ಡಾ| ರಜನಿ ವಿ. ಪೈ ಅವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ

Team Udayavani, Jun 19, 2019, 4:49 PM IST

ಮುಂಬಯಿ: ಮೈಸೂರಿನ ರೋಟರಿ ಸಭಾಂಗಣದಲ್ಲಿ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗವು ಜೂ. 9 ರಂದು ಆಯೋಜಿಸಿದ್ದ ಪ್ರೇಮಕವಿ ಕೆ. ಎಸ್‌. ನ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮುಂಬಯಿಯ ಸಮಾಜ ಸೇವಕಿ ಡಾ| ರಜನಿ ವಿ. ಪೈ ಅವರಿಗೆ ಹೊರನಾಡಿನ ಸಮಾಜ ಸೇವೆಗಾಗಿ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ-2019 ನ್ನು ಪ್ರದಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಾಡೋಜ ಡಾ| ಮಹೇಶ್‌ ಜೋಶಿ, ಡಾ| ಲತಾ ರಾಜಶೇಖರ್‌, ಡಾ| ಸಿ. ಪಿ. ಕೆ ಹಾಗೂ ಅನೇಕ ಹಿರಿಯ ಸಾಹಿತಿಗಳು, ಕಲಾಭಿಮಾನಿಗಳು ಉಪ ಸ್ಥಿತರಿ ದ್ದರು.

ಸಂಸ್ಥೆಯ ಅಧ್ಯಕ್ಷ ಡಾ| ಭೇರ್ಯ ರಾಮ್‌ ಕುಮಾರ್‌ ಅವರು ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು. ರಜನಿ ಪೈ ಅವರು ಕಳೆದ ಒಂದು ದಶಕದಿಂದ ನಗರದ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂಬಯಿ ಕನ್ನಡ ಸಂಘ ಮಾಟುಂಗ ಇದರ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಮುಲುಂಡ್‌ ನಿವಾಸಿಯಾಗಿದ್ದು, ಅನೇಕ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಜನಿ ಪೈ ಅವರ ಸಮಾಜಪರ ಸೇವೆಗಾಗಿ ಗೌರವ ಡಾಕ್ಟರೇಟ್‌ನೊಂದಿಗೆ ಕರ್ನಾಟಕ ವಿಕಾಸ ರತ್ನ, ಸೌರಭ ರತ್ನ, ಕ್ರಿಯಾಶೀಲ ಕನ್ನಡತಿ, ಅಂತಾರಾಷ್ಟ್ರೀಯ ಗೋಲ್ಡನ್‌ ಅಚೀವ್‌ಮೆಂಟ್‌ ಪ್ರಶಸ್ತಿ ಹೀಗೆ ಅನೇಕ ಪುರಸ್ಕಾರಗಳು ದೊರೆತಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ