ಬಂಟರ ಸಂಘ ವಸಾಯಿ-ಡಹಾಣು ಶೈಕ್ಷಣಿಕ ನೆರವು ವಿತರಣೆ

Team Udayavani, Jun 20, 2019, 5:29 PM IST

ಮುಂಬಯಿ: ಕಳೆದ 90 ವರ್ಷಗಳ ಹಿಂದೆ ನಮ್ಮ ಹಿರಿಯರು ಸ್ಥಾಪಿಸಿದ ಸಂಘಟನೆಯು ಇಂದು ನಮ್ಮ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದು ನಮ್ಮ ಹಿರಿಯರ ಪ್ರಯತ್ನ ಸ್ಲಾಘನೀಯ. ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯು ನಮ್ಮ ಸಮಾಜದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸುವುದರೊಂದಿಗೆ ವಿದ್ಯಾರ್ಜನೆಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹಿಸುವುದು ನಮ್ಮ ಉದ್ದೇಶವಾಗಿದೆ. ಬಂಟರ ಸಂಘದಿಂದ ಆರ್ಥಿಕ ಸಹಾಯ ಪಡೆದು ನಮ್ಮ ಮಕ್ಕಳು ಮುಂದೆ ಜೀವನದಲ್ಲಿ ಉತ್ತಮ ಪರಿವರ್ತನೆಯನ್ನುಂಟುಮಾಡಲು ಸಾಧ್ಯ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

ಜೂ. 16ರಂದು ನಲಸೋಪರ ಪಶ್ಚಿಮದ ಗ್ಯಾಲಕ್ಸಿ ಹೊಟೇಲ್‌ನ ಸಭಾಗೃಹದಲ್ಲಿ ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ವತಿಯಿಂದ ನಡೆದ ಸಮಾಜದ ಸ್ಥಳೀಯ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ಬಂಟರ ಸಂಘದ ಶಿಕ್ಷಣ ಮತ್ತು ಕಲ್ಯಾಣ ಸಮಿತಿಯ ವತಿಯಿಂದ ನೀಡಲ್ಪಡುವ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶೈಕ್ಷಣಿಕ ನೆರವು, ವಿಧವಾ ವೇತನ ಹಾಗೂ ವಿಕಲ ಚೇತನರಿಗೆ ಆರ್ಥಿಕ ಸಹಾಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಾ ಬಂದಿದ್ದು ಇದಕ್ಕೆ ದಾನಿಗಳು ಸಹಕರಿಸುತ್ತಿರುವುದು ಅಭಿನಂದನೀಯ. ಸಂಘದ ಶಿಕ್ಷಣ ಸಂಸ್ಥೆಗಳ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಬಂಟ ಸಮಾಜದ ವಿದ್ಯಾರ್ಥಿಗಳು ವಿದ್ಯೆ ಯಿಂದ ವಂಚಿತರಾಗಬಾರದು. ದತ್ತು ಸ್ವೀಕಾರ ಸ್ಕೀಂ ಪ್ರತೀ ವರ್ಷ ನಡೆಯಲಿದ್ದು ಅರ್ಹ ಮಕ್ಕಳು ಇದರ ಸದುಪಯೋಗವನ್ನು ಪಡೆಯಬೇಕು ಹಾಗೂ ಸಂಘವನ್ನು ಯಾವತ್ತೂ ಮರೆಯ ಬಾರದು. ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಶಶಿಧರ ಶೆಟ್ಟಿ, ಜಯಂತ್‌ ಆರ್‌. ಪಕ್ಕಳ ಮತ್ತು ಸಮಿತಿಯ ಇತರ ಕಾರ್ಯಕರ್ತರನ್ನು ಅಭಿನಂದಿಸಿದರು.

ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ ಕೆ. ಶೆಟ್ಟಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸಂಘದ ಪ್ರಯೋಜನವನ್ನು ಪಡೆಯುತ್ತಾ ಸಂಘದಲ್ಲಿ ಕ್ರಿಯಾಶೀಲರಾಗಿ ಬದುಕಲ್ಲಿ ಉತ್ತಮ ಬದಲಾವಣೆಯನ್ನು ತರಬೇಕು. ಸಂಘದ ಶಿಕ್ಷಣ ಸಂಸ್ಥೆಯ ಪ್ರಯೋಜನವನ್ನು ಪಡೆಯಬೇಕು. ವಿದ್ಯಾರ್ಥಿ ಜೀವನದಲ್ಲಿ ಉತ್ತಮರ ಸಂಘ ಬೆಳೆಸಿದಲ್ಲಿ ಉತ್ತಮ ನಾಗರಿಕರಿನಾಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾರಂಭಕ್ಕೆ ಆಗಮಿಸಿದ ವಸಾಯಿ-ವಿರಾರ್‌ ಮಹಾನಗರ ಪಾಲಿಕೆಯ ಮೇಯರ್‌ ರೂಪೇಶ್‌ ಜಾಧವ್‌ ಅವರು ಶುಭಹಾರೈಸಿದರು. ವಸಾಯಿ-ವಿರಾರ್‌ ಮಾಜಿ ಮೇಯರ್‌ ರಾಜೀವ್‌ ಪಾಟೀಲ್‌ ಮಾತನಾಡಿ, ಇಂತಹ ಸಂಘಟನೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರಲ್ಲಿ ತಮ್ಮ ಸಂಸ್ಕೃತಿಯು ಜೀವಂತವಾಗಿ ಉಳಿಯಬಹುದು. ಸಮಾಜದ ಮಕ್ಕಳು ತಮ್ಮ ಮೂಲ ಬೇರನ್ನು ಮರೆಯಬಾರದು. ಇಂದು ಈ ಸಮಾರಂಭದಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದು ಇದು ಅಭಿವೃದ್ಧಿಯ ಸಂಕೇತವಾಗಿದೆ ಎಂದು ನುಡಿದರು.

ಗೌರವ ಅತಿಥಿ ವಸಾಯಿ ಪರಿಸರದ ಶಾಸಕ ಹಿತೇಂದ್ರ ಠಾಕೂರ್‌ ಅವರು ಮಾತನಾಡಿ, ಈ ಪರಿಸರದಲ್ಲಿ ಜನಸಂಖ್ಯೆಯು ವೇಗವಾಗಿ ವದ್ಧಿªಯಾಗುತ್ತಿದೆ. ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಜನರು ಬಂದು ನೆಲೆಸುತ್ತಿ¨ªಾರೆ. ನಾವೆಲ್ಲರೂ ಸೇರಿ ನಮ್ಮ ಪರಿಸರವನ್ನು ಅಭಿವೃದ್ಧಿಗೊಳಿಸೋಣ. ಜನ ಸಾಮಾನ್ಯರೊಂದಿಗೆ ಬೆರೆತು ಅವರ ಸಮಸ್ಯೆಯನ್ನು ಅರಿತು ಅದನ್ನು ಬಗೆಹರಿಸಬಹುದು ಎಂದರು. ವಸಾಯಿ-ವಿರಾರ್‌ ಪಾಲಿಕೆಯ ಮಾಜಿ ಉಪ ಮೇಯರ್‌ ಉಮೇಶ್‌ ನಾಯಕ್‌ ಮಾತನಾಡಿ, ಸಂಘದಿಂದ ಸಹಾಯವನ್ನು ಸ್ವೀಕರಿಸಿದ ಎÇÉಾ ಮಕ್ಕಳನ್ನು ಅಭಿನಂದಿಸಿದರು.

ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ ಯವರು ಎಲ್ಲ ಮಕ್ಕಳನ್ನೂ ಅಭಿನಂದಿಸಿ ಶುಭಕೋರಿದರು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ ದಾಸ್‌ ಶೆಟ್ಟಿ ಮಾತನಾಡಿ, ಶೈಕ್ಷಣಿಕ ನೆರವಿಗೆ ದಾನಿಗಳು ದೊಡ್ಡ ಮಟ್ಟದ ದೇಣಿಗೆ ನೀಡಿದ್ದು, ಈ ಸಲ ಉತ್ತಮ ಮೊತ್ತವನ್ನು ವಿತರಿಸುವಂತಾಗಿದೆ ಎಂದು ನುಡಿದು ದಾನಿಗಳನ್ನು ಅಭಿನಂದಿಸಿದರು. ಸಂಘದ ಪ್ರಾದೇಶಿಕ ಸಮಿತಿಯ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿಯವರು ಮಾತನಾಡಿ ಮಕ್ಕಳಿಗೆ ಉತ್ತಮ ಸಲಹೆ ನೀಡಿದರು.

ಬಂಟರ ಸಂಘ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್‌ ಆರ್‌. ಪಕ್ಕಳ ಅವರು ಮಾತನಾಡಿ, ಬಂಟರ ಸಂಘದಲ್ಲಿ ವಿವಿಧ ರೀತಿಯ ಸೌಲಭ್ಯವಿದ್ದು ನಮ್ಮ ಮಕ್ಕಳಿಗೆ ಒಂದು ವೇಳೆ ಇತರೆಡೆ ಕಾಲೇಜಿನಲ್ಲಿ ಕಲಿಯಲು ಅವಕಾಶ ಸಿಗದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸುವ ಸೌಲಭ್ಯವಿದೆ. ವಸಾಯಿ-ಡಹಾಣು ಪರಿಸರದಲ್ಲಿ ಇಂದು 512 ಮಂದಿಗೆ 23 ಲಕ್ಷ ರೂ. ಗಳಿಗೂ ಅಧಿಕ ಆರ್ಥಿಕ ನೆರವನ್ನು ವಿತರಿಸುತ್ತಿದ್ದೇವೆ. ಸಮಾಜದ ಯುವ ಜನಾಂಗವು ಸಂಘದ ವಿವಿಧ ಕಾರ್ಯದಲ್ಲಿ ಕ್ರೀಯಾಶೀಲರಾಗಬೇಕು ಎಂದರು.

ಈ ಸಂದರ್ಭದಲ್ಲಿ ವಿವಿಧ ಪ್ರಾದೇಶಿಕ ಸಮಿತಿ ಪ್ರಮುಖರನ್ನು ಹಾಗೂ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ ಶೆಟ್ಟಿ ಐಕಳ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಕರ್ನೂರು ಶಂಕರ ಆಳ್ವ, ಕೋಶಾಧಿಕಾರಿ ವಿಜಯ ಎಂ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಾ ಶೆಟ್ಟಿ, ಶಕುಂತಳಾ ಶೆಟ್ಟಿ ಬೊಯಿಸರ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರೀತ್‌ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಶೆಟ್ಟಿ, ಜತೆ ಕಾರ್ಯದರ್ಶಿ ಜಗನ್ನಾಥ್‌ ಡಿ ಶೆಟ್ಟಿ ಜತೆ ಕೋಶಾಧಿಕಾರಿ ರತೀಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಲೀಲಾವತಿ ಆಳ್ವ ಪ್ರಾರ್ಥನೆಗೈದರು. ಸಮಾಜದ ಮಕ್ಕಳಿಗೆ ಆರ್ಥಿಕ ನೆರವು, ವಿಧವೆಯರಿಗೆ ಮತ್ತು ವಿಕಲಚೇತನರಿಗೆ ಆರ್ಥಿಕ ನೆರವನ್ನು ವಿತರಿಸಲಾಯಿತು. ಗೌರವ ಕಾರ್ಯದರ್ಶಿ ಪ್ರವೀಣ್‌ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಶೆಟ್ಟಿ ವಂದಿಸಿದರು. ಸಂಘದ ವಿವಿಧ ಸಮಿತಿಗಳ, ಉಪಸಮಿತಿಗಳ ಹಾಗೂ ಎÇÉಾ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

ಚಿತ್ರ-ವರದಿ : ಈಶ್ವರ ಎಂ. ಐಲ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ