Udayavni Special

ಥಾಣೆ ಸ್ಥಳೀಯ ಸಮಿತಿಯಿಂದ ಸಮಾಜ ಬಾಂಧವರಿಗೆ ಆಹಾರದ ಕಿಟ್‌ ವಿತರಣೆ

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ

Team Udayavani, Sep 19, 2021, 2:06 PM IST

ಥಾಣೆ ಸ್ಥಳೀಯ ಸಮಿತಿಯಿಂದ ಸಮಾಜ ಬಾಂಧವರಿಗೆ ಆಹಾರದ ಕಿಟ್‌ ವಿತರಣೆ

ಥಾಣೆ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಥಾಣೆ ಸ್ಥಳೀಯ ಸಮಿತಿಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರಿಗೆ ಆಹಾರದ ಕಿಟ್‌ ವಿತರಣೆ ಕಾರ್ಯಕ್ರಮವು ಥಾಣೆ ಸ್ಥಳೀಯ ಸಮಿತಿಯ ಕಚೇರಿಯಲ್ಲಿ ನಡೆಯಿತು.

ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಎಸ್‌. ಎಸ್‌. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಕಾರ್ಯಾಲಯದ ಉಪಾಧ್ಯಕ್ಷ ದಯಾನಂದ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಥಾಣೆಯ ಗಣೇಶ್‌ ಆರ್‌. ಪೂಜಾರಿ ಪಾಲ್ಗೊಂಡಿದ್ದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಬಂಗೇರ ಹಾಗೂ ಥಾಣೆ ಹೊಟೇಲ್‌ ಉದ್ಯಮಿಗಳಾದ ವಿಶ್ವನಾಥ ಆರ್‌. ಪೂಜಾರಿ, ಸುರೇಶ್‌ ಎಸ್‌. ಪೂಜಾರಿ, ಭಾರತ್‌ ಬ್ಯಾಂಕ್‌ನ ನಿರ್ದೇಶಕ ಜ್ಯೋತಿ ಕೆ. ಸುವರ್ಣ, ಸ್ಥಳೀಯ ಸಮಿತಿಯ ಗೌರವ ಕೋಶಾಧಿಕಾರಿ ದೇವದಾಸ್‌ ಕರ್ಕೇರ ಉಪಸ್ಥಿತರಿದ್ದರು.

ಶ್ರೀ ಗುರುದೇವರಿಗೆ ಆರತಿ ಬೆಳಗಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾ ಯಿತು. ಕಾರ್ಯಾಧ್ಯಕ್ಷ ಎಸ್‌. ಎಸ್‌. ಪೂಜಾರಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ದಯಾನಂದ ಪೂಜಾರಿ ಅವರು ಬಿಲ್ಲವರ ಅಸೋಸಿಯೇಶನ್‌ನ ನೂತನ ಅಧ್ಯಕ್ಷ ಹರೀಶ್‌ ಅಮೀನ್‌ ಜಿ. ಅಮೀನ್‌ ಮುಂದಾಳತ್ವದಲ್ಲಿ ಜರಗುತ್ತಿರುವ ಸಮಾಜಪರ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಸಮಾಜದ ಬಡ ಬಂಧುಗಳು ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಅವರಿಗೆ ಸಹಾಯಹಸ್ತ ನೀಡುವ ಮಹತ್ತರವಾದ ಕಾರ್ಯವನ್ನು ಬಿಲ್ಲವರ ಅಸೋಸಿಯೇಶನ್‌ ಮಾಡುತ್ತಿದೆ. ಅದಕ್ಕಾಗಿ ಕೊಡುಗೈ ದಾನಿಗಳು, ಹಿತೈಷಿಗಳು, ಭಾರತ್‌ ಬ್ಯಾಂಕ್‌ನ ಸಿಬಂದಿ ಸಹಕರಿಸಿದ್ದಾರೆ. ಇಂದು ನೀಡುತ್ತಿರುವ ಆಹಾರ ಕಿಟ್‌ ಅನ್ನು ಗುರುದೇವರ ಪ್ರಸಾದವೆಂದು ತಿಳಿದು ಯಾವುದೇ ಹಿಂಜರಿಕೆಯಿಲ್ಲದೆ ಸ್ವೀಕರಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿಸಿಖ್ ನಾಯಕರೇ ಪಂಜಾಬ್ ಮುಖ್ಯಮಂತ್ರಿಯಾಬೇಕು: ಸಿಎಂ ರೇಸ್ ನಿಂದ ಹಿಂದೆ ಸರಿದ ಅಂಬಿಕಾ ಸೋನಿ

ಅತಿಥಿಯಾಗಿದ್ದ ಗಣೇಶ್‌ ಪೂಜಾರಿ ಮಾತನಾಡಿ, ಪ್ರತಿಯೊಬ್ಬರು ಈ ಕೊರೊನಾ ಮಹಾಮಾರಿಯ ಸಮಯದಲ್ಲಿ ಹೆಚ್ಚಿನ ಜಾಗೃತೆ ವಹಿಸಿ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ಅಸೋಸಿಯೇಶನ್‌ ನೀಡುತ್ತಿರುವ ಈ ಆಹಾರದ ಕಿಟ್‌ಗೆ ಸಮಾಜದ ಹಲವಾರು ಉದ್ಯಮಿಗಳು, ದಾನಿಗಳು ಸಹಕರಿಸಿದ್ದಾರೆ ಎಂದರು.

ಬಿಲ್ಲವರ ಅಸೋಸಿಯೇಶನ್‌ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪ್ರಭಾ ಬಂಗೇರ ಮಾತನಾಡಿ, ಮಹಿಳಾ ವಿಭಾಗದ ಸದಸ್ಯೆಯರು ಕೂಡಾ ಈ ಕಿಟ್‌ ವಿತರಣೆಗೆ ಸಹಕರಿಸಿದ್ದಾರೆ. ಇಂತಹ ಕಾರ್ಯಗಳಲ್ಲಿ ಮಹಿಳಾ ವಿಭಾಗವು ಎಂದೂ ಹಿಂಜರಿಯುವುದಿಲ್ಲ. ಮುಂದೆಯೂ ನಾವು ಇಂತಹ ಆಪತ್ಕಾಲದಲ್ಲಿ ಸಹಕಾರ ನೀಡುತ್ತೇವೆ ಎಂದರು.

ಜ್ಯೋತಿ ಕೆ. ಸುವರ್ಣ ಮಾತನಾಡಿ, ಬಿಲ್ಲವರ ಅಸೋಸಿಯೇಶನ್‌ ದಿ| ಜಯ ಸುವರ್ಣರ ಮಾರ್ಗದರ್ಶನದಂತೆ ಈಗಲೂ ಕಾರ್ಯ ನಿರ್ವಹಿಸುತ್ತಿದೆ. ಅವರ ದೂರದೃಷ್ಟಿಯ 22 ಸ್ಥಳೀಯ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಅದರ ಸದುಪಯೋಗವನ್ನು ನಮ್ಮ ಸಮಾಜದ ಬಂಧುಗಳು ಪಡೆಯುತ್ತಿದ್ದಾರೆ. ಬಿಲ್ಲವರ ಅಸೋಸಿಯೇಶನ್‌ ನೀಡುವ ಆರ್ಥಿಕ ಸಹಾಯ, ಶೈಕ್ಷಣಿಕ ನೆರವಿನ ಯೋಜನೆಗಳ ಸದುಪಯೋಗ
ವನ್ನು ಸ್ಥಳೀಯ ಸಮಿತಿಗಳ ಮುಖಾಂತರ ಸಮಾಜ ಬಾಂಧವರು ಪಡೆಯಬೇಕು ಎಂದರು.

ಅತಿಥಿ-ಗಣ್ಯರು ನೂರಾರು ಸಮಾಜ ಬಾಂಧವರಿಗೆ ಆಹಾರ ಕಿಟ್‌ಗಳನ್ನು ವಿತರಿಸಿ ಶುಭ ಹಾರೈಸಿದರು. ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುರೇಶ್‌ ಎಸ್‌. ಪೂಜಾರಿ, ದೇವದಾಸ್‌ ಕರ್ಕೇರ, ಪ್ರಶಾಂತ್‌ ಪೂಜಾರಿ, ಲಕ್ಷ್ಮಣ್‌ ಕೆ. ಅಮೀನ್‌, ತ್ರಿವೇಣಿ ಪೂಜಾರಿ, ಎಂ. ಜಿ. ಸಾಲ್ಯಾನ್‌, ಜಯಂತ್‌ ಕೋಟ್ಯಾನ್‌, ಪ್ರೇಮಾನಂದ ಕುಕ್ಯಾನ್‌, ಗಿರಿಧರ ಕರ್ಕೇರ, ಜಯರಾಮ ಸಾಲ್ಯಾನ್‌, ಕೃಷ್ಣ ಸುವರ್ಣ, ವಸುಧಾ ಪೂಜಾರಿ, ರಾಘವ ಕೋಟ್ಯಾನ್‌ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗೌರವ ಕಾರ್ಯಧ್ಯಕ್ಷ ಅನಂತ ಸಾಲ್ಯಾನ್‌ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಟಾಪ್ ನ್ಯೂಸ್

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗಿದೆ, ಅವರಿಗೆ ನ್ಯಾಯ ಒದಗಿಸಬೇಕು; ಶಾ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

ಕ್ಯಾಚ್ ಆಫ್ ದಿ ಸೀಸನ್, ಪವರ್ ಪ್ಲೇಯರ್, ಗೇಮ್ ಚೇಂಜರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಪಟ್ಟಿ

b-c-nagesh

1 ರಿಂದ 5ರ ವರೆಗೆ ಶಾಲೆ ಆರಂಭಕ್ಕೆ ಸರ್ವ ಸಿದ್ದತೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

20

ಶೆರ್ಲಿನ್ ದೂರು: ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

ಕೊರೊನಾ ದೂರವಾಗಿ ಜನಜೀವನ ಸುಗಮವಾಗಲಿ: ಪ್ರದೀಪ್‌ ಸಿ. ಶೆಟ್ಟಿ

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುಧಾಬಿಯಿಂದ 1 ಮಿಲಿಯನ್ ಅನುದಾನ!

Untitled-1

ನವರಾತ್ರಿ ಪ್ರಯುಕ್ತ ಡೊಂಬಿವಲಿಯಲ್ಲಿ  ಸೀರೆಗಳ ವಿಶೇಷ ಪ್ರದರ್ಶನ, ಮಾರಾಟ

ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದಿಂದ ದಸರಾ ಸಂಭ್ರಮಾಚರಣೆ

ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದಿಂದ ದಸರಾ ಸಂಭ್ರಮಾಚರಣೆ

ಚಾರ್ಕೋಪ್‌ ಕನ್ನಡಿಗರ ಬಳಗ: 22ನೇ ವಾರ್ಷಿಕ ಶಾರದಾ ಮಹಾಪೂಜೆ ಸಂಪನ್ನ

ಚಾರ್ಕೋಪ್‌ ಕನ್ನಡಿಗರ ಬಳಗ: 22ನೇ ವಾರ್ಷಿಕ ಶಾರದಾ ಮಹಾಪೂಜೆ ಸಂಪನ್ನ

MUST WATCH

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

ಹೊಸ ಸೇರ್ಪಡೆ

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

ಬನ್ನಿಮಹಾಕಾಳಿ ದೇವಿಗೆ ವಿಶೇಷ ಪೂಜೆ

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

ಗುಳೇದಗುಡ್ಡ: ಕೆರೆಯಲ್ಲಿ ಮುಳುಗಿ ಮಹಿಳೆಯರಿಬ್ಬರ ಸಾವು

Singhu border murder- Accused Nihang Saravjeet Singh sent to 7-day judicial custody

ಸಿಂಘು ಗಡಿ ಹತ್ಯೆ ಪ್ರಕರಣ:- ಆರೋಪಿ ನಿಹಾಂಗ್‌ ಸರ್ವಜೀತ್ ಗೆ 7 ದಿನ ಪೊಲೀಸ್‌ ಕಸ್ಟಡಿ

DEMAND FOR PURE WATER

ಶುದ್ಧ ಕುಡಿವ ನೀರಿನ ಘಟಕ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.