ಯುವ ಜನತೆಯಿಂದ ಸಮುದಾಯದ ಸುಭದ್ರತೆ ಸಾಧ್ಯ : ಸುಂದರ್‌


Team Udayavani, Dec 27, 2019, 6:55 PM IST

mumbai-tdy-1

ಮುಂಬಯಿ, ಡಿ. 26: ವಯಸ್ಸಿನ ಮಟ್ಟ ನೋಡುವುದಾದರೆ ಭಂಡಾರಿ ಸೇವಾ ಸಮಿತಿ ಸದ್ಯ ಅಜ್ಜನಾಗಿ ಬೆಳೆದಂತಿದೆ. 66 ವರ್ಷದ ಈ ಸಂಸ್ಥೆ ಬೆಳೆದು ಪ್ರತಿಷ್ಠಿತ, ಹೆಸರಾಂತ ಸಂಸ್ಥೆಯಾಗಿ ಮಾನ್ಯತೆಗೆ ಪಾತ್ರವಾಗಿರುವುದು ಅಭಿನಂದನೀಯ. ಆದರೆ ಮುನ್ನಡೆಸಿ ಬೆಳೆಸಲು ಇದೀಗ ಮೊಮ್ಮಕ್ಕಳೇ ಮಾಯಾವಾಗುತ್ತಿರುವುದು ವಿಷಾದನೀಯ.

ಸಂಸ್ಥೆಯನ್ನು ಭಾವೀ ಜನಾಂಗಕ್ಕೆ ಮುನ್ನಡೆಸಲು ಯುವಜನತೆಯ ಆವಶ್ಯಕತೆಯಿದೆ. ಆರೋಗ್ಯ ಮತ್ತು ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ನಮ್ಮ ಹಿರಿಯರು ಈ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಅವರ ದೂರದೃಷ್ಟಿತ್ವದ ಆರೋಗ್ಯನಿಧಿ ಮತ್ತು ವಿದ್ಯಾನಿಧಿಯನ್ನು ನಾವು ಸುಭದ್ರಗೊಳಿಸಿ ಯುವಜನತೆಯನ್ನು ಪ್ರೇರೆಪಿಸಬೇಕು. ಈ ಅಗತ್ಯಗಳನ್ನು ಮೊದಲಾಗಿ ನಾವು ರೂಪಿಸಬೇಕು. ಹಣದ ಕೊರತೆಯಿಂದ ನಮ್ಮವರು ಶಿಕ್ಷಣದಿಂದ ವಂಚಿತರಾಗಬಾರದು. ಆದುದರಿಂದ ಯುವಜನತೆಯೂ ನಮ್ಮದೇ ಆದ ವಂಶಪಾರಂಪರ್ಯ ಕುಲಕಸುಬನ್ನು ಅವಲಂಬಿಸಿ ಕುಲವೃತ್ತಿಗೆ ಒತ್ತುನೀಡಬೇಕು ಎಂದು ಭಂಡಾರಿ ಆ್ಯಂಡ್‌ ಭಂಡಾರಿ ಅಡ್ವೊಕೇಟ್‌ ಸಾಲಿಸಿಟರ್ ನ ಮುಖ್ಯಸ್ಥ ಮತ್ತು ಭಂಡಾರಿ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ನ್ಯಾಯವಾದಿ ಸುಂದರ್‌ ಜಿ. ಭಂಡಾರಿ ತಿಳಿಸಿದರು.

ಡಿ. 25ರಂದು ಮುಲುಂಡ್‌ ಪಶ್ಚಿಮದ ಶ್ರೀ ಕುಛ್ ದೇಶಿಯಾ ಸರಸ್ವತಿ ಸಂಸ್ಥಾನ್‌ ಟ್ರಸ್ಟ್‌ ಸಭಾಗೃಹದಲ್ಲಿ ನಡೆದ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ವಾರ್ಷಿಕ ಸ್ನೇಹಸಮ್ಮಿಲನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಶುಭಹಾರೈಸಿದರು. ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಆರ್‌. ಎಂ. ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಗಳ ಸಮುದಾಯದ ಅಸ್ಮಿತೆಯನ್ನು ಪ್ರದರ್ಶಿಸುವ ಕೇಂದ್ರಗಳಾಗಿದ್ದು ಸಂಸ್ಥೆಗಳಲ್ಲಿ ಸಕ್ರೀಯರಾದಾಗ ನಮ್ಮ ಸಮಾಜವು ತನ್ನಷ್ಟಕ್ಕೆನೇ ಬೆಳೆಯುತ್ತದೆ. ಈ ಮೂಲಕ ನಮ್ಮತನ, ನಮ್ಮ ಆಚಾರ ವಿಚಾರ, ಸಂಸ್ಕೃತಿಗಳ ಜೊತೆಗೆ ನಮ್ಮಲ್ಲಿನ ಪ್ರತಿಭೆಗಳು ಗುರುತಿಸಲ್ಪಡುತ್ತವೆ. ಆದುದರಿಂದ ಎಲ್ಲರೂ ಸಹೋದರತ್ವದ ಬಾಂಧವ್ಯ ವನ್ನು ಮೈಗೂಡಿಸಿ ಸಾಂಘಿಕತೆಯಿಂದಮುನ್ನಡೆಯೋಣ ಎಂದು ನುಡಿದರು.

ಸಮಾರಂಭದಲ್ಲಿ ಕ್ಯಾಬಿನೆಟ್‌ ಸಿಸ್ಟಮ್ಸ್‌ ಆ್ಯಂಡ್‌ ಕಂಟ್ರೋಲ್ಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಮತ್ತು ಭಂಡಾರಿ ಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಪುತ್ತೂರು ಪುಣೆ, ಹೆಸರಾಂತ ಸಮಾಜ ಸೇವಕ ಹೆಬ್ರಿ ರಮೇಶ್‌ ಭಂಡಾರಿ ಕಲ್ಯಾಣ್‌, ಕರ್ನಾಟಕ ಬ್ಯಾಂಕ್‌ನ ಹಿರಿಯಪ್ರಬಂಧಕ ಸದಾನಂದ ಕುಮಾರ್‌ ಬೆಂಗಳೂರು ಮತ್ತು ಚಲನಚಿತ್ರ ನಟ ಸೌರಭ್‌ ಎಸ್‌. ಭಂಡಾರಿ ಕಡಂದಲೆ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸಮಿತಿಯ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಶೇಖರ್‌ ಎಸ್‌. ಭಂಡಾರಿ, ಗೌರವ ಕೋಶಾಧಿಕಾರಿ ಕರುಣಾಕರ ಎಸ್‌.ಭಂಡಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಆರ್‌. ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶಿವಾಸ್‌ ಹೇರ್‌ ಡಿಜೈನರ್‌ ಪ್ರೈವೇಟ್‌ ಲಿಮಿಟೆಡ್‌ನ‌ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ. ಭಂಡಾರಿ ಅವರ”ಸ್ಟೈಲಿಂಗ್‌ ಅಟ್‌ ದ ಟಾಪ್‌’ ಕನ್ನಡ ಕೃತಿಯನ್ನು ಸುಂದರ್‌ ಭಂಡಾರಿ ಬಿಡುಗಡೆಗೊಳಿಸಿದರು.

ಸಮಾರಂಭದಲ್ಲಿ ಯುವ ವಿಭಾಗದ ಮುಖ್ಯಸ್ಥ ನಿಶಾಂತ್‌ ಹರಿ ಭಂಡಾರಿ ರಚಿಸಿದ ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ವೆಬ್‌ ಸೈಟ್‌ ಮತ್ತು ಭಂಡಾರಿ ಸೇವಾ ಸಮಿತಿ ಮುಂಬಯಿ ಯುವ ವಿಭಾಗಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಸ್ವಸಮಾಜದ ಮಹಾನೀಯರಾದ ಡಾ| ಶಿವರಾಮ ಕೆ. ಭಂಡಾರಿ ಮತ್ತು ಅನುಶ್ರೀ ಶಿವರಾಮ್‌, ಜಯ ಪಿ. ಭಂಡಾರಿ ಮತ್ತು ಶಶಿ ಭಂಡಾರಿ ದಹಿಸರ್‌ ದಂಪತಿಗಳನ್ನು, ಕೇಶವ ಟಿ. ಭಂಡಾರಿ ಅವರನ್ನು ಅತಿಥಿಗಳು ಸಮ್ಮಾನಿಸಿದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ, ಪ್ರತಿಭಾ ಪುರಸ್ಕಾರಗಳನ್ನು ಹಾಗೂ ದಿ| ಮಹಾಲಿಂಗ ಭಂಡಾರಿ ಮತ್ತು ದಿ| ಸುಶೀಲಾ ಅಚಣ್ಣ ಭಂಡಾರಿ ಸ್ಮಾರಣಾರ್ಥ ಸುಲೋಚನಾ ಬಾಲಕೃಷ್ಣ ಪ್ರಾಯೋಜಕತ್ವದವಿದ್ಯಾರ್ಥಿ ವೇತನವನ್ನು ಪ್ರದಾನಿಸಿ ಅಭಿನಂದಿಸಲಾಯಿತು.

ಸಮಿತಿಯ ಉಪಾಧ್ಯಕ್ಷ ಪುರುಷೋತ್ತಮ ಜಿ. ಭಂಡಾರಿ, ಜೊತೆ ಕಾರ್ಯದರ್ಶಿಗಳಾದ ನ್ಯಾಯವಾದಿ ಶಾಂತರಾಜ್‌ ಡಿ. ಭಂಡಾ ರಿ ಮತ್ತು ರಂಜಿತ್‌ ಎಸ್‌. ಭಂಡಾರಿ, ಜೊತೆ ಕೋಶಾಧಿಕಾರಿಗಳಾದ ಪ್ರಕಾಶ್‌ ಕೆ. ಭಂಡಾರಿ ಮತ್ತು ಸುಭಾಷ್‌ ಜಿ. ಭಂಡಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ. ಭಂಡಾರಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಪಿ.ಭಂಡಾರಿ, ಮಾಜಿ ಕಾರ್ಯಾಧ್ಯಕ್ಷೆಯರಾದ ರುಕ್ಮಿಣಿ ಭಂಡಾರಿ, ಲಲಿತಾ ವಿ. ಭಂಡಾರಿ, ಶೋಭಾ ಸುರೇಶ್‌ ಭಂಡಾರಿ, ವಿಶ್ವನಾಥ ಭಂಡಾರಿ, ಗಂಗಾಧರ ಭಂಡಾರಿ ದುಬೈ, ನಾರಾಯಣ ಭಂಡಾರಿ ಥಾಣೆ, ರಾಕೇಶ್‌ ಭಂಡಾರಿ, ಸಂತೋಷ್‌ ಭಂಡಾರಿ, ಶಾಲಿನಿ ರಮೇಶ್‌ ಭಂಡಾರಿ, ಕುತ್ಪಾಡಿ ರಾಮಚಂದ್ರ ಎಂ. ಗಾಣಿಗ, ಸಮಿತಿಯ ಇತರ ಪದಾಧಿಕಾರಿಗಳು, ಸದಸ್ಯರು, ಅಪಾರ ಸಂಖ್ಯೆಯ ಭಂಡಾರಿ ಬಾಂಧವರು ಹಾಜರಿದ್ದರು. ಪ್ರಾರಂಭದಲ್ಲಿ ಶ್ರೀ ಕಚ್ಚಾರು ನಾಗೇಶ್ವರ ದೇವರನ್ನು ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸದಸ್ಯರ ಭಜನೆಯೊಂದಿಗೆ ದಿನಪೂರ್ತಿಯಾಗಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಸಮಿತಿಯ ಪರಿವಾರದಿಂದ ವಿವಿಧ ವಿನೋದಾವಳಿ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು. ಸಚಿನ್‌ ಭಂಡಾರಿ ಅವರಿಂದ “ನಮ್ಮ ಊರು’ ವಿಶೇಷ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಜಯಶೀಲ ಯು. ಭಂಡಾರಿ ಬಳಗದಿಂದ “ಸುಂದರ ರಾವಣ’ಯಕ್ಷಗಾನ ಪ್ರದರ್ಶನಗೊಂಡಿತು.

ಕು| ಗಾಯತ್ರಿ ಎನ್‌. ಭಂಡಾರಿ ಪ್ರಾರ್ಥನೆಗೈದರು. ಸಮಿತಿಯ ಉಪಾಧ್ಯಕ್ಷ ಪ್ರಭಾಕರ್‌ ಪಿ. ಭಂಡಾರಿ ಸ್ವಾಗತಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಜಯಸುಧಾ ಟಿ. ಭಂಡಾರಿ, ಪಲ್ಲವಿ ರಂಜಿತ್‌ ಭಂಡಾರಿ ಅವರು ಅತಿಥಿಗಳನ್ನು ಮತ್ತು ಶಿಲ್ಪಾಭಂಡಾರಿ, ಕಾರ್ತಿಕ್‌ ಭಂಡಾರಿ ಸಮ್ಮಾನಿತರನ್ನು ಪರಿಚಯಿಸಿದರು. ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಶಶಿಧರ ಡಿ. ಭಂಡಾರಿ ಪ್ರಸ್ತಾವಿಕ ನುಡಿಗಳನ್ನಾಡಿ, ಸಮ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ದರು. ಕು| ಕ್ಷಮಾ ಆರ್‌. ಭಂಡಾರಿ, ಕು| ಶ್ರೇಯಲ್‌ ಯು. ಭಂಡಾರಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಭಂಡಾರಿ ವಂದಿಸಿದರು.

 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.