Udayavni Special

“ಜಿಲ್ಲಾಡಳಿತ 3ನೇ ಅಲೆಗೆ ಸಿದ್ಧತೆ ಮಾಡಿಕೊಳ್ಳಬೇಕು’


Team Udayavani, Jun 13, 2021, 12:55 PM IST

covid news

ಔರಂಗಾಬಾದ್‌,: ಕೊರೊನಾದ ಎರಡನೇ ಅಲೆಯಿಂದ ಜಿಲ್ಲೆಯಲ್ಲಿ ನಿರ್ಮಾಣವಾದ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಜಿಲ್ಲಾಡಳಿತವು ಮೂರನೇ ಅಲೆಯನ್ನು ತಡೆಯುವ ಕುರಿತಂತೆ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸುಭಾಷ್‌ ದೇಸಾಯಿ ಹೇಳಿದರು.

ಜಿಲ್ಲೆಯ ಕೊರೊನಾ ಪರಿಸ್ಥಿತಿಯ ಬಗ್ಗೆ ಜಿಲ್ಲಾಡಳಿತ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಸಚಿವ ಸುಭಾಷ್‌ ದೇಸಾಯಿ ಪರಿಶೀಲಿಸಿ ಮಾತನಾಡಿದ ಅವರು, ಕೊರೊನಾದ 3ನೇ ಅಲೆಯ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ನೀಡಿಕೆ, ಲಭ್ಯವಿರುವ ಹಾಸಿಗೆ, ಆಮ್ಲಜನಕ ಪೂರೈಕೆ, ತಜ್ಞ ವೈದ್ಯರು ಮತ್ತು ದಾದಿಯರು ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಜ್ಜುಗೊಳಿಸಬೇಕು ಎಂದರು.

ಬ್ರೇಕ್‌ ದಿ ಚೈನ್‌ ಯೋಜನೆಯನ್ನು ಅನುಸರಿಸುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ಆಡಳಿತ ಕಾಳಜಿ ವಹಿಸಬೇಕು. ಮೂರನೇ ಅಲೆ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ತಜ್ಞ ವೈದ್ಯರು ಸುಸಜ್ಜಿತರಾಗಿರಬೇಕು. ಸರಕಾರದ ವಿವಿಧ ಯೋಜನೆಗಳನ್ನು ಪಡೆಯಲು ನಾಗರಿಕರು ಲಸಿಕಾ ಪ್ರಮಾಣಪತ್ರ ಹೊಂದಿರಬೇಕು ಎಂದು ನಿಯಮ ರೂಪಿಸಿದರೆ, ಲಸಿಕೆ ಪಡೆಯುವವರ ಪ್ರಮಾಣ ಹೆಚ್ಚಾಗುತ್ತದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ವ್ಯಾಕ್ಸಿನೇಶನ್‌ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದವರು ಹೇಳಿದರು.

ಕೊರೊನಾ ಸೋಂಕಿನ 2ನೇ ಅಲೆಯ ಪ್ರಭಾವ ಕಡಿಮೆಯಾಗಿದ್ದರೂ, ಕೊರೊನಾ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಬೇÅಕ್‌ ದಿ ಚೈನ್‌ ಅಭಿಯಾನದ ಅಡಿಯಲ್ಲಿ ನಿಯಮಗಳನ್ನು ಸಡಿಲಗೊಳಿಸಲಾಗಿರುವುದರಿಂದ ಎಲ್ಲ ಸಂಬಂ ಧಿತ ಸರಕಾರಿ ಸಂಸ್ಥೆಗಳ ಮುಖ್ಯಸ್ಥರು ಮೂರನೇ ಅಲೆಯನ್ನು ಎದುರಿಸಲು ಹೆಚ್ಚು ಜಾಗರೂಕರಾಗಿ ಕೆಲಸ ಮಾಡುವಂತೆ ನಿರ್ದೇಶಿಸಿದ್ದಾರೆ.

ಮಕ್ಕಳಿಗೆ ಪ್ರತ್ಯೇಕ ವೆಂಟಿಲೇಟರ್‌ಗಳನ್ನು ಒದಗಿಸಬೇಕು ಮತ್ತು ವ್ಯಾಕ್ಸಿನೇಶನ್‌ ಅಭಿಯಾನಗಳನ್ನು ನಡೆಸಬೇಕು. ಇದರಿಂದ ಭವಿಷ್ಯದಲ್ಲಿ ಆರೋಗ್ಯ ಇಲಾಖೆಯ ಮೇಲಿನ ಒತ್ತಡ ಖಂಡಿತವಾಗಿ ಕಡಿಮೆಯಾಗುತ್ತದೆ. ಆದ್ದರಿಂದ ಎಲ್ಲ ಸರಕಾರಿ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.

ಸಂಸದ ಇಮಿ¤ಯಾಜ್‌ ಜಲೀಲ್‌ ಮಾತನಾಡಿ, ಜಿಲ್ಲೆಯ ದಂತವೈದ್ಯರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಇದರಿಂದ ಕಪ್ಪು ಶೀಲೀಂಧ್ರ ರೋಗಿಗಳಿಗೆ ಚಿಕಿತ್ಸೆ ಸಮಯಕ್ಕೆ ಲಭ್ಯವಾಗುತ್ತದೆ. ರೋಗಿಗಳ ಸಂಖ್ಯೆ ಕಡಿಮೆಯಾಗುತ್ತದೆ. ಮಕ್ಕಳ ಕೊರೊನಾ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕೆ ಕ್ರಮವಾಗಿ ವೆಂಟಿಲೇಟರ್‌ಗಳ ಬಳಕೆಯಲ್ಲಿ ತರಬೇತಿ ಪಡೆದ ವೈದ್ಯರ ತಂಡವನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪರಿಷತ್‌ ಅಧ್ಯಕ್ಷೆ ಮೀನಾ ತಾಯಿ ಶೆಲ್ಕೆ, ಸಂಸದ ಡಾ|ಭಗತವ್‌ ಕರಾಡ್‌, ಶಾಸಕ ಹರಿಭಾವು ಬಾಗ್ಡೆ, ಜಿಲ್ಲಾಧಿಕಾರಿ ಸುನೀಲ್‌ ಚವಾಣ್‌ , ಹೆಚ್ಚುವರಿ ಜಿಲ್ಲಾಧಿಕಾರಿ ಡಾ|ಅನಂತ್‌ ಗವಾನೆ, ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಬಿ.ಬಿ.ನೆಮನೆ, ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು : ಕ್ಲೀನ್ ಸ್ವೀಪ್ ನಿಂದ ಪಾರಾದ ಲಂಕಾ

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ತಿಮ್ಮಪ್ಪನ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ : ರಕ್ಷಣಾ ವ್ಯವಸ್ಥೆ ಪಡೆದ ಮೊದಲ ದೇಗುಲ

ತಿಮ್ಮಪ್ಪನ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ : ರಕ್ಷಣಾ ವ್ಯವಸ್ಥೆ ಪಡೆದ ಮೊದಲ ದೇಗುಲ

ಆಕಾಶ್‌ ಕ್ಷಿಪಣಿಯನ್ನು ಮತ್ತೆ ಮರುಪರೀಕ್ಷೆ ನಡೆಸಿದ ಡಿಆರ್‌ಡಿಒ

ಆಕಾಶ್‌ ಕ್ಷಿಪಣಿಯನ್ನು ಮತ್ತೆ ಮರುಪರೀಕ್ಷೆ ನಡೆಸಿದ ಡಿಆರ್‌ಡಿಒಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

department of health

ಆರೋಗ್ಯ ಇಲಾಖೆಯಿಂದ 76 ವೈದ್ಯರ ನೇಮಕ

anivasi kannadiga  news

ಬಡವರ ಕಣ್ಣೀರೊರೆಸುವ ಕಾರ್ಯವೇ ನಮ್ಮ ಮುಖ್ಯ ಧ್ಯೇಯ: ಹರೀಶ್‌ ಜಿ. ಅಮೀನ್‌

mumbai, news

“ಕಲಾವಿದರು ಸಮಾಜದ ಸುಧಾರಣೆಗೆ ಪ್ರತಿಭೆ ಬಳಸಿಕೊಳ್ಳಲಿ”

anivasi kannadiga

ಚರಿತ್ರೆ ನಿರ್ಮಿಸಿದ ಅಪೂರ್ವ ಸಾಧಕ ಜಾರ್ಜ್‌: ಡಾ| ಜಿ. ಎನ್‌. ಉಪಾಧ್ಯ

anivasi kannada news

ಕುಲ್ಗಾಂವ್‌-ಬದ್ಲಾಪುರ ಪುರಸಭೆ ಶಾಲೆಗಳಲ್ಲಿ ಹೊಸದಾಗಿ 336 ವಿದ್ಯಾರ್ಥಿಗಳ ಪ್ರವೇಶ  

MUST WATCH

udayavani youtube

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 1ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ.

udayavani youtube

ಮುಖ ಕೊರಗಜ್ಜನದ್ದು ದೇಹ ಗಂಡನದ್ದು.. ಹೀಗೊಂದು ಕತೆ !

udayavani youtube

ಬ್ರಾಹ್ಮಣನಾದ ಕಾರಣ ಚೆನ್ನೈ ಸಂಸ್ಕೃತಿ ಅರಿತೆ ಎಂದ ಸುರೇಶ್ ರೈನಾ ವಿರುದ್ಧ ನೆಟ್ಟಿಗರು ಗರಂ

udayavani youtube

ಹಳಿ ಮೇಲೆ ನಿಂತ ಮಳೆ ನೀರು : ಸಾಗರದಿಂದ ಹೊರಡಲಿದೆ ತಾಳಗುಪ್ಪ-ಮೈಸೂರು ರೈಲು

udayavani youtube

ಒಂದು ವರ್ಷ ತುಂಬಿದ ಶಿವಾನಿಯ ದಿನಚರಿ ನೋಡಿ

ಹೊಸ ಸೇರ್ಪಡೆ

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು : ಕ್ಲೀನ್ ಸ್ವೀಪ್ ನಿಂದ ಪಾರಾದ ಲಂಕಾ

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಕ್ರೀಡೆಯ ಹೊಂಬೆಳಕಲ್ಲಿ ಜಗಮಗಿಸಿತು ಜಪಾನ್‌

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಟೋಕಿಯೊ ಒಲಿಂಪಿಕ್ಸ್‌ : ಆರ್ಚರಿ ರೌಂಡ್‌ : ದೀಪಿಕಾ ನಂ.9

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಒಲಿಂಪಿಕ್ಸ್‌ ಹಾಕಿ : ನೀಗಲಿ ಭಾರತದ ಪದಕ ಬರಗಾಲ

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.