ಬಂಟರ ಸಂಘ ಮಹಿಳಾ ವಿಭಾಗದ ವತಿಯಿಂದ ದಾಂಡಿಯಾ ರಾಸ್‌

Team Udayavani, Nov 10, 2019, 6:25 PM IST

ಮುಂಬಯಿ, ನ. 9: ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಆಯೋಜನೆಯಲ್ಲಿ ಹಾಗೂ ಸಂಘದ ಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗಗಳ ಕೂಡುವಿಕೆ ಯಲ್ಲಿ ವಾರ್ಷಿಕ ದಾಂಡಿಯಾ ರಾಸ್‌ ಸ್ಪರ್ಧೆಯು ನ. 7ರಂದು ಸಂಜೆ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್‌ ಹೆಗ್ಡೆ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಉಮಾ ಕೆ. ಶೆಟ್ಟಿ, ಚಿತ್ರಾ ಕೆ. ಶೆಟ್ಟಿ, ಚಿತ್ರಾ ಆರ್‌. ಶೆಟ್ಟಿ, ಮನೋರಮಾ ಎನ್‌. ಬಿ. ಶೆಟ್ಟಿ, ರತ್ನಾ ಪಿ. ಶೆಟ್ಟಿ ಹಾಗೂ ಸಂಘದ ವಿವಿಧ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷೆಯರಾದ ಅನಿತಾ ಅಶೋಕ್‌ ಶೆಟ್ಟಿ, ರಮ್ಯಾ ಉದಯ್‌ ಶೆಟ್ಟಿ, ವನಿತಾ ವೈ. ನೋಂಡಾ, ರೂಪಾ ಡಿ. ಶೆಟ್ಟಿ, ಕೃಷಿ¡ ಮುರಳಿ ಶೆಟ್ಟಿ, ವಿನೋದಾ ಅಶೋಕ್‌ ಶೆಟ್ಟಿ, ಜ್ಯೋತಿ ಪ್ರಕಾಶ್‌ ಹೆಗ್ಡೆ, ಅಮಿತಾ ಕಿಶೋರ್‌ ಶೆಟ್ಟಿ, ಜಯಾ ಅಶೋಕ್‌ ಶೆಟ್ಟಿ ಮತ್ತು ಸಂಘದ ಮಹಿಳಾ ವಿಭಾಗದ ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಪ್ರಶಾಂತಿ ಡಿ. ಶೆಟ್ಟಿ, ಭಜನಾ ಸಮಿತಿಯ ಸಂಚಾಲಕಿ ಶಶಿಕಲಾ ಎ. ಮಾಡ, ಅಡಪ್ಶನ್‌ ಸಮಿತಿಯ ಸಂಚಾಲಕಿ ಲತಾ ವಿ. ಶೆಟ್ಟಿ ಹಾಗೂ ಸಾಮಾಜಿಕ ಸಮಿತಿಯ ಸಂಚಾಲಕಿ ಅಮಿತಾ ಎಸ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ದಾಂಡಿಯಾ ರಾಸ್‌ ಸ್ಪರ್ಧೆಯ ತೀರ್ಪುಗಾರ ರಾಗಿ ಸೌಮ್ಯಾ ಶೆಟ್ಟಿ, ಶ್ವೇತಾ ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಮಾಜದ ಮಹಿಳೆ ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ದಾಂಡಿಯಾ ರಾಸ್‌ನಲ್ಲಿ ಆಶಾ ಶೆಟ್ಟಿ, ಸರಿತಾ ಶೆಟ್ಟಿ, ಜ್ಯೋತಿ ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ, ಸುಚಿತಾ ಕೆ. ಶೆಟ್ಟಿ, ಬಂಟರ ಸಂಘ ಲೇಡಿಸ್‌ ಹಾಸ್ಟೆಲ್‌ನ ಸಂಚಾಲಕಿ ಶಶಿಕಲಾ ಎಸ್‌. ಪೂಂಜಾ, ಮೋಹಿನಿ ಶೆಟ್ಟಿ, ಲತಾ ಪಿ. ಭಂಡಾರಿ, ಲತಾ ಪಿ. ಶೆಟ್ಟಿ, ಸರೋಜಾ ಎಸ್‌. ಶೆಟ್ಟಿ, ಅಮಿತಾ ಎಸ್‌. ಶೆಟ್ಟಿ, ಮಾಲಾ ಎಸ್‌. ಶೆಟ್ಟಿ, ತನಿಷ್ಕಾ ಶೆಟ್ಟಿ ಮೊದಲಾದವರು ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿ ವಿಶೇಷ ಬಹುಮಾನ ಪಡೆದರು. ಬಂಟರ ಸಂಘದ ಪ್ರಾದೇಶಿಕ ಸಮಿತಿಗಳ ಮಹಿಳಾ ವಿಭಾಗಗಳ ಪದಾಧಿಕಾರಿಗಳು, ಕಚೇರಿ ಸಿಬಂದಿ, ಕಾರ್ಯಕಾರಿ ಸಮಿತಿಯ ಸದಸ್ಯೆಯರು, ರಾಧಿಕಾ ಶೆಟ್ಟಿ, ಪ್ರವೀಣ್‌ ಶೆಟ್ಟಿ ವರಂಗ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ