“ವಿವಿ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲಿ”


Team Udayavani, Jun 30, 2021, 1:07 PM IST

——–

ಮುಂಬಯಿ: ದೂರದೃಷ್ಟಿಯೊಂದಿಗೆ ಮಹರ್ಷಿ ಕಾರ್ವೆಯವರು ಸ್ಥಾಪಿಸಿದ ನಾಥಿಬಾಯಿ ದಾಮೋದರ್‌ ಠಾಕ್ರೆ ವಿಶ್ವವಿದ್ಯಾನಿಲಯವು ಮುಂದಿನ 25 ವರ್ಷಗಳಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ನೀಲನಕ್ಷೆಯನ್ನು ಸಿದ್ಧಪಡಿಸುವ ಮೂಲಕ ವಿಶ್ವದಲ್ಲೇ ವಿಶ್ವವಿದ್ಯಾನಿಲಯದ ಖ್ಯಾತಿಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಯೋಚಿಸಬೇಕು ಎಂದು ರಾಜ್ಯಪಾಲ ಮತ್ತು ಕುಲಪತಿ ಭಗತ್‌ ಸಿಂಗ್‌ ಕೋಶ್ಯಾರಿ ಸೂಚಿಸಿದ್ದಾರೆ.

ಅವರು ಮಂಗಳವಾರ ಜುಹುವಿನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಇಲಾಖೆ ಮುಖ್ಯಸ್ಥರು ಮತ್ತು ಪ್ರಾಂಶುಪಾಲರೊಂದಿಗೆ ಸಂವಾದ ನಡೆಸಿ, ಬೋಧನೆ ಮಾಡುವಾಗ ಶಿಕ್ಷಕರು ಮಾತೃಭಾಷೆ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳಿಗೆ ಸೇರಿದ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಇಂದು ಜಗತ್ತು ಲಿಂಗ ಸಮಾನತೆಯ ಬಗ್ಗೆ ಯೋಚಿಸುತ್ತಿದೆ. ಆದರೆ ಭಾರತ ಇನ್ನೂ ಹೆಚ್ಚಿನದಕ್ಕೆ ಹೋಗಿ ಸ್ತ್ರೀತ್ವಕ್ಕೆ ಶ್ರೇಷ್ಠತೆಯನ್ನು ನೀಡಿದೆ. ಧರಣಿ ಮಾತಾ, ಜಗನ್ಮಾತಾ ಜಗತ್ತನ್ನು ಆಳುತ್ತಾರೆ ಮತ್ತು ಪೋಷಿಸುತ್ತಾರೆ. ಇದು ಭಾರತ ನೀಡಿದ ಕಲ್ಪನೆ ಎಂದು ತಿಳಿಸಿದ ರಾಜ್ಯಪಾಲರು ಸಂಸ್ಥಾಪಕ ಮಹರ್ಷಿ ಕಾರ್ವೆ ಮತ್ತು ದನ್ಶೂರ್‌ ಠಾಕ್ರೆ ಅವರ ಕೊಡುಗೆಯನ್ನು ಪ್ರಸ್ತಾವಿಸಿ ಎಸ್‌ಎನ್‌ಡಿಟಿ ವಿಶ್ವವಿದ್ಯಾನಿಲಯವು ಮಹಿಳೆಯರ ಪ್ರಗತಿಗಾಗಿ ಮುಂದುವರಿಯುತ್ತದೆ ಎಂದು ಆಶಿಸಿದರು. ಜು. 2ರ ಬಳಿಕ ಉಪಕುಲಪತಿ ಡಾ| ಶಶಿಕಲಾ ವಂಜಾರಿ ಅವರ ಅಧಿಕಾರಾವಧಿ ಬರಲಿದೆ ಎಂದು ತಿಳಿಸಿದ ರಾಜ್ಯಪಾಲರು ಅವರನ್ನು ಗೌರವಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ  ವಿವಿಯ ಉಪಕುಲಪತಿ ಡಾ| ಶಶಿಕಲಾ ವಂಜಾರಿ ಮತ್ತು  ಐದು ವರ್ಷಗಳ ಅಧಿಕಾರಾವಧಿಯಲ್ಲಿ ವಿಶ್ವವಿದ್ಯಾನಿಲಯವು ಜುಹುವಿನಲ್ಲಿ ಸೌರಶಕ್ತಿ ಯೋಜನೆ ಯನ್ನು ಜಾರಿಗೆ ತರುವ ಮೂಲಕ ಸಾಂಪ್ರದಾಯಿಕ ಶಕ್ತಿಯನ್ನು ಉಳಿಸಿತು. ಈ ವಿಶ್ವವಿದ್ಯಾನಿಲಯವು ಭಾರತದ ಮೊದಲ ಮಹಿಳಾ ಅಧ್ಯಯನ ಸಂಶೋಧನ ಕೇಂದ್ರ ಮತ್ತು ಗೃಹ ವಿಜ್ಞಾನ ಕ್ಷೇತ್ರದಲ್ಲಿ  ಮೊದಲ ಸ್ವಾಯತ್ತ ಕಾಲೇಜನ್ನು ಹೊಂದಿದೆ ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಶಶಿಕಲಾ ವಂಜಾರಿ ಹೇಳಿದರು. ಹಣದ ಕೊರತೆಯಿಂದಾಗಿ ಕೆಲವು ವಿಷಯಗಳಲ್ಲಿ ವಿಶ್ವವಿದ್ಯಾಲಯವನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ವಿಷಾದಿಸಿದರು.

ಕ್ಯೂ-ವೈಸ್‌ ಚಾನ್ಸೆಲರ್‌ ಮಾಗರೆ ಕೃತಜ್ಞತೆ ಸಲ್ಲಿಸಿದರು. ಉಪಕುಲಪತಿ ಡಾ| ವಿಷ್ಣು ಮಗರೆ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.