ಡೊಂಬಿವಲಿ ಕರ್ನಾಟಕ ಸಂಘದ ವಾರ್ಷಿಕ ನಾಡಹಬ್ಬ ಸಂಭ್ರಮ


Team Udayavani, Dec 11, 2018, 4:06 PM IST

0912mum07.jpg

ಡೊಂಬಿವಲಿ: ಸ್ವಾತಂತ್ರ್ಯ ಹೋರಾ ಟದಂತೆ ಹಲವಾರು ಜನರ ತ್ಯಾಗ, ಬಲಿ ದಾನದಿಂದ ಹರಿದು, ಹಂಚಿ ಹೋಗಿದ್ದ  ಕರ್ನಾಟಕ ರಾಜ್ಯವು ರಾಜಕೀಯ ಹಾಗೂ ಭೌಗೋಳಿಕವಾಗಿ ಒಂದಾದರೂ ಭಾವನಾ ತ್ಮಕವಾಗಿ ಒಂದಾಗಿಲ್ಲ. ಗಡಿ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲ್‌ಕೋಟೆ, ಕಾಸರಗೋಡು ಪ್ರದೇಶಗಳು ಕರ್ನಾಟಕಕ್ಕೆ ಸೇರುವ ಆಸೆಯು ಬತ್ತಿಹೋಗಿದೆ ಎಂದು ಸಾಹಿತಿ, ಕವಿ ಡಾ| ಕರುಣಾಕರ ಶೆಟ್ಟಿ ಅವರು ನುಡಿದರು.

ಡಿ. 8ರಂದು ಡೊಂಬಿವಲಿ ಕರ್ನಾಟಕ ಸಂಘದ ಮಹಿಳಾ ವಿಭಾಗ ಮತ್ತು ಲಲಿತ ಕಲಾ ವಿಭಾಗದ ವತಿಯಿಂದ ಡೊಂಬಿವಲಿ ಪೂರ್ವದ ರೋಟರಿ ಸಭಾಗೃಹದಲ್ಲಿ ನಡೆದ ವಾರ್ಷಿಕ ನಾಡಹಬ್ಬ ಸಂಭ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮ ಮೂಲ ಬೇರು ಕರ್ನಾಟಕವಾಗಿದ್ದು, ತಾಯ್ನಾಡನ್ನೂ ಮರೆಯದಂತೆ ಸಮಯ ಸಿಕ್ಕಾಗ ಕನ್ನಡವನ್ನು ಉಳಿಸಿ-ಬೆಳೆಸುವ ಕಾರ್ಯ ಮಾಡುತ್ತೇವೆ. ಆದರೆ ನಮ್ಮ ಜನ್ಮಭೂಮಿಯ ಋಣವನ್ನು  ತೀರಿಸಲು ಹೇಗೆ  ಸಾಧ್ಯವಿಲ್ಲವೂ ಹಾಗೆ ಕರ್ಮಭೂಮಿಯಾದ ಮಹಾರಾಷ್ಟ್ರದ ಋಣವನ್ನು ತೀರಿಸಲು ಸಾಧ್ಯವಿಲ್ಲ. ಕರ್ನಾಟಕ ನಮಗೆ ಜನ್ಮ ನೀಡಿದರೆ, ಮಹಾರಾಷ್ಟ್ರ ನಮಗೆ ಅನ್ನ ನೀಡಿದ್ದು, ಜನ್ಮ ಹಾಗೂ ಕರ್ಮಭೂಮಿಯನ್ನು ಗೌರವಿಸೋಣ. ಕರ್ನಾಟಕ ಸಂಘದ ಕನ್ನಡದ ಕೈಂಕರ್ಯ ಅಭಿನಂದನೀಯವಾಗಿದೆ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ ರಂಗಭೂಮಿ ಕಲಾವಿದ, ಡೊಂಬಿವಲಿ ಕರ್ನಾಟಕ ಸಂಘದ ಸಂಸ್ಥಾಪಕ ಸದಸ್ಯ ಸುರೇಂದ್ರ ಕುಬೇರ ಅವರು ಮಾತನಾಡಿ, ಐದು ದಶಕಗಳ ಹಿಂದೆ ಪ್ರಾರಂಭ ಗೊಂಡ ಡೊಂಬಿವಲಿ ಕರ್ನಾಟಕ ಸಂಘ ಎಂಬ ಪುಟ್ಟ ಸಸಿ ಇಂದು ವಿಶಾಲ ವೃಕ್ಷವಾಗಿ ಬೆಳೆಯು ವುದರ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದೆ. ಹೊಸ ನೀರು ಬಂದಾಗ ಹಳೆ ನೀರು ಹರಿದು ಹೋಗಲೇ ಬೇಕು. ಮನುಷ್ಯನಿಗೆ ಹುಟ್ಟು ಸ್ವಾಭಾವಿಕ. ಆದರೆ ಸಾವು ನಿಶ್ಚಿತ. ಆದರೆ ಪ್ರಬಲವಾದ ಕಾರ್ಯಕರ್ತರ ತಂಡ ಹಾಗೂ ಪ್ರಗತಿಪರ ವಿಚಾರಗಳಿದ್ದರೆ ಸಂಘಟನೆಗಳಿಗೆ ಸಾವಿಲ್ಲ. ಅದಕ್ಕೆ ಡೊಂಬಿವಲಿ ಕರ್ನಾಟಕ ಸಂಘು ಅಮರವಾಗಿದೆ ಎಂದು ನುಡಿದು, ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀ ಯರನ್ನು ಸ್ಮರಿಸಿ ಅಭಿನಂದಿಸಿದರು.

ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ವಿಶೇಷ ಪೂಜೆ-ಸಲ್ಲಿಸಿ ಜ್ಯೋತಿ ಪ್ರಜ್ವಲಿಸಿ ಗಣ್ಯರು ಉದ್ಘಾಟಿಸಿದರು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಅವರು, ಕನ್ನಡದ ಕೈಂಕರ್ಯಕ್ಕೆ ಕಂಕಣ ಬದ್ಧವಾದ ನಮ್ಮ ಸಂಘವು ಕನ್ನಡತನವನ್ನು ಉಳಿಸಿ-ಬೆಳೆಸುವುದರ ಜತೆಗೆ ಜ್ಞಾನ ದಾಸೋಹದ ಮೂಲಕ ಗಮನ ಸೆಳೆದಿದು°, ಇಂದು 5 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ 160 ಶಿಕ್ಷಕರು ಜ್ಞಾನ ದಾಸೋಹ ಒದಗಿ ಸುತ್ತಿದ್ದಾರೆ. ಸಂಘ ಹೆಮ್ಮರವಾಗಿ ಬೆಳೆಯಲು ಸಹೃದಯಿ ಕನ್ನಡಿಗರ ಸಹಕಾರವೆ ಕಾರಣ ವಾಗಿದೆ. ಮುಂದಿನ ದಿನಗಳಲ್ಲೂ ಸಮಸ್ತ ಕನ್ನಡ ಮನಸ್ಸುಗಳ ಸಹಾಯ, ಸಹಕಾರ ಸದಾಯಿರಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಭರತನಾಟ್ಯದಲ್ಲಿ ವಿಶೇಷ ಸಾಧನೆಗೈದ ಕು| ಋತಿಕಾ ಶಂಕರ ಸುವರ್ಣ, ಕಥಕ್‌ ನೃತ್ಯಪಟು ಕು| ಅಕ್ಷತಾ ನರಸಿಂಹ ಪಡಸಲಗೆ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸ ಲಾಯಿತು. ಅತಿಥಿಗಳನ್ನು ಸಂಘದ ವತಿಯಿಂದ ಶಾಲು ಪದಾಧಿಕಾರಿಗಳು ಗೌರವಿಸಿದರು. ವಸಂತ ಸುವರ್ಣ, ಸನತ್‌ ಕುಮಾರ್‌ ಜೈನ್‌ ಅವರು ಸಮ್ಮಾನಿತರನ್ನು ಪರಿಚಯಿಸಿದರು.

ನಾಡಹಬ್ಬದ ನಿಮಿತ್ತ ಸಂಘದ ವಿವಿಧ ವಿಭಾಗಗಳು ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿ ದರು. ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ವಿತರಿಸಿದರು.
ವಿಮಲಾ ಶೆಟ್ಟಿ, ಯೋಗಿನಿ ಶೆಟ್ಟಿ, ವಿದ್ಯಾ ಆಲಗೂರ ವಿಜೇತ ಸ್ಪರ್ಧಿಗಳ ಯಾದಿಯನ್ನು ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಮಹಿಳಾ ವಿಭಾಗದವರಿಂದ ಹಾಗೂ ನಿಕಿತಾ ಸದಾನಂದ ಅಮೀನ್‌ ತಂಡದವರಿಂದ ನೃತ್ಯ ವೈವಿಧ್ಯ ನಡೆಯಿತು. 

ಮಾಧುರಿಕಾ ಬಂಗೇ ರ ಮತ್ತು ಹೇಮಾ ಸದಾನಂದ ಅಮೀನ್‌ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಡಾ| ದಿಲೀಪ್‌ ಕೋಪರ್ಡೆ, ಉಪ ಕಾರ್ಯಾಧ್ಯಕ್ಷ ಡಾ| ವಿ.ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಷ್ಮಾ ಡಿ. ಶೆಟ್ಟಿ, ಗೌರವ ಕಾರ್ಯದರ್ಶಿ  ಮಾಧುರಿಕಾ ಬಂಗೇರ, ಕೋಶಾಧಿಕಾರಿ ಯೋಗಿನಿ ಶೆಟ್ಟಿ, ಸಂಘದ ಕೋಶಾಧಿಕಾರಿ ಲೋಕನಾಥ ಶೆಟ್ಟಿ, ಲಲಿತ ಕಲಾ ವಿಭಾಗದ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಉಪಸ್ಥಿತರಿದ್ದರು.

ಹೇಮಾ ಹೆಗ್ಡೆ, ಭಾವನಾ ಬಂಗೇರ ಬಳಗದವರು ಪ್ರಾರ್ಥನೆಗೈದರು. ವಸಂತ ಸುವರ್ಣ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಿಟuಲ್‌ ಶೆಟ್ಟಿ, ವಸಂತ ಕಲಕೋಟಿ, ಜಗತ್ಪಾಲ ಶೆಟ್ಟಿ, ರಾಜು ಭಂಡಾರಿ, ಆನಂದ ಶೆಟ್ಟಿ, ಸತೀಶ್‌ ಆಲಗೂರ, ನ್ಯಾಯವಾದಿ ಆರ್‌. ಎನ್‌. ಭಂಡಾರಿ, ರವಿ ಸನಿಲ್‌, ಮೋಹನ್‌ ಸಾಲ್ಯಾನ್‌, ಮುರಳಿ ಶೆಟ್ಟಿ, ಕೃಷಿ¡ ಶೆಟ್ಟಿ, ಗೀತಾ ಮೆಂಡನ್‌ ಮೊದಲಾದವರು ಉಪಸ್ಥಿತರಿದ್ದರು. ರಮೇಶ್‌ ಸುವರ್ಣ, ಗೀತಾ ಕೋಟೆಕಾರ್‌, ಚಂಚಲಾ ಸಾಲ್ಯಾನ್‌, ಪರಿಮಳಾ ಕುಲಕರ್ಣಿ, ಪುಷ್ಪಾ ಸಾಲ್ಯಾನ್‌, ಪವಿತ್ರಾ ಶೆಟ್ಟಿ, ಕಾಂತಿಲಾಲ ಚೌಧರಿ ಮೊದಲಾದವರು ಸಹಕರಿಸಿದರು. 

 ಕರ್ನಾಟಕದಲ್ಲಿ ಕೇವಲ ನವೆಂಬರ್‌ ಒಂದರಂದು ಕನ್ನಡ ಮಂತ್ರವನ್ನು ಜಪಿಸಿ ಕನ್ನಡವನ್ನು ಉಳಿಸಿ-ಬೆಳೆಸುವ ಮಾತು ಹೇಳುತ್ತಾರೆ. ಆದರೆ ಮುಂಬಯಿ ಮತ್ತು ಉಪನಗರಗಳಲ್ಲಿ ಕನ್ನಡಮ್ಮನ ನಿತ್ಯೋತ್ಸವ ವರ್ಷದ ದಿನವಿಡೀ ನಡೆಯುತ್ತಿರುತ್ತದೆ. ಸಮಾಜದ ವಿಶೇಷವಾಗಿ ಯಾವುದೇ ಕನ್ನಡಿಗರ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದು ಎಂಬ ಉದ್ದೇಶದಿಂದ ಪ್ರಾರಂಭಿಸಿದ ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಶಿಕ್ಷಣ ಸಂಸ್ಥೆ ಗಳು ಪ್ರಸ್ತುತ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಗಮನ ಸೆಳೆದಿದ್ದು, ಇದಕ್ಕೆ ಅಂದು ಸಂಘ ಕಟ್ಟಿದ ಹಿರಿಯರ ಆಶೀರ್ವಾದ, ಇಂದಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರಿಶ್ರಮವೇ ಕಾರಣ.
– ಇಂದ್ರಾಳಿ ದಿವಾಕರ ಶೆಟ್ಟಿ, ಅಧ್ಯಕ್ಷರು, ಡೊಂಬಿವಲಿ ಕರ್ನಾಟಕ ಸಂಘ

ಚಿತ್ರ-ವರದಿ : ಗುರುರಾಜ ಪೋತನೀಸ್‌

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.