ರೀ ಗುರುದೇವಾನಂದ ಶ್ರೀಗಳ ಷಷ್ಠಬ್ದ ಸಂಭ್ರಮ ಪ್ರಯುಕ್ತ ಮುಂಬಯಿಯಲ್ಲಿ ಅರ್ವತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದು, ಇದರ ಉದ್ಘಾಟನ ಸಮಾರಂಭವು ಮಾ. 4ರಂದು ಸಂಜೆ ನೆರೂಲ್‌ನ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ನೆರೂಲ್‌ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು, ಒಡಿಯೂರು ಶ್ರೀಗಳ ಷಷ್ಠ éಬ್ದ ಸಂಭ್ರಮ ಪ್ರಯುಕ್ತ ನವಿಮುಂಬಯಿಯಲ್ಲಿ ಜರಗುವ ಅರ್ವತ್ತು ಕಾರ್ಯಕ್ರಮಗಳ ಉದ್ಘಾಟನೆ ಶ್ರೀ ಶನೀಶ್ವರ ಮಂದಿರದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ. ಶನೀಶ್ವರ ಮಂದಿರವು ಒಡಿಯೂರು ಶ್ರೀಗಳಿಗೆ ಬಹಳ ಪ್ರಿಯವಾದ ಕ್ಷೇತ್ರವಾಗಿದೆ. ಮುಂಬಯಿ ಭೇಟಿಯ ಸಂದರ್ಭದಲ್ಲಿ ಅವರು ನೆರುಲ್‌ ಶನೀಶ್ವರ ಮಂದಿರಕ್ಕೆ ನಿರಂತರ ಭೇಟಿ ನೀಡುತ್ತಾರೆ. ಮುಂದೆ ನಡೆಯಲಿರುವ ಅರ್ವತ್ತು ಕಾರ್ಯಕ್ರಮಗಳು ಯಶಸ್ವಿಯಾಗಲಿ. ಶ್ರೀಗಳ ಈ ಅರುವತ್ತು ದಿನಗಳ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಬೆಳೆಸುವ ವಾಹಿನಿಯಾಗಿ ರಾರಾಜಿಸಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಶ್ರೀ ಶನೀಶ್ವರ ಮಂದಿರದ ಪ್ರಧಾನ ಅರ್ಚಕ ಸೂರಜ್‌ ಭಟ್‌ ಮಾತನಾಡಿ. ಧಾರ್ಮಿಕ ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದಾಗ ಜ್ಞಾನದ ಅರಿವು ಹೆಚ್ಚಾಗುತ್ತದೆ. ಒಡಿಯೂರು ಶ್ರೀಗಳ ಷಷ್ಠ éಬ್ದ ಸಂಭ್ರಮದ ಪ್ರಯುಕ್ತ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಅಭಿನಂದನೀಯ. ನಿಮ್ಮೆಲ್ಲರಿಗೂ ದೇವರ ಅನುಗ್ರಹ ಸದಾ ಇರುತ್ತದೆ. ಮುಖ್ಯವಾಗಿ ಯುವಪೀಳಿಗೆಯಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳು ಪ್ರೇರಕವಾಗಿವೆ ಎಂದರು.

ಗೌರವ ಅತಿಥಿಯಾಗಿದ್ದ ಶ್ರೀ ಶನೀಶ್ವರ ಮಂದಿರ ಕಾರ್ಯಾಧ್ಯಕ್ಷ ಸಂತೋಷ್‌ ಜಿ. ಶೆಟ್ಟಿ ಮಾತನಾಡಿ, ಸಮಾಜ ಉಳಿಯಬೇಕಾದರೆ ಸಂಸ್ಕೃತಿ ಉಳಿಯಬೇಕು. ಸಮಾಜವನ್ನು ಸರಿದಾರಿಗೆ ತರುವ ಕೆಲಸವನ್ನು ಧಾರ್ಮಿಕ ಸಂಸ್ಥೆಗಳು ಮಾಡಬೇಕು. ಸಂಸ್ಕೃತಿ, ಸಂಸ್ಕಾರಗಳಿಗೆ ಮೂಲ ಬೇರು ಧಾರ್ಮಿಕ ಕ್ಷೇತ್ರಗಳಾಗಿವೆ. ಧಾರ್ಮಿಕ ಕ್ಷೇತ್ರಗಳು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಜ ವನ್ನು ತಿದ್ದುವ ಕಾರ್ಯದಲ್ಲೂ ತೊಡಗಿರುವುದು ಅಭಿನಂದನೀಯವಾಗಿದೆ ಎಂದರು.

ನೆರೂಲ್‌ ಶ್ರೀ ಬಾಲಾಜಿ ಮಂದಿರದ ಅಧ್ಯಕ್ಷ ಗೋಪಾಲ ವೈ. ಶೆಟ್ಟಿ ಮಾತನಾಡಿ, ಸಮಾಜಪರ ಚಿಂತನೆಯುಳ್ಳ ಒಡಿಯೂರು ಶ್ರೀಗಳ 60ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯ ನಿಮಿತ್ತ ನವಿ ಮುಂಬಯಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ ವಾಗಿದೆ. ಇದರ ಯಶಸ್ಸಿಗೆ ನಾವೆಲ್ಲರೂ ಸಹಕರಿಸಬೇಕಾಗಿದೆ ಎಂದರು.

ಶ್ರೀ ಅಯ್ಯಪ್ಪ ದುರ್ಗಾದೇವಿ ಮಂದಿರ ನೆರುಲ್‌ ಇದರ ಕಾರ್ಯಾಧ್ಯಕ್ಷ ರವಿ ಆರ್‌. ಶೆಟ್ಟಿ  ಮಾತನಾಡಿ, ಶ್ರೀಗಳ ಷಷ್ಠ éಬ್ದ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ಣ ಸಹ ಕಾರ ಇದೆ ಎಂದರು. ಬಿಲ್ಲವರ ಅಸೋಸಿ ಯೇಶನ್‌ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್‌ ಕೆ. ಪೂಜಾರಿ ಮಾತನಾಡಿ, ಶ್ರೀಗಳ ಈ ಕಾರ್ಯ ಕ್ರಮದ ಆಯೋಜಕರು ಒಂದು ದಿನದ ಕಾರ್ಯಕ್ರಮವನ್ನು ಬಿಲ್ಲವರ ಅಸೋಸಿ ಯೇಶನ್‌ ನವಿಮುಂಬಯಿ ಸ್ಥಳೀಯ ಸಮಿತಿಯ ವತಿಯಿಂದ ನಡೆಸಲು ಅನುವು ಮಾಡಿಕೊಡಬೇಕು ಎಂದರು.

ಪ್ರಾರಂಭದಲ್ಲಿ ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ ಶೆಟ್ಟಿ ಅವರು ಪ್ರಸ್ತಾವಿಸಿ, ಶ್ರೀಗಳ ವತಿಯಿಂದ ಜರಗುವ ಸಮಾಜಪರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಗುರುದೇವ ಸೇವಾ ಬಳಗದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಕೃಷ್ಣ ಎಲ್‌. ಶೆಟ್ಟಿ, ಷಷ್ಠ éಬ್ದ  ಕಾರ್ಯಕ್ರಮದ ಮುಂಬಯಿ ಸಮಿತಿಯ ಅಧ್ಯಕ್ಷ  ವಾಮಯ್ಯ ಶೆಟ್ಟಿ, ಅದ್ಯಪಾಡಿಗುತ್ತು ಕರುಣಾಕರ ಎಸ್‌. ಆಳ್ವ, ಯಕ್ಷಗಾನ ಅರ್ಥಧಾರಿ ಕೆ. ಕೆ. ಶೆಟ್ಟಿ, ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರ ಮಹಾರಾಷ್ಟ್ರ ಘಟಕದ ಅಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿ, ಮಾಜಿ ಅಧ್ಯಕ್ಷೆ ಸುಹಾಸಿನಿ ಶೆಟ್ಟಿ ಮೊದಲಾದವರು ಶುಭ ಹಾರೈಸಿದರು.

ಕಾರ್ಯಕ್ರಮದ ಸಂಯೋಜಕರಾದ ರಂಗಕಲಾವಿದ ಅನಿಲ್‌ ಹೆಗ್ಡೆ ಪೆರ್ಡೂರು ನಿರೂಪಿಸಿದರು. ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರಭಾಕರ ಎಸ್‌. ಹೆಗ್ಡೆ ವಂದಿಸಿದರು. ವಿಜಯಲಕ್ಷ್ಮೀ ಶೆಟ್ಟಿ ಹಾಗೂ ಸುಪ್ರಿಯಾ ಅನಿಲ್‌ ಹೆಗ್ಡೆ ಅವರು ಪ್ರಾರ್ಥನೆಗೈದರು. ವಿ. ಕೆ. ಸುವರ್ಣ ಪಡುಬಿದ್ರಿ, ಜಗದೀಶ್‌ ಶೆಟ್ಟಿ ಪನ್ವೆಲ್, ತಾರಾನಾಥ ಶೆಟ್ಟಿ ಪುತ್ತೂರು, ರವಿಶಂಕರ್‌ ಆಚಾರ್ಯ ಮೊದಲಾದವರು ಸಹಕರಿಸಿದರು. ಪ್ರಥಮ ಕಾರ್ಯಕ್ರಮದ ಅಂಗವಾಗಿ ಶ್ರೀ ಶನೀಶ್ವರ ಭಜನ ಮಂಡಳಿ ನೆರುಲ್‌ ವತಿಯಿಂದ ದಾಸರ ಭಜನ ಕಾರ್ಯಕ್ರಮ ಜರಗಿತು.

ಒಡಿಯೂರು ಕ್ಷೇತ್ರದಲ್ಲಿ ಶ್ರೀಗಳಿಂದ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳು ಅಭಿನಂದನೀಯ. ತುಳುನಾಡಿನಲ್ಲಿ ಸಮಾಜಪರ ಕಾರ್ಯಗಳಿಗಾಗಿ ಪ್ರಸಿದ್ಧಿ ಪಡೆದ ಕ್ಷೇತ್ರಗಳಲ್ಲಿ ಒಡಿಯೂರು ಕ್ಷೇತ್ರವು ಒಂದಾಗಿರುವುದು ಬಹಳ ಸಂತೋಷದ ವಿಷಯವಾಗಿದೆ. ನಾವೆಲ್ಲರು ಒಂದಾಗಿ ಶ್ರೀಗಳ ಈ ಅರ್ವತ್ತು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸೋಣ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವಪೀಳಿಗೆಯನ್ನು ಪಾಲ್ಗೊಳ್ಳುವಂತೆ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಸಾಧ್ಯವಿದೆ. -ಕೆ. ಡಿ. ಶೆಟ್ಟಿ , ಸಂಸ್ಥಾಪಕರು, ಭವಾನಿ ಫೌಂಡೇಶನ್‌ ಟ್ರಸ್ಟ್‌   ಮುಂಬಯಿ

 

ಚಿತ್ರ-ವರದಿ  ಸುಭಾಶ್‌ ಶಿರಿಯಾ

ಟಾಪ್ ನ್ಯೂಸ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ghjgfhfg

ಕಂದಕಕ್ಕೆ ಉರುಳಿದ ಕಾರು : ತಂದೆ-ಮಗ ಸೇರಿ ಐವರ ದುರ್ಮರಣ

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

Article on School days memories – College Campus

ಮಳೆಯ ದಿನಗಳ ಶಾಲಾ ನೆನಪುಗಳು ಮಜಬೂತಾಗಿದ್ದವು..!

tried to smuggle gold by concealing in his worn socks

ಮಂಗಳೂರು: ಸಾಕ್ಸ್ ಒಳಗೆ ಅರ್ಧ ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿದ ಪ್ರಯಾಣಿಕ ವಶಕ್ಕೆ

india/7th-pay-commission-central-govt-employees-salary-da

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ದೊಡ್ಡ ಪ್ರಮಾಣದಲ್ಲಿ ಡಿಎ ಏರಿಕೆ ಮಾಡಿದ ಸರ್ಕಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajesh Bangera, a state-level footballer, has passed away

ರಾಜ್ಯಮಟ್ಟದ ಫುಟ್‌ಬಾಲ್‌ ಆಟಗಾರ ರಾಜೇಶ್‌ ಬಂಗೇರ ನಿಧನ

“Guidelines for the Control of covid Needed”

“ಕೋವಿಡ್‌ ನಿಯಂತ್ರಣಕ್ಕೆ ಮಾರ್ಗಸೂಚಿಗಳ ಪಾಲನೆ ಅಗತ್ಯ’

Each festival has its own essence

ಪ್ರತಿಯೊಂದು ಹಬ್ಬದಲ್ಲೂ ತುಳುನಾಡಿನ ಸಾರವಿದೆ: ಮಹೇಶ್‌ ಎಸ್‌. ಶೆಟ್ಟಿ

Utilize auto, taxi driver service

ಆಟೋ, ಟ್ಯಾಕ್ಸಿ ಚಾಲಕರ ಸೇವೆ ಬಳಸಿಕೊಳ್ಳಿ

Shree Shanishwara Mandir

ಮೀರಾರೋಡ್‌ ಶ್ರೀ ಶನೀಶ್ವರ ಮಂದಿರ: ವಿಶೇಷ ಪೂಜೆ, ಗೌರವಾರ್ಪಣೆ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

Central Guidelines for Covoid Control

ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಮಾರ್ಗಸೂಚಿ

ghjgfhfg

ಕಂದಕಕ್ಕೆ ಉರುಳಿದ ಕಾರು : ತಂದೆ-ಮಗ ಸೇರಿ ಐವರ ದುರ್ಮರಣ

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.