ಬಿಲ್ಲವರ ಅ.ವಿಶ್ವ ಮಹಿಳಾ ದಿನಾಚರಣೆ: ಸಾಧಕರಿಗೆ ಸಮ್ಮಾನ

Team Udayavani, Mar 13, 2018, 2:14 PM IST

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯು ಮಾ. 8ರಂದು ಅಪರಾಹ್ನ ಸಾಂತಾಕ್ರೂಜ್‌ ಪೂರ್ವ ಬಿಲ್ಲವ ಭವನದ ಶ್ರೀ ನಾರಾಯಣ ಗುರು ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ನೇತೃತ್ವದಲ್ಲಿ ಹಾಗೂ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಇವರ ಉಪಸ್ಥಿತಿಯಲ್ಲಿ ನಡೆದ  ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಮಹಿಳೆಯರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಸಾಧನೆಗೈದ ಶಕುಂತಳಾ ಕೆ. ಕೋಟ್ಯಾನ್‌ , ಪ್ರಭಾ ಕೆ. ಸುವರ್ಣ,  ಸರಿತಾ ಚಂದ್ರ ಸಾಲ್ಯಾನ್‌, ಅಧಿತಿ ಪಿ. ಸಾಲ್ಯಾನ್‌, ರೋಶ್ನಿ ಸಿ. ಅಮೀನ್‌, ಶಿಲ್ಪಿಕಾ ಸಾಲ್ಯಾನ್‌, ವಸಂತಿ ಎಸ್‌. ಸಾಲ್ಯಾಣRರ್‌, ಬಿಲ್ಲವ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀಸ್‌ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ ಮೊದಲಾದವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿ ಉದ್ಯಮಿ ಸಂಘಟಕಿ ಶಾರದಾ ಸೂರು ಕರ್ಕೇರ, ಗೌರವ ಅತಿಥಿಗಳಾಗಿ ಸಮಾಜ ಸೇವಕಿ, ಉದ್ಯಮಿ ರೇಷ್ಮಾ ರವಿ ಪೂಜಾರಿ, ಕುಸುಮಾ ಚಂದ್ರಶೇಖರ್‌ ಪಾಲೆತ್ತಾಡಿ, ಭಾರತ್‌ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌, ಸುಧಾ ಎಲ್‌. ಅಮೀನ್‌, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯರುಗಳಾದ ವಿಲಾಸಿನಿ ಕೆ. ಸಾಲ್ಯಾನ್‌ ಮತ್ತು ಪ್ರಭಾ ಕೆ. ಬಂಗೇರ, ಪೂಜಾ ಕೋಟ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷ ಪುರುಷೋತ್ತಮ ಎಸ್‌. ಕೋಟ್ಯಾನ್‌, ಗೌರವ ಪ್ರಧಾನ  ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಸಮಾಜ ಸೇವಕಿ ಯಶೋಧಾ  ಎನ್‌. ಟಿ. ಪೂಜಾರಿ, ಚಂದ್ರಕಲಾ ಆರ್‌. ಸುವರ್ಣ, ವತ್ಸಲಾ ಕೆ. ಪೂಜಾರಿ, ಲೀಲಾ ಡಿ. ಪೂಜಾರಿ, ಶೋಭಾ ಎಸ್‌. ಪೂಜಾರಿ,  ಭವಾನಿ ಸಿ. ಕೋಟ್ಯಾನ್‌, ವನಿತಾ ಎ. ಕುಕ್ಯಾನ್‌,  ರೇಖಾ ಎಸ್‌. ಪೂಜಾರಿ, ಮೀರಾ ಡಿ. ಕೋಟ್ಯಾನ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ನಿಲೇಶ್‌ ಪೂಜಾರಿ, ದಯಾನಂದ ಪೂಜಾರಿ, ಶ್ರೀನಿವಾಸ ಕರ್ಕೇರ ಸೇರಿದಂತೆ ಅಸೋಸಿಯೇಶನ್‌ನ ಸ್ಥಳೀಯ ಮತ್ತು ಸಮನ್ವಯ ಸಮಿತಿಗಳ ಕಾರ್ಯಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಬಿತಾ ಪೂಜಾರಿ, ರೇಖಾ ಸದಾನಂದ ಮತ್ತು ಗಿರಿಜಾ ಪೂಜಾರಿ ಅವರ ಪ್ರಾರ್ಥನೆಯೊಂದಿಗೆ ಸಮಾರಂಭ ಆರಂಭಗೊಂಡಿತು. ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿತಾ ಪೂಜಾರಿ, ಗಿರಿಜಾ ಚಂದ್ರಶೇಖರ್‌, ಪ್ರೇಮಾ ಕೋಟ್ಯಾನ್‌, ವನಿತಾ ಕುಕ್ಯಾನ್‌, ಪೂಜಾ ಎಸ್‌. ಕೋಟ್ಯಾನ್‌, ಗಿರಿಜಾ ಪೂಜಾರಿ ಅತಿಥಿಗಳನ್ನು ಮತ್ತು ಸಮ್ಮಾನಿತರನ್ನು ಪರಿಚಯಿಸಿ ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಜೊತೆ ಕಾರ್ಯದರ್ಶಿ ಡಾ| ಗೀತಾಂಜಲಿ ಎಲ್‌. ಸಾಲ್ಯಾನ್‌ ಸಭಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಗೌ| ಕಾರ್ಯದರ್ಶಿ ಸುಮಿತ್ರಾ ವಿ. ಬಂಗೇರ ವಂದಿಸಿದರು. 

ಚಿತ್ರ-ವರದಿ : ರೊನಿಡಾ ಮುಂಬಯಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...