ಬಂಟ್ಸ್‌ ಅಸೋಸಿಯೇಶನ್‌ ಪುಣೆ: ಒಡಿಯೂರು ಶ್ರೀಗಳಿಂದ ಆಶೀರ್ವಚನ


Team Udayavani, Nov 14, 2017, 12:38 PM IST

11-Mum06a.jpg

ಪುಣೆ: ಸನಾತನ ಧರ್ಮದ ಮೂಲಕ ಮನುಷ್ಯ ಜೀವನ ರೂಪುಗೊಳ್ಳಬೇಕು. ಸನಾತನ ಸಂಸ್ಕೃತಿಯನ್ನು ಮರೆತರೆ ಜೀವನವು ಸರಿಯಾದ ಪಥದಲ್ಲಿ  ಸಾಗಲು ಸಾಧ್ಯವಿಲ. ಇದಕ್ಕೆ ಜೀವನ ಧರ್ಮ ಎಂಬ ತತ್ವವನ್ನು ನಾವೆಲ್ಲರೂ ಬದುಕಲ್ಲಿ ಅಳವಡಿಸಿಕೊಳ್ಳಬೇಕು.  ಮನುಷ್ಯ ಸಂಘಜೀವಿ, ಪರೋಪಕಾರ  ಧರ್ಮದೊಂದಿಗೆ ಒಂದಾಗಿ ಸೇರಿದಾಗ ಸಂಘಟನೆ ರೂಪುಗೊಳ್ಳುತ್ತದೆ. ಸಂಘಟನೆ ಎಂಬುದು ಆದರ್ಶವಾಗಿರಬೇಕು. ಆರೋಗ್ಯದಾಯಕ ಸಮಾಜದಬೆಳವಣಿಗೆಗೆ, ಸಮಾಜದ ಅಭಿವೃದ್ಧಿಗೆ ಶಿಸ್ತುಬದ್ದವಾದ ಸಂಘಟನೆಯ ಅಗತ್ಯವಿದೆ. 

ಬಲಯುತವಾಗಿ ಬೆಳೆದಂತೆ ಅಧ್ಯಾತ್ಮಿಕತೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಬದುಕು ಎಂಬುದು ಹರಿಯುವ ನೀರಿನಂತೆ.  ಏರುಪೇರು ಎಂಬುದು ಸಹಜವಾಗಿರುತ್ತದೆ. ಅರಿತು ಬೆರೆತು ಬಾಳಿದರೆ ಜೀವನ ಸಾûಾತ್ಕಾರವಾಗಿರುತ್ತದೆ. ನಡೆ ನುಡಿ ಮದುರವಾಗಿದ್ದರೆ ಬದುಕು ಸುಂದರವಾಗಿರುತ್ತದೆ ಎಂದು ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.

ನ. 9ರಂದು ಹಡಪ್ಸರ್‌ನ ಅಮರ್‌ ಕಾಟೇಜ್‌ನಲ್ಲಿ ಪುಣೆ  ಬಂಟ್ಸ್‌ ಅಸೋಸಿಯೇಶನ್‌ ವತಿಯಿಂದ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಸೇರಿದ  ಸಮಾಜ ಭಾಂದವರಿಗೆ ಅಶೀರ್ವಚನ ನೀಡಿದ  ಶ್ರೀಗಳು,  ಪ್ರೀತಿಯಿಂದ ಯಶಸ್ಸನ್ನು ಪಡೆಯಬಹುದು ಅಲ್ಲದೆ ಸಮೃದ್ಧಿ ಕೀರ್ತಿಯನ್ನು ಗಳಿಸಬಹುದು. ಪ್ರೀತಿ ಎಲ್ಲಿದೆಯೋ  ಅಲ್ಲಿ ಯಶಸ್ಸು, ಸಮೃದ್ಧಿ ತಾನಾಗಿಯೇ ಬರುತ್ತದೆ. ಉತ್ತಮ ಸಂಸ್ಕಾರದೊಂದಿಗೆ ಸುಧರ್ಮದ ಹಾದಿಯಲ್ಲಿ ನಾವು ಮಾಡುವಂತಹ  ಯಾವುದೇ ಸಮಾಜ ಸೇವಾ ಕಾರ್ಯಗಳು ಸಮಾಜದ ಪ್ರತಿಯೋರ್ವ ಸದಸ್ಯರನು ತಲುಪುವಂತಾಗಬೇಕು. ಧಾರ್ಮಿಕವಾಗಿ, ಅಧ್ಯಾತ್ಮಿಕವಾಗಿ ಸನ್ಮಾರ್ಗದ ಮೂಲಕ ಸೇವಾ ಕಾರ್ಯಗಳು ನಡೆದಾಗ ಅತ್ಮತೃಪ್ತಿಯನ್ನು ಪಡೆಯಬಹುದು.   ನಾವು ಪಾಶ್ಚಾತ್ಯ ಸಂಸ್ಕೃತಿಯ ಹೊಂದಾಣಿಕೆ ಮಾಡಿಕೊಂಡರು, ಅಂತಿಮವಾಗಿ ಸನಾತನ ಧರ್ಮದ ಬುಡಕ್ಕೆ ಬರಬೇಕು.  ಸೇವಾ ಮನೋಭಾವದ ಜೀವನ ಶ್ರೇಷ್ಠವಾಗಿರುತ್ತದೆ. ಪುಣೆಯ ಈ ಬಂಟ್ಸ್‌ ಅಸೋಸಿಯೇಶನ್‌ನ ಸದಸ್ಯರು ನಮ್ಮ ಕಲೆ, ಸಂಸ್ಕೃತಿಗೆ ಪ್ರಾಶಸ್ತÂ ನೀಡಿ ಧಾರ್ಮಿಕತೆಯ ಜತೆಗೆ   ಭಾಷಾಭಿಮಾನದೊಂದಿಗೆ ಸಮಾಜದ ಬಡ ವರ್ಗದವರ ಅಭಿವೃದ್ಧಿªಗೆ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಲ್ಲಿ ಉತ್ತಮ ಕಾರ್ಯಗಳನ್ನು ಮಾಡುತಿದ್ದಾರೆ. ಇದು
ನಿರಂತರ ನಡೆಯುತ್ತಿರಲಿ ಎಂದು ಆಶೀರ್ವಚನ ನೀಡಿದರು.

ಪೂಜ್ಯ ಸ್ವಾಮೀಜಿಯವರನ್ನು   ಪುಣೆ ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ನಾರಾಯಣ ಶೆಟ್ಟಿ ಹಾಗೂ ಸಾಧ್ವಿ ಮಾತಾನಂದಮಯಿ ಅವರನ್ನು  ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ  ಮಲ್ಲಿಕಾ ಎ. ಶೆಟ್ಟಿ ಅವರು ಹೂವಿನ ಹಾರಹಾಕಿ  ಸ್ವಾಗತಿಸಿದರು. ಶ್ರೀಗಳು  ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪುಣೆ ಬಂಟ್ಸ್‌ ಅಸೋಸಿಯೇಶನ್‌ನ ಗೌರವ ಕಾರ್ಯದರ್ಶಿ ಎನ್‌. ರೋಹಿತ್‌ ಡಿ. ಶೆಟ್ಟಿ ಅವರು ಪೂಜ್ಯ ಸ್ವಾಮೀಜಿಯವರ ಸಮಾಜಮುಖೀ ಸೇವಾ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಪುಣೆ  ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಪ್ರೇಮಾ ಎಸ್‌. ಶೆಟ್ಟಿ, ಬಂಟ್ಸ್‌  ಅಸೋಸಿಯೇಶನ್‌ನ ಉಪಾಧ್ಯಕ್ಷ ಆನಂದ್‌ ಶೆಟ್ಟಿ ಮಿಯ್ನಾರು, ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರು, ಕೋಶಾಧಿಕಾರಿ ಅರವಿಂದ್‌ ರೈ, ಸಾಂಸ್ಕೃತಿಕ ವಿಭಾಗದಕಾರ್ಯಾಧ್ಯಕ್ಷರಾದ  ಬಾಲಕೃಷ್ಣ ಶೆಟ್ಟಿ, ಸುಧಾಕರ್‌ ಶೆಟ್ಟಿ ಕೆಮೂ¤ರು, ದಿನೇಶ್‌  ಶೆಟ್ಟಿ, ಉಮೇಶ್‌  ಶೆಟ್ಟಿ, ನಾಗರಾಜ ಶೆಟ್ಟಿ ಮಹಿಳಾ ವಿಭಾಗದಕಾರ್ಯದರ್ಶಿ ಉಷಾ ಶೆಟ್ಟಿ, ಸಲಹೆಗಾರರಾದ  ಸುಧಾ ಎನ್‌. ಶೆಟ್ಟಿ ಮತ್ತು ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು, ಪುಣೆ ಬಳಗದ ಸದಸ್ಯರು ಮತ್ತು ಕೇಂದ್ರದ ಸದಸ್ಯೆಯರು, ಭಕ್ತಾಭಿಮಾನಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಅಸೋಸಿಯೇಶನ್‌ನ ಕಾರ್ಯದರ್ಶಿ  ಎನ್‌. ರೋಹಿತ್‌ ಡಿ. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನಮ್ಮ ಈ ಸಂಸ್ಥೆ ಪೂಜ್ಯ ಶ್ರೀಗಳ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡು ಅವರು   ಹಾಕಿಕೊಟ್ಟಂತಹ ಸನ್ಮಾರ್ಗದಲ್ಲಿ  ಸಾಗಿ ಪುಣೆಯಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಸಮಾಜ  ಸೇವೆ ಮಾಡುವಂತಹ ಅನುಗ್ರಹ ಅವರ ಆಶೀರ್ವಾದ ಸದಾ ನಮ್ಮ ಮೇಲಿರಲಿ. ಒಗ್ಗಟ್ಟಿನಿಂದ  ಸಮಾಜ ಬಾಂಧವರ ಸಹಕಾರದಿಂದ ಕಾರ್ಯ ಯೋಜನೆಗಳ ಮೂಲಕ ಸೇವೆಗೈಯುವ ಶಕ್ತಿ ಸಿಗಲಿ. ಪೂಜ್ಯ ಸ್ವಾಮೀಜಿಯವರು ಪುಣೆಗೆ ಆಗಮಿಸಿದ ಸಂಧರ್ಭದಲ್ಲಿ ಹಬ್ಬದ ವಾತಾವರಣ ಉತ್ಸಾಹ ನಮ್ಮಲ್ಲಿ ಬರುತ್ತದೆ. ನಮಗೆ ಆಶೀರ್ವಾದ ಅಭಯ ನೀಡಿ ಧೈರ್ಯ ತುಂಬುವ ಸ್ವಾಮೀಜಿಯವರು ಸದಾ ನಮ್ಮೊಂದಿಗೆ ಇರುತ್ತಾರೆ 
 – ನಾರಾಯಣ ಶೆಟ್ಟಿ (ಅಧ್ಯಕ್ಷರು: ಪುಣೆ ಬಂಟ್ಸ್‌ ಅಸೋಸಿಯೇಶನ್‌).

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.