ಭಾರತ್‌ ಬ್ಯಾಂಕ್‌ ಗ್ರಾಹಕರ ಆಶಾಕಿರಣ: ಉಪೂರು ಶಿವಾಜಿ ಪೂಜಾರಿ

Team Udayavani, Nov 26, 2020, 7:35 PM IST

ಭಾರತ್‌ ಬ್ಯಾಂಕ್‌ ಗ್ರಾಹಕರ ಆಶಾಕಿರಣ: ಉಪೂರು ಶಿವಾಜಿ ಪೂಜಾರಿ

ಪುಣೆ, ನ. 25: ಭಾರತ್‌ ಬ್ಯಾಂಕ್‌ನ ಸಾಧನೆಯಲ್ಲಿ ಗ್ರಾಹಕರ ಪಾಲು ಅಪಾರವಿದೆ. ಗ್ರಾಹಕರು, ಶೇರುದಾರರು, ಹಿತೈಷಿಗಳು ಬ್ಯಾಂಕ್‌ನ ಮೇಲೆ ತೋರಿದ ಪ್ರೀತಿ, ವಿಶ್ವಾಸದಿಂದ ಬ್ಯಾಂಕ್‌ ಉತ್ತರೋತ್ತರ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಶತ ಶಾಖೆಗಳ ಸರದಾರ ಎಂದೇ ಬಿಂಬಿತಗೊಂಡಿರುವ ಭಾರತ್‌ ಬ್ಯಾಂಕ್‌ ಗ್ರಾಹಕರ ಆಶಾಕಿರಣವಾಗಿದೆ. ಗ್ರಾಹಕರ ಆಶೋತ್ತರಗಳಿಗೆ ಬ್ಯಾಂಕ್‌ ಸದಾ ಸ್ಪಂದಿಸುತ್ತಿದ್ದು, ದಿನದ 24 ಗಂಟೆಗಳ ಕಾಲವೂ ಡಿಜಿಟಲ್‌ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ ತಿಳಿಸಿದರು.

ನ. 23ರಂದು ಬಿಲ್ಲವರ ಅಸೋಸಿ ಯೇಶನ್‌ ಮುಂಬಯಿ ಸಂಚಾಲಿತ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ನ ಪುಣೆಯ ಸ್ಥಳಾಂತರಿತ ಶಿವಾಜಿ ನಗರದ ಶಾಖೆಯನ್ನು ಡಿಗೋಲ್ಡ್‌ ಹೌಸ್‌, ಯುನಿಟ್‌ ನಂ. 1ಎ, 1ಬಿ ಹಾಗೂ 1ಸಿ, ಅಪ್ಪರ್‌ ಗ್ರೌಂಡ್‌ ಫ್ಲೋರ್‌, ಫೈನಲ್‌ ಪ್ಲಾಟ್‌ ನಂ. 558, ಜ್ಞಾನೇಶ್ವರ್‌ ಪಾದುಕಾ ಚೌಕ್‌ ಹತ್ತಿರ ಭಾರತ್‌ ಪೆಟ್ರೋಲ್‌ ಪಂಪ್‌ ಹಿಂಬದಿಯ ನೂತನ ಕಟ್ಟಡದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಗ್ರಾಹಕರ ಪ್ರೀತಿ, ವಿಶ್ವಾಸ, ಗೌರವ ಇದೇ ರೀತಿಯಲ್ಲಿ ಬ್ಯಾಂಕ್‌ನ ಮೇಲಿರಲಿ. ಗ್ರಾಹಕರ ಸಂತೃಪ್ತಿಯೇ ಬ್ಯಾಂಕ್‌ನ ಧ್ಯೇಯವಾಗಿದೆ ಎಂದರು.

ಸುಸಜ್ಜಿತ ನೂತನ ಸ್ಥಳಾಂತರಿತ ಶಾಖೆಯನ್ನು ಭಾರತ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಶಿವಾಜಿ ಪೂಜಾರಿ ರಿಬ್ಬನ್‌ ಬಿಡಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ನಿರ್ದೇಶಕರಾದ ಭಾಸ್ಕರ್‌ ಎಂ. ಸಾಲ್ಯಾನ್‌ ಅವರು ಎಟಿಎಂ ಸೆಂಟರನ್ನು ಹಾಗೂ ಎನ್‌. ಟಿ. ಪೂಜಾರಿ ಅವರು ಲಾಕರ್‌ ಸೇವೆಯನ್ನು ಉದ್ಘಾಟಿಸಿದರು.

ಪುಣೆಯ ಹೊಟೇಲ್‌ ಉದ್ಯಮಿ ಸುವರ್ಣ ಕಟಾರಿಯಾ ಮಾತನಾಡಿ, ಭಾರತ್‌ ಬ್ಯಾಂಕ್‌ ನಮ್ಮ ಪರಿವಾರದ ಬ್ಯಾಂಕ್‌ ಎಂಬಂತೆ ಭಾಸವಾಗುತ್ತದೆ. ಬ್ಯಾಂಕಿನ ಎಲ್ಲ ಸಿಬಂದಿಗಳು ಗ್ರಾಹಕರೊಂದಿಗೆ ಪ್ರೀತಿ ತೋರಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇದರಿಂದ ಭಾರತ್‌ ಬ್ಯಾಂಕ್‌ ನಮ್ಮ ಅಚ್ಚುಮೆಚ್ಚಿನ ಬ್ಯಾಂಕ್‌ ಆಗಿದೆ ಎಂದು ಶುಭ ಹಾರೈಸಿದರು.

ಸಮಾಜ ಸೇವಕ ಶ್ಯಾಮ್‌ ಸುವರ್ಣ ಮಾತನಾಡಿ, ಒಳ್ಳೆಯ ಪರಿಸರಕ್ಕೆ ಭಾರತ್‌ ಬ್ಯಾಂಕ್‌ ಸ್ಥಳಾಂತರಗೊಂಡಿದೆ. ಇದರಿಂದ ಬ್ಯಾಂಕ್‌ನ ವ್ಯವಹಾರ ಅಭಿವೃದ್ಧಿ ಹೊಂದಲು ಇನ್ನಷ್ಟು ಅನುಕೂಲವಾಗಲಿದೆ ಎಂದರು.

ನೂತನ ಶಾಖೆಯ ಕಟ್ಟಡದ ಮಾಲಕ ವಿನೋದ್‌ ಶಾØ ಮಾತನಾಡಿ, ಭಾರತ್‌ ಬ್ಯಾಂಕ್‌ನಲ್ಲಿ ಕೆಳಹಂತದ ಸಿಬಂದಿಯಿಂದ ಉನ್ನತ ಹಂತದ ಅಧಿಕಾರಿಗಳವರೆಗೆ ಎಲ್ಲರೂ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ಒದಗಿಸುತ್ತಿದ್ದಾರೆ. ಬ್ಯಾಂಕ್‌ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ  ಎಂದು ಹಾರೈಸಿದರು.

ಹೊಟೇಲ್‌ ಉದ್ಯಮಿ ರೌನಕ್‌ ಶೆಟ್ಟಿ ಮಾತನಾಡಿ, ಭಾರತ್‌ ಬ್ಯಾಂಕ್‌ನಲ್ಲಿ ಸಿಬಂದಿಯಿಂದ ಗ್ರಾಹಕ ಸ್ನೇಹಿಯಾಗಿ ಉತ್ತಮ ಗುಣಮಟ್ಟದ ಸೇವೆಯು ಲಭಿಸುವುದರಿಂದ ನಾನು ಮತ್ತು ನನ್ನ ತಂದೆಯವರು ಭಾರತ್‌ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಲು ಇಷ್ಟಪಟ್ಟಿದ್ದೇವೆ ಎಂದರು.

ಉದ್ಯಮಿ ಧನಂಜಯ್‌ ಭಾರ್ಗ್‌ ಮಾತನಾಡಿ, ದೇಶದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಬ್ಯಾಂಕ್‌ ಎಂದರೆ ಅದು ಭಾರತ್‌ ಬ್ಯಾಂಕ್‌ ಎಂದರು.

ಸ್ಥಳಾಂತರಿತ ನೂತನ ಶಾಖೆಯ ಉದ್ಘಾಟನ ಸಮಾರಂಭದಲ್ಲಿ ನಿರ್ದೇಶಕ ರಾದ ಸೂರ್ಯಕಾಂತ್‌ ಜೆ. ಸುವರ್ಣ, ಬಿಲ್ಲವ ಸಮಾಜ ಸೇವಾ ಸಂಘದ ಪುಣೆ ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಸಮಾಜ ಸೇವಕಿ ನೂತನ್‌ ಸುವರ್ಣ, ಪುಣೆಯ ಹೊಟೇಲ್‌ ಉದ್ಯಮಿಗಳಾದ ಪಾಂಡುರಂಗ ಪೂಜಾರಿ, ಸದಾಶಿವ ಸಾಲ್ಯಾನ್‌, ಭಾರತ್‌ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಆಡಳಿತ ನಿರ್ದೇಶಕ ವಿದ್ಯಾನಂದ ಎಸ್‌. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್‌ ಬಿ. ಸಾಲ್ಯಾನ್‌, ಡಿಜಿಎಂ ಪ್ರಭಾಕರ ಜಿ. ಪೂಜಾರಿ, ಘನ್ಸೋಲಿ ಶಾಖೆಯ ಮುಖ್ಯ ಪ್ರಬಂಧಕ ಸಂತೋಷ್‌ ಬಿ. ಕೋಟ್ಯಾನ್‌, ಪುಣೆ ಧನ್ಕವಾಡಿ ಶಾಖೆಯ ಮುಖ್ಯ ಪ್ರಬಂಧಕ ಪ್ರತಾಪ್‌ ಕರ್ಕೇರ, ಪುಣೆ ಚಿಂಚ್ವಾಡ್‌ ಶಾಖೆಯ ಮುಖ್ಯ ಪ್ರಬಂಧಕ ಮಹೇಂದ್ರನಾಥ ಸುವರ್ಣ, ಧನ್ಕವಾಡಿ ಶಾಖೆಯ ಉಪಪ್ರಬಂಧಕ ತಾರಾನಾಥ ಅಮೀನ್‌, ಶಿವಾಜಿನಗರ ಶಾಖೆಯ ಸಿಬಂದಿ ಆನಂದ ಎಂ. ಪೂಜಾರಿ, ರಕ್ಷಿತ್‌ ಡಿ. ಸನಿಲ್‌, ನವೀನ್‌ ಕೆ. ಪೂಜಾರಿ, ಸಂಕೇತ್‌ ಪೂಜಾರಿ, ಮಹೇಶ್‌ ಎಚ್‌. ನಲವಡೆ ಮೊದಲಾದವರು ಉಪಸ್ಥಿತರಿದ್ದರು.

ಶಿವಾಜಿ ನಗರ ಶಾಖೆಯ ಮುಖ್ಯ ಪ್ರಬಂಧಕ ಸುಧೀರ್‌ ಎಸ್‌. ಪೂಜಾರಿ ಸ್ವಾಗತಿಸಿದರು. ಉಪ ಪ್ರಬಂಧಕ ಶಶಿ ಎನ್‌. ಬಂಗೇರ ವಂದಿಸಿದರು.

ನೂತನ ಶಾಖೆಯಲ್ಲಿ ಉಳ್ಳೂರು ಶೇಖರ್‌ ಶಾಂತಿಯವರ ಪೌರೋಹಿತ್ಯದಲ್ಲಿ ವಾಸ್ತುಪೂಜೆ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಿಬಂದಿ ಸಂಕೇತ್‌ ಪೂಜಾರಿ, ಲಿಖೀತಾ ಗುಜರ್‌, ಅದಿತ್ಯಾ ಗುಜರ್‌ ಅವರು ನೇತೃತ್ವ ವಹಿಸಿದ್ದರು. ಅಪಾರ ಸಂಖ್ಯೆಯಲ್ಲಿ ಗ್ರಾಹಕರು, ಶೇರುದಾರರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.