ಕೋವಿಡ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ: ಕಿಶೋರಿ ಪೆಡ್ನೇಕರ್


Team Udayavani, Jul 25, 2020, 1:01 PM IST

ಕೋವಿಡ್ ವಿರುದ್ಧ ಗೆಲ್ಲುವ ವಿಶ್ವಾಸವಿದೆ: ಕಿಶೋರಿ ಪೆಡ್ನೇಕರ್

ಮುಂಬಯಿ, ಜು. 24: ನಾವು ಕೋವಿಡ್ ಸೋಂಕನ್ನು ಸೋಲಿಸುತ್ತೇವೆ ಎಂಬ ವಿಶ್ವಾಸವಿದೆ. ಅದಕ್ಕಾಗಿ ಮಿಷನ್‌ ಝೀರೋ, ಮೊಬೈಲ್‌ ಡಿಸ್ಪೆನ್ಸರಿ ವ್ಯಾನ್‌, ಫೀವರ್‌ ಕ್ಲಿನಿಕ್‌, ಮನೆ ಮನೆ ಪರೀಕ್ಷೆ, ಚೇಸ್‌ ದಿ ವೈರಸ್‌ ಮತ್ತು ಇತರ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇದು ಮುಂಬಯಿಯಲ್ಲಿ ಕೋವಿಡ್ ಸೋಂಕಿಗೆ ಬ್ರೇಕ್‌ ಹಾಕಲು ನಮಗೆ ಸಹಾಯ ಮಾಡಿದೆ. ಇದರಿಂದ ಚೇತರಿಕೆ ದರವೂ ಸುಧಾಸುತ್ತಿದೆ ಎಂದು ಮುಂಬಯಿ ಮೇಯರ್‌ ಕಿಶೋರಿ ಪೆಡ್ನೇಕರ್‌ ಅವರು ಹೇಳಿದ್ದಾರೆ.

ಚೇತರಿಕೆ ಪ್ರಮಾಣ ಹೆಚ್ಚಳವಾಗಿದೆ ಜುಲೈ ತಿಂಗಳ ಅಂತ್ಯಕ್ಕೆ ಮುಂಬಯಿಯಲ್ಲಿ ಕೋವಿಡ್ ಪ್ರಕೋಪ ಕಡಿಮೆಯಾಗಲಿದೆ. ಈ ತಿಂಗಳು ಜೂನ್‌ಗಿಂತಲೂ ಅಧಿಕ ಸೋಂಕಿತರು ಕೋವಿಡ್ ದಿಂದ ಚೆತರಿಸಿ ಕೊಂಡಿದ್ದಾರೆ. ಜೂನ್‌ನಲ್ಲಿ ಮುಂಬಯಿಯಲ್ಲಿ 17,036 ಜನರು ಚೆತರಿಕೆಗೊಂಡಿದ್ದು. ಜುಲೈ 22ರ ಹೊತ್ತಿಗೆ 18,704 ಮಂದಿ ಚೇತರಿಸಿಕೊಂಡಿದ್ದಾರೆ. ಇದರಿಂದ ಮುಂಬಯಿಯಲ್ಲಿ ಚೇತರಿಕೆ ದರ ಹಿಂದಿನ ತಿಂಗಳುಗಳಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಜೂನ್‌ ಅಂತ್ಯಕ್ಕೆ ಮುಂಬಯಿಯಲ್ಲಿ ಸೋಂಕಿ ನಿಂದ 4,554 ಮಂದಿ ಸಾವನ್ನಪ್ಪಿದ್ದು, ಜುಲೈನಲ್ಲಿ ಇದುವರೆಗೆ 1,318 ಮಂದಿಸಾವನ್ನಪ್ಪಿದ್ದಾರೆ. ಹೀಗಾಗಿ ಮುಂಬಯಿಯಲ್ಲಿ ಒಟ್ಟು ಸಾವಿನ ಸಂಖ್ಯೆ 5,872ಕ್ಕೆ ತಲುಪಿದೆ. ಮುಂಬಯಿಯಲ್ಲಿ ಸಾವಿನ ಪ್ರಮಾಣ ಶೇ. 5.68ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಮುಂಬಯಿಯಲ್ಲಿ ಸೋಂಕಿತರ ಚೇತರಿಕೆ ಪ್ರಮಾಣ ಶೇ. 71ಕ್ಕೆ ತಲುಪಿದೆ. ಜೂನ್‌ 30ರ ಹೊತ್ತಿಗೆ ಮುಂಬಯಿಯಲ್ಲಿ ಚೇತರಿಕೆ ಪ್ರಮಾಣವು ಶೇ. 57ರಷ್ಟಿತ್ತು. ಜುಲೈ 21ಕ್ಕೆ ಇದು ಶೇ. 14ರಷ್ಟು ಹೆಚ್ಚಾಗಿದೆ. ಬಿಎಂಸಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಜೂನ್‌ 30ರ ವೇಳೆಗೆ ಮುಂಬಯಿಯಲ್ಲಿ ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ 77,197 ಆಗಿದೆ. ಅದರಲ್ಲಿ 44,170 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 22ಕ್ಕೆ ಮುಂಬಯಿಯಲ್ಲಿ ಸೋಂಕಿತರ ಸಂಖ್ಯೆ 27,375ರಷ್ಟು ಹೆಚ್ಚಾಗಿದೆ. ಒಟ್ಟು ರೋಗಿಗಳ ಸಂಖ್ಯೆ 1,04,572 ಏರಿಕೆಯಾಗಿದ್ದು, ಈ ಅವಧಿಯಲ್ಲಿ 30,948 ರೋಗಿಗಳು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ಚೇತರಿಸಿಕೊಂಡವರ ಸಂಖ್ಯೆ ಒಟ್ಟು ಸಂಖ್ಯೆ 75,118ಕ್ಕೆ ಏರಿಕೆಯಾಗಿದೆ. ಜೂನ್‌ 30ರಂದು 28,473 ಮುಂಬಯಿಯಲ್ಲಿ ಸಕ್ರಿಯ ರೋಗಿಗಳನ್ನು ಹೊಂದಿತ್ತು. ಜುಲೈ 22ರಂದು ಸಕ್ರಿಯ ರೋಗಿಗಳ ಸಂಖ್ಯೆ 23,582 ಏರಿಕೆಯಾಗಿದೆ. ಮುಂಬಯಿಯಲ್ಲಿ ಚೇತರಿಕೆ ದರವು ಸಾಕಷ್ಟು ಪರಿಹಾರವನ್ನು ನೀಡಲಿದೆ ಎಂದು ಮೇಯರ್‌ ಕಿಶೋರಿ ಪೆಡ್ನೇಕರ್‌ ಹೇಳಿದ್ದಾರೆ.

ಕೋವಿಡ್ ಸೋಂಕಿಗೆ ಒಳಗಾಗುವವರ ಚೇತರಿಕೆ ವೇಗ ಹೆಚ್ಚಾಗಿದೆ. ಉದ್ಧವ್‌ ಅವರ ನೇತೃತ್ವದಲ್ಲಿ, ರಾಜ್ಯ ಸರಕಾರ ಮತ್ತು ಬಿಎಂಸಿ ಆಡಳಿತವು ಕೋವಿಡ್ ವನ್ನು ಸೋಲಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ, ಇದು ಯಶಸ್ಸನ್ನು ಪಡೆಯುತ್ತಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಸುಳ್ಯ: ಲೈಂಗಿಕ ದೌರ್ಜನ್ಯ;  ಯುವಕನ ಬಂಧನ

ಸುಳ್ಯ: ಲೈಂಗಿಕ ದೌರ್ಜನ್ಯ; ಯುವಕನ ಬಂಧನ

1-asdsad

ನಿರುದ್ಯೋಗದಿಂದ ಆತ್ಮಹತ್ಯೆ; ಆತ್ಮಾವಲೋಕನ ಮಾಡಿಕೊಳ್ಳಬೇಕು: ಡಿ.ಕೆ ಶಿವಕುಮಾರ್

ಹಿಜಾಬ್ ಹಲಾಲ್ ಗೆ ಸರ್ಕಾರದ ಕುಮ್ಮಕ್ಕಿಲ್ಲ : ನಳಿನ್ ಕುಮಾರ್ ಕಟೀಲ್

ಹಿಜಾಬ್, ಹಲಾಲ್ ಗೆ ಸರ್ಕಾರದ ಕುಮ್ಮಕ್ಕಿಲ್ಲ : ನಳಿನ್ ಕುಮಾರ್ ಕಟೀಲ್

ಸೊರಬದಲ್ಲಿ ಸಂಭ್ರಮದಿಂದ ಜರುಗಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ

ಸೊರಬದಲ್ಲಿ ಸಂಭ್ರಮದಿಂದ ಜರುಗಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ

1-asdasdasd

ಗಂಗಾ ನದಿಯಲ್ಲಿ ತೇಲುತ್ತಿದ್ದ ಶವಗಳ ಸಂಖ್ಯೆ ತಿಳಿಸಲು ಯುಪಿ, ಬಿಹಾರಕ್ಕೆ ಎನ್‌ಜಿಟಿ ಸೂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಶತಮಾನದ ಶ್ರೇಷ್ಠ ಸಾಧನೆ “ಗೋಕುಲ’: ಚಂದ್ರಹಾಸ ಕೆ. ಶೆಟ್ಟಿ

ಶತಮಾನದ ಶ್ರೇಷ್ಠ ಸಾಧನೆ “ಗೋಕುಲ’: ಚಂದ್ರಹಾಸ ಕೆ. ಶೆಟ್ಟಿ

ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರ: ಪಂ| ವಿದ್ಯಾಸಿಂಹಾಚಾರ್ಯ

ಗೋಕುಲ ಆಧ್ಯಾತ್ಮಿಕ ಆಕರ್ಷಣೆಯ ಕೇಂದ್ರ: ಪಂ| ವಿದ್ಯಾಸಿಂಹಾಚಾರ್ಯ

Untitled-1

ಪುಣ್ಯಕಲಶಗಳೊಂದಿಗೆ ಗೋಕುಲಕ್ಕೆ ಬಂದ ಗೋಪಾಲಕೃಷ್ಣ 

ಜವಾಬ್ದಾರಿಯನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸೋಣ: ಐಕಳ ಹರೀಶ್‌ ಶೆಟ್ಟಿ 

ಜವಾಬ್ದಾರಿಯನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸೋಣ: ಐಕಳ ಹರೀಶ್‌ ಶೆಟ್ಟಿ 

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

1-asdadas

ರಾಹುಲ್ ಭಟ್ ಹತ್ಯೆ ಖಂಡಿಸಿ ಮುಂದುವರೆದ ಕಾಶ್ಮೀರಿ ಪಂಡಿತರ ಪ್ರತಿಭಟನೆ

thumb 8

‘ವಾಟ್ಸಾಪ್’ ಮೂಲಕ ಪ್ರಕರಣ ಇತ್ಯರ್ಥ ಗೊಳಿಸಿದ ಮದ್ರಾಸ್ ಹೈಕೋರ್ಟ್‌ ನ್ಯಾಯಾಧೀಶ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭದ್ರತೆ ಹೆಚ್ಚಳ: ಪಾಕ್‌ ಸರ್ಕಾರ

ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

ಮಳೆ ಆರ್ಭಟಕ್ಕೆ ನಷ್ಟವಾಗಿರುವ ಬೆಳೆ ಸಮೀಕ್ಷೆ ನಡೆಸಿ

ಮಳೆ ಆರ್ಭಟಕ್ಕೆ ನಷ್ಟವಾಗಿರುವ ಬೆಳೆ ಸಮೀಕ್ಷೆ ನಡೆಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.