50 ಸಾವಿರ ರೆಮೆಡೆಸಿವಿರ್‌ ಖರೀದಿಗೆ ಬಿಎಂಸಿ ಆದೇಶ

Team Udayavani, Jul 12, 2020, 5:21 PM IST

50 ಸಾವಿರ ರೆಮೆಡೆಸಿವಿರ್‌ ಖರೀದಿಗೆ ಬಿಎಂಸಿ ಆದೇಶ

ಮುಂಬಯಿ, ಜು. 11: ಕೋವಿಡ್ ಸೋಂಕಿತರ  ಚಿಕಿತ್ಸೆಗೆ ಅಗತ್ಯವಿರುವ ಆ್ಯಂಟಿ-ವೈರಲ್‌ ರಿಮೆಡೆಸಿವಿರ್‌ ಮತ್ತು ಇಮ್ಯುನೊಸಪ್ರಸಿವ್‌ ಔಷಧಿ ಟೊಸಿಲಿಜುಮಾಬ್‌ ಮುಂದಿನ ವಾರದಿಂದ ಲಭ್ಯವಾಗುವ ಸಾಧ್ಯತೆಯಿದೆ ಎಂದು ಮುಂಬಯಿ ಮಹಾನಗರ ಪಾಲಿಕೆ ಭರವಸೆ ನೀಡಿದೆ.

ಔಷಧಿಯ ಕೊರತೆಯಿಂದ ರೋಗಿಗಳ ಪರದಾಟ :  ಕೋವಿಡ್‌ -19ರ ನಿರ್ಣಾಯಕ ಪ್ರಕರಣಗಳಿಗೆ ಮಧ್ಯಮ ಚಿಕಿತ್ಸೆ ನೀಡಲು ರೆಮ್‌ಡೆಸಿವಿರ್‌ ಮತ್ತು ಟೊಸಿಲಿಜುಮಾಬ್‌ ಔಷಧಗಳನ್ನು ಬಳಸಲಾಗುತ್ತಿದ್ದು, ಇದು ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಉತ್ಪಾದನಾ ಕಂಪೆನಿಯೊಂದಕ್ಕೆ ರೆಮ್‌ಡೆಸಿವಿರ್‌ನ ಕ್ಲಿನಿಕಲ್‌ ಪ್ರಯೋಗಗಳನ್ನು ನಡೆಸುತ್ತಿರುವ ನಗರದ ವೈದ್ಯರೊಬ್ಬರು, ತೊಂದರೆಗೀಡಾದ ರೋಗಿಗಳಿಂದ ಪ್ರತಿದಿನ ಸುಮಾರು 1,200 ವಿನಂತಿ ಸ್ವೀಕರಿಸುತ್ತಿರುವುದಾಗಿ ಹೇಳಿದ್ದಾರೆ.

ಸಿಪ್ಲಾ ಕಂಪೆನಿಯಿಂದ ರಿಮೆಡೆಸಿವಿರ್‌ ಉತ್ಪಾದನೆ ಪ್ರಾರಂಭ :  ನಗರದಲ್ಲಿ ಔಷಧಗಳ ಪರವಾನಿಗಿ ಪಡೆದ ಇಬ್ಬರು ವಿತರಕರು ಇದ್ದಾರೆ. ಜುಲೈ 13 ಮತ್ತು 20ರ ನಡುವೆ ದೇಶಾದ್ಯಂತ 60,000 ಯುನಿಟ್‌ ಕೋವಿಫೋರ್‌ ಇಂಜೆಕ್ಷನ್‌ ಅನ್ನು ವಿತರಿಸುವುದಾಗಿ ಹೆಟೆರೊ ಹೆಲ್ತ್‌ಕೇರ್‌ ಶುಕ್ರವಾರ ಪ್ರಕಟಿಸಿದೆ. ಈ ಪೈಕಿ ಮಹರಾಷ್ಟ್ರದ 12,500 ಘಟಕಗಳಿಗೆ ವಿತರಿಸಲಾಗುವುದು. ಇದು ಔಷಧೀಯ ಕಂಪೆನಿಯ ಎರಡನೇ ಬ್ಯಾಚ್‌ ಆಗಿದೆ. ಔಷಧಿ ತಯಾರಿಸಲು ಅನುಮತಿ ನೀಡಿದ ಇತರ ಕಂಪೆನಿಯಾದ ಸಿಪ್ಲಾ ಸೋಮವಾರ ರಿಮೆಡೆಸಿವಿರ್‌ ಉತ್ಪಾದನೆಯನ್ನು ಪ್ರಾರಂಭಿಸಿದೆ. ಮೊದಲ ತಿಂಗಳಲ್ಲಿ ಸುಮಾರು 80,000 ಬಾಟಲುಗಳು ಲಭ್ಯವಾಗಲಿವೆ ಎಂದು ಸಿಪ್ಲಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಖೀಲ್‌ ಚೋಪ್ರಾ ತಿಳಿಸಿದ್ದಾರೆ. ಟೋಸಿಲಿಜುಮಾಬ್‌ ಸರಬರಾಜನ್ನು ಖಚಿತಪಡಿಸಿಕೊಳ್ಳಲು ಸಿಪ್ಲಾ ಕೂಡ ವೇಗವಾಗಿ ಕಾರ್ಯಾಚರಿಸುತ್ತಿದೆ ಎಂದು ಚೋಪ್ರಾ ಹೇಳಿದರು.

ಬಿಎಂಸಿಯಿಂದ 50 ಸಾವಿರ ರೆಮೆಡಿಸಿವಿರ್‌ ಆದೇಶ :  ಬಿಎಂಸಿ 50,000 ಬಾಟಲ್‌ ರೆಮೆಡೆಸಿವಿರ್‌ ಗೆ ಆದೇಶ ನೀಡಿದೆ ಮತ್ತು ಹೆಚ್ಚಿನ ಬೇಡಿಕೆಯ ಸಂದರ್ಭದಲ್ಲಿ ಅದನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಟೋಸಿಲಿಜುಮಾಬ್‌ ಸಂಗ್ರಹಿಸಲು ಇದು ಔಷಧೀಯ ಕಂಪೆನಿಯೊಂದಿಗೂ ಒಪ್ಪಂದ ಮಾಡಿಕೊಂಡಿದೆ ಎಂದು ಹೆಚ್ಚುವರಿ ಪುರಸಭೆ ಆಯುಕ್ತ ಸುರೇಶ್‌ ಕಾಕಾನಿ ಹೇಳಿದರು. ಈ ಔಷಧಿಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಆದರೂ ಭಾರತೀಯ ಔಷಧೀಯ ಕಂಪೆನಿಗಳು ಆಂತರಿಕವಾಗಿ ಉತ್ಪಾದಿಸಲು ಮತ್ತು ಪ್ರಾರಂಭಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. ಹಲವಾರು ಕಂಪೆನಿಗಳು ಬೇಡಿಕೆಗೆ ಸರಿಹೊಂದುವಂತೆ ಭಾರತದಲ್ಲಿ ಈ ಔಷಧಿಗಳನ್ನು ಉತ್ಪಾದಿಸಲು ಪ್ರಾರಂಭಿಸಬೇಕಾಗಿದೆ ಎಂದು ಮುಂಬಯಿಯ ಗ್ಲೋಬಲ್‌ ಹಾಸ್ಪಿಟಲ್ಸ್‌ನ ನಿರ್ಣಾಯಕ ಆರೈಕೆ ಘಟಕದ ಮುಖ್ಯಸ್ಥ ಡಾ| ಪ್ರಶಾಂತ್‌ ಬೋರಾಡ್‌ ಅವರು ಹೇಳಿದ್ದಾರೆ. ಮೇ 20ರಂದು, ಬಿಎಂಸಿ ಟೊಸಿಲಿಜುಮಾಬ್‌ನ 3,500 ಬಾಟಲುಗಳಿಗೆ ಆದೇಶವನ್ನು ನೀಡಿದ್ದು, ಹೆಚ್ಚಿನವುಗಳನ್ನು ತಲುಪಿಸಲಾಗಿದೆ. ರೆಮೆಡೆಸಿವಿರ್‌ 15,000 ಬಾಟಲುಗಳನ್ನು ಸಹ ಇದು ಆದೇಶಿಸಿದ್ದು, ಅದರಲ್ಲಿ 5,000 ವಿತರಿಸಲಾಗಿದೆ.

ಟಾಪ್ ನ್ಯೂಸ್

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

siddaramaiah

ಉಪಚುನಾವಣೆಯಲ್ಲಿ ಮೈಮರೆತ ಸರ್ಕಾರ ರೈತರನ್ನು ಮರೆತಿದೆ: ಸಿದ್ದರಾಮಯ್ಯ

redmi earbuds 3 pro

ರೆಡ್‍ ಮಿ ಇಯರ್ ಬಡ್ಸ್ 3 ಪ್ರೊ: ಕಡಿಮೆ ಬಜೆಟ್‍ನ ಟ್ರೂ ವೈರ್ ಲೆಸ್‍ ಇಯರ್ ಬಡ್‍

chikkaballapura news

ವೃದ್ದ ಮಹಿಳೆಯ ಅನುಮಾನಸ್ಪದ ಸಾವು : ಅತ್ಯಾಚಾರ ಆರೋಪ

h vishwanath and siddaramaiah

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

vidhana soudha

‘ಅನುಗ್ರಹ ಯೋಜನೆ’ ಮುಂದುವರಿಸಲು ಸರ್ಕಾರದ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಬಂಟರ ಸಂಘದ ಮಾನವೀಯ ಸೇವೆಯಲ್ಲಿ ಕೈಜೋಡಿಸಿ: ದಿವಾಕರ ಶೆಟ್ಟಿ ಇಂದ್ರಾಳಿ

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಸುವರ್ಣರು ಬಂಧುತ್ವದ ಸೇತುವೆ ಕಟ್ಟಲು ಅವಿರತ ದುಡಿದವರು: ಹರೀಶ್‌ ಜಿ. ಅಮೀನ್‌

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

Untitled-1

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

MUST WATCH

udayavani youtube

ದಾಂಡೇಲಿ :ಕಳೆದ ಎರಡು ದಿನಗಳಿಂದ ಬಾಲಕನನ್ನು ಬಾಯಲ್ಲಿಟ್ಟುಕೊಂಡೇ ಓಡಾಡುತ್ತಿತ್ತು ಮೊಸಳೆ

udayavani youtube

ಎಡೆಬಿಡದೆ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

udayavani youtube

ಮಂಗಳೂರು: ಬಲೆಗೆ ಬಿತ್ತು ಭಾರೀ ಗಾತ್ರದ ಶಾರ್ಕ್ ಮೀನು

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಹೊಸ ಸೇರ್ಪಡೆ

18arts

‘ಕರ್ನಾಟಕ’ಕ್ಕೆ ಧಾರಾನಗರಿಯೇ ಬುನಾದಿ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

ಬಲಿಪಾಡ್ಯಮಿಯಂದು ದೇವಾಲಯಗಳಲ್ಲಿ ಗೋಪೂಜೆ: ಸಚಿವೆ ಶಶಿಕಲಾ ಜೊಲ್ಲೆ

12 ಸಾವಿರ ಜೆಡಿಎಸ್‌ ಸದಸ್ಯತ್ವ ನೋಂದಣಿ ಮಾಡಿಸಿ

12 ಸಾವಿರ ಜೆಡಿಎಸ್‌ ಸದಸ್ಯತ್ವ ನೋಂದಣಿ ಮಾಡಿಸಿ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

ಬಿಜೆಪಿ, ಆರ್ ಎಸ್ ಎಸ್ ಸುಳ್ಳನ್ನು ಬಹಿರಂಗಪಡಿಸಲು ಕಾಂಗ್ರೆಸ್ ಒಗ್ಗಟ್ಟು ಮುಖ್ಯ: ಸೋನಿಯಾ

17RSS

13 ವರ್ಷಗಳ ಬಳಿಕ ಆರೆಸ್ಸೆಸ್‌ ಬೈಠಕ್‌ ಆತಿಥ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.