ಭಾರತ್‌ ಬ್ಯಾಂಕ್‌: ಪೊಲೀಸರಿಗೆ ರೇನ್‌ಕೋಟ್‌ ವಿತರಣೆ

Team Udayavani, Jul 13, 2018, 5:00 PM IST

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಚಾಲಿತ ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಮುಂಬಯಿ ಲಿಮಿಟೆಡ್‌ ವತಿಯಿಂದ ಮುಂಬಯಿ ಟ್ರಾಫಿಕ್‌ ವಿಭಾಗದ  ಸಾಂತಾಕ್ರೂಜ್‌, ವಕೋಲ ಮತ್ತು ಬಾಂದ್ರಾ ಬಿಕೆಸಿ ವಿಭಾಗದ ಪೊಲೀಸರಿಗೆ ಉಚಿತ ರೇನ್‌ಕೋಟ್‌ಗಳ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಕಲೀನಾ ಶಾಖೆಯ ಮುಖ್ಯ ಪ್ರಬಂಧಕ ರತ್ನಾಕರ ಸಾಲ್ಯಾನ್‌, ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಹರೀಶ್‌ ಕೆ., ಉಪ ಪ್ರಬಂಧಕಿ ಜ್ಯೋತಿ ಬಂಗೇರ, ಮಹೇಶ್‌ ಪೂಜಾರಿ ಕಾರ್ಕಳ ಮೊದಲಾದವರು ಉಪಸ್ಥಿತಿಯಲ್ಲಿ ಭಾರತ್‌ ಬ್ಯಾಂಕ್‌ ಕಲೀನಾ ಶಾಖೆಯಲ್ಲಿ ರೇನ್‌ಕೋಟ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಮಾಜ ಸೇವಕ ದಿನೇಶ್‌ ಅಮೀನ್‌, ಬಿಕೆಸಿ ವಿಭಾಗದ ಹಿರಿಯ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಜೇಂದ್ರ ಕಲಬೋಡ್‌, ಬಿಕೆಸಿ ಟ್ರಾಫಿಕ್‌ ವಿಭಾಗದ ಮುಖ್ಯಸ್ಥ ಮಗಾಡೆ, ವಕೋಲಾ ವಿಭಾಗದ ಟ್ರಾಫಿಕ್‌ ಮುಖ್ಯಸ್ಥ ಶೇಲಾರ್‌, ಇತರ ಟ್ರಾಫಿಕ್‌ ಪೊಲೀಸರು ಉಪಸ್ಥಿತರಿದ್ದರು.

ಶಾಖೆಯ ಸಿಬಂದಿಯಾದ ಮೋಹಿನಿ ಪೂಜಾರಿ, ಶಿಲ್ಪಾ ಪೂಜಾರಿ, ಅಕ್ಷಿತಾ ಸುವರ್ಣ, ಪ್ರತಾಪ್‌ ಡಿ. ಕರ್ಕೇರ, ಸುಭಾಶ್‌ಚಂದ್ರ ಮಾಬಿಯಾನ್‌, ಅಶ್ವಿ‌ನಿ ಅಮೀನ್‌, ದೀಪಾಲಿ ಪೂಜಾರಿ, ಅಮಿತ್‌ ಶೆಣೈ, ಗಾಯತ್ರಿ ಎಸ್‌. ಉಚ್ಚಿಲ್‌, ವಿಕ್ರಂ ಜೈನ್‌, ಪೂಜಾ ಚಂದ್ರ ಮೋರೆ, ಪದ್ಮಶ್ರೀ ಪೂಜಾರಿ, ಶೀತಲ್‌ ಸಾಲ್ಯಾನ್‌, ದಿವ್ಯಾ ಸನಿಲ್‌, ಹರಿಣಾಕ್ಷ ಪೂಜಾರಿ, ಪ್ರವೀಣಾ ಪೂಜಾರಿ, ವಿ. ಕೆ. ಶೆಟ್ಟಿ, ಸುರೇಶ್‌ ಆರ್‌. ಸುವರ್ಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ