ದೀಪಾವಳಿ ಬಳಿಕ 9 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣ ಹೆಚ್ಚಳ
Team Udayavani, Dec 16, 2020, 7:39 PM IST
ಮುಂಬಯಿ, ಡಿ. 15: ರಾಜ್ಯದ ಒಟ್ಟಾರೆ ಸಕ್ರಿಯ ಸೋಂಕುಗಳ ಸಂಖ್ಯೆ ಕಡಿಮೆ ಯಾಗಿದ್ದರೂ ಒಂಬತ್ತು ಜಿಲ್ಲೆಗಳಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇತ್ತೀಚಿನ ಈ ಪ್ರವೃತ್ತಿಯಿಂದ ರಾಜ್ಯದಲ್ಲಿ ವೈರಸ್‌ನ ಅಪಾಯಗಳು ಇನ್ನೂ ತಗ್ಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಸೋಮವಾರ ಮಹಾರಾಷ್ಟ್ರವು 2,949 ಹೊಸ ಪ್ರಕರಣಗಳೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆ 18.83 ಲಕ್ಷಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣಗಳಲ್ಲಿ 477 ಮುಂಬಯಿಯಿಂದವರದಿಯಾಗಿವೆ. ಮತ್ತೆ 60 ಸಾವುಗಳೊಂದಿಗೆ ರಾಜ್ಯದ ಸಾವಿನ ಸಂಖ್ಯೆ 48,269 ಕ್ಕೆ ಏರಿದೆ. ಸೋಮವಾರ ಮುಂಬಯಿಯಲ್ಲಿ ಕೋವಿಡ್ ದಿಂದ 7 ಮಂದಿ ಸಾವನ್ನಪ್ಪಿದ್ದಾರೆ. ದೀಪಾವಳಿಯ ಬಳಿಕ ರತ್ನಗಿರಿ, ಸಿಂಧುದುರ್ಗ, ವಾಶಿಮ್, ಪುಣೆ, ಕೊಲ್ಲಾಪುರ, ನಾಸಿಕ್, ನಂದುರ್ಬಾರ್, ಅಕೋಲಾ ಮತ್ತು ನಾಗಪುರಗಳಲ್ಲಿ ಸಕ್ರಿಯ ಸೋಂಕು ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ.
ಶೇಕಡಾವಾರು ಪ್ರಕಾರ, ವಾಶಿಮ್, ಸಿಂಧುದುರ್ಗ, ಕೊಲ್ಲಾಪುರ, ಅಕೋಲಾ ಮತ್ತುನಾಗಪುರಗಳಲ್ಲಿ ಸಕ್ರಿಯ ಸೋಂಕುಗಳಲ್ಲಿ ಶೇ. 40 ಅಥವಾ ಅದಕ್ಕಿಂತ ಹೆಚ್ಚಿನ ಏರಿಕೆ ಕಂಡಿದೆ. ಪರಿಣಾಮ ರಾಜ್ಯ ಅಧಿಕಾರಿಗಳು ಈ ಜಿಲ್ಲೆಗಳನ್ನು ಸೂಕ್ಷ್ಮವಾಗಿ ಗಮನಹರಿಸುತ್ತಿದ್ದಾರೆ.
ಹಬ್ಬಗಳ ಸಮಯದಲ್ಲಿ ಹೆಚ್ಚಿದ ಚಲನವಲನವು ಈ ನಿರ್ದಿಷ್ಟ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಲು ಕಾರಣವಾಗಿರಬಹುದು ಅಥವಾ ಈ ಜಿಲ್ಲೆಗಳಲ್ಲಿ ಕೆಲವು ಕೋವಿಡ್ – 19 ಪ್ರಕರಣಗಳನ್ನು ಇತರ ಜಿಲ್ಲೆಗಳಿಗಿಂತ ಬಹಳ ಹಿಂದೆಯೇ ದಾಖಲಿಸಲು ಪ್ರಾರಂಭಿಸಿರುವುದು ಇದಕ್ಕೆ ಕಾರಣ ವಾಗಿರಬಹುದು ಎಂದು ಅಧಿಕಾರಿಗಳುಅಭಿಪ್ರಾಯಪಟ್ಟಿದ್ದಾರೆ. ಮುಂಬಯಿಯಲ್ಲಿ ಒಂದು ತಿಂಗಳಿನಿಂದ ಕೋವಿಡ್ -19ಪ್ರಕರಣಗಳಲ್ಲಿ ಏರಿಳಿತಗಳನ್ನು ಕಾಣುತ್ತಿದೆ.
ಡಿಸೆಂಬರ್ ಅಥವಾ ಜನವರಿಯೊಳಗೆ ಕೋವಿಡ್ ವೈರಸ್‌ನ ಎರಡನೇ ಅಲೆಯ ಸಾಧ್ಯತೆಯಿದ್ದು, ಸಕ್ರಿಯ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳನ್ನು ನಿರ್ವಹಿಸಲು ಖಾಸಗಿ ಆಸ್ಪತ್ರೆಗಳಲ್ಲಿ ಶೇ. 80ರಷ್ಟು ಹಾಸಿಗೆ ಕಾಯ್ದಿರಿಸುವಿಕೆಯನ್ನು ಮುಂದು ವರಿಸಬೇಕೆಂದು ರಾಜ್ಯ ಆರೋಗ್ಯ ಇಲಾಖೆ ಒತ್ತಾಯಿಸಿದೆ.
ಸಕ್ರಿಯ ಪ್ರಕರಣಗಳಲ್ಲಿ ಕುಸಿತ : ಸಕ್ರಿಯ ಪ್ರಕರಣಗಳಲ್ಲಿ ಏರಿಕೆಗೆ ಸಾಕ್ಷಿಯಾದ ಒಂಬತ್ತು ಜಿಲ್ಲೆಗಳಿಗೆ ವ್ಯತಿರಿಕ್ತವಾಗಿ ಸಾಂಗ್ಲಿ,ಅಹ್ಮದ್‌ನಗರ, ಧುಳೆ, ಔರಂಗಾಬಾದ್, ಪರ್ಭಾಣಿ, ಹಿಂಗೋಲಿ, ನಾಂದೇಡ್,ಗೊಂಡಿಯಾ ಮತ್ತು ಚಂದ್ರಾಪುರಗಳಲ್ಲಿ ಸಕ್ರಿಯ ಸೋಂಕು ಪ್ರಕರಣಗಳಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ. ಆದರೆ ಚಂದ್ರಾಪುರ, ಪರ್ಭಾಣಿ, ಹಿಂಗೋಲಿ ಮತ್ತು ಗೊಂಡಿಯಾದಲ್ಲಿ ಕಡಿಮೆ ಜನರು ಈವರೆಗೆ ವೈರಸ್‌ಗೆ ತುತ್ತಾಗಿರುವುದರಿಂದ ಈ ಜಿಲ್ಲೆಗಳು ಅಪಾಯದಲ್ಲಿವೆ ಎಂದು ರಾಜ್ಯ ಸರಕಾರದ ಕೋವಿಡ್-19 ತಾಂತ್ರಿಕ ಸಲಹೆಗಾರ ಡಾ| ಸುಭಾಷ್ ಸಾಳುಂಕೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬದುಕನ್ನು ಕನ್ನಡಕ್ಕಾಗಿ ಮೀಸಲಿಟ್ಟಿದ್ದೇನೆ: ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಕರವೇ ಗೋವಾ ಕನ್ನಡಿಗರ ಪರವಾಗಿ ನಿಲ್ಲಲು ಸದಾ ಸಿದ್ಧ: ಪ್ರವೀಣ್ಕುಮಾರ್ ಶೆಟ್ಟಿ
ಮಹಿಳೆಯರಿರುವ ಸಂಸ್ಥೆಯಲ್ಲಿ ಹೆಚ್ಚು ಸಂಸ್ಕಾರ, ಸಂಸ್ಕೃತಿ ಇರುತ್ತದೆ: ಚಂದ್ರಹಾಸ್ ಶೆಟ್ಟಿ
ಮಕ್ಕಳು ಸಂಸ್ಕೃತಿ-ಸಂಸ್ಕಾರ ಗೌರವಿಸುವ ಗುಣ ಬೆಳೆಸಿಕೊಳ್ಳಲಿ: ಎಲ್. ವಿ. ಅಮೀನ್
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ನಿಯೋಗದಿಂದ ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಮನವಿ
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ವಿಜಯಪುರ: ಶೀಲ ಸಂಕಿಸಿ ಪತ್ನಿ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ
ಸೂಕ್ತ ಸ್ಥಳಾವಕಾಶ ನೀಡಿದರೆ ರಬಕವಿ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಮುನೇನಕೊಪ್ಪ
ಆರ್ಹಾಳ: ಭೂಮಿ ಪೋಡಿ ಮುಕ್ತ ಮಾಡದಿದ್ದರೆ ಮತದಾನ ಬಹಿಷ್ಕಾರ
ಸಕಲೇಶಪುರ: ಅಟ್ಟಾಡಿಸಿಕೊಂಡು ಬಂದ ಕಾಡಾನೆಗಳು; ಕೂದಲೆಳೆ ಅಂತರದಲ್ಲಿ ಇಟಿಎಫ್ ಸಿಬಂದಿ ಪಾರು
ಸಾಮಾಜಿಕ ಉದ್ಯಮಕ್ಕೆ ಹುಬ್ಬಳ್ಳಿ ಮಾಡೆಲ್; ದೇಶಪಾಂಡೆ ಫೌಂಡೇಶನ್ ಅಭಿವೃದ್ಧಿ ಸಂವಾದ’ ಸಮಾವೇಶ