ಮಿಡತೆಗಳ ನಿಯಂತ್ರಣ ಕ್ರಮ ಸೂಚಿಸಿದ ಔರಂಗಾಬಾದ್‌ ಕೃಷಿ ವಿವಿ

Team Udayavani, May 30, 2020, 8:05 AM IST

Mumbai-tdy-1

ಔರಂಗಾಬಾದ್‌, ಮೇ 29 : ಮಹಾರಾಷ್ಟ್ರ ಮತ್ತು ದೇಶದ ಇತರ ರಾಜ್ಯಗಳಲ್ಲಿ ಬೆಳೆಗಳು ಮತ್ತು ಸಸ್ಯವರ್ಗವನ್ನು ನಾಶಮಾಡುವ ಅಪಾಯಕಾರಿ ಮಿಡತೆಗಳ ಹರಡುವಿಕೆಯ ಮಧ್ಯೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಮಿಡತೆ ಮೊಟ್ಟೆಗಳನ್ನು ನಾಶಮಾಡಲು ಮತ್ತು ಅವುಗಳಿಂದ ಬೆಳೆಗಳನ್ನು ರಕ್ಷಿಸಲು ಬೇವಿನ ಎಣ್ಣೆಯನ್ನು ಸಿಂಪಡಿಸುವಂತಹ ಕೆಲವು ಪರಿಣಾಮಕಾರಿ ಕ್ರಮಗಳ ಸಲಹೆಯನ್ನು ನೀಡಿದೆ.

ಈ ಬೆಳೆ ತಿನ್ನುವ ಮಿಡತೆಗಳ ಹಿಂಡುಗಳು ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಾದ್ಯಂತ ಹರಡಿವೆ. ವೇಗವಾಗಿ ಚಲಿಸುವ ಈ ಕೀಟಗಳು ಪ್ರಸಕ್ತ ವಾರದ ಆರಂಭದಲ್ಲಿ ಪೂರ್ವ ಮಹಾರಾಷ್ಟ್ರದ ವಿದರ್ಭದ ಭಾಗಗಳನ್ನು ಪ್ರವೇಶಿಸಿವೆ. ಪೂರ್ವ ಮಹಾರಾಷ್ಟ್ರದಿಂದ ಈ ಮಿಡತೆಗಳು ಗುರುವಾರ ಮಧ್ಯಾಹ್ನ ಮಧ್ಯಪ್ರದೇಶದ ಬಾಲಘಾಟ್‌ ಜಿಲ್ಲೆಗೆ ದಾಟಿವೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಬುಧವಾರ ನಾಗಪುರ ಜಿಲ್ಲೆಯಿಂದ ಭಂಡಾರವನ್ನು ಪ್ರವೇಶಿಸಿದ ಅನಂತರ ಮಿಡತೆ ಹಿಂಡುಗಳು ಪೂರ್ವಕ್ಕೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯತ್ತ ಸಾಗುತ್ತಿವೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದರು.

ಬೆಳೆಗಳನ್ನು ನಾಶಪಡಿಸುವ ಮತ್ತು ಆಹಾರವನ್ನು ಹುಡುಕುತ್ತಾ ದೂರದ ಪ್ರಯಾಣ ಮಾಡುವ ಈ ಮಿಡತೆಗಳ ಹಿಂಡಿನ ಅಪಾಯವನ್ನು ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿಭಾಯಿಸಬಹುದಾಗಿದೆ ಎಂದು ಮರಾಠವಾಡದ ಪರ್ಭಾಣಿಯಲ್ಲಿರುವ ವಸಂತರಾವ್‌ ನಾಯ್ಕ್  ಕೃಷಿ ವಿಶ್ವವಿದ್ಯಾಲಯ ಹೇಳಿದೆ. ಅವುಗಳ ಮೊಟ್ಟೆಗಳನ್ನು ನಾಶಪಡಿಸುವುದು, ನಿರ್ದಿಷ್ಟ ಗಾತ್ರದ ಕಂದಕಗಳನ್ನು ಅಗೆಯುವುದು ಮತ್ತು ನಿಂತಿರುವ ಬೆಳೆಗಳ ಮೇಲೆ ಬೇವಿನ ಎಣ್ಣೆಯನ್ನು ಸಿಂಪಡಿಸುವುದು ಈ ಮಿಡತೆಯಿಂದ (ಸ್ಕಿಸ್ಟೊಕೆರ್ಕಾ ಗ್ರೆಗೇರಿಯಾ) ಉಂಟಾಗುವ ಭೀತಿಯನ್ನು ನಿಭಾಯಿಸಲು ಕೆಲವು ಪರಿಣಾಮಕಾರಿ ವಿಧಾನಗಳಾಗಿವೆ ಎಂದು ಕೃಷಿ ವಿವಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ನಿಟ್ಟಿನಲ್ಲಿ ರೈತರಿಗೆ ವಿಶ್ವವಿದ್ಯಾಲಯದ ಕೃಷಿ ಕೀಟಶಾಸ್ತ್ರ ವಿಭಾಗವು ಗುರುವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೆಣ್ಣು ಮಿಡತೆಗಳು ತೇವಾಂಶವುಳ್ಳ ಮರಳು ಭೂಮಿಯಲ್ಲಿ 50 ರಿಂದ 100 ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ಒಡೆಯುವ ಅವಧಿಯು ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಇದು ಎರಡರಿಂದ ನಾಲ್ಕು ವಾರಗಳಿಗೆ ವಿಸ್ತರಿಸಬಹುದು. ಲಾರ್ವಾಗಳು ಹೊರಬಂದ ತತ್ ಕ್ಷಣ ಅವುಗಳಿಗೆ ಹಾರಲು ಸಾಧ್ಯವಿಲ್ಲ. ಹಾಗಾಗಿ, ಈ ಮೊಟ್ಟೆಗಳನ್ನು ಗುಂಪುಗಳಾಗಿ ನಾಶಮಾಡಬೇಕು ಎಂದು ವಿವಿ ಹೇಳಿದೆ.

ರೈತರು 60 ಸೆಂಟಿಮೀಟರ್‌ ಅಗಲ ಮತ್ತು 75 ಸೆಂಟಿಮೀಟರ್‌ ಆಳದ ಕಂದಕಗಳನ್ನು ಅಗೆಯುವ ಮೂಲಕ ಹಿಂಡಿನಿಂದ ಸಣ್ಣ ಮಿಡತೆಗಳನ್ನು ಹಿಡಿಯಬಹುದಾಗಿದೆ ಎಂದು ಅದು ತಿಳಿಸಿದೆ. ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ಲಾರ್ವಾಗಳು ಬೆಳೆದು ಗುಂಪುಗಳಾಗಿ ಹಾರಲು ಪ್ರಾರಂಭಿಸಿದಾಗ ಅವು ಎಲೆಗಳು, ಕೊಂಬೆಗಳು, ಹೂವುಗಳು ಮತ್ತು ಬೀಜಗಳನ್ನು ನಾಶಮಾಡುತ್ತವೆ. ವಯಸ್ಕ ಮಿಡತೆಗಳು ತಮ್ಮ ತೂಕಕ್ಕೆ ಸಮನಾದ ಆಹಾರವನ್ನು ಸೇವಿಸಬಲ್ಲವು ಮತ್ತು ಗಂಟೆಗೆ 12 ರಿಂದ 16 ಕಿ.ಮೀ ವೇಗದಲ್ಲಿ ಹಾರಬಲ್ಲವು ಎಂದವರು ಹೇಳಿದ್ದಾರೆ.

ಮಿಡತೆಗಳ ಸಮೂಹವು ಒಂದು ಚದರ ಕಿ.ಮೀ ಪ್ರದೇಶದಲ್ಲಿ ಹರಡಿದ್ದರೆ, ಅವುಗಳ ತೂಕ 3,000 ಕ್ವಿಂಟಾಲ್‌ ವರೆಗೆ ಇರಬಹುದು. ಹೊಗೆಯ ಸಹಾ ಯದಿಂದ ರಾತ್ರಿಯ ಸಮಯದಲ್ಲಿ (ಮಿಡತೆಗಳು ವಿಶ್ರಾಂತಿ ಸಮಯ) ಅವುಗಳ ಹಿಂಡುಗಳನ್ನು ತಟಸ್ಥಗೊಳಿಸಬಹುದಾಗಿದೆ. ಆದರೆ ರೈತರು ಬಹಳ ಜಾಗರೂಕರಾಗಿರಬೇಕು ಮತ್ತು ತಮ್ಮ ಬೆಳೆಗಳಿಗೆ ಬೆಂಕಿ ಹತ್ತಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ವಿಶ್ವವಿದ್ಯಾಲಯ ಹೇಳಿದೆ. ಹೆಕ್ಟೇರ್‌ಗೆ 2.5 ಲೀಟರ್‌ ಬೇವಿನ ಎಣ್ಣೆಯನ್ನು ಸಿಂಪಡಿಸುವುದು ಮಿಡತೆಗಳ ಹಿಂಡುಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ವಿವಿ ತಿಳಿಸಿದೆ.

ಟಾಪ್ ನ್ಯೂಸ್

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.