ಭಾರತ್‌ ಬ್ಯಾಂಕ್‌  “ಉತ್ಕೃಷ್ಟ ಬ್ಯಾಂಕ್‌ ಪುರಸ್ಕಾರ’ಕ್ಕೆ ಆಯ್ಕೆ

Team Udayavani, Sep 27, 2017, 2:45 PM IST

25-Mum08.jpg

ಮುಂಬಯಿ:  ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್‌ ಅಸೋಸಿಯೇಶನ್‌ ಲಿಮಿಟೆಡ್‌ ಸಂಸ್ಥೆಯು ವಾರ್ಷಿಕವಾಗಿ ಪ್ರದಾನಿಸುವ “ಉತ್ಕೃಷ್ಟ ಬ್ಯಾಂಕ್‌ ಪುರಸ್ಕಾರ’ಕ್ಕೆ ಈ ಬಾರಿಯೂ ತುಳು ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌  ಲಿಮಿಟೆಡ್‌ ಸಂಸ್ಥೆ ಆಯ್ಕೆಗೊಂಡಿದೆ ಎಂದು ಬ್ಯಾಂಕ್ಸ್‌ ಅಸೋಸಿಯೇಶನ್‌ ಪ್ರಕಟಿಸಿದೆ.

ರಾಷ್ಟ್ರದ ಆರ್ಥಿಕ ರಾಜಧಾನಿ, ವಾಣಿಜ್ಯ ನಗರಿ ಬೃಹನ್ಮುಂಬಯಿಯ ಬ್ಯಾಂಕ್‌ ಅಸೋಸಿಯೇಶನ್‌ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ, ಗುಣಮಟ್ಟದ ಬ್ಯಾಂಕ್‌ಗಳ ಸೇವಾ ವೈಖರಿಯನ್ನು ಮಾನದಂಡ ಆಗಿಸಿ ವಾರ್ಷಿಕವಾಗಿ ಕೊಡಮಾಡುವ ಕಳೆದ 2015-2016ರ ಕ್ಯಾಲೆಂಡರ್‌ ಸಾಲಿನಲ್ಲಿ ಎರಡು ಸಾವಿರದ ಒಂದು ಕೋ. ರೂ. ಗಳ ಮೊತ್ತಕ್ಕಿಂತ ಅಧಿಕ ಠೇವಣಿ ವ್ಯವಹಾರ ನಡೆಸಿದ ಸಹಕಾರಿ ಬ್ಯಾಂಕುಗಳಲ್ಲಿ ಭಾರತ್‌ ಬ್ಯಾಂಕ್‌ ಮತ್ತೆ “ಉತ್ಕೃಷ್ಟ ಬ್ಯಾಂಕ್‌ ಪುರಸ್ಕಾರ’ಕ್ಕೆ ಭಾಜನವಾಗಿದೆ ಎಂದು ಬ್ಯಾಂಕ್‌ ಅಸೋಸಿಯೇಶನ್‌ ಅಧ್ಯಕ್ಷ ದತ್ತರಾಮ ಚಾಳ್ಕೆ ತಿಳಿಸಿದ್ದಾರೆ.

ಭಾರತ್‌ ಬ್ಯಾಂಕ್‌ನ ಸಾರ್ವಜನಿಕವಾಗಿ ಸ್ಪಂದಿಸುತ್ತ ಗ್ರಾಹಕರ ವಿಶ್ವಾಸನೀಯ ಮತ್ತು ಸರ್ವೋತ್ಕೃಷ್ಟ ಸೇವೆ,  ಸಮಗ್ರ ಬೆಳವಣಿಗೆ ಮತ್ತು ಗುಣಮಟ್ಟದ ವಾರ್ಷಿಕ ವರದಿ ಪರಿಶೀಲಿಸಿದ  ಅಸೋಸಿಯೇಶನ್‌ ಭಾರತ್‌ ಬ್ಯಾಂಕ್‌ನ ಸಹಕಾರಿ ರಂಗದ ವಿಶೇಷ ಕೊಡುಗೆಯನ್ನು ಪರಿಶೀಲಿಸಿ ಮತ್ತೆ ಈ ಬಾರಿಯೂ “ಉತ್ಕೃಷ್ಟ ಬ್ಯಾಂಕ್‌ ಪುರಸ್ಕಾರ’ ಕ್ಕೆ ಆಯ್ಕೆಗೊಳಿಸಿದ್ದು ತುಂಬಾ ಸಂತಸ ತಂದಿದೆ ಎಂದು ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ತಿಳಿಸಿದ್ದಾರೆ.

ಈ ಬಾರಿ ಮತ್ತೆ ಬ್ಯಾಂಕ್ಸ್‌ ಅಸೋಸಿಯೇಶನ್‌ ನಮ್ಮ ನಿಮ್ಮೆಲ್ಲರ ಭಾರತ್‌ ಬ್ಯಾಂಕ್‌ಗೆ “ಉತ್ಕೃಷ್ಟ ಬ್ಯಾಂಕ್‌ ಪುರಸ್ಕಾರ’ ನೀಡಿ ಗೌರವಿಸುತ್ತಿರುವುದು ಭಾರತ್‌ ಬ್ಯಾಂಕ್‌ ಪರಿವಾರದ ಹೆಮ್ಮೆಯಾಗಿದೆ ಎಂದು ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌ ತಿಳಿಸಿದ್ದಾರೆ.

ಆರ್‌ಬಿಐ ನಿರ್ದೇಶನ ಮತ್ತು ಮಾರ್ಗಸೂಚಿಯಂತೆ ಸೇವಾ ನಿರತಗೊಂಡ ಬ್ಯಾಂಕ್‌ ಗತಸಾಲಿನಲ್ಲೂ ಬ್ಯಾಂಕ್‌ನ ಪಾಲುದಾರಿಕೆ ಬಂಡವಾಳ 228.75 ಕೋ. ರೂ.  ಗಳನ್ನು   ಕಾಯ್ದಿರಿಸಿದ ಸ್ಥಿರನಿಧಿ 889.89 ಕೋ. ರೂ. ಗಳನ್ನು ಹೊಂದಿದೆ. ಬ್ಯಾಂಕ್‌ನ ನಿರ್ದೇಶಕ ಮಂಡಳಿ ಮತ್ತು ಉನ್ನತಾಧಿಕಾರಿಗಳು ಹಾಗೂ ನೌಕರ ವೃಂದದ ಸಹಯೋಗ ಮತ್ತು ಗ್ರಾಹಕರ ಅನನ್ಯ ವ್ಯವಹಾರದಿಂದ ಗತ ಕ್ಯಾಲೆಂಡರ್‌ ಸಾಲಿನಲ್ಲೂ ಬ್ಯಾಂಕ್‌ ಅತ್ಯುತ್ತಮ ಸಾಧನೆ ನಿರ್ವಹಿಸಿದ್ದು ಸರ್ವರ ಉತ್ತೇಜನಕ್ಕೆ ಅಭಿವಂದಿಸುತ್ತೇವೆ ಎಂದು ಸಿಇಒ ಮತ್ತು ಬ್ಯಾಂಕ್‌ನ ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 27ರಂದು ದಾದರ್‌ ಪೂರ್ವದ ಹೊಟೇಲ್‌ ಸಿಟಿ ಪಾಯಿಂಟ್‌ ಸಭಾಗೃಹದಲ್ಲಿ ನೇರವೇರಲಿದೆ ಎಂದು ಬ್ಯಾಂಕ್‌ನ ಉಪ ಪ್ರಧಾನ ಪ್ರಬಂಧ‌ಕರೂ ಹಾಗೂ ಅಭಿವೃದ್ಧಿ ಇಲಾಖಾ ಮುಖ್ಯಸ್ಥ ಮೋಹನ್‌ದಾಸ್‌ ಹೆಜ್ಮಾಡಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಒಂದೇ ದಿನದಲ್ಲಿ ಭೂ ಪರಿವರ್ತನೆ ವ್ಯವಸ್ಥೆ ಜಾರಿ: ಆರ್‌.ಅಶೋಕ್

ಒಂದೇ ದಿನದಲ್ಲಿ ಭೂ ಪರಿವರ್ತನೆ ವ್ಯವಸ್ಥೆ ಜಾರಿ: ಆರ್‌.ಅಶೋಕ್

ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ ನೀಡಿ; ಸಿಎಂ

ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ ನೀಡಿ; ಸಿಎಂ

ಒಮಿಕ್ರಾನ್‌ ಕುರಿತು ಆತಂಕ ಮೂಡಿಸುವ ಕೆಲಸ ಆಗುತ್ತಿದೆ: ಡಿಕೆಶಿ ಆರೋಪ

ಒಮಿಕ್ರಾನ್‌ ಕುರಿತು ಆತಂಕ ಮೂಡಿಸುವ ಕೆಲಸ ಆಗುತ್ತಿದೆ: ಡಿಕೆಶಿ ಆರೋಪ

ಕೋವಿಡ್‌ ಸೋಂಕಿತ ವಿದ್ಯಾರ್ಥಿಗೆ ಪರೀಕ್ಷೆಗೆ ನಿರ್ಬಂಧ, ಮತ್ತೊಮ್ಮೆ ಅವಕಾಶ

ಕೋವಿಡ್‌ ಸೋಂಕಿತ ವಿದ್ಯಾರ್ಥಿಗೆ ಪರೀಕ್ಷೆಗೆ ನಿರ್ಬಂಧ, ಮತ್ತೊಮ್ಮೆ ಅವಕಾಶ

ಪತ್ನಿಯನ್ನು ಕೊಲೆಗೈದವನಿಗೆ ಜೀವಾವಧಿ ಶಿಕ್ಷೆ : ಸಾಕ್ಷಿ ಹೇಳಿದ 13 ವರ್ಷದ ಬಾಲಕ

ಪತ್ನಿಯನ್ನು ಕೊಲೆಗೈದವನಿಗೆ ಜೀವಾವಧಿ ಶಿಕ್ಷೆ : ಪುತ್ರನ ಸಾಕ್ಷಿಯಿಂದ ಆರೋಪ ಸಾಬೀತು

ರಾಜ್ಯದಲ್ಲಿಂದು 399 ಕೋವಿಡ್‌ ಪಾಸಿಟಿವ್‌ ಪತ್ತೆ: 6 ಮಂದಿ ಸಾವು

ರಾಜ್ಯದಲ್ಲಿಂದು 399 ಕೋವಿಡ್‌ ಪಾಸಿಟಿವ್‌ ಪತ್ತೆ: 6 ಮಂದಿ ಸಾವು

1-sds

ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಘದಿಂದ ಸಮಾಜ ಬಾಂಧವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ: ಮುರಳಿ ಕೆ. ಶೆಟ್ಟಿ

ಸಂಘದಿಂದ ಸಮಾಜ ಬಾಂಧವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ: ಮುರಳಿ ಕೆ. ಶೆಟ್ಟಿ

ಕಲಾವಿದನೊಬ್ಬನಿಂದ ಕಲೆ-ಕಲಾವಿದರ ಸೇವೆ ಶ್ಲಾಘನೀಯ: ಕಡಂದಲೆ ಸುರೇಶ್‌ ಭಂಡಾರಿ

ಕಲಾವಿದನೊಬ್ಬನಿಂದ ಕಲೆ-ಕಲಾವಿದರ ಸೇವೆ ಶ್ಲಾಘನೀಯ: ಕಡಂದಲೆ ಸುರೇಶ್‌ ಭಂಡಾರಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ನೂತನ ಅಧ್ಯಕ್ಷರಾಗಿ ಎಲ್‌. ವಿ. ಅಮೀನ್‌ ಪದಗ್ರಹಣ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ನೂತನ ಅಧ್ಯಕ್ಷರಾಗಿ ಎಲ್‌. ವಿ. ಅಮೀನ್‌ ಪದಗ್ರಹಣ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಇಂಗ್ಲಿಷ್‌ ವ್ಯಾಮೋಹ ಭಾಷೆಯ ಅಳಿವಿಗೆ ಪ್ರಮುಖ ಕಾರಣ: ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ

ಇಂಗ್ಲಿಷ್‌ ವ್ಯಾಮೋಹ ಭಾಷೆಯ ಅಳಿವಿಗೆ ಪ್ರಮುಖ ಕಾರಣ: ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

ಒಂದೇ ದಿನದಲ್ಲಿ ಭೂ ಪರಿವರ್ತನೆ ವ್ಯವಸ್ಥೆ ಜಾರಿ: ಆರ್‌.ಅಶೋಕ್

ಒಂದೇ ದಿನದಲ್ಲಿ ಭೂ ಪರಿವರ್ತನೆ ವ್ಯವಸ್ಥೆ ಜಾರಿ: ಆರ್‌.ಅಶೋಕ್

ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ ನೀಡಿ; ಸಿಎಂ

ಆವಿಷ್ಕಾರ, ಸಂಶೋಧನೆ, ಅಭಿವೃದ್ಧಿಗೆ ಆದ್ಯತೆ ನೀಡಿ; ಸಿಎಂ

ಒಮಿಕ್ರಾನ್‌ ಕುರಿತು ಆತಂಕ ಮೂಡಿಸುವ ಕೆಲಸ ಆಗುತ್ತಿದೆ: ಡಿಕೆಶಿ ಆರೋಪ

ಒಮಿಕ್ರಾನ್‌ ಕುರಿತು ಆತಂಕ ಮೂಡಿಸುವ ಕೆಲಸ ಆಗುತ್ತಿದೆ: ಡಿಕೆಶಿ ಆರೋಪ

ಕೋವಿಡ್‌ ಸೋಂಕಿತ ವಿದ್ಯಾರ್ಥಿಗೆ ಪರೀಕ್ಷೆಗೆ ನಿರ್ಬಂಧ, ಮತ್ತೊಮ್ಮೆ ಅವಕಾಶ

ಕೋವಿಡ್‌ ಸೋಂಕಿತ ವಿದ್ಯಾರ್ಥಿಗೆ ಪರೀಕ್ಷೆಗೆ ನಿರ್ಬಂಧ, ಮತ್ತೊಮ್ಮೆ ಅವಕಾಶ

ಪತ್ನಿಯನ್ನು ಕೊಲೆಗೈದವನಿಗೆ ಜೀವಾವಧಿ ಶಿಕ್ಷೆ : ಸಾಕ್ಷಿ ಹೇಳಿದ 13 ವರ್ಷದ ಬಾಲಕ

ಪತ್ನಿಯನ್ನು ಕೊಲೆಗೈದವನಿಗೆ ಜೀವಾವಧಿ ಶಿಕ್ಷೆ : ಪುತ್ರನ ಸಾಕ್ಷಿಯಿಂದ ಆರೋಪ ಸಾಬೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.