ಬಂಟರ ಸಂಘದ ಮುಖವಾಣಿ ಬಂಟರವಾಣಿಯ ಚಿಣ್ಣರ ಚಿಲಿಪಿಲಿ-3 


Team Udayavani, Feb 7, 2019, 5:19 PM IST

0602mum01a.jpg

ಮುಂಬಯಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯು ಬೆಳಕಿಗೆ ಬರಲು, ಜೊತೆಗೆ ಬದುಕಿನಲ್ಲಿ ಮಕ್ಕಳು ಸ್ಪರ್ಧಾತ್ಮಕವಾಗಿ ಹೆಜ್ಜೆ ಇಡಲು ಬಂಟರವಾಣಿ ಇಂದು ಆಯೋಜಿಸಿದ ಚಿಣ್ಣರ ಚಿಲಿಪಿಲಿ ಫ್ಯಾಶನ್‌ ಶೋ ಮತ್ತು ನೃತ್ಯ ಸ್ಪರ್ಧೆ ಚಿಣ್ಣರಿಗೆ ಸ್ಫೂರ್ತಿ ಹಾಗೂ ಪ್ರೇರಣಾದಾಯಕವಾಗಲೆಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

ಫೆ. 2ರಂದು  ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘದ ಮುಖ್ಯವಾಣಿ ಬಂಟರವಾಣಿ ಸಮಿತಿ ಆಯೋಜಿಸಿದ ಚಿಣ್ಣರ ಚಿಲಿಪಿಲಿ-3 ಪ್ರತಿಭಾ ಸ್ಪರ್ಧೆ ಹಾಗೂ ನೃತ್ಯ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಲು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಜರಗಬೇಕು. ಸುಮಾರು 42 ವರ್ಷಗಳಿಂದ ಬಂಟರ ವಾಣಿ ಸಾಧಿಸಿದ ಸಾಧನೆ, ಮಕ್ಕಳಿಗೆ ನೀಡಿರುವ ಪ್ರೋತ್ಸಾಹ ಪ್ರಶಂಸನೀಯ ಎಂದು ನುಡಿದ ಅವರು ಬಂಟರವಾಣಿ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರು ಸರಳ ಸಜ್ಜನ ವ್ಯಕ್ತಿಯಾಗಿ ಬಂಟರ ಸಂಘದಲ್ಲಿ ಹಲವಾರು ವರ್ಷಗಳಿಂದ ದುಡಿದವರು. ಬಂಟರವಾಣಿಯ ಕಾರ್ಯಾಧ್ಯಕ್ಷರಾಗಿ ಎರಡನೇ ಅವಧಿಗೆ ನೇಮಕಗೊಂಡಿರುವ ಅವರಲ್ಲಿ ಮಕ್ಕಳ ಬಗ್ಗೆ ಪ್ರೀತಿ ಇದೆ. ಮಕ್ಕಳಿಗಾಗಿ ಏನನ್ನಾದರೂ ಮಾಡಿತೋರಿಸಬೇಕೆಂಬ ತುಡಿತವಿದೆ. ಹಾಗಾಗಿ, ಚಿಣ್ಣರ ಚಿಲಿಪಿಲಿ-3ನೇ ಕಾರ್ಯಕ್ರಮ ಇಂದು ನಡೆಯುತ್ತಿದೆ. ಇದೊಂದು ಸೌಹಾರ್ದಯುತ ಮಕ್ಕಳ ಮೇಳವಾಗಿದ್ದು, ಯಾರೂ ಗೆದ್ದರೂ ಸೋತರೂ ನಮ್ಮ ಮಕ್ಕಳೇ ಎಂಬ ಅಭಿಮಾನ ನಮ್ಮೆಲ್ಲರದ್ದಾಗಲಿ ಎಂದು ಮಕ್ಕಳ ಪಾಲಕರಿಗೆ ಕಿವಿಮಾತು ನುಡಿದರು.

ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಸಂಪಾದಕ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಹಾಗೂ ಬಂಟರವಾಣಿ ಸಂಪಾದಕೀಯ ಮಂಡಳಿಯಲ್ಲಿದ್ದು ಪತ್ರಿಕೆಗೆ ಮಾರ್ಗದರ್ಶನ ನೀಡುತ್ತಿರುವ ಹಿರಿಯ ಸಾಹಿತಿ, ನಮ್ಮವರೇ ಆದ ಡಾ| ಸುನೀತಾ ಶೆಟ್ಟಿ ಹಾಗೂ ಬಳಗದ ಕಾರ್ಯ ಶ್ಲಾಘನೀಯ ಎಂದು ನುಡಿಯುತ್ತ ಪತ್ರಿಕೆಯು ಇನ್ನಷ್ಟು ಸುದ್ದಿ ಮಾಡಲಿ, ಓದುಗರ ಪ್ರೀತಿಗೆ ಪಾತ್ರವಾಗಲೆಂದು ಹಾರೈಸಿದರು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳನ್ನು ಅಭಿನಂದಿಸಿದರು.

ಮುಖ್ಯ ಅತಿಥಿ, ಕನಕ ಗ್ರೂಪ್‌ ಆಫ್‌ ಕಂಪನೇಸ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಜಗದೀಶ್‌ ಶೆಟ್ಟಿ ಅವರು ಮಾತನಾಡಿ, ಸಮಾಜ ಸೇವೆ ಮಾಡಲು ಆಸಕ್ತಿ ಬೇಕು. ಆತ್ಮವಿಶ್ವಾಸದ ಜೊತೆಗೆ ಆತ್ಮ ತೃಪ್ತಿ ನಮ್ಮದಾಗಬೇಕು ಎಂದು ನುಡಿದರು.

ಗೌವರ ಅತಿಥಿ ಗೋಲ್ಡನ್‌ ಫೋರ್ಕ್ಸ್ ಹಾಸ್ಟಿಟಾಲಿಟಿ ಪ್ರೈ.ಲಿ. ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಆದರ್ಶ್‌ ಶೆಟ್ಟಿ ಮಾತನಾಡಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಮತ್ತು ಸಮಿತಿ ಸಂಘದವರ ಪರಿಶ್ರಮದೊಂದಿಗೆ ಮೂಡಿಬಂದಿರುವ ಚಿಣ್ಣರ ಚಿಲಿಪಿಲಿ ಫ್ಯಾಶನ್‌ ಶೋ ಹಾಗೂ ನೃತ್ಯ ಕಾರ್ಯಕ್ರಮವು ಅದ್ಭುತವಾಗಿತ್ತೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಂಟರ ಸಮಾಜದ ಮುಂದಿನ ಪೀಳಿಗೆಯ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಕಾರ್ಯಕ್ರಮಗಳನ್ನು ಬಂಟ ಸಂಘ ಸಂಸ್ಥೆಗಳು ಹಮ್ಮಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾಗಿ ಸಾರ್ಥಕ ಸೇವೆ ಗೈದಿರುವ ಸುಜಯಾ ಆರ್‌. ಶೆಟ್ಟಿ, ಆಶಾ ಎಂ. ಹೆಗ್ಡೆ, ಲತಾ ಜೆ. ಶೆಟ್ಟಿ ಇವರನ್ನು ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಅಧ್ಯಕ್ಷರು, ಅತಿಥಿ ಗಣ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ ಶಾಲು ಹೊದಿಸಿ, ಸ್ಮರಣಿಕೆ ಸಮ್ಮಾನ ಪತ್ರ ಹಾಗೂ ಪುಷ್ಪ ಗುತ್ಛದೊಂದಿಗೆ ಸಮ್ಮಾನಿಸಿದರು. ಶಶಿಕಲಾ ಎಸ್‌. ಪೂಂಜ, ಅಮಿತಾ ಎಸ್‌. ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.

ಬಂಟರ ಸಂಘದ ಯುವ ವಿಭಾಗದ ಸ್ಥಾಪಕಾಧ್ಯಕ್ಷ ಚಲನಚಿತ್ರ ಹಾಗೂ ಧಾರಾವಾಹಿ ನಟರಾಗಿ ಖ್ಯಾತಿ ಹೊಂದಿರುವ ಹರೀಶ್‌ ವಾಸು ಶೆಟ್ಟಿ ಇವರನ್ನು ಸಮಿತಿಯ ಪದಾಧಿಕಾರಿಗಳು ಹಾಗೂ ಅತಿಥಿ ಗಣ್ಯರು ಶಾಲು ಹೊದೆಸಿ, ಸಮ್ಮಾನ ಪತ್ರ, ಸ್ಮರಣಿಕೆ ಹಾಗೂ ಪುಷ್ಪ ಗುತ್ಛ ನೀಡಿ ಸಮ್ಮಾನಿಸಿದರು. ಸಮ್ಮಾನಿತರು ಕ್ರಮವಾಗಿ ಮಾತನಾಡುತ್ತ ಸಮ್ಮಾನಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಯುವ ವಿಭಾಗದ ತೇಜಸ್‌ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆ ಯಾಗಿ ಪುಟಾಣಿಗಳ ಮನ ಸೆಳೆದ ತಾರಕ್‌ ಮೆಹ¤ ಉಲ್ಟಾ ಚಷ್ಮಾ ಧಾರಾವಾಹಿಯ ಮೋನಿಕಾ, ಭಾಡೋರಿಯಾ (ಬಾಬಿಜೀ), ಸಿಐಡಿ ಧಾರಾವಾಹಿಯ ಅಜಯ್‌ ನಾಗ್‌ರಥ್‌ (ಪಂಕಜ್‌), ಅಂಶಾ ಸಯ್ಯದ್‌ (ಪೂರ್ವಿ), ಡಾನ್ಸ್‌ ಇಂಡಿಯಾ ಡಾನ್ಸ್‌ ಖ್ಯಾತಿಯ ಕೊರಿಯೋಗ್ರಾಫರ್‌ ತುಷಾರ್‌ ಶೆಟ್ಟಿ ಇವರನ್ನು  ಸತ್ಕರಿಸಲಾಯಿತು. ತುಷಾರ್‌ ಶೆಟ್ಟಿ ವೇದಿಕೆಯಲ್ಲಿ ನೃತ್ಯಮಾಡುವ ಮೂಲಕ ಎಲ್ಲರ ಕಣ್ಸೆಳೆದರು.

ಇದೇ ಸಂದರ್ಭದಲ್ಲಿ ಸತತ ಮೂರನೇ ವರ್ಷ ಚಿಣ್ಣರ ಚಿಲಿಪಿಲಿ ಫ್ಯಾಶನ್‌ ಶೋ ಹಾಗೂ ನೃತ್ಯ ಸ್ಪರ್ಧೆ ಆಯೋಜನೆಗೆ ಕಾರಣರಾದ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರನ್ನು ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಪದಾಧಿಕಾರಿಗಳು, ಉದ್ಘಾಟಕ ಐಕಳ ಹರೀಶ್‌ ಶೆಟ್ಟಿ, ಅತಿಥಿ ಗಣ್ಯರು ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ, ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು, ಸಂಪಾದಕ ಮಂಡಳಿಯ ಸದಸ್ಯರ ಪರವಾಗಿ ಡಾ| ಸುನೀತಾ ಶೆಟ್ಟಿ ಅವರು ಒಟ್ಟಾಗಿ ಹೃದಯ ಸ್ಪರ್ಶಿ ಸಮ್ಮಾನ ನೀಡಿದ್ದು ಔಚಿತ್ಯಪೂರ್ಣವಾಗಿತ್ತು.
ಆರಂಭದಲ್ಲಿ ಮುಖ್ಯ ಅತಿಥಿ ಜಾಗತಿಕ ಬಂಟರ ಸಂಘರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಹಿಳಾ ವಿಭಾಗದ ಮನೋರಮಾ ಎನ್‌. ಬಿ. ಶೆಟ್ಟಿ ಪಾರ್ಥಿಸಿದರು.

ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರು ಅತಿಥಿ ಗಣ್ಯರನ್ನು, ಸಭಿಕರನ್ನು ಸ್ವಾಗತಿಸಿ ಮಾತನಾಡುತ್ತ, ಬಂಟರ ಸಂಘದ ಮುಂದಿನ ಭವಿಷ್ಯವಾಗಿರುವ ಬಂಟ ಪುಟಾಣಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಬಂಟರವಾಣಿ ಚಿಣ್ಣರ ಚಿಲಿಪಿಲಿಯ 3ನೇ ವರ್ಷದ ಫ್ಯಾಶನ್‌ ಶೋ ಹಾಗೂ ನೃತ್ಯ ಸ್ಪರ್ಧೆಯನ್ನು ಆಯೋಜಿಸಿದೆ. ಇಂತಹ ಅಭೂತ ಪೂರ್ವ ಕಾರ್ಯಕ್ರಮದ ಆಯೋಜನೆ ಅಷ್ಟೊಂದು ಸುಲಭದ ಮಾತಲ್ಲ. ಕಳೆದ ಮೂರು ತಿಂಗಳನಿಂದ ನಾವು ಪಟ್ಟ ಪರಿಶ್ರಮ ಸಾರ್ಥಕವಾಗಬೇಕೆಂಬ ಬಯಕೆ ನಮ್ಮದಾಗಿದೆ ಎಂದರು. ಅಧ್ಯಕ್ಷಕರು, ಪದಾಧಿಕಾರಿಗಳು, ವಿಶ್ವಸ್ತರು, ಮಾಜಿ ಅಧ್ಯಕ್ಷರು, ಉಪಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಸಂಘದ ಒಂಬತ್ತು ಪ್ರಾದೇಶಿಕ ವಿಭಾಗಗಳ ಸಹಕಾರದಿಂದ ಇವೆಲ್ಲವೂ ಸಾಧ್ಯವಾಗಿದೆ. ಇದರ ಶ್ರೇಯ ಅವರಿಗೆ ಸಲ್ಲಬೇಕು ಎಂದು ಕೃತಜ್ಞತೆ  ವ್ಯಕ್ತಪಡಿಸಿದರು. ಬಂಟರ ವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. 

ಬಂಟರವಾಣಿ ಸಂಪಾದಕ ಪ್ರೇಮನಾಥ ಶೆಟ್ಟಿ ಮುಂಡ್ಕೂರು ವಂದಿಸಿದರು.  ವೇದಿಕೆಯಲ್ಲಿ ಬಂಟರವಾಣಿಯ ಪ್ರಕಾಶಕ ಸಿಎ ಸಂಜೀವ ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಗೌರವ ಸಂಪಾದಕ ಅಶೋಕ್‌ ಪಕ್ಕಳ, ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು, ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ಪ್ರಭಾಕರ ಶೆಟ್ಟಿ, ಸಂಘದ ಇತರ ಪದಾಧಿಕಾರಿಗಳಾದ ನಲ್ಯಗುತ್ತು ಪ್ರಕಾಶ್‌ ಶೆಟ್ಟಿ, ಜಯ ಎ. ಶೆಟ್ಟಿ, ಎಂ. ಜಿ. ಶೆಟ್ಟಿ, ವಿಟuಲ್‌ ಎಸ್‌. ಆಳ್ವ, ಅಶೋಕ್‌ ಅಡ್ಯಂತಾಯ, ವಸಂತ್‌ ಶೆಟ್ಟಿ ಪಲಿಮಾರು, ಜಯಪ್ರಕಾಶ್‌ ಶೆಟ್ಟಿ, ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ, ನಿಟ್ಟೆ ಮುದ್ದಣ್ಣ ಜಿ. ಶೆಟ್ಟಿ, ಪ್ರಕಾಶ್‌ ಶೆಟ್ಟಿ, ಡಾ| ಸುನೀತಾ ಎಂ. ಶೆಟ್ಟಿ, ಮನೋರಮಾ ಎನ್‌. ಬಿ. ಶೆಟ್ಟಿ, ರತ್ನಾ ಶೆಟ್ಟಿ  ಉಪಸ್ಥಿತರಿದ್ದರು.

ಚಿತ್ರ-ವರದಿ: ಪ್ರೇಮನಾಥ ಶೆಟ್ಟಿ  ಮುಂಡ್ಕೂರು

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.