ಅತ್ತೂರು ಬಾಬು ಶೆಟ್ಟಿ ಅವರಿಗೆ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ನುಡಿನಮನ

Team Udayavani, Jul 20, 2018, 11:16 AM IST

ಮುಂಬಯಿ: ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇ ಬೇಕು. ವ್ಯಕ್ತಿಅಳಿದರೂ ಮುಂದೆ ಉಳಿಯುವುದು ಅವರು ಮಾಡಿದ ಕರ್ಮಫಲ ಮಾತ್ರ. ಅಂತಹ ಮಹಾನ್‌ಕಾರ್ಯವನ್ನು ಬಾಬು ಶೆಟ್ಟಿ ಅವರು ತಮ್ಮ ಜೀವಿತ ಕಾಲದಲ್ಲಿ ಮಾಡಿದ್ದಾರೆ. ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಸ್ಥಾಪನೆಯಲ್ಲಿ ಅವರಯೋಗದಾನ ಮಹತ್ತರದ್ದಾಗಿದೆ. 

ಮುಂಬಯಿ ಯಲ್ಲದೆ ಊರಿನಲ್ಲೂ ಅವರ ಸಮಾಜ ಸೇವೆ ಅನನ್ಯವಾಗಿದೆ. ಕಷ್ಟ ಎಂದು ಬಂದವರನ್ನು ಅವರು ಬರೀ ಕೈಯಲ್ಲಿ ಕಳಿಸಿದವರಲ್ಲ. ದೇಣಿಗೆ ನೀಡುವಲ್ಲೂ ಅವರು ಒಂದು ಹೆಜ್ಜೆ ಮುಂದೆ. ಅವರು ದೈಹಿಕವಾಗಿ ನಮ್ಮಿಂದ ದೂರಹೋದರೂ ಕೂಡ ಅವರು ಮಾಡಿದ ಸಾಧನೆ, ಆದರ್ಶಗಳು ನಮಗೆ ದಾರಿದೀಪವಾಗಿದೆ. ಅವರು ಜೀವಿತ ಕಾಲ ದಲ್ಲಿ ಮಾಡಿದ ಸೇವೆ ಅಜರಾಮರವಾಗಿರಲಿ ಎಂದು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ  ನ್ಯಾಯವಾದಿ ಸುಭಾಷ್‌ ಶೆಟ್ಟಿ ಅವರು ನುಡಿದರು.

ಜು. 14ರಂದು ಸಯಾನ್‌ನ ನಿತ್ಯಾನಂದ ಸಭಾಗೃಹದಲ್ಲಿ ಬೋಂಬೆ ಬಂಟ್ಸ್‌ ಅಸೋಸಿ ಯೇಶನ್‌ ವತಿಯಿಂದ ನಡೆದ ಇತ್ತೀಚೆಗೆ ನಿಧನ ರಾದ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ, ಸ್ಥಾಪಕ, ಹಿರಿಯ ಮುತ್ಸದ್ದಿ, ಸಮಾಜ ಸೇವಕ, ದಾನಿ ಬಾಬು ಶೆಟ್ಟಿ ಅತ್ತೂರು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು.
ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಎನ್‌. ಸಿ. ಶೆಟ್ಟಿ ಇವರು ಮಾತನಾಡಿ, ಬಾಬು ಶೆಟ್ಟಿ ಅವರ ಸಮಾಜ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಅವರಲ್ಲಿ ಬಂಟತನವಿತ್ತು. ಧಾರ್ಮಿಕ ಕಾರ್ಯಗಳಿಗೆ ಅಪಾರ ಸೇವೆಯನ್ನು ನೀಡಿದ್ದಾರೆ. ಕಟೀಲು ಧ್ವಜಸ್ತಂಭಕ್ಕೆ ಬೆಳ್ಳಿಮುಚ್ಚಿಸಿದ ಮಹಾದಾನಿ ಅವರಾಗಿದ್ದಾರೆ. 91 ರ ಹರೆಯದಲ್ಲೂ ಅವರು ಲವಲವಿಕೆಯಿಂದ ಕೂಡಿದ್ದರು ಎಂದರು.

ಮತ್ತೋರ್ವ ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ ಇವರು ಮಾತನಾಡಿ, 1961 ರಲ್ಲಿ ಕಟೀಲಿನ ತೀರ್ಥ ಮಂಟಪಕ್ಕೆ ಬೆಳ್ಳಿಯ ಕವಚವನ್ನು ನೀಡಿದ ಮುಂಬಯಿಯ ಪ್ರಥಮ ದಾನಿ ಅವರಾಗಿದ್ದಾರೆ. ಅವರ ಮದುವೆಯ ಪ್ರತೀ ವಾರ್ಷಿಕೋತ್ಸವದಂದು ಕಟೀಲಿನ ಯಕ್ಷಗಾನವನ್ನು ಆಡಿಸಿದ್ದಾರೆ. ನಿತ್ಯಾನಂದ ಗುರುಗಳ ಪರಮ ಭಕ್ತರಾಗಿದ್ದು, ದೇವಿ ಆರಾಧಕರಾಗಿದ್ದುಕೊಂಡ ಅವರು ಶುಕ್ರವಾರವೇ ದೈವಾಧೀನರಾಗಿ ದೇವಿಯ ಪಾದಕ್ಕೆ ಅರ್ಪಿತಗೊಂಡಿದ್ದಾರೆ ಎಂದು ನುಡಿದರು.

ಇನ್ನೋರ್ವ ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌.ಶೆಟ್ಟಿ  ಮಾತನಾಡಿ, ನನಗೆ ಅವರು ಧನಿಯಾಗಿದ್ದರು. ಅವರು ಎಂದಿಗೂ ಕೋಪಗೊಂಡವರಲ್ಲ. ಏಕೆಂದರೆ ನಗುವೇ ಅವರ ಆದರ್ಶ ವ್ಯಕ್ತಿತ್ವವಾಗಿತ್ತು. ಅವರೋರ್ವ ಶುದ್ಧ ಚಾರಿತ್ರÂದ ವ್ಯಕ್ತಿಯಾಗಿದ್ದು, ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಮಾಜಿ ಅಧ್ಯಕ್ಷ ಜಯರಾಮ ಎಸ್‌. ಮಲ್ಲಿ ಇವರು ಮಾತನಾಡಿ, 1968-69 ನೇ ಸಾಲಿನಲ್ಲಿ ಬಾಬು ಶೆಟ್ಟಿ ಅವರ ಪರಿಚಯವಾಯಿತು. ತುಂಬಾ ಸರಳ 
ವ್ಯಕ್ತಿತ್ವ ಅವರದು. ನಗು ಮೊಗದ ಅವರು ಅಸೋಸಿಯೇಶನ್‌ನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ನುಡಿದರು.

ಗೋಪಾಲ್‌ ವೈ. ಶೆಟ್ಟಿ, ಪತ್ರಕರ್ತ ದಯಾಸಾಗರ್‌ ಚೌಟ, ಶ್ರೀ ಗುರುದೇವಾ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಎಲ್‌. ಶೆಟ್ಟಿ, ನಟರಾಜ್‌ ರಾವ್‌ ಪಡುಬಿದ್ರೆ, ಬಾಬು ಎನ್‌. ಶೆಟ್ಟಿ ಅವರ ಆತ್ಮೀಯರಾದ ಆ್ಯಂಟನಿ ಮೊದಲಾದವರು ನುಡಿನಮನ ಸಲ್ಲಿಸಿದರು. ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟÅ ಘಟಕದ ಗೌರವ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್‌ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ, ಬಾಬು ಶೆಟ್ಟಿ ಅತ್ತೂರು ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಅಸೋಸಿಯೇಶನ್‌ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್‌. ಶೆಟ್ಟಿ, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಟ್ರಸ್ಟಿಗಳು, ಬಾಬು ಶೆಟ್ಟಿ ಅವರ ಅಭಿಮಾನಿಗಳು, ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಟವೃಷ್ಟಿಗೈದು ಶ್ರದ್ಧಾಂಜಲಿ ಸಲ್ಲಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ