Udayavni Special

ದಿ| ಬಾಳಾ ಸಾಹೇಬ್‌ ಠಾಕ್ರೆ ಸಮೃದ್ಧಿ ಹೆದ್ದಾರಿ ನಿರ್ಮಾಣ ಕಾರ್ಯವು ರಾಜ್ಯಕ್ಕೆ ಹೆಮ್ಮೆ


Team Udayavani, Dec 6, 2020, 8:06 PM IST

ದಿ| ಬಾಳಾ ಸಾಹೇಬ್‌ ಠಾಕ್ರೆ ಸಮೃದ್ಧಿ ಹೆದ್ದಾರಿ ನಿರ್ಮಾಣ ಕಾರ್ಯವು ರಾಜ್ಯಕ್ಕೆ ಹೆಮ್ಮೆ

ಅಮರಾವತಿ, ಡಿ. 5: ಹಿಂದೂ ಹೃದಯ ಸಾಮ್ರಾಟ ದಿ| ಬಾಳಾಸಾಹೇಬ್‌ ಠಾಕ್ರೆ ಸಮೃದ್ಧಿ ಹೆದ್ದಾರಿ ನಿರ್ಮಾಣ ಕಾರ್ಯವು ಮಹಾ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಹೆದ್ದಾರಿ ಕಾಮಗಾರಿಯ ಗುಣಮಟ್ಟ ತುಂಬಾ ಉತ್ತಮ ವಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿ ದ್ದಾರೆ. ಅಮರಾವತಿ ಮತ್ತು ಔರಂಗಾ ಬಾದ್‌ನಲ್ಲಿ ಸಮೃದ್ಧಿ  ಹೆದ್ದಾರಿಯ ಕಾರ್ಯ ವೈಖರಿ ಯನ್ನು ಪರಿಶೀಲಿಸಲು ಮುಖ್ಯ ಮಂತ್ರಿಉದ್ಧವ್‌ ಠಾಕ್ರೆ ಇಂದು ಭೇಟಿ ನೀಡಿದ್ದಾರೆ.

ಸಮೃದ್ಧಿ ಹೆದ್ದಾರಿ ಯನ್ನು ಪರಿಶೀಲಿಸಿದ ಅನಂತರ ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ಮಾತ ನಾಡಿ, ಸಮೃದ್ಧಿ ಹೆದ್ದಾರಿ ಯ ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ. 2021 ಮೇ 1 ರೊಳಗೆ ಸಮೃದ್ಧ ಹೆದ್ದಾರಿ ಯ ನಾಗಪುರದಿಂದ ಶಿರಡಿ ಹಂತವನ್ನು ಪ್ರಾರಂಭಿಸಲಾಗುವುದು, ಆದರೆ ಶಿರಡಿಯಿಂದ ಮುಂಬಯಿ ನಡುವಿನ ಪ್ರಯಾಣವನ್ನು ಮೇ 1 ರೊಳಗೆ ಪ್ರಾರಂಭವಾಗಲಿದೆ. ಲಾಕ್‌ ಡೌನ್‌ ಅವಧಿಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಕೆಲಸವು ವಿಳಂಭಗೊಳ್ಳುವುದು ಎನ್ನುವ ಭಯ ವಿತ್ತು. ಆದರೆ ರಸ್ತೆ ನಿರ್ಮಾಣದ ಕಾರ್ಯ ನಿಧಾನ ವಾ ಗಲಿಲ್ಲ. ಕೆಲಸದ ಗುಣಮಟ್ಟ ತುಂಬಾ ಚೆನ್ನಾ ಗಿದ್ದು, ರಾಜ್ಯವು ಹೆಮ್ಮೆಪಡುವ ಕೆಲಸ ನಡೆ ಯು ತ್ತಿದೆ ಎಂದು ಅವರು ಹೇಳಿದ್ದಾರೆ.

ನಾಗಪುರದಿಂದ ಮುಂಬಯಿ ನಡುವಿನ 701 ಕಿ. ಮೀ ಮಾರ್ಗಗಳಲ್ಲಿ 101 ಕಿ.ಮೀ ರಸ್ತೆ ನಾಸಿಕ್‌ ಜಿಲ್ಲೆಯ ಇಗತ್ಪುರಿ ಮತ್ತು ಸಿನ್ನಾರ್‌ ಈ ಎರಡು ತಾಲೂಕುಗಳಲ್ಲಿಯ 49 ಹಳ್ಳಿಗಳ ಮೂಲಕ ಹಾದುಹೋಗುತ್ತದೆ. ಇದರಲ್ಲಿ ಇಗತುಯ 23 ಗ್ರಾಮಗಳು ಮತ್ತು ಸಿನ್ನಾರ್‌ದಲ್ಲಿಯ 26 ಗ್ರಾಮಗಳನ್ನು ಒಳಗೊಂಡಿದೆ. ದಿ| ಬಾಳಾ ಸಾಹೇಬ್‌ ಠಾಕ್ರೆ ಸಮೃದ್ಧಿ ಹೆದ್ದಾರಿ ಎಂದು ಕರೆಯಲ್ಪಡುವ ಸಮೃದ್ದಿ ಮಹಾ ಮಾರ್ಗದ ಅಭಿವೃದ್ಧಿಗೆ ನಾಸಿಕ್‌ ಪ್ರಮುಖ ಕೊಡುಗೆ ಯಾ ಗಿದೆ. ಮೊದಲ ಹಂತದಲ್ಲಿ ನಾಸಿಕ್‌ ಯಿಂದ ಶಿರಡಿ ಮತ್ತು ಎರಡನೇ ಹಂತದಲ್ಲಿ ಶಿರಡಿ ಯಿಂದ ಮುಂಬಯಿವರೆಗೆ ಪ್ರಯಾಣಕ್ಕಾಗಿ ರಸ್ತೆ ತೆರೆಯಲಾಗುವುದು ಎಂದು ಸಿಎಂ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ಸಮೃದ್ಧಿ ಹೆದ್ದಾರಿ ಯು ಥಾಣೆ ಜಿಲ್ಲೆಯ ಪಾಡ್ಫಾ ಗ್ರಾಮದಿಂದ ಪ್ರಾರಂಭವಾಗುತ್ತದೆ. ಈ ಹೆದ್ದಾರಿ ಶಹಾಪುರ ತಾಲೂಕು ಮೂಲಕ ಹಾದುಹೋಗುತ್ತದೆ. ಕಳೆದ 1 ರಿಂದ 2 ವರ್ಷಗಳಿಂದ ಈ ಶಹಾಪುರ ತಾಲೂಕಿನಲ್ಲಿ ಹೆದ್ದಾರಿ ಗಳನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ. ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪರಿಣಾಮವಾಗಿ, ಕೆಲಸವು ಭರದಿಂದ ಸಾಗಿದೆ. ಜಮೀನು ಸಪಾಟುಗೊಳಿಸುವ ಮೂಲಕ, ಭರ್ತಿ ಮಾಡುವ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಅಂಡರ್‌ಪಾಸ್‌ಗಳನ್ನು ನಿರ್ಮಿಸಲು, ಬೆಟ್ಟಗಳನ್ನು ಒಡೆಯುವ ಮತ್ತು ಜಿಲ್ಲೆ ಮತ್ತು ಮಹಾರಾಷ್ಟ್ರದ ಪ್ರಗತಿಯನ್ನು ಖಚಿತಪಡಿಸುವುದು ಅವರ ಉದ್ದೇಶವಾಗಿತ್ತು. ಸುರಂಗ ಮಾರ್ಗ ನಿರ್ಮಿಸುವ ಕೆಲಸವೂ ನಡೆಯುತ್ತಿದೆ. ಸಮೃದ್ಧಿ ಮಹಾಮಾರ್ಗದ ಮೂಲಕ ಮಹಾರಾಷ್ಟ್ರದ ಪ್ರಗತಿಯನ್ನು ಖಚಿತಪಡಿಸುವ ಉದ್ದೇಶದಿಂದ ಎಲ್ಲ ರೈತರು ತಮ್ಮ ಜಮೀನುಗಳನ್ನು ರಾಜ್ಯ ಸರಕಾರಕ್ಕೆ ದಾನ ಮಾಡಿದರು. ಇದರ ಹೊರತಾಗಿಯೂ, ಈ ಗ್ರಾಮಗಳ ಅನೇಕ ರೈತರು ತಮ್ಮ ಜಮೀನಿಗೆ ಪರಿಹಾರ ಪಡೆಯುವುದರಿಂದ ವಂಚಿತರಾಗಿದ್ದಾರೆ. ಇದಕ್ಕಾಗಿ, ರೈತರು ತಲಾಟಿಯಿಂದ ಹಿಡಿದು ಕಲೆಕ್ಟರೇಟ್‌ ವರೆಗೆ ಹಲವು ವರ್ಷಗಳಿಂದ ಮತ್ತು ಸಚಿವಾಲಯದ ಅನೇಕ ಅಧಿಕಾರಿಗಳು ನಿರಂತರ ಪತ್ರವ್ಯವಹಾರ ನಡೆಸುತ್ತಿದ್ದಾರೆ. ಆದರೂ ಈ ರೈತರಿಗೆ ಯಾರೂ ಸಹಾಯ ಮಾಡುವುದಿಲ್ಲ. ಈ ಎಲ್ಲ ಬಡ ದುಡಿಯುವ ರೈತರಿಗೆ ಆದಾಯದ ಮಾರ್ಗವಿಲ್ಲದ ಕಾರಣ ಸರಕಾರದ ಸಹಾಯಕ್ಕಾಗಿ ಕಾಯಬೇಕಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

bengalore

LIVE Update: ರಾಜ್ಯಾದ್ಯಂತ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ

Watch Live; ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ವಿಧ್ಯುಕ್ತ ಚಾಲನೆ

ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ವಿಧ್ಯುಕ್ತ ಚಾಲನೆ

Chalane

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ವಿತರಣೆಗೆ ಚಾಲನೆ

madhuswamy-23

ಬೆಳ್ತಂಗಡಿಗೆ ಆಗಮಿಸಿದ ಸಚಿವ ಮಾಧು ಸ್ವಾಮಿ: ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಲೋಕಾರ್ಪಣೆ

koppala

ಕುಷ್ಟಗಿಯ ಇಬ್ಬರು ಮಟ್ಕಾ, ಜೂಜುಕೋರರ 6 ತಿಂಗಳ ಗಡಿಪಾರು

whatsapp

ನೂತನ ನಿಯಮ ಗೊಂದಲ: ಅಪ್ ಡೇಟ್ ಮುಂದೂಡಿ ಮಹತ್ವದ ನಿರ್ಧಾರ ಕೈಗೊಂಡ ವಾಟ್ಸಾಪ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok’s golden choice as vice president

ಮೊಗವೀರ ವ್ಯವಸಾಪಕ ಮಂಡಳಿ: ಉಪಾಧ್ಯಕರಾಗಿ ಅಶೋಕ್‌ ಸುವರ್ಣ ಆಯ್ಕೆ

Kannadiga Durgappa Kotiyawar Awarded Outstanding Teacher Award -2020

ಕನ್ನಡಿಗ ದುರ್ಗ‍ಪ್ಪ ಕೋಟಿಯವರ್‌ ಅವರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ-2020 ಪ್ರಶಸ್ತಿ ಪ್ರಧಾನ

26th Annual Sri Ayyappa Mahapooja

26ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಸಂಪನ್ನ

shabharimala

ಶಬರಿಮಲೆ ಕ್ಷೇತ್ರ ಎಲ್ಲಾ ಧರ್ಮೀಯರ ಭಕ್ತಿಯ ತಾಣ: ರಾಮಣ್ಣ ದೇವಾಡಿಗ

Cricket tournament

ಕ್ರಿಕೆಟ್‌ ಪಂದ್ಯಾಟ: ಸಾಧಕ ಕ್ರೀಡಾಳುಗಳಿಗೆ ಗೌರವ

MUST WATCH

udayavani youtube

ಪಾಕ್ ಪರ ಘೋಷಣೆ ವಿಚಾರ: ಮಂಗಳೂರಿನಲ್ಲಿ ಎಸ್‌ಡಿಪಿಐನಿಂದ ‘SP ಕಚೇರಿ ಚಲೋ’ ಪ್ರತಿಭಟನೆ

udayavani youtube

ದಕ್ಷಿಣಕನ್ನಡ ಜಿಲ್ಲೆಯ 6 ಕೇಂದ್ರಗಳಲ್ಲಿ ನಾಳೆಯಿಂದ ಲಸಿಕೆ ವಿತರಣೆ: ಡಾ. ಕೆ.ವಿ. ರಾಜೇಂದ್ರ

udayavani youtube

ಸಚಿವ ಸಂಪುಟ ಅಸಮಾಧಾನ: ಮಾರ್ಗದಲ್ಲಿ ನಿಂತು ಅಪಸ್ವರ ತೆಗೆಯೋ ಅವಶ್ಯಕತೆ ಇಲ್ಲ ಎಂದ ನಳಿನ್

udayavani youtube

ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani

udayavani youtube

ಭಾರತ ಆತ್ಮನಿರ್ಭರವಾಗಲು ಗ್ರಾಹಕರು ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಬೇಕು

ಹೊಸ ಸೇರ್ಪಡೆ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

bengalore

LIVE Update: ರಾಜ್ಯಾದ್ಯಂತ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಚಾಲನೆ

Watch Live; ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ವಿಧ್ಯುಕ್ತ ಚಾಲನೆ

ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ವಿಧ್ಯುಕ್ತ ಚಾಲನೆ

Chalane

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ವಿತರಣೆಗೆ ಚಾಲನೆ

madhuswamy-23

ಬೆಳ್ತಂಗಡಿಗೆ ಆಗಮಿಸಿದ ಸಚಿವ ಮಾಧು ಸ್ವಾಮಿ: ವಿವಿಧ ಕಾಮಗಾರಿ ಶಿಲಾನ್ಯಾಸ ಹಾಗೂ ಲೋಕಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.