ಬೊರಿವಲಿ ವ್ಯಾಪಾರಿ ಸಮುದಾಯದಿಂದ ಗೋಪಾಲ್‌ ಶೆಟ್ಟಿಯವರಿಗೆ ಅಭಿನಂದನೆ

Team Udayavani, Jun 16, 2019, 3:36 PM IST

 

ಮುಂಬಯಿ: ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದಿಂದ ಸತತ 2ನೇ ಬಾರಿಗೆ ಪ್ರಚಂಡ ಬಹುಮತಗಳಿಂದ ಜಯ ಭೇರಿಗಳಿಸಿದ ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರಿಗೆ ಬೊರಿವಲಿಯ ಸಮಸ್ತ ವ್ಯಾಪಾರಿ ಸಮುದಾಯದ ವತಿಯಿಂದ ಜೂ. 12ರಂದು ಬೊರಿವಲಿ ಪಶ್ಚಿಮದ ಮೆಗಾ ಮಧುರಮ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಬೊರಿವಲಿಯ ಸಮಾಜ ಸೇವಕ ಬಾಲಾಜಿ ಕನ್‌ಸ್ಟ್ರಕ್ಷನ್‌ನ ಗೋಪಾಲಕೃಷ್ಣ ಶೆಟ್ಟಿ, ಬಿಜೆಪಿಯ ಉತ್ತರ ಮುಂಬಯಿ ಜಿಲ್ಲಾ ಕಾರ್ಯದರ್ಶಿ ವಸಂತ್‌ ಎಚ್‌. ಶೆಟ್ಟಿ ಹಾಗೂ ಪರಿಚಯ್‌ ಗ್ರೂಪ್‌ನ ಚಂದ್ರಕಾಂತ್‌ ಭಾಯಿ, ಆಶಾಪುರ ಸಾರೀಸ್‌ನ ಹರಕ್‌ಚಂದ್‌ ಭಾಯಿ, ಆದರ್ಶ್‌ ಸ್ವೀಟ್ಸ್‌ನ ಜಯೇಶ್‌ ಛೆಡ್ಡಾ ಭಾಯಿ, ರಾಜೇಂದ್ರ ಫುಡ್‌ ಇದರ ಉಮೇಶ್‌ ಕಾಮತ್‌ ಮತ್ತು ಬೊರಿವಲಿಯ ಸಮಸ್ತ ಚಿಲ್ಲರೆ ವ್ಯಾಪಾರಸ್ಥರು ಹಾಗೂ ಅಭಿಮಾನಿಗಳು ಸಂಸದ ಗೋಪಾಲ್‌ ಶೆಟ್ಟಿ ಮತ್ತು ಉಷಾ ಗೋಪಾಲ್‌ ಶೆಟ್ಟಿ ದಂಪತಿಯನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.

ಅಪಾರ ಸಂಖ್ಯೆಯಲ್ಲಿ ಗೋಪಾಲ್‌ ಶೆಟ್ಟಿ ಅವರ ಅಭಿಮಾನಿಗಳು, ಹಿತೈಷಿಗಳು, ಬಿಜೆಪಿಯ ಕಾರ್ಯಕರ್ತರು, ತುಳು-ಕನ್ನಡಿಗರು, ಇತರ ಭಾಷಿಗರು ಪಾಲ್ಗೊಂಡು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ದ್ವಿತೀಯ ಬಾರಿಗೆ ಭಾರೀ ಮತಗಳ ಅಂತರದಿಂದ ಜಯಗಳಿಸಿದ ಗೋಪಾಲ್‌ ಸಿ. ಶೆಟ್ಟಿ ಅವರ ಸಿದ್ಧಿ-ಸಾಧನೆಗಳನ್ನು ಪ್ರಶಂಶಿಸಿ ಅಭಿನಂದಿಸಿ ಗೌರವಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ