ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸೈಕಲ್ ವಿತರಣೆ
Team Udayavani, Apr 25, 2021, 11:33 AM IST
ಮುಂಬಯಿ: ನಗರದ ಪ್ರಸಿದ್ಧ ಸೈಕ್ಲಿಸ್ಟ್, ಬೈಸಿಕಲ್ ಮೇಯರ್ ಎಂದೇ ಗುರುತಿಸಿಕೊಂಡಿರುವ ಫಿರೋಜಾ ಸುರೇಶ್ ಅವರು ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ದುಡಿಯುವ ಮಹಿಳೆಯರಿಗೆ ಸೈಕಲ್‌ಗಳನ್ನು ವಿತರಿಸುವ ಮೂಲಕ ನೆರವಾಗಿದ್ದಾರೆ.
ಕೊರೊನಾ ಎರಡನೇ ಅಲೆಯು ನಾಗರಿಕರ ಪ್ರಯಾಣಕ್ಕೆ ಕುತ್ತು ತಂದಿದ್ದು, ಅಡುಗೆಯವರು, ಸ್ವಚ್ಚತಾ ಸಿಬಂದಿ, ವಸತಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹಿಣಿಯರಿಗೆ ಸಹಾಯಕವಾಗಲು ಸೈಕಲ್‌ಗಳನ್ನು ವಿತರಿಸಿದ್ದಾರೆ. ಮಾರ್ಚ್ 8ರಂದು ನಡೆದ ವಿಶ್ವ ಮಹಿಳಾ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರು, ದುಡಿಯುವ ಮಹಿಳೆಯರಿಗೆ ಸೈಕಲ್‌ಗಳನ್ನು ಉಡುಗೊರೆಯಾಗಿ ನೀಡುವ ಪ್ರಯತ್ನವನ್ನು ಪ್ರಾರಂಭಿಸಿದರು. ಪ್ರಸ್ತುತ ಅಂಧೇರಿ ಪಶ್ಚಿಮದ ನಾಲ್ಕು ಪ್ರಮುಖ ಸ್ಥಳಗಳಾದ ಲೋಖಂಡ್ವಾಲಾ, ಓಶಿವಾರಾ, ಡಿಎನ್ ನಗರ ಮತ್ತು ಜುಹೂವನ್ನು ಒಳಗೊಂಡು ನೂರಾರು ಮಹಿಳೆಯರಿಗೆ ಸೈಕಲ್‌ಗಳನ್ನು ವಿತರಿಸಲಾಗಿದೆ.
ಸ್ಮಾರ್ಟ್ ಕಮ್ಯೂಟ್ ಫೌಂಡೇಶನ್ ಕಾರ್ಪೊರೇಟರ್‌ಗಳ ಹಣಕಾಸಿನ ನೆರವಿನೊಂದಿಗೆ ತಲಾ 10,000 ರೂ. ಗಳಿಗೆ 50 ಸೈಕಲ್‌ಗಳನ್ನು ಖರೀದಿಸಲಾಗಿದೆ. ಮಹಿಳೆಯರ ಅಗತ್ಯತೆಗಳನ್ನು ಮತ್ತು ಅವರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಈ ಬೈಸಿಕಲ್‌ಗಳನ್ನು ನಿರ್ಮಿಸಲಾಗಿದೆ. ಮಹಿಳೆಯರಿಗೆ ತಮ್ಮ ಪ್ರಯಾಣವನ್ನು ಕಡಿಮೆ ಮಾಡಲು ಈ ಕ್ರಮವನ್ನು ಅನುಸರಿಸಲಾಗಿದೆ. ವಸತಿ ಕಟ್ಟಡಗಳನ್ನು ತಲುಪಲು ಹೆಣಗಾಡುತ್ತಿರುವ ಮಹಿಳೆಯರನ್ನು ನಾವು ಗುರುತಿಸಿದ್ದೇವೆ. ಬಿಡುವಿಲ್ಲದ ರಸ್ತೆಗಳಲ್ಲಿ ಟ್ರಾಫಿಕ್ ಸಮಯದಲ್ಲಿ ಬೈಸಿಕಲ್ ಸವಾರಿ ಮಾಡುವುದು ಹೇಗೆ ಎಂಬುದರ ಕುರಿತು ನಾವು ಅವರಿಗೆ ತರಬೇತಿ ನೀಡುತ್ತೇವೆ. ತರಬೇತಿಯು ಒಂದು ವಾರದವರೆಗೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಇನ್ನೂ ಕಡಿಮೆ ಅವಧಿಯಲ್ಲಿ ತರಬೇತಿ ನೀಡಲಾಗುವುದು. ಎಂದು ಫಿರೋಜಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ ಸ್ವಾಮೀಜಿ
ಬಂಟರು ಸಹೃದಯಿ ದಾನಿಗಳಾಗಲಿ: ಎಸ್.ಎಂ. ಶೆಟ್ಟಿ
ಭವಾನಿ ಫೌಂಡೇಶನ್ ಆರ್ಥಿಕವಾಗಿ ಹಿಂದುಳಿದವರ ಆಶಾಕಿರಣ: ಡಾ| ಶಿಶಿರ್ ಶೆಟ್ಟಿ
ಸಂಘದಿಂದ ಸಮಾಜ ಬಾಂಧವರಿಗೆ ನೆರವಾಗುವ ಯೋಜನೆ ಜಾರಿ: ಸಂತೋಷ್ ಶೆಟ್ಟಿ
ಜೂ. 12: ಶ್ರೀ ಭುವನೇಶ್ವರಿ ಮಾತೆಯ ಮೂರ್ತಿ ಪ್ರತಿಷ್ಠೆ ಉತ್ಸವ, ಧಾರ್ಮಿಕ ಕಾರ್ಯಕ್ರಮ