Udayavni Special

ನಾಲ್ಕು ಹೊಸ ಜಂಬೋ ಆಸ್ಪತ್ರೆಗಳ ನಿರ್ಮಾಣ: ಬಿಎಂಸಿ


Team Udayavani, Jun 5, 2021, 1:01 PM IST

Construction of four new jumbo hospitals

ಮುಂಬಯಿ,: ಕೊರೊನಾದ ಮೂರನೇ ಅಲೆಯನ್ನು ನಿಭಾಯಿಸಲು ನಾಲ್ಕು ಹೊಸ ಜಂಬೋ ಆಸ್ಪತ್ರೆಗಳನ್ನು ನಿರ್ಮಿಸುವುದರೊಂದಿಗೆ ಇದನ್ನು ಒಂದು ವರ್ಷಕ್ಕೂ ಹೆಚ್ಚು ಕಾಲ ಇರಿಸಿಕೊಳ್ಳಲಾಗುವುದು ಮತ್ತು ಈ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಕನಿಷ್ಠ 50 ಹಾಸಿಗೆಗಳನ್ನು ಮೀಸಲಿಡಲಾಗುವುದು ಎಂದು ಮುಂಬಯಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ತಿಳಿಸಿದ್ದಾರೆ.

ಮುಂಬಯಿಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಂಭಾವ್ಯ ಮೂರನೇ ಅಲೆಯನ್ನು ನಿಭಾಯಿಸಲು ಜಂಬೋ ಆಸ್ಪತ್ರೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಬಲಪಡಿಸುವ ಕೆಲಸವನ್ನು ಪುರಸಭೆ ಕೈಗೊಂಡಿದೆ. ಪ್ರಸ್ತುತ ಎಂಟು ಜಂಬೊ ಕೊರೊನಾ ಆಸ್ಪತ್ರೆಗಳಲ್ಲಿ 10,830 ಹಾಸಿಗೆಗಳಿವೆ. ಇದರಲ್ಲಿ ತೀವ್ರ ನಿಗಾ ಘಟಕದ 872 ಹಾಸಿಗೆ ಮತ್ತು ವೆಂಟಿಲೇಟರ್‌ ಸೌಲಭ್ಯವಿರುವ 574 ಹಾಸಿಗೆಗಳನ್ನು ಹೊಂದಿದೆ.

ಈ ಜಂಬೊ ಆಸ್ಪತ್ರೆಗಳನ್ನು ಸುಮಾರು ಆರು ತಿಂಗಳ ಅವಧಿಗೆ ಸ್ಥಾಪಿಸಲಾಯಿತು. ಇತ್ತೀಚೆಗಿನ ಚಂಡಮಾರುತಗಳ ಬಳಿಕ ಈ ಎಲ್ಲ ಎಂಟು ಜಂಬೊ ಕೊರೊನಾ ಆಸ್ಪತ್ರೆಗಳು ರಚನಾತ್ಮಕ ಲೆಕ್ಕಪರಿಶೋಧನೆ ಮತ್ತು ಅಗ್ನಿಶಾಮಕ ಲೆಕ್ಕಪರಿಶೋಧನೆಗೆ ಬಳಪಡಿಸಲಾಗುತ್ತಿದೆ. ಇವುಗಳಲ್ಲಿ ಬಿಕೆಸಿ, ನೆಸ್ಕೊ ಹಂತ ಒಂದು ಮತ್ತು ಎರಡು, ದಹಿಸಾರ್‌ ಎರಡು, ನೆಸ್ಕೊ, ಡೊಮ…, ಮುಲುಂಡ್‌ ಮತ್ತು ಸೆವೆನ್‌ ಹಿಲ್ಸ್ ಸೇರಿವೆ.ಮಕ್ಕಳಿಗೆ ಪ್ರತ್ಯೇಕ ವಿಭಾಗಮಲಾಡ್‌, ಕಾಂಜುರ್‌ಮಾರ್ಗ, ಸಯಾನ್‌ ಮಹಾಲಕ್ಷ್ಮೀಗಳಲ್ಲಿ ಹೊಸ ಜಂಬೋ ಆಸ್ಪತ್ರೆಗಳನ್ನು ಸ್ಥಾಪಿಸಲಾಗುತ್ತಿದ್ದು, ತೀವ್ರ ನಿಗಾ ಘಟಕಕ್ಕೆ ಶೇ. 70ರಷ್ಟು ಆಮ್ಲಜನಕ ಹಾಸಿಗೆಗಳನ್ನು ಕಾಯ್ದಿರಿಸಲಾಗುವುದು ಎಂದು ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ತಿಳಿಸಿದ್ದಾರೆ.

ಈ ಎಲ್ಲ ಸ್ಥಳಗಳಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗಗಳನ್ನು ಸ್ಥಾಪಿಸಲಾಗುವುದು. ಆರಂಭದಲ್ಲಿ 25ರಿಂದ 50 ಹಾಸಿಗೆಗಳನ್ನು ಇಲ್ಲಿ ಒದಗಿಸಲಾಗುವುದು. ಈ ಮಕ್ಕಳಿಗೆ ಅಗತ್ಯವಾದ ಉಪಕರಣಗಳನ್ನು ಖರೀದಿಸಲಾಗುವುದು. ಅಗತ್ಯವಿದ್ದರೆ ಈ ಸ್ಥಳದಲ್ಲಿ 250 ಹಾಸಿಗೆಗಳನ್ನು ವ್ಯವಸ್ಥೆಗೊಳಿಸಬಹುದು ಎಂದು ಹೇಳಿದರು.

ಇಲಾಖಾವಾರು ಸಭೆ3ನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗುವ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಜ್ಞರ ಹೇಳಿಕೆ ಯನ್ನು ಪರಿಗಣಿಸಿ, ನಾವು ಮುಂಬಯಿಯ 24ವಿಭಾಗಗಳಲ್ಲಿ ಮಕ್ಕಳ ವೈದ್ಯರು ಮತ್ತು ಇತರ ವೈದ್ಯರೊಂದಿಗೆ ಸಭೆ ಆರಂಭಿಸಿದ್ದೇವೆ. ಮಕ್ಕಳಿಗಾಗಿ ತಂಡವು ನೀಡಬೇಕಾದ ಸೂಚನೆಗಳು ಮತ್ತು ಚಿಕಿತ್ಸೆ ಯ ಬಗ್ಗೆ ಮುಂಬಯಿಯ ಎಲ್ಲ ಸಂಬಂಧಪಟ್ಟ ವೈದ್ಯರಿಗೆ ತಿಳಿಸಲಾಗುವುದು. ಮಕ್ಕಳ ತಜ್ಞರು ಮತ್ತು ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಇಲಾಖಾವಾರು ಸಭೆಗಳು ಪ್ರಾರಂಭವಾಗಿವೆ.

ಟಾಪ್ ನ್ಯೂಸ್

kgf

ಪ್ಲ್ಯಾನ್ ಬಿ ರೆಡಿ: ರಿಲೀಸ್‌ ಡೇಟ್‌ ಚರ್ಚೆಯಲ್ಲಿ ಸ್ಟಾರ್‌ ಸಿನಿಮಾ ನಿರ್ಮಾಪಕರು

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ದೆಹಲಿಗೆ ಹಾರಿದ ವಿಜಯೇಂದ್ರ: ಸಿಎಂ ಭೇಟಿಯಾದ ಭೂಪೇಂದ್ರ  ಯಾದವ್!’

ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ

ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesh

ಬೃಹತ್‌ ಗಣೇಶ ವಿಗ್ರಹಗಳಿಗೆ ಅನುಮತಿ: ಸಿಎಂಗೆ ಮನವಿ

ಗೋ-ಲೈವ್‌ ಆಫ್‌ ದಿ ಪ್ರಾಜೆಕ್ಟ್ ಇ-ಪಿಜಿಎಸ್‌ ಲೋಕಾರ್ಪಣೆ

ಗೋ-ಲೈವ್‌ ಆಫ್‌ ದಿ ಪ್ರಾಜೆಕ್ಟ್ ಇ-ಪಿಜಿಎಸ್‌ ಲೋಕಾರ್ಪಣೆ

anivasi kannadiga

ಶ್ರೇಷ್ಠತೆಗಾಗಿ ವಿವಿ ಶ್ರಮಿಸಲಿ: ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ

Free Covid Vaccine Camp

ಜಿಎಸ್‌ಬಿ ಸಭಾ ನವಿಮುಂಬಯಿ: ಉಚಿತ ಕೋವಿಡ್‌ ಲಸಿಕೆ ಶಿಬಿರ

Home construction

ಮನೆ ನಿರ್ಮಾಣಕ್ಕೆ ಸಹಾಯಹಸ್ತ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

kgf

ಪ್ಲ್ಯಾನ್ ಬಿ ರೆಡಿ: ರಿಲೀಸ್‌ ಡೇಟ್‌ ಚರ್ಚೆಯಲ್ಲಿ ಸ್ಟಾರ್‌ ಸಿನಿಮಾ ನಿರ್ಮಾಪಕರು

camera

ನಾಗರಹೊಳೆಯಲ್ಲಿ 8 ಟ್ರ್ಯಾಪಿಂಗ್ ಕ್ಯಾಮರಾ ಕಳ್ಳತನ

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.