ಅಲ್ಡೇಲ್‌ ರಾಷ್ಟ್ರಾಭಿಮಾನದ ಸಂಸ್ಥೆಯಾಗಿ ಬೆಳೆಯುತ್ತಿದೆ: ಆಲ್ಬರ್ಟ್‌ ಡಿ’ಸೋಜಾ


Team Udayavani, Apr 12, 2022, 11:27 AM IST

ಅಲ್ಡೇಲ್‌ ರಾಷ್ಟ್ರಾಭಿಮಾನದ ಸಂಸ್ಥೆಯಾಗಿ ಬೆಳೆಯುತ್ತಿದೆ: ಆಲ್ಬರ್ಟ್‌ ಡಿ’ಸೋಜಾ

ಮುಂಬಯಿ: ಉಪನಗರ ಪಾಲ‍್ಘರ್‌ ಜಿಲ್ಲೆಯಲ್ಲಿ ಉಡುಪಿ ಮೂಲದ ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ (ಪಾಂಗಳ) ಆಡಳಿತ್ವದ ಅಲ್ಡೇಲ್‌ ಎಜುಕೇಶನ್‌ ಟ್ರಸ್ಟ್‌ನ ಸಮೂಹದ ಸೈಂಟ್‌ ಜಾನ್‌ ಟೆಕ್ನಿಕಲ್‌ ಆ್ಯಂಡ್‌ ಎಜುಕೇಶನಲ್‌ ವಿದ್ಯಾಲಯದ ದಶ ವಾರ್ಷಿಕ ಘಟಿಕೋತ್ಸವವು ಎ. 9ರಂದು ಕಾಲೇಜು ಕ್ಯಾಂಪಸ್‌ನ ಸೈಂಟ್‌ ಜಾನ್‌ ಮಹಾವಿದ್ಯಾಲಯದ ಸಭಾಗೃಹದಲ್ಲಿ ಜರಗಿತು.

ಎರಡು ಭಾಗಗಳಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಪೂರ್ವಾಹ್ನ ಸೈಂಟ್‌ ಜಾನ್‌ ಇನ್‌ಸ್ಟಿಟ್ಯೂಟ್‌ ಆಫ್‌  ಹ್ಯೂಮ್ಯಾನಿಟಿಸ್‌ ಆ್ಯಂಡ್‌ ಸೈನ್ಸ್‌  ಹಾಗೂ ಸೈಂಟ್‌ ಜಾನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ರಿಸರ್ಚ್‌ ವಿಭಾಗದ ಘಟಿಕೋತ್ಸವ ನೆರವೇರಿಸಲಾಗಿದ್ದು, ಮೌಂಟ್‌ ಕಾರ್ಮೆಲ್‌ ಚರ್ಚ್‌ ಬಾಂದ್ರಾ ಇದರ ಧರ್ಮಗುರು ರೆ| ಫಾ| ರೂಬೆನ್‌ ಟೆಲ್ಲಿಸ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪದವಿ ಪ್ರದಾನಗೈದು ಶುಭ ಹಾರೈಸಿದರು. ಅಪರಾಹ್ನ ಸೈಂಟ್‌ ಜಾನ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ ಮತ್ತು ಸೈಂಟ್‌ ಜಾನ್‌ ಕಾಲೇಜ್‌ ಆಫ್‌ ಫಾರ್ಮಸಿ ಆ್ಯಂಡ್‌ ರಿಸರ್ಚ್‌ (ಎಸ್‌ಜೆಸಿಎಫ್‌ಆರ್‌) ವಿದ್ಯಾರ್ಥಿಗಳ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯ ಮುಂಬಯಿ ಇದರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ಅನುರಾಧಾ ಮಜುಂದಾರ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು.

ಅಲ್ಡೇಲ್‌ ಎಜುಕೇಶನ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ ಮಾತನಾಡಿ, ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗಳ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪದವಿ ಪಡೆಯುವುದು ಗೌರವದ ಸಂಕೇತವಾಗಿದೆ. ಪಾಲಕರು, ಶಿಕ್ಷಕರು ಮತ್ತು ಗೆಳೆಯರೊಂದಿಗೆ ವಿಶೇಷ ಅತಿಥಿಗಳ ಒಗ್ಗೂ ಡುವಿಕೆಯೊಂದಿಗೆ ಈ ಜೀವನ ಸಾಧನೆಯನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸುವುದು ಸ್ಮರಣೀಯವನ್ನಾಗಿಸುತ್ತದೆ. ಇಂಡಸ್ಟ್ರೀ ಇನ್‌ಪುಟ್‌ಗಳನ್ನು ಲಿಂಕ್‌ ಮಾಡಲು ಮತ್ತು ಜೀವಮಾನದ ಕಲಿಕೆಯ ಫಲಿತಾಂಶಗಳನ್ನು ಸೃಷ್ಟಿಸಲು ಈ ಅಗತ್ಯವನ್ನು ಅರ್ಥಮಾಡಿಕೊಂಡು, ಸೈಂಟ್‌ ಜಾನ್‌ ಟೆಕ್ನಿಕಲ್‌ ಕ್ಯಾಂಪಸ್‌ 2012ರಿಂದ ವಾರ್ಷಿಕ ಪದವಿ ದಿನವನ್ನು ಆಯೋಜಿಸುತ್ತಿದೆ. ಎರಡು ವರ್ಷಗಳ  ಲಾಕ್‌ಡೌನ್‌ ಜೀವನದ ಪ್ರತಿಯೊಂದು ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ಶೇ. 90ರಷ್ಟು ಕಾರ್ಯವು ಆನ್‌ಲೈನ್‌ನಲ್ಲಿ ನಡೆಯುವುದರೊಂದಿಗೆ ಶಿಕ್ಷಣ ಕ್ಷೇತ್ರ ಬಿಕ್ಕಟ್ಟನ್ನು ಅನುಭವಿಸಿತು. 2020-2021ರ

ಪದವೀಧರ ಬ್ಯಾಚ್‌ಗಳು ಅಮೂಲ್ಯವಾದ ಪೀರ್‌ ಕಲಿಕೆ ಮತ್ತು ಮುಖಾಮುಖೀ ಸಂವಹನವನ್ನು ಕಳೆದುಕೊಂಡಿದ್ದಾರೆ. ಅದನ್ನು ಎಂದಿಗೂ ಬದಲಾಯಿ ಸಲು ಸಾಧ್ಯವಿಲ್ಲ. ಆದ್ದರಿಂದ 2021ರಲ್ಲಿ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅದರ ಆತಿಥೇಯ ಸಂಸ್ಥೆಗಳಿಂದ ಪದವಿ ಪಡೆದಿದ್ದಾರೆ ಎಂಬುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಅಲ್ಡೇಲ್‌ ಎಜುಕೇಶನ್‌ ಟ್ರಸ್ಟ್‌ನ  ಕಾರ್ಯದರ್ಶಿ ಎಲ್ವಿನಾ ಎ. ಡಿ’ಸೋಜಾ, ಕೋಶಾಧಿಕಾರಿ ಎಲೈನ್‌ ಆರ್‌. ಬುಥೆಲ್ಲೋ, ಸದಸ್ಯ ಆಲ್ಡಿ’ಜ್‌ ಎ. ಡಿ’ಸೋಜಾ, ಕ್ಯಾಂಪಸ್‌ ನಿರ್ದೇಶಕ ಡಾ| ಡಿ. ಹೆನ್ರಿ ಬಾಬು, ಉಪ ಕ್ಯಾಂಪಸ್‌ ನಿರ್ದೇಶಕಿ ಮತ್ತು ಎಸ್‌ಜೆಸಿಎಫ್‌ಆರ್‌ ಪ್ರಾಂಶುಪಾಲೆ ಸವಿತಾ ತೌರೊ, ಎಸ್‌ಜೆಸಿಇಎಂ ಪ್ರಾಂಶುಪಾಲ ಡಾ| ಜಿ.ವಿ ಮುಳಗುಂದ, ಸೈಂಟ್‌ ಜಾನ್‌ ಇನ್‌ಸ್ಟಿಟ್ಯೂಟ್‌ ಆಫ್‌  ಹ್ಯೂಮ್ಯಾನಿಟಿಸ್‌ ಆ್ಯಂಡ್‌ ಸೈನ್ಸ್‌ ಮುಖ್ಯಸ್ಥ ಡಾ| ಬೃಜಬಂಧು ದಾಸ್‌, ಎಚ್‌ಆರ್‌ಡಿ ಮುಖ್ಯಸ್ಥ ವಿದ್ಯಾಧರ ಪಾಟೀಲ್‌ ಮತ್ತು ಎಚ್‌ಆರ್‌ಡಿ ವ್ಯವಸ್ಥಾಪಕ ಸುಧೀರ್‌ ಬಾಬು ಉಪಸ್ಥಿತರಿದ್ದರು.

ಸೈಂಟ್‌ ಜಾನ್‌ ಇಂಟರ್‌ನ್ಯಾಶನಲ್‌ ಸಿಬಿಎಸ್‌ಇ ಶಾಲಾ ವಿದ್ಯಾರ್ಥಿಗಳ ಸ್ಕೂಲ್‌ ಬ್ರ್ಯಾಂಡ್ ನ‌ ನಿನಾದ ದೊಂದಿಗೆ ಪದವೀಧರ ವಿದ್ಯಾರ್ಥಿಗಳು ಮತ್ತು ಗಣ್ಯರನ್ನು ಸಭಾಂಗಣಕ್ಕೆ ಕರೆತರಲಾಯಿತು. ಬಳಿಕ ಜಾಗತಿಕ ಶಾಂತಿ ನೆಮ್ಮದಿಯ ಬಾಳಿಗಾಗಿ ಸಾರ್ವತ್ರಿಕವಾಗಿ ಪ್ರಾರ್ಥಿಸಲಾಯಿತು. ಸರಸ್ವತಿ ವಂದನೆಯೊಂದಿಗೆ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಲಾಯಿತು. ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ ಸ್ವಾಗತಿಸಿ, ಪ್ರಸ್ತಾವನೆಗೈದರು.

ರಾಜ್ಯಪಾಲ, ಗೌರವಾನ್ವಿತ ಕುಲಪತಿ ಭಗತ್‌ ಸಿಂಗ್‌ ಕೋಶ್ಯಾರಿ ಮತ್ತು ಮುಂಬಯಿ ವಿವಿ ಉಪ ಕುಲಪತಿ ಪ್ರೊ| ಸುಹಾಸ್‌ ಪಡ್ನೇಕರ್‌ ಅವರ ವೀಡಿಯೋ ಭಾಷಣವನ್ನು ಪ್ರದರ್ಶಿಸಲಾಯಿತು. ಎಸ್‌ಜೆಸಿ ಹ್ಯೂಮ್ಯಾನಿಟಿಸ್‌ ಆ್ಯಂಡ್‌ ಸೈನ್ಸ್‌ನ 233 ವಿದ್ಯಾರ್ಥಿಗಳು ಮತ್ತು ಎಸ್‌ಜೆಸಿಐಎಂಆರ್‌ನ 41 ವಿದ್ಯಾರ್ಥಿಗಳು ಹಾಗೂ ಎಸ್‌ಜೆಸಿಇಎಫ್‌ನ 584 ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಸ್ವೀಕರಿಸಿದರು. ಆಯಾಯ ಕಾಲೇಜುಗಳ ಪ್ರಾಂಶುಪಾಲರು ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಘಟಿಕೋತ್ಸವ ಸಮಾಪನಗೊಂಡಿತು. ಕೊನೆಯಲ್ಲಿ ವಿಭಾಗವಾರು ಫೋಟೋ ಸೆಷನ್‌ ನಡೆಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಸ್ಮರಣಿಗಳನ್ನಿತ್ತು ಗೌರವಿಸಲಾಯಿತು.

ಬಿಎ, ಬಿಕಾಂ, ಬಿಎಎಫ್‌, ಬಿಬಿಐ, ಬಿಎಫ್‌ಎಂ, ಬಿಎಂಎಸ್‌, ಬಿಎಸ್‌ಸಿ, ಬಿಎಸ್‌ಸಿ-ಸಿಎಸ್‌, ಬಿಎಸ್‌ಸಿ-ಐಟಿ, ಬಿಎಸ್‌ಸಿ ಹೊಟೇಲ್‌ ಮ್ಯಾನೇಜ್‌ಮೆಂಟ್‌, ಮ್ಯಾನೇಜ್‌ಮೆಂಟ್‌ ಸ್ಟಡೀಸ್‌, ಎಂಜಿನಿಯ ರಿಂಗ್‌ ಮತ್ತು ಫಾರ್ಮಸಿಯಲ್ಲಿ ಉನ್ನತ ಶಿಕ್ಷಣದಿಂದ ಹಿಡಿದು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಸಸ್ಯಶಾಸ್ತ್ರ, ಹಾಸ್ಪಿಟಾಲಿಟಿ ಸ್ಟಡೀಸ್‌ ಮತ್ತು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಸೈಕಲಾಜಿಯಂತಹ ಪದವಿ ವಿಭಾಗ ಹೊಂದಿದ್ದೇವೆ. ಎ ಸ್ಟೇಟ್‌ ಬೋರ್ಡ್‌ ಜೂನಿಯರ್‌ ಕಾಲೇಜ್‌,  ಸ್ಟೇಟ್‌ ಬೋರ್ಡ್‌ ಸ್ಕೂಲ್‌ ಮತ್ತು  ಸಿಬಿಎಸ್‌ಸಿ ಸ್ಕೂಲ್‌, ಸೈಂಟ್‌ ಜಾನ್‌ ಪಾಲ್ಘರ್‌ ಕ್ಯಾಂಪಸ್‌ ಮುಂದಿನ ಪೀಳಿಗೆಯನ್ನು ಸಶಕ್ತಗೊಳಿಸಲು ಸನ್ನದ್ಧ ವಾಗಿದೆ. -ಆಲ್ಬರ್ಟ್‌ ಡಬ್ಲ್ಯು. ಡಿ’ಸೋಜಾ ಕಾರ್ಯಾಧ್ಯಕ್ಷರು, ಅಲ್ಡೇಲ್‌ ಎಜುಕೇಶನ್‌ ಟ್ರಸ್ಟ್‌ ಸಮೂಹ ಸಂಸ್ಥೆ

 

-ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.