ಕೋವಿಡ್ ಬಿಕ್ಕಟ್ಟು : ಬರಿದಾಗುತ್ತಿರುವ ಬ್ಲಡ್‌ ಬ್ಯಾಂಕ್‌


Team Udayavani, May 19, 2020, 7:46 AM IST

ಕೋವಿಡ್ ಬಿಕ್ಕಟ್ಟು : ಬರಿದಾಗುತ್ತಿರುವ ಬ್ಲಡ್‌ ಬ್ಯಾಂಕ್‌

ಮುಂಬಯಿ, ಮೇ 18: ಕೋವಿಡ್ ಲಾಕ್‌ಡೌನ್‌ ಹಿನ್ನೆಲೆ ರದ್ದಾಗಿರುವ ಅನೇಕ ಸೇವೆಗಳಲ್ಲಿ ರಕ್ತದಾನ ಶಿಬಿರಗಳು ಒಂದಾಗಿದೆ. ಲಾಖ್‌ಡೌನ್‌ ಜಾರಿಯಾದ ಬಳಿಕ ರಕ್ತದಾನಕ್ಕೆ ಆಸ್ಪದವಿಲ್ಲದ ಕಾರಣ ಸದ್ಯ ನಗರದ ರಕ್ತ ಬ್ಯಾಂಕುಗಳು ಕೇವಲ 10 ದಿನಗಳಿಗೆ ಪೂರೈಕೆಯಾಗುವಷ್ಟು ದಾಸ್ತಾನು ಉಳಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಲಾಕ್‌ಡೌನ್‌ ಅನ್ನು ಮೇ 31ರ ವರೆಗೆ ವಿಸ್ತರಿಸಲಾಗಿದ್ದು, ಮಾನ್ಸೂನ್‌ ಹತ್ತಿರ ಬರುತ್ತಿರುವುದರಿಂದ, ರಾಜ್ಯ ರಕ್ತ ವರ್ಗಾವಣೆ ಮಂಡಳಿಯು ದೇಣಿಗೆ ಶಿಬಿರಗಳನ್ನು ನಡೆಸಲು ನಗರದ ರಕ್ತ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ಶಿಬಿರ ಆಯೋಜಿಸಲು ಪತ್ರ ರಾಜ್ಯ ರಕ್ತ ವರ್ಗಾವಣೆ ಮಂಡಳಿಯ ಮುಖ್ಯಸ್ಥರಾದ ಡಾ.ಅರುಣ್‌ ಥೋರಟ್‌ ಅವರು ಕಳೆದ ವಾರ ಎಲ್ಲ ರಕ್ತ ಬ್ಯಾಂಕ್‌ ಗಳಿಗೆ ಪತ್ರ ಬರೆದು ಸಣ್ಣ ಶಿಬಿರಗಳನ್ನು ಆಯೋಜಿಸುವಂತೆ ಕೋರಿದ್ದಾರೆ.

ಮುಂದಿನ 8ರಿಂದ 10 ದಿನಗಳವರೆಗೆ ಪೂರೈಕೆಯಾಗುವಷ್ಟು ರಕ್ತದ ಸಂಗ್ರಹ ನಮ್ಮಲ್ಲಿದೆ. ಮಾನ್ಸೂನ್‌ ಹತ್ತಿರದಲ್ಲಿರುವುದರಿಂದ ರಕ್ತದ ಕೊರತೆ ಇರಬಾರದು. ಆದ್ದರಿಂದ ನಾವು ಎಲ್ಲ ರಕ್ತ ಬ್ಯಾಂಕ್‌ಗಳಿಗೆ ದೇಣಿಗೆ ನೀಡುವಂತೆ ಪತ್ರ ಬರೆದಿದ್ದು ಅವರ ಅಗತ್ಯಕ್ಕೆ ಅನುಗುಣವಾಗಿ ಶಿಬಿರಗಳನ್ನು ನಡೆಸುವಂತೆ ಮನವಿ ಮಾಡಿರುವುದಾಗಿ ಅವರು ಹೇಳಿದರು.

ಲಾಕ್‌ಡೌನ್‌ ಸಮಯದಲ್ಲಿ ಕಡಿಮೆ ಅಪಘಾತಗಳು ಮತ್ತು ಶಸ್ತ್ರಚಿಕಿತ್ಸೆಗಳು ರಕ್ತದ ಬೇಡಿಕೆಯನ್ನು ಕಡಿಮೆಗೊಳಿಸಿದರೂ, ಥಲಸ್ಸೆಮಿಯಾ ಮತ್ತು ರಕ್ತ ಕ್ಯಾನ್ಸರ್‌ ರೋಗಿಗಳಿಗೆ ನಿಯಮಿತವಾಗಿ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಕಳೆದ ವಾರ ಕೆಲವು ರೋಗಿಗಳು ರಕ್ತದ ಕೊರತೆಯನ್ನು ಎದುರಿಸಿದ್ದರು ಎಂದು ಟಾಟಾ ಸ್ಮಾರಕ ಆಸ್ಪತ್ರೆಯ (ಟಿಎಂಹೆಚ್‌) ನಿರ್ದೇಶಕ ಡಾ.ಸಿ.ಎಸ್‌.ಪ್ರಮೇಶ್‌ ಹೇಳಿದ್ದಾರೆ.

ವಸತಿ ಸಮುದಾಯಗಳಲ್ಲಿ ರಕ್ತದಾನ ಶಿಬಿರ :  ಟಾಟಾ ಸ್ಮಾರಕ ಆಸ್ಪತ್ರೆಯ (ಟಿಎಂಹೆಚ್‌) ನಿರ್ದೇಶಕ ಡಾ.ಸಿ.ಎಸ್‌.ಪ್ರಮೇಶ್‌ ಮಾತನಾಡಿ, ಆಸ್ಪತ್ರೆಯು ಸಣ್ಣ ಪ್ರಮಾಣದಲ್ಲಿ ರಕ್ತದಾನ ಶಿಬಿರಗಳನ್ನು ನಡೆಸುತ್ತಿದೆ. ಪ್ರತಿ ವಾರ ಮೂರು ವಸತಿ ಸಮುದಾಯಗಳಲ್ಲಿ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತದೆ ಮತ್ತು ಪ್ರತಿ ಸಮಾಜದಿಂದ ಸುಮಾರು 50ರಿಂದ 100 ದಾನಿಗಳು ಮುಂದೆ ಬರುತ್ತಾರೆ. ಹೆಚ್ಚುವರಿ ಪೂರೈಕೆ ಇದ್ದರೆ, ನಾವು ರಕ್ತವನ್ನು ಇತರ ಬ್ಯಾಂಕುಗಳೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಟಿಎಂಹೆಚ್‌ ಸಿಬಂದಿ ವಿಖ್ರೋಲಿ ಮತ್ತು ಚೆಂಬೂರಿನಲ್ಲಿ ಇಂತಹ ಶಿಬಿರಗಳನ್ನು ನಡೆಸಿದ್ದಾರೆ ಎಂದು ಡಾ. ಪ್ರಮೇಶ್‌ ಹೇಳಿದರು. ಅಂತಹ ಒಂದು ಶಿಬಿರವನ್ನು ಮುಲುಂಡ್‌ನ‌ಲ್ಲಿ ರವಿವಾರ ಆಯೋಜಿಸಲಾಗಿದೆ. ಮುಲುಂಡ್‌ ಜಿಮ್ಖಾನಾದ ಅಧ್ಯಕ್ಷ ಚೇತನ್‌ ಸಾಲ್ವಿ, ತೊಂದರೆಗೊಳಗಾದ ಸಮಯದಲ್ಲಿ ರಕ್ತದ ಕೊರತೆಯ ವರದಿಗಳು ಬಂದಿವೆ. ನಾವು ಟಾಟಾ ಸ್ಮಾರಕ ಆಸ್ಪತ್ರೆಯೊಂದಿಗೆ ಜಂಟಿಯಾಗಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಡ್ರೈವ್‌ ಆಯೋಜಿಸಿದ್ದೇವೆ. ನಾವು ಎಲ್ಲ ಸಾಮಾಜಿಕ ಅಂತರ ನಿಯಮವನ್ನು ಅನುಸರಿಸಿದ್ದೇವೆ. ಹೆಚ್ಚಿನ ಸಂಖ್ಯೆಯ ಜನರು ಬಂದಿದ್ದು ಆರೋಗ್ಯ ತಪಾಸಣೆಯ ಅನಂತರ, ದಿನದ ಅಂತ್ಯದ ವೇಳೆಗೆ ನಾವು 170 ಬಾಟಲಿಗಳ ರಕ್ತವನ್ನು ಸಂಗ್ರಹಿಸಲು ಸಾಧ್ಯವಾಯಿತು ಎಂದಿದ್ದಾರೆ.

ಟಾಪ್ ನ್ಯೂಸ್

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

rwytju11111111111

ಸೋಮವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

ಗುಂಡೂರಾಜ್‌ ಶೆಟ್ಟಿಯವರ ನಾಡು-ನುಡಿ ಪ್ರೇಮ ಅನನ್ಯ: ಕುಶಲ್‌ ಹೆಗ್ಡೆ

Untitled-1

ವಿದ್ಯಾರ್ಥಿಗಳಲ್ಲಿ ದೇಶದ ಅಭಿವೃದ್ಧಿಯ ಹೊಣೆಗಾರಿಕೆ ಇರಲಿ: ದಯಾನಂದ ಶೆಟ್ಟಿ

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ಪುಣೆ ತುಳುಕೂಟದಿಂದ ವಾರ್ಷಿಕ ದಸರಾ ಪೂಜೆ, ತೆನೆ ಹಬ್ಬ ಮತ್ತು ದಾಂಡಿಯಾ ರಾಸ್‌

ರಕ್ತದಾನ ಮಾನವೀಯತೆ ಸಾರುವ ಪುಣ್ಯದ ಕೆಲಸ: ಡಾ| ಸತ್ಯಪ್ರಕಾಶ್‌ ಶೆಟ್ಟಿ

ರಕ್ತದಾನ ಮಾನವೀಯತೆ ಸಾರುವ ಪುಣ್ಯದ ಕೆಲಸ: ಡಾ| ಸತ್ಯಪ್ರಕಾಶ್‌ ಶೆಟ್ಟಿ

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯ: 49ನೇ ವಾರ್ಷಿಕ ನವರಾತ್ರೋತ್ಸವ ಸಂಪನ್ನ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

6dharmasthala

ಧರ್ಮಸ್ಥಳದ ಧರ್ಮಾಧಿಕಾರಿ ಕಾರ್ಯ ಮಾದರಿ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.