ಬೋಂಬೆ ಬಂಟ್ಸ್‌ ಅ.ಶಿಕ್ಷಣ ಸಮಿತಿ: ಧನ ಸಹಾಯ ವಿತರಣೆ

Team Udayavani, Jul 24, 2018, 4:40 PM IST

ನವಿಮುಂಬಯಿ: ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಇದರ ಶಿಕ್ಷಣ ಮತ್ತು ಉಪ ಸಮಿತಿಯ ವತಿಯಿಂದ ಧನ ಸಹಾಯ ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಜು. 22 ರಂದು ಬೆಳಗ್ಗೆ 10.30 ರಿಂದ ಜೂಯಿನಗರ ಪಶ್ಚಿಮದ ಗಾಂವೆªàವಿ ಚೌಕ್‌ ಸಮೀಪದ, ಪ್ಲಾಟ್‌ ನಂಬರ್‌ 42 ರ ಬಂಟ್ಸ್‌ ಮಾಗದ ಬಂಟ್ಸ್‌ ಸೆಂಟರ್‌ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಜರಗಿತು.

ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಸುಭಾಶ್‌ ಬಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷೆ ಸರಳಾ ಬಿ. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭವನ್ನು ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನವಿಮುಂಬಯಿ ಮೇಯರ್‌ ಜಯವಂತ್‌ ಡಿ. ಸುತಾರ್‌ ಆಗಮಿಸಿ ಶುಭಹಾರೈಸಿದರು. ಗೌರವ ಅತಿಥಿಗಳಾಗಿ ವಿ. ಕೆ. ಗ್ರೂಪ್‌ ಆಫ್‌ ಇಂಡಸ್ಟ್ರೀ ಇದರ ಸಿಎಂಡಿ ಕೆ. ಎಂ. ಶೆಟ್ಟಿ, ಜಾಸ್ಮಿàನ್‌ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಸಿಎಂಡಿ ಡಾ| ಸುರೇಂದ್ರ ವಿ. ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಟ್ರಸ್ಟಿ ಬಿ. ರಘುರಾಮ್‌ ಶೆಟ್ಟಿ, ಸೂರತ್‌ ಉದ್ಯಮಿ, ಸಂಘಟಕ ರಾಧಾಕೃಷ್ಣ ಟಿ. ಶೆಟ್ಟಿ, ಹೊಟೇಲ್‌ ಕಾರ್ಪೋರೇಟ್‌ ಆ್ಯಂಡ್‌ ಭಾರತ್‌ ಕೋಚ್‌ ಬಿಲ್ಡರ್ ಪ್ರೈವೇಟ್‌ ಲಿಮಿಟೆಡ್‌ ಇದರ ಸಿಎಂಡಿ ಸದಾಶಿವ ಎಸ್‌. ಶೆಟ್ಟಿ,  ಎ. ಡೈರೆಕ್ಟರ್‌ ಹೇರಂಬ ಇಂಡಸ್ಟ್ರೀಸ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಆರ್‌. ಕೆ. ಶೆಟ್ಟಿ, ಉದ್ಯಮಿ, ಸಮಾಜ ಸೇವಕ ಜಗನ್ನಾಥ ಎನ್‌. ರೈ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಾಜಿ ಅಧ್ಯಕ್ಷ ಜಯ ಎನ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿಸ್ವತ್‌ ಕೆಮಿಕಲ್ಸ್‌ನ ಸಿಎಂಡಿ ಬಿ. ವಿವೇಕ್‌ ಶೆಟ್ಟಿ ಅವರನ್ನು ಗಣ್ಯರುಗಳ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಉಪಾಧ್ಯಕ್ಷ ಮುರಳಿ ಕೆ. ಶೆಟ್ಟಿ, ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಚರಣ್‌ ಆರ್‌. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷರುಗಳಾದ  ನ್ಯಾಯವಾದಿ ಕೆ. ಪಿ. ಪ್ರಕಾಶ್‌ ಎಲ್‌. ಶೆಟ್ಟಿ, ಶ್ಯಾಮ್‌ ಎನ್‌. ಶೆಟ್ಟಿ, ಶಿಕ್ಷಣ ಸಮಿತಿಯ ಸದಸ್ಯರು, ಮಾಜಿ ಅಧ್ಯಕ್ಷರುಗಳಾದ ಎನ್‌. ಸಿ. ಶೆಟ್ಟಿ, ಜಯರಾಮ ಎಸ್‌. ಮಲ್ಲಿ, ಜಯಂತ್‌ ಕೆ. ಶೆಟ್ಟಿ, ನ್ಯಾಯವಾದಿ ರತ್ನಾಕರ ವಿ. ಶೆಟ್ಟಿ, ನ್ಯಾಯವಾದಿ ಯು. ಶೇಖರ ಶೆಟ್ಟಿ, ಉಪಕಾರ್‌ ಪ್ರಭಾಕರ ಎಸ್‌. ಶೆಟ್ಟಿ, ಸುರೇಶ್‌ ಶೆಟ್ಟಿ ಯೆಯ್ನಾಡಿ, ನ್ಯಾಯವಾದಿ ಡಿ. ಕೆ. ಶೆಟ್ಟಿ, ಶಂಕರ ಎಂ. ಶೆಟ್ಟಿ, ಸದಾಶಿವ ಎಸ್‌. ಶೆಟ್ಟಿ, ಚಂದ್ರಶೇಖರ ಎಸ್‌. ಶೆಟ್ಟಿ, ಸದಾಶಿವ ಎಂ. ಶೆಟ್ಟಿ, ಪಿ. ಸರ್ವೋತ್ತಮ ಶೆಟ್ಟಿ, ಐಕಳ ಕಿಶೋರ್‌ ಕೆ. ಶೆಟ್ಟಿ, ಹೀರಾ ಆರ್‌. ಶೆಟ್ಟಿ, ವಿನೋದಾ ಜೆ. ಶೆಟ್ಟಿ, ಲತಾ ಜಿ. ಶೆಟ್ಟಿ, ಪ್ರಭಾ ಜೆ. ಶೆಟ್ಟಿ, ರಾಜೇಶ್ವರಿ ಶೆಟ್ಟಿ, ಶಾಂತಾ ಎನ್‌. ಶೆಟ್ಟಿ, ಹರಿಣಿ ಎಚ್‌. ಶೆಟ್ಟಿ, ಸುನೀತಾ ಎನ್‌. ಶೆಟ್ಟಿ, ಲಲಿತಾ ಬಿ. ಶೆಟ್ಟಿ, ಲತಾ ಆರ್‌. ಶೆಟ್ಟಿ, ಕೃಷ್ಣ ಕುಮಾರಿ ಕೆ. ಶೆಟ್ಟಿ  ಮತ್ತಿತರರು ಯೋಜನೆಯ ಯಶಸ್ಸಿಗೆ ಸಹಕರಿಸಿದರು.

ಇದೇ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ಧನ, ಶೈಕ್ಷಣಿಕ ದತ್ತು ಸ್ವೀಕಾರ ಮತ್ತು ವಿಕಲ ಚೇತನರಿಗೆ ಧನ ಸಹಾಯ ವಿತರಿಸಲಾಯಿತು. ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಅಪರಾಹ್ನ 2 ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ಸದಸ್ಯ-ಸದಸ್ಯೆಯರು ಮತ್ತು ನುರಿತ ಕಲಾವಿದರ ಕೂಡುವಿಕೆಯಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರ ನಿರ್ದೇಶನದಲ್ಲಿ ನಳದಮಯಂತಿ ಯಕ್ಷಗಾನ ಪ್ರದರ್ಶನಗೊಂಡಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು.

ಚಿತ್ರ-ವರದಿ: ಸುಭಾಷ್‌ ಶಿರಿಯಾ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ