ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗ: ವಿಶ್ವ ಮಹಿಳಾ ದಿನಾಚರಣೆ

Team Udayavani, Mar 31, 2019, 8:44 PM IST

ನವಿಮುಂಬಯಿ: ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಕಾರ್ಯಕ್ರಮವು ಮಾ. 24ರಂದು ಜೂಯಿ ನಗರದ ಬಂಟ್ಸ್‌ ಸೆಂಟರ್‌ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಷ್‌ ಶೆಟ್ಟಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಧರ್ಮ, ದೇಶ ರಕ್ಷಣೆಯ ಕಾಯಕದಲ್ಲಿ ತೊಡಗಿಸಿಕೊಂಡ ಶಿವಾಜಿ ಮಹಾರಾಜರನ್ನು ಆದರ್ಶವಾಗಿ ಬೆಳೆಸಲು ತಾಯಿ ಜೀಜಾಮಾತೆಯೇ ಕಾರಣ. ನಮ್ಮ ಮನೆ ಬೆಳಗಬೇಕಾದರೆ ಸಮಾಜ ಸದೃಢವಾಗಬೇಕಿದ್ದರೆ, ಸ್ತ್ರೀ ಶಕ್ತಿಯೇ ಮುಖ್ಯ ಕಾರಣ. ಅರಸಿನ ಕುಂಕುಮ ಮಹಿಳೆಯರ ಸೌಂದರ್ಯ ಹಾಗೂ ಆರೋಗ್ಯವನ್ನು ಕಾಪಾಡು
ತ್ತದೆ. ಅಸೋಸಿಯೇಶನ್‌ನ ಕಾರ್ಯಚಟುವಟಿಕೆಗಳಲ್ಲಿ ಮಹಿಳೆಯರು ಕೂಡಾ ಅಪೂರ್ವ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನವಿಮುಂಬಯಿ ಮಹಾನಗರ ಪಾಲಿಕೆಯ ನಗರ ಸೇವಕಿ ಮೀರಾ ಸಂಜಯ್‌ ಪಾಟೀಲ್‌ ಮಾತನಾಡಿ, ನಾನು ರಾಜಕೀಯವಾಗಿ ಬೆಳೆಯಲು ಬಂಟ ಸಮಾಜದ ಸಂತೋಷ್‌ ಶೆಟ್ಟಿ ಅವರು ನನ್ನ ಗುರುಗಳಾಗಿ, ಪ್ರೇರಣಾ ಶಕ್ತಿಯಾಗಿರುವವರು. ತುಳು-ಕನ್ನಡಿಗರ ಬಹಳಷ್ಟು ಕಾರ್ಯಕ್ರಮ ಗಳಲ್ಲಿ ಪಾಲ್ಗೊಂಡು, ಮಾತನಾಡಿ ದ್ದೇನೆ. ನಿಮ್ಮವರು ಸಂಸ್ಕಾರವಂತರು.

ನಿಮ್ಮ ನಾಡಿನ ಸಂಸ್ಕೃತಿಯನ್ನು ಹೊರನಾಡಿಯಲ್ಲಿಯೂ ಸದಾ
ಅನಾವರಣಗೊಳಿಸುವವರು. ಮಹಿಳೆಯರು ಮನೆ ಕೆಲಸದವ
ರೊಂದಿಗೆ ಸಾಮಾಜಿಕ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸಮಾಜ ಸೇವಕಿ ಚಂಚಲಾ ಶೆಟ್ಟಿ ಅವರು ಮಾತನಾಡಿ, ಅಸೋಸಿಯೇಶನ್‌ನ ಮಹಿಳಾ ವಿಭಾಗದ ಸೇವಾ ಕಾರ್ಯಗಳು ಮಹಿಳೆಯರನ್ನು ಜಾಗೃತಗೊಳಿಸಿದೆ. ಅರಸಿನ ಕುಂಕುಮ, ವಿಶ್ವ ಮಹಿಳಾ ದಿನಾಚರಣೆಯಂತಹ ಕಾರ್ಯಕ್ರಮ ಮಹಿಳೆಯರಲ್ಲಿ ಒಗ್ಗಟ್ಟನ್ನು ಮೂಡಿಸುತ್ತದೆ ಎಂದು ನುಡಿದು ಶುಭ ಹಾರೈಸಿದರು.
ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್‌ ಇದರ ಗೌರವಾಧ್ಯಕ್ಷೆ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಚಿತ್ರಾ ಆರ್‌. ಶೆಟ್ಟಿ ಮಾತನಾಡಿ, ಅಸೋಸಿಯೇಶನ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಶೆಟ್ಟಿ ಅವರು ನನಗೆ ಭಜನಾ ಗುರುಗಳು. ಬಾಲ್ಯದಲ್ಲಿಯೇ ಒಂದೇ ಮನೆಯಲ್ಲಿ ಬೆಳೆದವರು. ಭಜನೆ ನಮ್ಮನ್ನು ಸುಸಂಸ್ಕೃತರನ್ನಾಗಿ ಮತ್ತು ಸಮಾಜ ಸೇವೆ ಮಾಡಲು ಪ್ರೇರಣೆ ನೀಡುತ್ತದೆ. ನಮ್ಮ ಮಕ್ಕಳಿಗೆ ಬೇಕಾದುದನ್ನು ನೀಡಬೇಕು. ಆದರೆ ಸಂಸ್ಕಾರ ನೀಡುವುದು ಮಹಿಳೆ ಯರ ಕರ್ತವ್ಯ. ನಮ್ಮ ಸಮಾಜದಲ್ಲಿ ಸಂಸ್ಕಾರದ ಕೊರತೆಯಿದೆ. ಇದರಿಂದಾಗಿ ವೈವಾಹಿಕ ಬದುಕಿನಲ್ಲಿ ಭಿನ್ನತೆ, ವಿವಾಹ ವಿಚ್ಛೇದನಗಳಂತಹ ಸಮಸ್ಯೆಗಳು ಅಧಿಕಗೊಳ್ಳುತ್ತಿದೆ. ಮದುವೆಯ ಸಂಬಂಧ ಬಂದಾಗ ವರ ಅಥವಾ ವಧುವಿನಲ್ಲಿ ನ್ಯೂನತೆಯನ್ನು ಹುಡುಕುವುದು ಸರಿಯಲ್ಲ. ಸಮಾಜದಲ್ಲಿ ಬಹಳಷ್ಟು ಜನ ಬಡವರಿದ್ದಾರೆ. ಬಡತನದ ನಿವಾರಣೆಗೆ ಸಮಾಜ ಸೇವೆಯಲ್ಲಿ ಎಲ್ಲ ಮಹಿಳೆಯರು ತೊಡಗಿಕೊಂಡಾಗ ಕಷ್ಟದಲ್ಲಿ ದ್ದವರಿಗೆ ನಮ್ಮ ಸೇವೆ ತಲುಪಲು ಸಾಧ್ಯವಾಗುತ್ತದೆ ಎಂದರು.

ವೇದಿಕೆಯಲ್ಲಿ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಲತಾ ಜಿ. ಶೆಟ್ಟಿ, ಗೌರವ ಕಾರ್ಯದರ್ಶಿ ಪ್ರಭಾ ಜೆ. ಶೆಟ್ಟಿ, ಕೋಶಾಧಿಕಾರಿ ರಾಜೇಶ್ವರಿ ಶೆಟ್ಟಿ, ಜತೆ ಕಾರ್ಯದರ್ಶಿ ಹರಿಣಿ ಎಚ್‌. ಶೆಟ್ಟಿ, ಜತೆ ಕೋಶಾಧಿಕಾರಿ ಶಾಂತಾ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಪವರ್‌ ಲಿಪ್ಟರ್‌, ಅಸೋಸಿಯೇಶನ್‌ನ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ದಾದೋಜಿ ಕೊಂಡದೇವ್‌ ಪ್ರಶಸ್ತಿ ಪುರಸ್ಕೃತೆ ಸರಳಾ ಬಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್‌. ಶೆಟ್ಟಿ ಸ್ವಾಗತಿಸಿದರು.

ಅತಿಥಿಗಳನ್ನು ಸರಳಾ ಬಿ. ಶೆಟ್ಟಿ, ಹೀರಾ ಆರ್‌. ಶೆಟ್ಟಿ, ಪ್ರಭಾ ಜೆ. ಶೆಟ್ಟಿ ಪರಿಚಯಿಸಿದರು. ಗೀತಾ ಡಿ. ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮವನ್ನು ಅಮೃತಾ ಶೆಟ್ಟಿ ನಿರ್ವಹಿಸಿದರು. ಲತಾ ಜಿ. ಶೆಟ್ಟಿ ವಂದಿಸಿದರು. ಮಹಿಳಾ ವಿಭಾಗದವರಿಂದ ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ ಮತ್ತು ರಂಗಮಿಲನ ನೆರೆಕರೆ ಕಲಾವಿದರಿಂದ ಮನೋಹರ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ, ನಂದಳಿಕೆ ನಾರಾಯಣ ಶೆಟ್ಟಿ ಅವರ ಸಹಕಾರದೊಂದಿಗೆ ದಾದನ ಉಂಡುಗೆ ತುಳು ನಾಟಕ ಪ್ರದರ್ಶನಗೊಂಡಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ