ಧಾರಾವಿಯಲ್ಲಿ  ಹೆಚ್ಚುತ್ತಿರುವ ಕೋವಿಡ್: ಮನಪಾ ಎಚ್ಚರಿಕೆ ಕ್ರಮ

Team Udayavani, Mar 2, 2021, 4:47 PM IST

ಧಾರಾವಿಯಲ್ಲಿ  ಹೆಚ್ಚುತ್ತಿರುವ ಕೋವಿಡ್: ಮನಪಾ ಎಚ್ಚರಿಕೆ ಕ್ರಮ

ಮುಂಬಯಿ: ಧಾರಾವಿಯಲ್ಲಿ ಕೋವಿಡ್ ಸೋಂಕು ನಿಧಾನವಾಗಿ ಹೆಚ್ಚುತ್ತಿದ್ದು, ಎಚ್ಚರಗೊಂಡ ಮುಂಬಯಿ ಮುನ್ಸಿಪಲ್‌ ಕಾರ್ಪೊರೇಶನ್‌ ಮತ್ತೂಮ್ಮೆ ಮನೆಗಳಿಗೆ ಭೇಟಿ ನೀಡಿ ತಪಾಸಣೆ ಪ್ರಾರಂಭಿಸಿದೆ.

ಜನದಟ್ಟಣೆ ಇರುವ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ನಾಗರಿಕರನ್ನು  ಪರೀಕ್ಷಿಸಲಾಗುತ್ತಿದೆ. ಕೊರೊನಾ ಪ್ರಕರಣ ಹೆಚ್ಚಳದಿಂದ ಸಾಂಸ್ಥಿಕ ಪ್ರತ್ಯೇಕ ಕೇಂದ್ರದಲ್ಲಿ  ಶಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.

ಏಷ್ಯಾದ ಅತೀದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಕೊರೊನಾದ ಮೊದಲ ರೋಗಿಯನ್ನು  2020ರ ಎ. 1ರಂದು ಪತ್ತೆ ಮಾಡಲಾಯಿತು. ರೋಗಿಯ ಅದೇ ದಿನ ರಾತ್ರಿ ನಿಧನ ಹೊಂದಿದ್ದರು. ಅನಂತರ  ಪುರಸಭೆಯ ಜಿ-ನಾರ್ತ್‌ ವಿಭಾಗ ವಾರ್ಡ್‌ ಸಿಬಂದಿ ಮತ್ತು ಖಾಸಗಿ ವೈದ್ಯರ ತಂಡಗಳ ಮೂಲಕ ಸೋಂಕನ್ನು ನಿಯಂತ್ರಣಕ್ಕೆ ತರಲಾಯಿತು. ಈಗ ಮತ್ತೂಮ್ಮೆ  ರೋಗಿಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ.

ಒಂದು ವಾರದ ಹಿಂದೆ ಧಾರಾವಿಯಲ್ಲಿ ಪ್ರತೀದಿನ 5ರಿಂದ 7 ಹೊಸ ಸೋಂಕಿತ ರೋಗಿಗಳು ಕಂಡುಬಂದಿದ್ದಾರೆ. ಕಳೆದ ವಾರದಲ್ಲಿ ರೋಗಿಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಫೆ. 26ರಂದು ಕೊರೊನಾದಿಂದ 16 ಜನರು ಬಾಧಿತರಾಗಿದ್ದಾರೆ.

ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪುರಸಭೆಯು ಜಾಗರೂಕವಾಗಿದೆ. ಜನದಟ್ಟಣೆ ಇರುವ ಸ್ಥಳಗಳು ಮತ್ತು ಪೂಜಾ ಸ್ಥಳಗಳಿಗೆ ಹೋಗುವ ಜನರ ಮೇಲೆ ನಿಗಾ ಇಡಲಾಗುತ್ತಿದೆ. ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ಪರೀಕ್ಷಿಸಲಾಗುತ್ತಿದೆ. ಮತ್ತೂಮ್ಮೆ ಧಾರಾವಿಯ ಪ್ರತೀ ಮನೆಯ ನಿವಾಸಿಗಳ ಆರೋಗ್ಯ ತಪಾಸಣೆ ಪ್ರಾರಂಭವಾಗಿದೆ.

ಕೆಲವು ದಿನಗಳ ಹಿಂದೆ ದಾದರ್‌ನ ವನಿತಾ ಸಮಾಜ ಸಂಸ್ಥೆಯ ಪ್ರತ್ಯೇಕ ಕೇಂದ್ರದಲ್ಲಿ ಮೂರರಿಂದ ನಾಲ್ಕು ರೋಗಿಗಳು ಮಾತ್ರ ಇದ್ದರು. ಆದರೆ ಈಗ ಈ ಸಂಖ್ಯೆ 70ಕ್ಕೆ ತಲುಪಿದೆ. ಸೋಂಕಿತ ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ಹೆಚ್ಚಿನ ಅಪಾಯದ ಗುಂಪಿನಲ್ಲಿರುವ ಶಂಕಿತ ರೋಗಿ

ಗಳನ್ನು ಪ್ರತ್ಯೇಕವಾಗಿರಿಸಲಾಗುತ್ತಿದೆ. ಸೋಂಕಿತ, ಶಂಕಿತ ರೋಗಿಗಳನ್ನು ಪರೀಕ್ಷೆಯ ಮೂಲಕ ಪ್ರತ್ಯೇಕಿಸಲಾಗುತ್ತಿದೆ. ಇದರಿಂದ ಸೋಂಕನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ.

ಮುಂಬಯಿ ಮಹಾನಗರ ಪಾಲಿಕೆಯು ರೋಗಲಕ್ಷಣ ಹೊಂದಿರುವವರಿಗೆ ಹೆಚ್ಚಿನ ಸಂಖ್ಯೆಯ ತಪಾಸಣೆ ಮತ್ತು ಪರೀಕ್ಷೆಗಳನ್ನು ಪ್ರಾರಂಭಿಸಿದೆ. ಮುಂಬಯಿಯಲ್ಲಿ ರೋಗಿಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರಿದಿದೆ.

 ಮಾಸ್ಕ್  ನಿಯಮ ಉಲ್ಲಂಘನೆ: 34.62 ಕೋ. ರೂ. ದಂಡ :

ಬಿಎಂಸಿಯು ಮಾಸ್ಕ್ ಸರಿಯಾಗಿ ಧರಿಸದ ಮತ್ತು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದು, ಈ ವರೆಗೆ 17,13,385 ಮಂದಿಗೆ ದಂಡ ವಿಧಿಸಿದ್ದು, ಅವರಿಂದ 34,62,84,600 ರೂ.ಗಳನ್ನು  ವಸೂಲು ಮಾಡಿದೆೆ. ಮಹಾನಗರ ಪಾಲಿಕೆ, ಪೊಲೀಸ್‌ ಮತ್ತು ರೈಲ್ವೇ ಪೊಲೀಸರು ಶುಕ್ರವಾರ 19,849 ಜನರ ವಿರುದ್ಧ ಕ್ರಮ ಕೈಗೊಂಡಿದ್ದು, 39,69,800 ರೂ. ದಂಡ ವಸೂಲಿ ಮಾಡಿದೆ. ರೈಲ್ವೇಯ ಮೂರು ಮಾರ್ಗಗಳಲ್ಲಿ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿದ್ದ ಒಟ್ಟು 2,263 ಪ್ರಯಾಣಿಕರಿಗೆ 4,52,600 ರೂ.ಗಳ ದಂಡ ವಿಧಿಸಲಾಗಿದೆ.

ಟಾಪ್ ನ್ಯೂಸ್

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

ಅಬುಧಾಬಿಯ ಹಿಂದೂ ಮಂದಿರ: ಅನುಪಯುಕ್ತ ವಸ್ತುಗಳಿಂದ ಆಕರ್ಷಕ ಕಲಾಕೃತಿಗಳ ಸೃಷ್ಟಿ

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಇಲ್ಲಿಗೆ ಹೋಗುವ ಮುನ್ನ ನೆನಪಿರಲಿ – ಇದು ಸಾವಿನ ಕಣಿವೆ!

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ಅಸಮಾಧಾನಗಳನ್ನು ಹತ್ತಿಕ್ಕುವುದು ಸಾಧ್ಯವೇ?

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ವಿಂಶತಿ ವೈಭವ: ಅಯೋಧ್ಯೆಯಲ್ಲಿ ಆಮಂತ್ರಣ ಪತ್ರ ಬಿಡುಗಡೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

Desi Swara: ಹಬ್ಬದ ವಾತಾವರಣದಲ್ಲಿ ರಂಗೇರಿದ ಆಡಳಿತ ಮಂಡಳಿಯ ಚುನಾವಣೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.