ಚಿಣ್ಣರ ಬಿಂಬ ಮೀರಾ ರೋಡ್ ಶಿಬಿರದ ಮಕ್ಕಳ ವಾರ್ಷಿಕ ಪ್ರತಿಭಾ ಸ್ಪರ್ಧೆ
Team Udayavani, Sep 18, 2018, 12:55 PM IST
ಮುಂಬಯಿ: ಚಿಣ್ಣರ ಬಿಂಬ ಮುಂಬಯಿ ಇದರ ಮೀರಾರೋಡ್ ಶಿಬಿರದ ಮಕ್ಕಳ ವಾರ್ಷಿಕ ಪ್ರತಿಭಾ ಸ್ಪರ್ಧೆಯು ಸೆ. 9 ರಂದು ಬೆಳಗ್ಗೆ ಸೈಂಟ್ ಕ್ಸೇವಿಯರ್ ಹೈಸ್ಕೂಲ್ ಸಭಾಗೃಹದಲ್ಲಿ ನಡೆಯಿತು.
ಶಿಬಿರದ ಮಕ್ಕಳ ಭಜನ ಕಾರ್ಯಕ್ರಮದೊಂದಿಗೆ ಸ್ಪರ್ಧೆಯು ಪ್ರಾರಂಭಗೊಂಡಿತು. ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥೆ ಸುಪ್ರಿತಾ ಕೊಠಾರಿ ಅವರು ಸ್ವಾಗತಿಸಿದರು. ಚಿಣ್ಣರ ಬಿಂಬದ ರೂವಾರಿಗಳಲ್ಲೊಬ್ಬರಾದ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಸಾಂತಿಂಜ ಜನಾರ್ದನ ಭಟ್ ಹಾಗೂ ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿಣ್ಣರ ಬಿಂಬದ ಮಕ್ಕಳು ಪ್ರಾರ್ಥನೆಗೈದರು.
ಪ್ರತಿಭಾ ಸ್ಪರ್ಧೆಯಲ್ಲಿ ಮಕ್ಕಳಿಗೆ ಶ್ಲೋಕ ಪಠಣ, ಚರ್ಚೆ, ಭಾವಗೀತೆ, ಜಾನಪದ ಗೀತೆ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ತೀರ್ಪುಗಾರರಾಗಿ ಶೈಲಜಾ ಹೆಗ್ಡೆ, ಪ್ರಸನ್ನ ರಾವ್, ಸ್ವಪ್ನಾ ಭಟ್ ಅವರು ಸಹಕರಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ-ಸಮಾಜ ಸೇವಕರುಗಳಾದ ಗೋಪಾಲ್‌ಕೃಷ್ಣ ಗಾಣಿಗ, ರಾಜೇಶ್ ಶೆಟ್ಟಿ ಕಾಪು, ಯೋಗೀಂದ್ರ ಗಾಣಿಗ, ಮಹೇಶ್ ಪೂಜಾರಿ ಅವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಚಿಣ್ಣರ ಬಿಂಬದ ವಿಜಯ ಕೋಟ್ಯಾನ್, ಜಗದೀಶ್ ರಾವ್, ಸಚ್ಚಿದಾನಂದ ಶೆಟ್ಟಿ, ಸುಮಿತ್ರಾ ದೇವಾಡಿಗ, ವಲಯದ ಮುಖ್ಯಸ್ಥೆ ವಿನಯ ಶೆಟ್ಟಿ, ಶಿಬಿರದ ಮುಖ್ಯಸ್ಥೆ ಸುಕನ್ಯಾ ಶೆಟ್ಟಿ ಉಪಸ್ಥಿತರಿದ್ದರು. ಅತಿಥಿ-ಗಣ್ಯರುಗಳನ್ನು ಚಿಣ್ಣರ ಬಿಂಬದ ಮಕ್ಕಳು ಗೌರವಿಸಿದರು.
ಮೀರಾರೋಡ್ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ದನ ಭಟ್ ಅವರು ಆಶೀರ್ವಚನ ನೀಡಿ ಮಕ್ಕಳಿಗೆ ಶುಭಹಾರೈಸಿದರು. ಅತಿಥಿಗಳು ಚಿಣ್ಣರ ಪ್ರತಿಭೆಯನ್ನು ಶ್ಲಾಘಿಸಿದರು. ಮೀರಾ-ಡಹಾಣು ಬಂಟ್ಸ್ ಇದರ ಮೀರಾ-ಭಾಯಂದರ್ ವಲಯದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು ಅವರು ಮಾತನಾಡಿ, ಚಿಣ್ಣರ ಬಿಂಬದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಮೂಲ ಕಾರಣ ಚಿಣ್ಣರ ಬಿಂಬವಾಗಿದೆ. ಮಕ್ಕಳಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಇದೊಂದು ಸೂಕ್ತವಾದ ವೇದಿಕೆಯಾಗಿದೆ. ಚಿಣ್ಣರ ಬಿಂಬದ ಮಕ್ಕಳಿಗೆ ನನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಸಚ್ಚಿದಾನಂದ ಶೆಟ್ಟಿ ಅವರು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ನೋಡಿ ಸಂತೋಷವಾಯಿತು. ಇದಕ್ಕೆ ಪ್ರಕಾಶ್ ಭಂಡಾರಿ ಮತ್ತು ಅವರ ತಂಡದವರು ಕಾರಣ. ದೃಢ ನಿರ್ಧಾರ ಮಾಡಿದರೆ ಏನನ್ನೂ ಸಾಧಿಸಲು ಸಾಧ್ಯ ಎನ್ನುವುದನ್ನು ಚಿಣ್ಣರ ಬಿಂಬ ಸಂಸ್ಥೆ ಮಾಡಿ ತೋರಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪದವಿಯನ್ನು ಪಡೆದ ಚಿಣ್ಣರ ಬಿಂಬದ ರೂವಾರಿಗಳಲ್ಲಿ ಒಬ್ಬರಾದ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಅವರನ್ನು ಮೀರಾರೋಡ್ ಶಿಬಿರದ ಪರವಾಗಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಡಾ| ಸುರೇಂದ್ರ ಕುಮಾರ್ ಹೆಗ್ಡೆ ಅವರು, ಚಿಣ್ಣರ ಬಿಂಬ ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗುವಂತೆ ಜೀವನದ ಮೌಲ್ಯಗಳನ್ನು ಎಳವೆಯಲ್ಲಿ ತಿಳಿಸಿಕೊಡುವ ಏಕೈಕ ಸಂಸ್ಥೆಯಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ವಾಲುವ ಮಕ್ಕಳಿಗೆ ಚಿಣ್ಣರ ಬಿಂಬದ ಸಮವಸ್ತÅ ಒಂದು ಮಾದರಿಯಾಗಿದೆ. ಕನ್ನಡದ ಅಕ್ಷರದ ಉಚ್ಚಾರವನ್ನು ಹೇಗೆ ಮಾಡಬೇಕು ಎಂಬ ವಿಷಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಶಿಬಿರದ ಮಕ್ಕಳನ್ನು ಗೌರವಿಸಲಾಯಿತು. ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನಿತ್ತು ಅಭಿನಂದಿಸ ಲಾಯಿತು. ತೀರ್ಪುಗಾರರನ್ನು ಚಿಣ್ಣರ ಬಿಂಬದ ಮಕ್ಕಳು ಗೌರವಿಸಿದರು.
ಶಿಬಿರದ ವಿದ್ಯಾರ್ಥಿಗಳಾದ ಪ್ರತೀಕ್ಷಾ ಶೆಟ್ಟಿ, ದೀಕ್ಷಿತಾ ಕೊಠಾರಿ ಕಾರ್ಯಕ್ರಮ ನಿರ್ವಹಿಸಿದರು. ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಉಪ ಸ್ಥಿತರಿದ್ದರು. ಶಾಂತಾ ಆಚಾರ್ಯ, ಆಶಾಲತಾ ಕೊಠಾರಿ, ಸುಜಾತಾ ಶೆಟ್ಟಿ, ಪೂರ್ಣಿಮಾ ಪೂಜಾರಿ, ಸುಲೋಚನಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ರೂಪಾರೇಖಾ ನಾಯಕ್, ಸುಪ್ರೀತಾ ಶೆಟ್ಟಿ, ದೀಕ್ಷಾ ಶೆಟ್ಟಿ, ಶಶಿಕಲಾ ಶೆಟ್ಟಿ, ಲಕ್ಷ್ಮೀ ಶೆಟ್ಟಿ, ಶರ್ಮಿಳಾ ಶೆಟ್ಟಿ, ಸುಪ್ರೀತಾ ಸಾಲ್ಯಾನ್, ಸುರೇಶ್ ಕೊಠಾರಿ, ಗುಣಕಾಂತ್ ಕರ್ಜೆ ಮೊದ ಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಿಬಿರದ ಮುಖ್ಯಸ್ಥೆ ಸುಕನ್ಯಾ ಶೆಟ್ಟಿ ವಂದಿಸಿದರು. ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.