ಭಕ್ತಿಯೋಗದಿಂದ ಸ್ವಾಮಿಯ ಸಾಮೀಪ್ಯ ಸಾಧ್ಯ: ಗುರುಸ್ವಾಮಿ ಜಯಶೀಲ ತಿಂಗಳಾಯ

Team Udayavani, Nov 23, 2020, 9:11 PM IST

ಭಕ್ತಿಯೋಗದಿಂದ ಸ್ವಾಮಿಯ ಸಾಮೀಪ್ಯ ಸಾಧ್ಯ: ಗುರುಸ್ವಾಮಿ ಜಯಶೀಲ ತಿಂಗಳಾಯ

ಮುಂಬಯಿ, ನ. 22: ಶಬರಿಮಲೆ ಯಾತ್ರಿಗಳು 41 ದಿನಗಳ ವ್ರತಾಚರಣೆ ಮಾಡ ಬೇಕೆಂಬ ನಿಯಮವಿದೆ. ಏಳು ಮಲೆಗಳನ್ನು ಸುತ್ತಿ, ಹದಿನೆಂಟು ಮೆಟ್ಟಿಲುಗಳನ್ನು ಹತ್ತಿ, ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯ ಬೇಕಾದರೆ ಮಾಲಾಧಾರಣೆ ಮಾಡಬೇಕು. ಸನಾತನ ಧರ್ಮದ ಪ್ರಕಾರ ಮನುಷ್ಯನು ಭಗವಂತನಲ್ಲಿ ಐಕ್ಯವಾಗಲು ರಾಜಯೋಗ, ಕರ್ಮ ಯೋಗ, ಜ್ಞಾನಯೋಗ ಎಂಬ ಮಾರ್ಗ ಗಳಿವೆ. ವ್ರತ ಮಾಡು ವವರು ಭಕ್ತಿ ಯೋಗದ ಮೂಲಕ ಶ್ರೀ ಅಯ್ಯಪ್ಪ  ಸ್ವಾಮಿಯ ಸಾಮೀಪ್ಯ ಹೊಂದಲು ಸಾಧ್ಯ ಎಂದು ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಭಾರತಿ ಪಾರ್ಕ್‌ ಮೀರಾ ರೋಡ್‌ ಇದರ ಗುರುಸ್ವಾಮಿ ಜಯ ಶೀಲ ತಿಂಗಳಾಯ ತಿಳಿಸಿದರು.

ನ. 21ರಂದು ಸಂಜೆ ಮೀರಾರೋಡ್‌ ಪೂರ್ವದ ಭಾರತಿ ಪಾರ್ಕ್‌ನ ಯುನಿಟಿ ಕಟ್ಟಡದಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ ಸಭಾಗೃಹದಲ್ಲಿ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಭಾರತಿ ಪಾರ್ಕ್‌ ಮೀರಾರೋಡ್‌ ಇದರ 24ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯ ಪೂರ್ವ ಭಾವಿ ಯಾಗಿ ಸಾಂಕೇತಿಕವಾಗಿ ಅಯೋಜಿಸಲಾಗಿದ್ದ ವ್ರತಧಾರಿಗಳ ಮಾಲಾಧಾರಣೆ, ಭಜನೆ, ಪಡಿಪೂಜೆ, ಮಹಾಮಂಗಳಾರತಿ ನೆರವೇರಿಸಿ ಅವರು ಮಾತನಾಡಿದರು.

ಕೋವಿಡ್ ಸಾಂಕ್ರಾಮಿಕವು ವಿಶ್ವವ್ಯಾಪ್ತಿ ಹರಡುತ್ತಿದೆ. ಸರಿಯಾದ ಔಷಧ ಲಭಿಸುವ ವರೆಗೆ ಸೋಂಕನ್ನು ಹತೋಟಿಗೆ ತರು ವಲ್ಲಿ ಸಹಕರಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ನಿಯಮದಂತೆ ಧಾರ್ಮಿಕ ಕಾರ್ಯ ಕ್ರ ಮ ಆಯೋಜಿಸಲು ವಿನಂತಿ ಸಿದ ಅವರು, ಕೊರೊನಾ ಶೀಘ್ರ ದೂರ ವಾಗಿ ಜನರು ಸುಖ, ಶಾಂತಿ, ನೆಮ್ಮದಿ ಯಿಂದ ಬಾಳಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು.

ರಾಜು ಶ್ರೀಯಾನ್‌  ಅವರಿಗೆ ಶ್ರದ್ಧಾಂಜಲಿ :  ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಸದಸ್ಯರಾಗಿದ್ದ ಅಯ್ಯಪ್ಪ ಸ್ವಾಮಿಯ ಪರಮ ಭಕ್ತ, ಪರೋಪಕಾರಿ, ಇತ್ತೀಚೆಗೆ ನಿಧನ ಹೊಂದಿದ ನಾವುಂದ ರಾಜು ಶ್ರೀಯಾನ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜು ಶ್ರೀಯಾನ್‌ ಅವರು ಅರುಣೋದಯ ಕಲಾ ನಿಕೇತನ ಮತ್ತು ಇನ್ನಿತರ ಸಂಘಟನೆಗಳ ಮೂಲಕ ನಡೆಸುತ್ತಿದ್ದ ನಾಡು-ನುಡಿಯ ಅರಾಧನೆ ಬಗ್ಗೆ ಸಭೆಯಲ್ಲಿ ಗುರುಸ್ವಾಮಿ ಜಯಶೀಲ ತಿಂಗಳಾಯ ವಿವರಿಸಿ, ಅವರ ನಿಧನದಿಂದ ಮುಂಬಯಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕ ಬಡವಾಗಿದೆ ಎಂದು ನುಡಿನಮನ ಸಲ್ಲಿಸಿದರು. ಅವರ ಆತ್ಮವು ಚಿರಶಾಂತಿಯಿಂದ ಕೂಡಿರಲಿ. ಪರಮಾತ್ಮನು ಸದ್ಗತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸಲಾಯಿತು.

ವಿವಿಧ ಧಾರ್ಮಿಕ ಕಾರ್ಯಕ್ರಮ :  ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ ಸದಸ್ಯರಿಂದ ಭಜನೆ ಜರಗಿತು. ಅಯ್ಯಪ್ಪ ಮಾಲಾಧಾರಣೆಯ ಭಕ್ತರು ಹದಿನೆಂಟು ಮೆಟ್ಟಿಲುಗಳಿಗೆ ಕರ್ಪೂರ ಹಚ್ಚಿ ಪೂಜೆ ಸಲ್ಲಿಸಿದರು. ಸ್ವಾಮಿಯೇ ಅಯ್ಯಪ್ಪ ಸ್ಮರಣೆಯೊಂದಿಗೆ ಪರಸ್ಪರ ಕಾಲಿಗೆರಗಿ ಆಶೀರ್ವಾದ ಪಡೆದರು. ಪಡಿಪೂಜೆ ಇನ್ನಿತರ ಧಾರ್ಮಿಕ ವಿಧಿವಿಧಾನ ನೆರವೇರಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮಾಧವ ಐಲ್‌, ಉಪಾಧಾಕ್ಷ ರಮೇಶ ಅಮೀನ್‌, ಭುವಾಜಿ ಶ್ರೀಧರ ಶೆಟ್ಟಿ ಸದಸ್ಯರಾದ ಹೇಮಂತ್‌ ಮುಚ್ಚಾರು, ಸುದರ್ಶನ್‌ ಕೊಡಿಯಾಲ್‌ಬೈಲ್, ಸುರೇಶ್‌ ಕರ್ಕೇರ, ಪುರಂದರ ಕರ್ಕೇರ, ಶಿವರಾಮ ಕೋಟ್ಯಾನ್‌ ಉಪಸ್ಥಿತರಿದ್ದರು. ಸ್ವಾಮಿಗಳಾದ ಶೈಲೇಶ್‌ ಪಾಟೀಲ್, ಅಖೀಲೇಶ್‌ ಉಪಾಧ್ಯಾಯ, ಮಾಧವ ಸಿ. ಕೋಟ್ಯಾನ್‌, ಪ್ರವೀಣ್‌ ಶೆಟ್ಟಿ, ಸುಧೀರ್‌ ಪುತ್ರನ್‌, ಲೀಲಾಧರ್‌ ಅಂಚನ್‌, ಸಿ. ಎನ್‌. ಪೂಜಾರಿ, ಸಂತೋಷ್‌ ಶೆಟ್ಟಿ, ಗಣೇಶ್‌ ದೇವಾಡಿಗ, ಸತೀಶ್‌ ಸೇರಿಗಾರ್‌, ಸ್ವಪ್ನಿಲ್‌ ಸಿ. ಪೂಜಾರಿ, ಸಂತೋಷ್‌ ಶೆಟ್ಟಿ ವಿರಾರ್‌ ಸಹಕರಿಸಿದರು.

ಭಕ್ತರು ಕೋವಿಡ್ ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಅನುಸರಿಸಿ ಮಾಸ್ಕ್ ಧರಿಸಿಕೊಂಡು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಚಿತ್ರ-ವರದಿ: ರಮೇಶ ಅಮೀನ್‌

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.