ಸಂತ ನಿರಂಕಾರಿ ಮಂಡಳ:ಮುಂಬಯಿ ಸಮಿತಿಯಿಂದ ರಕ್ತದಾನ ಶಿಬಿರ

Team Udayavani, Jun 28, 2019, 5:15 PM IST

ಮುಂಬಯಿ: ಸಂತ ನಿರಂಕಾರಿ ಮಂಡಳ ಮುಂಬಯಿ ವತಿಯಿಂದ ರಕ್ತದಾನ ಶಿಬಿರವು ಜೂ. 23ರಂದು ವರ್ಲಿಯಲ್ಲಿ ನಡೆಯಿತು. ಸಂತ ನಿರಂಕಾರಿ ಚಾರಿಟೇಬಲ್‌ ಫೌಂಡೇಷನ್‌ ವತಿಯಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ಶಿಬಿರದಲ್ಲಿ 178 ಶಿಬಿರಾರ್ಥಿಗಳು ರಕ್ತದಾನಗೈದರು. ಸಂತ ನಿರಂಕಾರಿ ಬ್ಲಿಡ್‌ ಬ್ಯಾಂಕ್‌ ವಿಲೇಪಾರ್ಲೆಯ ಸಿಬಂದಿಗಳು ಸಹಕರಿಸಿದರು. ಬ್ಲಿಡ್‌ ಬ್ಯಾಂಕ್‌ನ ಮುಖ್ಯಸ್ಥ ಮಾರುತಿ ಕಸಾರೆ ಅವರ ನೇತೃತ್ವದಲ್ಲಿ ರಕ್ತದಾನ ನಡೆಯಿತು. ಮುಂಬಯಿ ಮಹಾನಗರ ಪಾಲಿಕೆಯು ಹೆಚ್ಚುವರಿ ಮೇಯರ್‌ ಹೇಮಾಂಗಿ ವರ್ಲಿಕರ್‌ ಅವರು ಶಿಬಿರವನ್ನು ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.

ವಲಯದ ಮುಖ್ಯಸ್ಥ ಭುಪೇಂದ್ರ ಚೌಗ್‌, ಕ್ಷೇತ್ರಿಯ ಸೇವಾ ದಳದ ಸಂಚಾಲಕ ಶಂಕರ್‌ ಸೋನಾವಣೆ, ಡಿ. ಕೆ. ಮೋಹಿತೆ, ಸೆಕ್ಟರ್‌ ಸಂಯೋಜಕ ಗೋಪಿನಾಥ್‌ ಬುಮುಗಡೆ, ನಾಮೆªàವ್‌ ಶಿಂಧೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಾರ್ಯಕರ್ತರು ಶಿಬಿರದ ಯಶಸ್ಸಿಗೆ ಸಹಕರಿಸಿದರು.

ಶಿಬಿರದಲ್ಲಿ ಸ್ಥಾನೀಯ ರಾಜಕೀಯ ಧುರೀಣರು, ಸ್ಥಳೀಯ ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಶುಭಹಾರೈಸಿದರು. ಸಂತ ನಿರಂಕಾರಿ ಮಂಡಳದ ನಿತಿನ್‌ ಸರ್ದೇಸಾಯಿ, ಆಶೀಷ್‌ ಚೆಂಬುರ್ಕರ್‌, ಯಶವಂತ್‌ ಕಿಲೇದಾರ್‌, ನಿಶಿಕಾಂತ್‌ ಶಿಂಧೆ ಮೊದಲಾದವರು ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ