Udayavni Special

ದೇವಾಡಿಗ ಸಂಘ: ಮಹಿಳಾ ವಿಭಾಗದಿಂದ ಆಟಿಡೊಂಜಿ ದಿನ

Team Udayavani, Aug 5, 2018, 3:05 PM IST

0308mum04.jpg

ಮುಂಬಯಿ: ದೇವಾಡಿಗ ಮಹಿಳಾ ವಿಭಾಗದ ಆಟಿಡೊಂಜಿ ದಿನ ಕಾರ್ಯಕ್ರಮವು ಜು. 28 ರಂದು ಸಂಘದ ದಾದರ್‌ನಲ್ಲಿರುವ ದೇವಾಡಿಗ ಸೆಂಟನರ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಸಂಘದ ಅಧ್ಯಕ್ಷರಾದ ರವಿ ದೇವಾಡಿಗ, ಉಪಾಧ್ಯಕ್ಷ ಸುರೇಶ್‌ ರಾವು, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ದೇವಾಡಿಗ, ಮಾಜಿ ಕಾರ್ಯಾಧ್ಯಕ್ಷರಾದ ಗೋಪಾಲ್‌ ಮೊಲಿ,  ಕೆ. ಕೆ. ಮೋಹನ್‌ದಾಸ್‌, ಎಚ್‌. ಮೋಹನ್‌ದಾಸ್‌, ವಾಸು ದೇವಾಡಿಗ, ಕೋಶಾಧಿಕಾರಿ ದಯಾನಂದ ದೇವಾಡಿಗ,  ಜೊತೆ ಕಾರ್ಯದರ್ಶಿ ಮಾಲತಿ ಮೊಲಿ ಉಪಸ್ಥಿತರಿದ್ದರು.

ಮಹಿಳಾ ಕಾರ್ಯಾಧ್ಯಕ್ಷೆ ಜಯಂತಿ ಆರ್‌. ಮೊಲಿ ಅವರು ಕಾರ್ಯಕಾರಿ ಸಮಿತಿಯ ಸದಸ್ಯರುಗಳು ಹಾಗೂ ನೆರೆದ ಅತಿಥಿ-ಗಣ್ಯರನ್ನು, ಮಹಿಳಾ ಸದ್ಯಸರನ್ನು ಸ್ವಾಗತಿಸಿ ಆಟಿದ ತಿಂಗಳ ಅಡುಗೆಗಳನ್ನು ತಯಾರಿಸಿ ತಂದ ಎÇÉಾ ಮಹಿಳೆಯರನ್ನು ಅಭಿನಂದಿಸಿ ಸಂಘದ ಎÇÉಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಮ್ಮ ತುಳುವ ಸಂಸ್ಕೃತಿ ಆಚಾರ-ವಿಚಾರಗಳನ್ನು ಅಳವಡಿಸಿ ತುಳು ಭಾಷೆಯನ್ನು ಉಳಿಸಬೇಕೆಂದು ಕರೆಯಿತ್ತರು.

ಸಂಘದ ಅಧ್ಯಕ್ಷರಾದ ರವಿ ದೇವಾಡಿಗ  ಅವರು ಮಾತನಾಡಿ, ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಅರ್ಹ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪಡೆದುಕೊಳ್ಳಬೇಕು. ಆಗಸ್ಟ್‌ 15 ರಂದು ನಡೆಯುವ ವಾರ್ಷಿಕ ಮಹಾಸಭೆಗೆ ಎಲ್ಲರೂ ಹಾಜರಿರುವಂತೆ ವಿನಂತಿಸಿದರು.

ಮಾಜಿ ಅಧ್ಯಕ್ಷರಾದ ವಾಸು ದೇವಾಡಿಗ, ಎಚ್‌. ಮೋಹನ್‌ದಾಸ್‌, ಕೆ. ಕೆ. ಮೋಹನ್‌ದಾಸ್‌, ಗೋಪಾಲ  ಮೊಲಿ, ಮಾತನಾಡಿ ಶುಭಹಾರೈಸಿದರು. ಮಹಿಳೆಯರಿಗೆ ರಸಪ್ರಶ್ನೆ, ಸಾಮಾನ್ಯ ಜ್ಞಾನ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಪರ್ಧೆಯ ಕನ್ನಡ ವಿಭಾಗದಲ್ಲಿ ಪ್ರಥಮ ವನಿತಾ ಆರ್‌. ದೇವಾಡಿಗ,  ದ್ವಿತೀಯ ಶಾಂತಾ ಪಿ. ದೇವಾಡಿಗ, ತೃತೀಯ ನಿರ್ಮಲಾ ದೇವಾಡಿಗ,  ಇಂಗ್ಲಿಷ್‌ ವಿಭಾಗದಲ್ಲಿ ಪ್ರಥಮ ಡಾ| ಪ್ರವೀಣಾ. ಎನ್‌. ಉಳ್ಳಾಲ್‌, ದ್ವಿತೀಯ ಭಾರತಿ ಶೇರಿಗಾ‚ರ್‌, ತೃತೀಯ ಸುಜಾತಾ ಶೇರಿಗಾರ್‌ ಅವರು ಬಹುಮಾನಗಳನ್ನು ಪಡೆದರು. ವಿಜೇತ ಸ್ಪರ್ಧಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.

ಆಟಿಯ ವಿಶೇಷತೆಯ ಬಗ್ಗೆ ಪ್ರಶ್ನೆಗಳಲ್ಲಿ ಶುಭಾ ದೇವಾಡಿಗರು ಬಹುಮಾನವನ್ನು ತನ್ನದಾಗಿಸಿಕೊಂಡರು. ಆಟಿ ತಿಂಗಳ ವಿಶೇಷತೆಯನ್ನು ಸಾರುವ ಸುಮಾರು 45 ಬಗೆಯ ಅಡುಗೆ ತಿನಿಸುಗಳನ್ನು ಪ್ರಸ್ತುತಪಡಿಸಲಾಯಿತು. ತುಳು ಪಾಡªನವನ್ನು ಹೇಮಾ ದೇವಾಡಿಗ, ಲಕ್ಷ್ಮೀ  ದೇವಾಡಿಗ ಹಾಗೂ ಲೋಲಾಕ್ಷೀ ದೇವಾಡಿಗರು ಹಾಡಿದರು.

ಆಟಿಯ ವಿಶೇಷತೆಗಳ ಬಗ್ಗೆ ಉಪಾಧ್ಯಕ್ಷೆ ರಂಜಿನಿ ಮೊಲಿ ಅವರು ವಿವರಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು. ಸುಜಾತಾ ದೇವಾಡಿಗರು ಪ್ರಾರ್ಥನೆಗೈದರು. ಕಾರ್ಯಕ್ರಮ ಯಶಸ್ವಿಯಾಗಲು ಸಂಘದ ಕ್ರೀಡಾಕಾರ್ಯಾಧ್ಯಕ್ಷೆ ಜಯಂತಿ ಎಂ. ದೇವಾಡಿಗ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುರೇಖಾ ದೇವಾಡಿಗರು ಸಹಕರಿಸಿದರು. ಜೊತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್‌ ವಂದಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗುಜರಾತ್ ನ ಒಎನ್​ಜಿಸಿ ಘಟಕದಲ್ಲಿ ಭಾರಿ ಸ್ಫೋಟ : ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿದ ಜನತೆ

ಗುಜರಾತ್ ನ ಒಎನ್​ಜಿಸಿ ಘಟಕದಲ್ಲಿ ಭಾರಿ ಸ್ಫೋಟ : ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿದ ಜನತೆ

ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಠಾಣೆ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆ!

ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಠಾಣೆ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆ!

ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ದಾಳಿ: ಸಿಗರೇಟ್, ಮೊಬೈಲ್ ಪತ್ತೆ

ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ದಾಳಿ: ಸಿಗರೇಟ್, ಮೊಬೈಲ್ ಪತ್ತೆ

ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್

ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ಮೋದಿ ಸೂಚನೆ? ಊಹಾಪೋಹಗಳಿಗೆ ತೆರೆ ಎಳೆದ ಸಚಿವ ಸುಧಾಕರ್

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬಯಿಯಲ್ಲಿ 9,500 ಕಟ್ಟಡಗಳ ಸೀಲ್‌ ಡೌನ್‌

ಮುಂಬಯಿಯಲ್ಲಿ 9,500 ಕಟ್ಟಡಗಳ ಸೀಲ್‌ ಡೌನ್‌

MUMBAI-TDY-1

ರಾಜ್ಯದಲ್ಲಿ11 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ

ಗ್ರಾಮೀಣ ಆಸ್ಪತ್ರೆ ಬಲಪಡಿಸುವತ್ತ  ಗಮನ ಹರಿಸಿ: ಅಜಿತ್‌

ಗ್ರಾಮೀಣ ಆಸ್ಪತ್ರೆ ಬಲಪಡಿಸುವತ್ತ ಗಮನ ಹರಿಸಿ: ಅಜಿತ್‌

Mumbai-tdy-1

ಕೈಗಾರಿಕೆಗಳಲ್ಲಿ ಆಮ್ಲಜನಕದ ಕೊರತೆ

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

ಗುಜರಾತ್ ನ ಒಎನ್​ಜಿಸಿ ಘಟಕದಲ್ಲಿ ಭಾರಿ ಸ್ಫೋಟ : ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿದ ಜನತೆ

ಗುಜರಾತ್ ನ ಒಎನ್​ಜಿಸಿ ಘಟಕದಲ್ಲಿ ಭಾರಿ ಸ್ಫೋಟ : ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿದ ಜನತೆ

ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಠಾಣೆ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆ!

ಪೊಲೀಸ್ ಕಸ್ಟಡಿಯಲ್ಲಿದ್ದ ಯುವಕ ಠಾಣೆ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆ!

ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ದಾಳಿ: ಸಿಗರೇಟ್, ಮೊಬೈಲ್ ಪತ್ತೆ

ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ದಾಳಿ: ಸಿಗರೇಟ್, ಮೊಬೈಲ್ ಪತ್ತೆ

ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್

ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ಮೋದಿ ಸೂಚನೆ? ಊಹಾಪೋಹಗಳಿಗೆ ತೆರೆ ಎಳೆದ ಸಚಿವ ಸುಧಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.