ಭಾಯಂದರ್ ಶ್ರೀ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್‌ನಿಂದ ಗೌರವ
Team Udayavani, Jan 22, 2021, 3:50 PM IST
ಮುಂಬಯಿ: ಭಾಯಂದರ್ ಪಶ್ಚಿಮದ ಸ್ಟೇಷನ್ ರೋಡ್‌ನ ತ್ರಿಮೂರ್ತಿ ಹೊಟೇಲ್‌ನ ಮಾಲಕ ದಿ| ಸೋಮಪ್ಪ ಕೋಟ್ಯಾನ್ ಅವರಿಂದ ಸ್ಥಾಪಿಸಲ್ಪಟ್ಟ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್‌ನ 26ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಶಿಬಿರದ ಶ್ರೀನಿವಾಸ ಗುರುಸ್ವಾಮಿ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳೊಂದಿಗೆ ಜ. 13ರಂದು ಸರಳ ರೀತಿಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿಟೆಬಲ್ ಟ್ರ ಸ್ಟ್‌ನ ಪದಾಧಿಕಾರಿಗಳಿಗೆ ಮತ್ತು ಸರ್ವ ಸದಸ್ಯರಿಗೆ ಶ್ರೀನಿವಾಸ ಗುರುಸ್ವಾಮಿ ಅವರಿಂದ ಮಹಾಪ್ರಸಾದ ವಿತರಿಸಿ ಗೌರವಿಸಲಾಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಹಿಳಾ ಸದಸ್ಯೆಯರಿಂದ ಮತ್ತು ಸದಸ್ಯರಿಂದ ಭಜನೆ, ಸಂಕೀರ್ತನೆ ನೆರವೇರಿತು. ಬಳಿಕ ಪಡಿಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅನ್ನದಾನದ ಸೇವೆಯು ಭಾಯಂದರ್ ಕನ್ನಡ ಸೇವಾ ಸಂಘದ ಸಂಸ್ಥಾಪಕ, ಗೌರವ ಪ್ರಧಾನ ಕಾರ್ಯದರ್ಶಿ, ಸಮಾಜ ಸೇವಕ, ಶ್ರೀ ಭದ್ರಕಾಳಿ ಮಂದಿರದ ಅಧ್ಯಕ್ಷ ಹೊಸಬೆಟ್ಟು ವಿಶ್ವನಾಥ ಡಿ. ಮೆಂಡನ್ ಅವರ ಸೇವಾರ್ಥಕವಾಗಿ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಾಮಿ ಶರಣಂ ಅಯ್ಯಪ್ಪ ಭಕ್ತವೃಂದ ಚಾರಿ ಟೆಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ಶಿವಾನಂದ ಶೆಟ್ಟಿ, ಅಧ್ಯಕ್ಷ ಸಚಿನ್ ಕೋಟ್ಯಾನ್, ಕಾರ್ಯದರ್ಶಿ ಸುಧೀರ್ ಪುತ್ರನ್, ಜತೆ ಕಾರ್ಯದರ್ಶಿ ವಿವೇಕಾನಂದ ಹೆಗ್ಡೆ, ಕೋಶಾ ಧಿಕಾರಿ ಸುಂದರ್ ಶೆಟ್ಟಿ, ಜತೆ ಕೋಶಾಧಿಕಾರಿ ಕರುಣಾಕರ ಪೂಜಾರಿ ಹಾಗೂ ಸರ್ವ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಉಪಸ್ಥಿತರಿದ್ದು ಸಹಕರಿಸಿದರು.
ಇದನ್ನೂ ಓದಿ:ಮರಳಿ ಕಾಡು ಸೇರಿದ ಹೆಬ್ಟಾವು
ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು, ಪ್ರತಿನಿಧಿಗಳು, ಸ್ಥಳೀಯ ಉದ್ಯಮಿ ಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು, ದಾನಿಗಳನ್ನು ಶ್ರೀಕ್ಷೇತ್ರದ ಪ್ರಸಾದವನ್ನಿತ್ತು ಗೌರವಿಸಲಾಯಿತು. ಕೊರೊನಾ ಲಾಕ್‌ಡೌನ್ ಮಾರ್ಗಸೂಚಿ ಗಳಿಗೆ ಅನುಗುಣವಾಗಿ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಯೋಜಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪ್ರಸಾದ ಸ್ವೀಕರಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಟರ ಸಂಘ ಪೊವಾಯಿ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ
ಸಾಧಿಸುವ ಛಲ ಬಂಟರಲ್ಲಿ ರಕ್ತಗತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಲೆ, ಸಾಹಿತ್ಯ, ಸಂಸ್ಕೃತಿ ಆರಾಧಕರಾಗೋಣ: ಜ್ಯೋತಿ ಪ್ರಕಾಶ್ ಕುಂಠಿನಿ
ಮುಂಬಯಿ ಕನ್ನಡ ಪತ್ರಿಕಾರಂಗದಲ್ಲಿ ಅಪೂರ್ವ ಕಾರ್ಯಕ್ರಮ: ಜ್ಯೋತಿ ಪ್ರಕಾಶ್ ಕುಂಠಿನಿ
ದೇಶವನ್ನು ಕೃಷಿ ಪ್ರಧಾನ ರಾಷ್ಟ್ರವಾಗಿಸಿ ವಿಶ್ವಕ್ಕೆ ಮಾದರಿಯಾಗಿಸಬೇಕು: ಗೋಪಾಲ್ ಶೆಟ್ಟಿ