ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಮಹಿಳಾ ವಿಭಾಗ: ಆಹಾರೋತ್ಸವ ಸ್ಪರ್ಧೆ


Team Udayavani, Sep 18, 2018, 1:17 PM IST

1609mum05.jpg

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ  ಮಹಿಳಾ ವಿಭಾಗದಿಂದ ಮಂಗಳೂರು ಆಹಾರೋ ತ್ಸವ ಅಡುಗೆ ಸ್ಪರ್ಧೆಯು  ಸೆ. 15 ರಂದು   ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ ಕಿರು ಸಭಾಗೃಹದಲ್ಲಿ ನಡೆಯಿತು. 
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ಸಾರಥ್ಯದಲ್ಲಿ ನಡೆದ ಕಾರ್ಯಕ್ರಮವನ್ನು ಅಸೋಸಿ ಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಇದರ ಕಾರ್ಯಾಧ್ಯಕ್ಷ ಎನ್‌. ಟಿ. ಪೂಜಾರಿ, ವಿಕ್ರಮ್‌ ಟ್ರಾವೆಲ್ಸ್‌ನ ನಿರ್ದೇಶಕಿ ಜಯಶ್ರೀ ಶೆಟ್ಟಿಗಾರ್‌, ಜಯಲಕ್ಷ್ಮೀ ಚಂದ್ರಶೇಖರ್‌ ಪೂಜಾರಿ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. 
ಅಸೋಸಿಯೇಶನ್‌ನ ಉಪಾ ಧ್ಯಕ್ಷರಾದ ಶಂಕರ ಡಿ. ಪೂಜಾರಿ, ಮಾಜಿ ಅಧ್ಯಕ್ಷ ಎಲ್‌. ವಿ. ಅಮೀನ್‌, ಮಾಜಿ ಉಪಾಧ್ಯಕ್ಷರಾದ ರಾಜಾ ವಿ. ಸಾಲ್ಯಾನ್‌ ಮತ್ತು ಪುರುಷೋತ್ತಮ್‌ ಎಸ್‌. ಕೋಟ್ಯಾನ್‌, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌, ವರದ್‌ ಉಳ್ಳಾಲ್‌, ಎನ್‌. ಎಂ. ಸನಿಲ್‌, ಸುಧಾ ಎಲ್ವಿà, ಯಶೋದಾ ಎನ್‌. ಪೂಜಾರಿ, ಬಿಲ್ಲವರ ಭವನದ ವ್ಯವಸ್ಥಾಪಕ ಭಾಸ್ಕರ್‌ ಟಿ. ಪೂಜಾರಿ ಮತ್ತಿತರರು ಹಾಜರಿದ್ದರು. ಶ್ರೀಮಂತಿ ಎಸ್‌. ಪೂಜಾರಿ, ಹೇಮಲತಾ ಕೇಶವ ಸಾಲ್ಯಾನ್‌, ಪ್ರಾಪ್ತಿ ಮನೀಶ್‌ ಸುವರ್ಣ, ಕೃಪಾ ಕೆ. ಭೋಜರಾಜ್‌, ಪ್ರಭಾ ಕೆ. ಬಂಗೇರ ಅವರ ಸಹಯೋಗದಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ಸ್ಥಳೀಯ ಸಮಿತಿಗಳ ಮಹಿಳಾ ವಿಭಾಗಗಳು ಭಾಗವಹಿಸಿದ್ದು, ಸ್ಪರ್ಧೆಯಲ್ಲಿ ಅಸೋಸಿಯೇಶನ್‌ನ ವಸಾಯಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗ ಪ್ರಥಮ ಬಹುಮಾನವನ್ನು  ತನ್ನದಾಗಿಸಿಕೊಂಡರೆ, ಅಂಧೇರಿ ಸ್ಥಳೀಯ ಸಮಿತಿ ದ್ವಿತೀಯ ಬಹುಮಾನವನ್ನು ಪಡೆಯಿತು. ಕಲ್ಯಾಣ್‌ ಸಮಿತಿಯು  ತೃತೀಯ ಸ್ಥಾನ ಗಳಿಸಿತು. 

ತೀರ್ಪುಗರರಾಗಿ ಸಹಕರಿಸಿದ ಭಾರತ್‌ ಬ್ಯಾಂಕ್‌ನ ಉಪ ಕಾರ್ಯಾ ಧ್ಯಕ್ಷೆ ನ್ಯಾಯವಾದಿ  ರೋಹಿಣಿ ಜೆ. ಸಾಲ್ಯಾನ್‌, ಶಾರದಾ ಸೂರು ಕರ್ಕೇರ, ಅಶೋಕ್‌ ಪೂಜಾರಿ ಅವರನ್ನು ಮಹಿಳಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್‌ ಗೌರವಿಸಿದರು.
ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲರನ್ನು ಹರಿವಾಣದಲ್ಲಿರಿಸಿದ ವೀಳ್ಯ ದೆಲೆ, ಅಡಿಕೆ, ಅರಸಿನ, ಕುಂಕುಮ, ಸಿಂಗಾರವನ್ನಿತ್ತು ಸುಗಂಧದ್ರವ್ಯವನ್ನು ಸಿಂಪಡಿಸಿ ಮಹಿಳಾ ವಿಭಾಗದವರು  ಸ್ವಾಗತಿಸಿದರು. ಬಳಿಕ ಪಾನಕ, ಓಲೆ ಬೆಲ್ಲವನ್ನಿತ್ತು ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಹಾಲಿ ಉಪ ಕಾರ್ಯಧ್ಯಕ್ಷೆ ಪ್ರಭಾ ಕೆ. ಬಂಗೇರ, ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್‌. ಬಂಗೇರ, ಜೊತೆ ಕಾರ್ಯದರ್ಶಿ ಕುಸುಮಾ ಅಮೀನ್‌ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯೆಯರು ಉಪಸ್ಥಿತರಿದ್ದರು. 
ಜತೆ ಕಾರ್ಯದರ್ಶಿ ಜಯಂತಿ ಎಸ್‌. ಕೋಟ್ಯಾನ್‌ ಅವರು ಸ್ವರಚಿತ ಹಾಡನ್ನು ಇಂಪಾಗಿ ಹಾಡಿದರು.

ಜಯಂತಿ ಉಳ್ಳಾಲ್‌ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತ ನಾಡಿ ಮಹಿಳಾ ವಿಭಾಗದ  ಸಾಧನೆಗಳನ್ನು ವಿವರಿಸಿದರು. 

ಮಹಿಳಾ ವಿಭಾಗದ ಪದಾಧಿಕಾರಿ ಗಳು ಅತಿಥಿಗಳು ಹಾಗೂ ತೀರ್ಪು ಗಾರರನ್ನು ಪುಷ್ಪಗುತ್ಛ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಉಪ ಕಾರ್ಯಧ್ಯಕ್ಷೆ ಗಿರಿಜಾ ಚಂದ್ರಶೇಖರ್‌ ಮತ್ತು ವಾಲಾಸಿನಿ ಕೆ. ಸಾಲ್ಯಾನ್‌ ಪ್ರಾರ್ಥನೆಗೈದರು. ಧರ್ಮೇಶ್‌ ಸಾಲ್ಯಾನ್‌ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕುಸುಮಾ ಸಿ. ಪೂಜಾರಿ ವಂದಿಸಿದರು. 

ತುಳುನಾಡಿನ ಪ್ರಸಿದ್ಧ ಆಹಾರ-ಖಾದ್ಯಗಳಾದ ಅಕ್ಕಿ ಲಡ್ಡು, ಗೋಳಿಬಜೆ, ಅರೆಪುದ ಅಡ್ಡೆ, ಕೊಟ್ಟಿಗೆ, ಅಪ್ಪ, ನೀರ್‌ದೋಸೆ, ಉಪ್ಪಿನ ಹಲಸಿನಕಾಯಿ, ಅಪ್ಪದಡ್ಡೆ, ಕಡ್ಲೆ ಮನೋಲಿ, ಸಾರ್‌ನೆಡ್ಡೆ, ಮನರ ಅಡ್ಡೆ, ಇಡ್ಲಿ ಚಟ್ನಿ-ಸಾಂಬಾರ್‌, ಗುರಿಅಪ್ಪ, ನೈಯಪ್ಪ, ತೆಕ್ಕೆರೆದ ಅಡ್ಡೆ, ಗೆಂಡೆದ ಅಡ್ಡೆ, ಮನರಡ್ಡೆ, ರೊಟ್ಟಿ ಪಾಯಸ, ರಾಗಿ ರೊಟ್ಟಿ, ಪತ್ರಡೆ, ಕುಡುತ್ತ ಚಟ್ನಿ, ಕುಕ್ಕುದ ಮುಡಿ ಉಪ್ಪಡ್‌, ನುಗ್ಗೆ ಸೊಪ್ಪು ಪಲ್ಯ, ಬಜಿ, ತೇಟ್ಲ, ತಿಮರೆದ ಚಟ್ನಿ, ಕಂಚಲದ ಚಟ್ನಿ, ಪದೆ³ದ ಸೊಪ್ಪು ಪಲ್ಯ,  ಪದೆಂಗಿ ಮುಂಗೆ ಗಸಿ, ಸಾಂಬಾರ್‌, ಕೊದ್ದೆಲ್‌, ಅವಡೆಗಸಿ, ಬರೇಡ, ಮಂಜಲ್‌ ಇರೆತಾ ಚಪ್ಪೆ ಗಟ್ಟಿ, ಚಿಲಿ¾, ಅರೆಪುದ ಪುಂಡಿ, ಮಸ್ಕಪುಂಡಿ, ಕೆನೆದಪುಂಡಿ, ಅಂಬಡೆ ಗಸಿ, ಮೆಂತೆ ಗಂಜಿ, ಮೆಂತೆ ಲಡ್ಡು, ಬಟಾಟೆ ತಾಪೆ, ಸೇಮಯ್‌ಪೇರ್‌, ಮಂಗಳೂರು ಬನ್ಸ್‌ ಇತ್ಯಾದಿ ಸಸ್ಯಾಹಾರಿ ಖಾದ್ಯಗಳನ್ನು ಸ್ಪರ್ಧೆಯಲ್ಲಿ ಪ್ರದರ್ಶಿಸಲಾಯಿತು.

ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

ಟಾಪ್ ನ್ಯೂಸ್

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1ewewwewqqewqeqe

India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್‌ ಹೇಳಿಕೆಗೆ ಆಕ್ರೋಶ

IMD

North Karnataka; ಹಲವು ಜಿಲ್ಲೆಗಳಲ್ಲಿ ಎರಡು ದಿನ ಉಷ್ಣ ಅಲೆ ಸಾಧ್ಯತೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.