ದೀಪಾವಳಿ ಕೆಡುಕಿನ ಮೇಲೆ ಶುಭದ ಜಯ ಸಾರುತ್ತದೆ

Team Udayavani, Oct 20, 2017, 5:23 PM IST

19-Mum01.jpg

ಮುಂಬಯಿ: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಎಲ್ಲ ಆಚರಣೆಗಳು ದೈವಿಕ ಹಿನ್ನೆಲೆಯಿಂದ ಕೂಡಿದೆ. ಹಬ್ಬಗಳು, ಸ್ನೇಹ, ಸೌಹಾದ‌ì, ಉತ್ತಮ ಚಿಂತನೆ, ಮನುಷ್ಯ, ಪ್ರಾಣಿ, ಪಕ್ಷಿ ಹಾಗೂ ಚಿರಾಚರ ವಸ್ತುಗಳ ಮಧುರ ಬಾಂಧವ್ಯವನ್ನು ಗಟ್ಟಿಯಾಗಿಸುತ್ತದೆ. ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ  ಹಚ್ಚುತ್ತ ಬಂದ ದೀಪಾವಳಿ ಕೆಡುಕಿನ ಮೇಲೆ ಶುಭದ ಜಯವನ್ನು ಸಾರುತ್ತದೆ. ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕೂಡಿರುವ ಈ ಹಬ್ಬವು ಸಮಗ್ರ ಕುಟುಂಬದ ಆನಂದ ಮತ್ತು ಚೈತನ್ಯವನ್ನು ಹೆಚ್ಚಿಸಲಿ. ಶಾಶ್ವತವಲ್ಲದ  ಬದುಕಿನಲ್ಲಿ ಗತ ಕಾಲದ ಕಹಿನೆನಪುಗಳನ್ನು ಮರೆತು ಸಿಹಿ ನೆನಪಿನೊಂದಿಗೆ ಕೂಡಿ ಬಾಳುವ ಸಂಸಾರ ನಮ್ಮದಾಗಲಿ ಎಂದು ದ್ವಿತೀಯ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಿಸಿದರು.

ಅ.18ರಂದು ಮೀರಾರೋಡ್‌ ಪೂರ್ವದ ಮೀರಾಗಾಂವ್‌ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಶರೀರ ನಮ್ಮದಾದರೂ ವಯಸ್ಸು ಹೆಚ್ಚಿದಂತೆ ಎಲ್ಲಾ ಅಂಗಾಂಗಳು ದುರ್ಬಲವಾಗುತ್ತದೆ. ನಾನು, ನನ್ನದು, ಎಲ್ಲವೂ ನನ್ನಿಂದಲೇ ಎಂಬ ಮಮಕಾರದ ಭಾವನೆ ಶೂನ್ಯ ವಾಗುತ್ತದೆ. ಇದ್ದಷ್ಟು ಕಾಲ ಸಿದ್ಧಿ- ಸಾಧನೆಗಳ ಮೂಲಕ ಜೀವನದ ಶ್ರೇಷ್ಠತೆಯನ್ನು ಹೆಚ್ಚಿಸಬೇಕು. ನಾವೆಲ್ಲ ನಿಮಿತ್ತ ಮಾತ್ರ. ಅಂತಿಮ ತೀರ್ಮಾನ ಭಗವಂತನದ್ದು ಎಂದು ನುಡಿದು,  ಮುಂದಿನ ಜನವರಿ 18 ರಂದು ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಜರಗುವ ಪರ್ಯಾ
ಯೋತ್ಸವದಲ್ಲಿ ಕುಟುಂಬ ಸಮೇತ ಉಪಸ್ಥಿತರಿದ್ದು, ಭಗವಂತನ ಕೃಪಾಕಟಾಕ್ಷಕ್ಕೆ ಪಾತ್ರ ರಾಗಬೇಕು ಎಂದರು.

ಮಂದಿರದ ಪ್ರಧಾನ ಅರ್ಚಕ ಹಾಗೂ ಟ್ರಸ್ಟಿ ಸಾಂತಿಂಜ ಜನಾರ್ದನ ಭಟ್‌ ದಂಪತಿ ಶ್ರೀಗಳ ಪಾದಪೂಜೆ ಸಲ್ಲಿಸಿದರು. ಟ್ರಸ್ಟಿ, ಆಡಳಿತ ಮಂಡಳಿ ಹಾಗೂ ಮಹಿಳಾ ಸದಸ್ಯೆಯರು, ಪೂರ್ಣಕುಂಭಾ ತುಳಸಿ ಹಾರಾರ್ಪಣೆಯೊಂದಿಗೆ ಸ್ವಾಗತಿಸಿದರು. ಸಾಂತಿಂಜ ಜನಾದ‌ìನ ಭಟ್‌ ಅವರು, ಶ್ರೀಗಳ ಕಾರ್ಯ ಸಾಧನೆಗಳ ಬಗ್ಗೆ ವಿವರಿಸಿ, ಉಡುಪಿ ಶ್ರೀ ಕೃಷ್ಣ ಕ್ಷೇತ್ರದ ಬಂಗಾರದ ಗೋಪುರ ದ್ವಾರಕೆಯ ವೈಭವವನ್ನು ನೆನಪಿಸಲಿದೆ. ಪ್ರತಿಚದರ ಅಡಿಗೆ ಸುಮಾರು 40 ಕಿಲೋ ಬಂಗಾರದಂತೆ ಸುಮಾರು 2500 ಚದರಡಿಗೆ ಸುಮಾರು 100 ಕಿಲೋ ಬಂಗಾರಬೇಕಾಗುತ್ತದೆ. ಈ ಬೃಹತ್‌ ಯೋಜನೆಯು ಸಾಕಾರಗೊಳ್ಳಲು ಭಕ್ತ ಕೋಟಿಯ ಸಹಕಾರ ದಿಂದ ಮಾತ್ರ ಸಾಧ್ಯ. ಸುವರ್ಣಮಯ ಗೋಪುರದ ಪ್ರತಿಯೊಂದು ಕಣ ಕಣದಲ್ಲೂ ಕಿಂಚಿತ್ತು ಕಾಣಿಕೆಯನ್ನು ಸ್ವೀಕರಿಸಲಾಗುವುದು. ಇದರಿಂದ ಜನ ಸಾಮಾನ್ಯರ ಆಧ್ಯಾತ್ಮಿಕ ಚಿಂತನೆ, ಸಹಕಾರ ಮನೋಭಾವ ಕಂಗೊಳಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಾದ ನೀಲು ಬಾಯಿ ಅವರು ನೀಡಿದ ನೀಡಿದ ಬಂಗಾರವನ್ನು ಶ್ರೀಗಳು ಸ್ವೀಕರಿಸಿ ಮಂತ್ರಾಕ್ಷತೆ, ಫಲಪುಷ್ಪವನ್ನಿತ್ತು ಆಶೀರ್ವದಿಸಿದರು. ದೇವಸ್ಥಾನದ ಅಧ್ಯಕ್ಷ ಬಾಬಾ ರಂಜನ್‌ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್‌ ಮಾತ್ರೆ, ಕೋಶಾಧಿಕಾರಿ ವೆಂಕಟೇಶ್‌ ಪಾಟೀಲ್‌, ಉಪಾಧ್ಯಕ್ಷ ಅನಿಲ್‌ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ಹೇಮಂತ್‌ ಸಂಕಪಾಲ್‌, ಸ್ಥಾಪಕಾಧ್ಯಕ್ಷ ಕೃಷ್ಣ ಜಿ. ಶೆಟ್ಟಿ, ಸದಸ್ಯರಾದ ಸುಂದರ್‌ ಶೆಟ್ಟಿಗಾರ್‌, ಪ್ರಸನ್ನ ಶೆಟ್ಟಿ, ಭಾಗವತರಾದ ಶಂಕರ್‌ ನಾಯಕ್‌ ಎಳ್ಳಾರೆ, ಮಾಧವ ಭಟ್‌, ನಾಗರಾಜ್‌ ಭಟ್‌, ವಾಸುದೇವ ಭಟ್‌, ಶ್ರೀಶ ಭಟ್‌, ದೇವರಾಜ್‌ ಭಟ್‌, ಸುರೇಶ್‌ ಭಟ್‌ ಕುಂಟಾಡಿ, ವಿಠಲ್‌ ಭಟ್‌, ಗೌರಿ ಶಂಕರ್‌ ಕಾರಿಂಜೆ, ರಮಕಾಂತ ನಕ್ಷತ್ರಿ ಮೊದಲಾದವರು ಉಪಸ್ಥಿತರಿದ್ದರು.

 ಚಿತ್ರ-ವರದಿ : ರಮೇಶ್‌ ಅಮೀನ್‌

ಟಾಪ್ ನ್ಯೂಸ್

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಪೋರ್ನ್ ಹಬ್ ನಲ್ಲಿ ಗಣಿತ ಪಾಠ ಮಾಡುವ ಟೀಚರ್! ವರ್ಷಕ್ಕೆ 2 ಕೋಟಿ ರೂ. ಸಂಪಾದನೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ: ಮಾಜಿ ಸಚಿವ ವಿನಯ ಕುಮಾರ್ ಸೊರಕೆ

22congress

ಅ. 30ಕ್ಕೆ ಗೋವಾಗೆ ರಾಹುಲ್ ಗಾಂಧಿ ಭೇಟಿ

koppala news

ಮಧ್ಯಾಹ್ನದ ಬಿಸಿ ಊಟಕ್ಕಾಗಿ ಒಂದು ಕಿಲೋಮೀಟರ್ ನಡೆದು ಹೋಗುವ ಮಕ್ಕಳು!

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಕೋವಿಡ್ 19 ಸೋಂಕು ಹೆಚ್ಚಳ; ಚೀನಾದ 11 ಪ್ರಾಂತ್ಯಗಳಲ್ಲಿ ಮತ್ತೆ ಲಾಕ್ ಡೌನ್ ಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

Untitled-1

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

MUST WATCH

udayavani youtube

ಮೊಸಳೆ ಬಾಯಿಯಿಂದ ಬಾಲಕನ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಿತು ನೋಡಿ

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

ಹೊಸ ಸೇರ್ಪಡೆ

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಪಾಕಿಸ್ಥಾನದ ಆಟಗಾರ ರಿಜ್ವಾನ್

26sugar

ಘಟಪ್ರಭಾ ಶುಗರ್ಸ್‌ನಿಂದ ಕಬ್ಬಿಗೆ 2700 ರೂ. ದರ ಘೋಷಣೆ

goa news

ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಹಿನ್ನೆಲೆ: ಸ್ವಯಂಪೂರ್ಣ ಯುವಾ ಕಾರ್ಯಕ್ರಮ

25protest

ಎಂಇಎಸ್‌ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ನಿಂದನೆ

ಚಿಗ್ಗಾವಿ ಗ್ರಾಮದಲ್ಲಿ ಹಣ-ಆಸ್ತಿಗಾಗಿ ತಂದೆಯಿಂದಲೇ ಮಗನಿಗೆ ಹಿಂಸೆ

ಚಿಗ್ಗಾವಿ ಗ್ರಾಮದಲ್ಲಿ ಹಣ-ಆಸ್ತಿಗಾಗಿ ತಂದೆಯಿಂದಲೇ ಮಗನಿಗೆ ಹಿಂಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.