ಭಾರತ್‌ ಬ್ಯಾಂಕ್‌ ಸ್ಟಾಫ್‌ ವೆಲ್ಫೇರ್‌ ಕ್ಲಬ್‌: ಕ್ರೀಡೋತ್ಸವ 

Team Udayavani, Nov 10, 2017, 2:39 PM IST

08-Mum02a.jpg

ಮುಂಬಯಿ: ಭಾರತ್‌ ಬ್ಯಾಂಕ್‌ ಸ್ಟಾಫ್‌ ವೆಲ್ಫೇರ್‌ ಕ್ಲಬ್‌ನ ವಾರ್ಷಿಕ ಕ್ರೀಡೋತ್ಸವ ಸಮಾರೋಪ ಹಾಗೂ ಬಹುಮಾನ ವಿತರಣ ಸಮಾರಂಭವು ಕಾಂದಿವಲಿ ಪೂರ್ವದ ಠಾಕೂರ್‌ ವಿಲೇಜ್‌ನ ಠಾಕೂರ್‌ ಸ್ಟೇಡಿಯಂನಲ್ಲಿ ನ. 4 ರಂದು ಸಂಜೆ ನಡೆಯಿತು.

ಅಂತರ್‌ಶಾಖಾ ಸೀಮಿತ ಓವರ್‌ಗಳ ಕ್ರಿಕೆಟ್‌ ಪಂದ್ಯಾಟದಲ್ಲಿ ಒಟ್ಟು 14 ತಂಡಗಳು ಭಾಗವಹಿಸಿದ್ದು, ಅಂತಿಮವಾಗಿ ಶಿರ್ಡಿ ಶಾಖೆಯ ಭರತ್‌ ಎಸ್‌. ಕರ್ಕೇರ ನೇತೃತ್ವದ ಬಿಸಿಬಿ ಥಂಡರ್ ತಂಡ ಪ್ರಥಮ, ಪನ್ವೆಲ್‌ ಶಾಖೆಯ ಸಂತೋಷ್‌ ಬಿ. ಕೋಟ್ಯಾನ್‌ ನೇತೃತ್ವದ ಬಿಸಿಬಿ ರೇಂಜರ್ ತಂಡ ದ್ವಿತೀಯ ಸ್ಥಾನ ಪಡೆದವು.

ಮಹಿಳೆಯರ ಸೀಮಿತ ಓವರ್‌ಗಳ ಬಾಕ್ಸ್‌ ಕ್ರಿಕೆಟ್‌ ಪಂದ್ಯಾಟದಲ್ಲಿ ಕೇಂದ್ರ ಕಚೇರಿಯ ತನ್ವಿ ಎನ್‌. ಅಮೀನ್‌ ನೇತೃತ್ವದ ಬಿಸಿಬಿ ಬ್ಲಾಸ್ಟರ್ ಪ್ರಥಮ, ಲ್ಯಾಮಿಂಗ್‌ಟನ್‌ ರೋಡ್‌ ಶಾಖೆಯ ಬೇಬೆ ಜೆ. ಕುಕ್ಯಾನ್‌ ನೇತೃತ್ವದ ಬಿಸಿಬಿ ಈಗಲ್‌ ತಂಡ ದ್ವಿತೀಯ ಸ್ಥಾನ ಗಳಿಸಿದವು. ಮಹಿಳೆಯರ ತ್ರೋಬಾಲ್‌ ಪಂದ್ಯದಲ್ಲಿ ಗೋರೆಗಾಂವ್‌ ಪೂರ್ವದ ದೀಕ್ಷಿತಾ ಕೆ. ಸುವರ್ಣ ನೇತೃತ್ವದ ಬಿಸಿಬಿ ಫಾಲ್ಕೋನ್ಸ್‌ ತಂಡ ಪ್ರಥಮ, ಮುಲುಂಡ್‌ ಪೂರ್ವ ಶಾಖೆಯ ಅನುಷಾ ಜೆ. ಪೂಜಾರಿ ನೇತೃತ್ವದ ಬಿಸಿಬಿ ರೈಡರ್ ತಂಡ ದ್ವಿತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳು ನಗದು, ಸ್ಮರಣಿಕೆ ಹಾಗೂ ಪರ್ಯಾಯ ಫಲಕಗಳಿಂದ ಗೌರವಿಸಲ್ಪಟ್ಟವು.

ಕ್ರಿಕೆಟ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಭಾಂಡೂಪ್‌ ವಿಲೇಜ್‌ ಶಾಖೆಯ ಧೀರಜ್‌ ಕುಮಾರ್‌ ಎಂ. ಕೋಟ್ಯಾನ್‌, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಮಲಾಡ್‌ ಶಾಖೆಯ ಜಿತೇಂದ್ರ ಸಿ. ಜೋಶಿ, ಉತ್ತಮ ದಾಂಡಿಗನಾಗಿ ದಿವಾ ಶಾಖೆಯ ಶ್ರೇಯಸ್‌ ಎಸ್‌. ಶೆಟ್ಟಿ, ಉತ್ತಮ ಎಸೆತಗಾರನಾಗಿ ಪನ್ವೆಲ್‌ ಶಾಖೆಯ ಸಂತೋಷ್‌ ಬಿ. ಕೋಟ್ಯಾನ್‌ ಅವರು ಪ್ರಶಸ್ತಿ ಪಡೆದರು.

ಅಧಿಕ ಸಿಕ್ಸರ್‌ ಮತ್ತು ಬೌಡರಿ ಹೊಡೆತಗಾರನಾಗಿ ದಿವಾ ಶಾಖೆಯ ಶ್ರೇಯಸ್‌ ಎಸ್‌. ಶೆಟ್ಟಿ ಅವರು ಬಹುಮಾನ ಗಳಿಸಿದರು. ತ್ರೋಬಾಲ್‌ನಲ್ಲಿ ಉತ್ತಮ ಆಟಗಾರ್ತಿಯಾಗಿ ಗೋರೆಗಾಂವ್‌ ಪೂರ್ವ ಶಾಖೆಯ ದೀಕ್ಷಿತಾ ಕೆ. ಸುವರ್ಣ, ಉತ್ತಮ ಸರ್ವರ್‌ ಆಗಿ ಥಾಣೆ ಶಾಖೆಯ ಪೂಜಾ ಸಿ. ಅಂಚನ್‌ ಅವರು ಬಹುಮಾನ ಗಳಿಸಿದರು. ಸುಮಾರು ಐವತ್ತಕ್ಕೂ ಅಧಿಕ ಸಿಬಂದಿಗಳ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಾರತ್‌ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಣಾಧಿಕಾರಿ ಸಿ. ಆರ್‌. ಮೂಲ್ಕಿ ಅವರು ಬಹುಮಾನ ವಿತರಿಸಿ ಶುಭ ಹಾರೈಸಿದರು.

ಉದ್ಘಾಟನ ಕಾರ್ಯಕ್ರಮದಲ್ಲಿ  ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ನಿರ್ದೇಶಕರಾದ ವಿ. ಆರ್‌. ಕೋಟ್ಯಾನ್‌, ನಿರ್ದೇಶಕ ಗಂಗಾಧರ ಪೂಜಾರಿ ಮತ್ತು ಭಾಸ್ಕರ ಸಾಲ್ಯಾನ್‌, ನ್ಯಾಯವಾದಿ ಸೋಮನಾಥ ಅಮೀನ್‌, ಆಂತರಿಕ ಲೆಕ್ಕಪರಿಶೋಧಕ ಅಶ್ವಜಿತ್‌ ಹೆಜ್ಮಾಡಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಪ್ರೇಮನಾಥ್‌ ಕೋಟ್ಯಾನ್‌, ಶಂಕರ ಸುವರ್ಣ, ಮಹಾ ಪ್ರಬಂಧಕ ವಿದ್ಯಾನಂದ ಕರ್ಕೇರ, ದಿನೇಶ್‌ ಸಾಲ್ಯಾನ್‌, ನವೀನ್‌ ಬಂಗೇರ, ನಿತ್ಯಾನಂದ ಕಿರೋಡಿಯನ್‌, ಉಪ ಮಹಾಪ್ರಬಂಧಕರಾದ ಮಹೇಶ್‌ ಕೋಟ್ಯಾನ್‌, ಪ್ರಭಾಕರ ಪೂಜಾರಿ, ಜನಾರ್ದನ ಪೂಜಾರಿ, ವಾಸುದೇವ ಸಾಲ್ಯಾನ್‌, ಮಾಜಿ ಮಹಾಪ್ರಬಂಧಕಿ ಶೋಭಾ ದಯಾನಂದ್‌, ಬಿಲ್ಲವರ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು.

ಕ್ರೀಡಾ ತಾಂತ್ರಿಕ ನಿರ್ದೇಶಕರಾಗಿ ನವೀನ್‌ ಕುಮಾರ್‌ ಕರ್ಕೇರ ಸಹಕರಿಸಿದರು. ವೆಲ್ಫೆàರ್‌ನ ಪದಾಧಿಕಾರಿಗಳಾದ ಮೋಕ್ಷಾ ಜಿ. ಕೋಟ್ಯಾನ್‌ ಸ್ವಾಗತಿಸಿ ಕಾರ್ಯಯೋಜನೆಯ ಬಗ್ಗೆ ವಿವರಿಸಿದರು. ಪದಾಧಿಕಾರಿಗಳಾದ  ದೀಪಕ್‌ ಪ್ರಭು, ರೇವತಿ ಪೂಜಾರಿ, ನಿಶಾ ಕೆಲ್ಲಪುತ್ತಿಗೆ, ಪುಷ್ಪರಾಜ್‌ ಬೇಲಾಡಿ, ಸೌರಭ್‌ ಅಗರ್‌ವಾಲ್‌, ವಿಪುಲ್‌ ಪೂಜಾರಿ, ತೇಜಸ್‌ ಪೂಜಾರಿ, ವಿನೀತಾ ಕೋಟ್ಯಾನ್‌, ರಿತೇಶ್‌ ಕೋಟ್ಯಾನ್‌ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 

ಚಿತ್ರ-ವರದಿ: ರಮೇಶ್‌ ಅಮೀನ್‌

ಟಾಪ್ ನ್ಯೂಸ್

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

cm-b-bommai

ಕ್ಲಸ್ಟರ್ ಅಪಾರ್ಟ್ಮೆಂಟ್ ಗಳಲ್ಲಿ ಹೊರಗಡೆಯವರಿಗೆ ಪ್ರವೇಶ ನಿರ್ಬಂಧ: ಸಿಎಂ ಬೊಮ್ಮಾಯಿ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

ಟೀಂ ಇಂಡಿಯಾದ ದ.ಆಫ್ರಿಕಾ ಸರಣಿ ಮೊಟಕು: ಕೋವಿಡ್ ಭೀತಿಯಿಂದ ಟಿ20 ಸರಣಿ ಮುಂದೂಡಿಕೆ

shivaraj-kumar

ಪುನೀತ್ ಡ್ರೀಮ್ ಪ್ರಾಜೆಕ್ಟ್ ಟೀಸರ್ ಬಿಡುಗಡೆಗೆ ಸಿಎಂಗೆ ಆಹ್ವಾನ ನೀಡಿದ ಶಿವಣ್ಣ

1-ff

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ರಾಜ್ಯಪಾಲ ಕೆ. ರೋಸಯ್ಯ ವಿಧಿವಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

ಇಂಗ್ಲಿಷ್‌ ವ್ಯಾಮೋಹ ಭಾಷೆಯ ಅಳಿವಿಗೆ ಪ್ರಮುಖ ಕಾರಣ: ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ

ಇಂಗ್ಲಿಷ್‌ ವ್ಯಾಮೋಹ ಭಾಷೆಯ ಅಳಿವಿಗೆ ಪ್ರಮುಖ ಕಾರಣ: ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ

ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ರತ್ನಾಕರ ಜಿ. ಪೂಜಾರಿ

ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಗಳಿಗೆ ಎಲ್ಲರ ಸಹಕಾರ ಅಗತ್ಯ: ರತ್ನಾಕರ ಜಿ. ಪೂಜಾರಿ

ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ

ಕಲಾಜಗತ್ತು ಕೂಡು ಕುಟುಂಬದ ರಂಗಭೂಮಿ: ಡಾ| ತೋನ್ಸೆ ವಿಜಯ ಕುಮಾರ್‌ ಶೆಟ್ಟಿ

ತುಳುನಾಡಿನ ಸಂಸ್ಕೃತಿ ಮೇಳೈಸುವ ಗುರಿ: ಕಾವೂರುಗುತ್ತು ಹೇಮಂತ್‌ ಶೆಟ್ಟಿ

ತುಳುನಾಡಿನ ಸಂಸ್ಕೃತಿ ಮೇಳೈಸುವ ಗುರಿ: ಕಾವೂರುಗುತ್ತು ಹೇಮಂತ್‌ ಶೆಟ್ಟಿ

MUST WATCH

udayavani youtube

Omicron Virus ಕುರಿತು CM Highprofile ಮೀಟಿಂಗ್ !!

udayavani youtube

ಎಚ್ಚರಿಕೆ! ದೆಹಲಿ ಆಸ್ಪತ್ರೆಯಲ್ಲಿ ಒಮಿಕ್ರಾನ್

udayavani youtube

Podcast ಲೋಕದಲ್ಲಿ ಏನಿದು ಹೊಸ ಸಂಚಲನ ?!

udayavani youtube

ಸರ್ಕಾರಿ ಕಚೇರಿಯಲ್ಲಿನ ಕಾಗದ ಹೊತ್ತೊಯ್ದ ಮೇಕೆ ಹಿಂದೆ ಓಡುತ್ತಿರುವ ನೌಕರರು

udayavani youtube

ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ

ಹೊಸ ಸೇರ್ಪಡೆ

10bjp

ಬಿಜೆಪಿಗೆ ಪಾಠ ಕಲಿಸಿ: ಡಾ| ಅಜಯಸಿಂಗ್‌

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

ಮುಂಬೈ ಟೆಸ್ಟ್: ಹತ್ತಕ್ಕೆ ಹತ್ತೂ ವಿಕೆಟ್ ಕಿತ್ತ ಅಜಾಜ್ ಪಟೇಲ್ ಹೊಸ ದಾಖಲೆ

10kannada

ಕನ್ನಡ-ತಮಿಳು ಪರಸ್ಪರ ಆಪ್ತ ಸಂಬಂಧ

arrest-25

ಕಾವೂರಿನಲ್ಲಿ ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ : ಮೂವರ ಬಂಧನ

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

ಒಮಿಕ್ರಾನ್ ಸೋಂಕಿನ ಭಯ: ಪತ್ನಿ, ಮಕ್ಕಳನ್ನು ಕೊಂದು ಪರಾರಿಯಾದ ಪ್ರೊಫೆಸರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.