ಭಾಯಂದರ್ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲ : 15ನೇ ವಾರ್ಷಿಕ ಮಹಾಪೂಜೆ ಸಂಪನ್ನ
Team Udayavani, Jan 19, 2021, 2:27 PM IST
ಮುಂಬಯಿ: ಭಾಂದರ್ ಪೂರ್ವದ ಶ್ರೀ ಅಯ್ಯಪ್ಪ ಆರಾಧನಾ ಭಕ್ತ ಮಂಡಲದ ವತಿಯಿಂದ 15ನೇ ವಾರ್ಷಿಕ ಮಹಾಪೂಜೆಯು
ಜ. 14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಸಾಂಕೇತಿಕವಾಗಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ ಮೀರಾರೋಡ್ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಶುದ್ಧೀಕರಣ
ಪೂಜೆ ಹಾಗೂ ಗಣಪತಿಹೋಮ ನಡೆಯಿತು.
ಸಂಜೆ ಆರಾಧನಾ ಫ್ರೆಂಡ್ಸ್‌ನ ಸದಸ್ಯೆಯರು ಮತ್ತು ಸದಸ್ಯರಿಂದ ಭಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮಂಡಲದ ಗುರುಸ್ವಾಮಿ ಸುಧಾಕರ ಪೂಜಾರಿ ಅವರಿಂದ ಧಾರ್ಮಿಕ ಪೂಜೆ, ಮಹಾಮಂಗಳಾರತಿ ನಡೆದು ಪ್ರಸಾದ ವಿತರಣೆ ಮಾಡಲಾಯಿತು. ಕೋವಿಡ್ ಮಹಾಮಾರಿಯ ಸಂಕಟ ದಿಂದ ಸರ್ವರನ್ನು ರಕ್ಷಿಸಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪೂಜಾ ಕಾರ್ಯದಲ್ಲಿ ಮಂಡಳಿಯ ಪದಾ ಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಸಹಕರಿಸಿದ್ದರು.