ಅಖಿಲ ಭಾರತ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರ ನಾಟಕ,ಸಮ್ಮಾನ

Team Udayavani, Nov 22, 2017, 11:52 AM IST

21-Mum05a.jpg

ಮುಂಬಯಿ: ದಾನಿಗಳು ನೀಡುವ ದೇಣಿಗೆಯು ಉತ್ತಮ ಕಾರ್ಯಗಳಿಗೆ ವಿನಿಯೋಗವಾದಾಗ ನಮಗೆ ಸಂತೋಷ ವಾಗುತ್ತದೆ. ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರ ಘಟಕವು ಸಂಗ್ರಹಿಸಿದ ದೇಣಿಗೆಯನ್ನು ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಅನ್ನದಾನಕ್ಕೆ ಉಪಯೋಗಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇಂತಹ ಸಮಾಜಪರ ಕಾರ್ಯಗಳು ಸಂಘ-ಸಂಸ್ಥೆಗಳಿಂದ ನಿರಂತರವಾಗಿ ನಡೆಯುತ್ತಿರಬೇಕು ಎಂದು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಷ್‌ ಬಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.

ನ. 19ರಂದು ವಿಕ್ರೋಲಿ ಪೂರ್ವದ ಕನ್ನಮ್‌ವಾರ್‌ ನಗರದ ಕಾಮಾYರ್‌ ಕಲ್ಯಾಣ್‌ ಭವನದಲ್ಲಿ ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರ ಘಟಕದ ವತಿಯಿಂದ ನಡೆದ ನಾಟಕ ಪ್ರದರ್ಶನ ಮತ್ತು ಸಾಧಕರಿಗೆ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಕಾರ್ಯಕ್ರಮದಲ್ಲಿ ಹಿರಿಯ ಗುರುಸ್ವಾಮಿಗಳನ್ನು ಸಮ್ಮಾನಿಸುವ ಕಾರ್ಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಶರಣ್‌ ಯು. ಶೆಟ್ಟಿ ಅವರನ್ನು ಅಭಿನಂದಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಯ್ಯಪ್ಪ ಸೇವಾ ಸಮಿತಿಯು ಕೇವಲ ಧಾರ್ಮಿಕ ಕಾರ್ಯಕ್ಕೆ ಸೀಮಿತವಾಗಿರದೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನವಿಮುಂಬಯಿ ಕಲಂಬೋಲಿಯ ಹಿರಿಯ ಗುರುಸ್ವಾಮಿ ಯಾದ ವಿಟuಲ್‌ ಕೆ. ಬಂಗೇರ ಇವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.  ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ಪಡೆದ ಶರಣ್‌ ಉದಯ್‌ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.
ಆಶೀರ್ವಚನ ನೀಡಿದ ಜೆರಿಮೆರಿ ಶ್ರೀ ಉಮಾಮಹೇಶ್ವರಿ ಮಂದಿರದ ಅರ್ಚಕ ಎಸ್‌. ಎನ್‌. ಉಡುಪ ಅವರು ಮಾತ ನಾಡಿ, ನಾವು ಇನ್ನೊಬ್ಬರಿಗೆ ಒಳ್ಳೆಯದು ಮಾಡಿದರೆ ನಮಗೂ ಒಳ್ಳೆಯದಾಗುತ್ತದೆ. ಬೇರೆಯವರಿಗೆ ಕೆಡುಕನ್ನು ಬಯಸಿದರೆ ನಮ್ಮ ಬಾಳಲ್ಲೂ ತೊಂದರೆಯುಂಟಾಗುತ್ತದೆ. ಅಖೀಲ ಭಾರತೀಯ ಅಯ್ಯಪ್ಪ ಸೇವಾ ಸಂಘವು ಅಯ್ಯಪ್ಪ ಭಕ್ತರ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಹಿಂದೂ ಸಂಸ್ಕೃತಿಯಲ್ಲಿ ಅನ್ನದಾನವು ಮಹಾದಾನವಾಗಿರುತ್ತದೆ. ಈ ಕಾರ್ಯವನ್ನು ಅಯ್ಯಪ್ಪ ಸೇವಾ ಸಂಘವು ಮಾಡುತ್ತಿದೆ. ಶ್ರೀ ಅಯ್ಯಪ್ಪನ ಅನುಗ್ರಹವು ಅವರಿಗೆ ಸದಾಯಿರುತ್ತದೆ ಎಂದರು.

ಪ್ರೋತ್ಸಾಹ, ಸಹಕಾರ ಸದಾಯಿರಲಿ ಅಖೀಲ ಭಾರತೀಯ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಆರ್‌. ಶ್ರೀನಿವಾಸನ್‌ ಅವರು ಮಾತನಾಡಿ, ಬರುವ ವರ್ಷ ನಮ್ಮ ಸಂಸ್ಥೆಯು ದಶಮಾನೋತ್ಸವ ಆಚರಿಸಲಿದ್ದು, ಆ ಪ್ರಯುಕ್ತ ಅನೇಕ ಯೋಜನೆಗಳನ್ನು ನಾವು ಹಮ್ಮಿಕೊಂಡಿದ್ದೇವೆ. ಬರುವ ವರ್ಷ ಉಚಿತ ನಾಟಕ ಪ್ರದರ್ಶನವನ್ನು ಮಾಡಲಿದ್ದೇನೆ. ದಾನಿಗಳು, ಭಕ್ತರು ನೀಡುವ ಪ್ರತಿಯೊಂದು ದೇಣಿಗೆಯಲ್ಲೂ ಒಂದು ಪೈಸೆಯೂ ವ್ಯರ್ಥವಾಗದೆ ಶಬರಿಮಲೆಯ ಪಂಪೆಯಲ್ಲಿ ನಡೆಯುವ ಅನ್ನದಾನಕ್ಕಾಗಿ ಉಪಯೋಗವಾಗಲಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ನಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಯೋಜನೆಗಳಿಗೆ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್‌ ಶೆಟ್ಟಿ ಯೆಯ್ನಾಡಿ, ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ನವಿಮುಂಬಯಿ ಹೊಟೇಲ್‌ ಓನರ್ ಅಸೋಸಿಯೇಶನ್‌ ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಎಣ್ಣೆಹೊಳೆ ಸುಧಾಕರ ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಂಸುಂದರ್‌ ಶೆಟ್ಟಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಉದಯ್‌ ಎಲ್‌. ಶೆಟ್ಟಿ ಪೇಜಾವರ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರವು ಕಳೆದ ಒಂಬತ್ತು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ತುಳು-ಕನ್ನಡಿಗರ ಮನ-ಮನೆಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬರುವ ವರ್ಷ ಸಂಸ್ಥೆಯು ದಶಮಾನೋತ್ಸವ ಸಂಭ್ರಮವನ್ನು ಆಚರಿಸಲಿದ್ದು, ನಮ್ಮ ಎಲ್ಲ ರೀತಿಯ ಧ್ಯೇಯೋದ್ದೇಶಗಳಿಗೆ ತುಳು-ಕನ್ನಡಿಗರು, ಭಕ್ತಾದಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ. ಸ್ವಾಮಿ ನಿಷ್ಠೆ, ಏಕಾಗ್ರತೆ, ಪರಿಶ್ರಮದಿಂದ ಈ ಸಂಘದ ಮುಖಾಂತರ ನಾವು ಸಮಾಜ ಸೇವೆಯಲ್ಲಿ ತೊಡಗಿದ್ದೇವೆ. ಇದೊಂದು ಅಯ್ಯಪ್ಪ ಸ್ವಾಮಿಯ ಕಾರ್ಯವೆಂದು ತಿಳಿದು ಕಾರ್ಯತತ್ಪರರಾಗಿದ್ದೇವೆ. ನಾವು ಸಂಗ್ರಹಿಸುವ ದೇಣಿಗೆಯು ಅನ್ನದಾನಕ್ಕೆ ಹೋಗುತ್ತಿದ್ದು, ನಮ್ಮ ಸೇವೆಗೆ ಎಲ್ಲರ ಸಹಕಾರವಿರಲಿ ಎಂದರು.

ಪ್ರಾರಂಭದಲ್ಲಿ ಗೀತಾ ಸತೀಶ್‌ ಶೆಟ್ಟಿ ಪ್ರಾರ್ಥನೆಗೈದರು. ಪೂವಪ್ಪ  ಎ. ಪೂಜಾರಿ ಪೇಜಾವರ, ಸುರೇಶ್‌ ಪಾಟ್ಕರ್‌, ಎಂ. ಕೃಷ್ಣ ಪೂಜಾರಿ, ಪ್ರವೀಣ್‌ ವಿ. ಶೆಟ್ಟಿ, ಯುಗಾನಂದ ಶೆಟ್ಟಿ, ರಾಜೇಶ್‌ ಬಂಗೇರ, ಪ್ರವೀಣ್‌ ಕೆ. ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಹರೀಶ್‌ ಶೆಟ್ಟಿ ಉಪಸ್ಥಿತರಿದ್ದರು. ಅಮೃತಾ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು, ಉದ್ಯಮಿಗಳು, ಅಯ್ಯಪ್ಪ ವ್ರತಧಾರಿಗಳು, ಭಕ್ತಾದಿಗಳು, ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಕಲಾವಿದರಿಂದ ಕುಸಲ್ದ ರಸೆ ನವೀನ್‌ ಡಿ. ಪಡೀಲ್‌ ನಿರ್ದೇಶನದ, ಗಡಿನಾಡ ಕಲಾನಿಧಿ ಕೃಷ್ಣ ಮಂಜೇಶ್ವರ ರಚಿಸಿ, ಸುಂದರ ರೈ ಮಂದಾರ ಅಭಿನಯಿಸಿರುವ ಅಂಚಗೆ-ಇಂಚಗೆ ನೂತನ ನಾಟಕ ಪ್ರದರ್ಶನಗೊಂಡಿತು. 

ಚಿತ್ರ-ವರದಿ : ಸುಭಾಷ್‌  ಶಿರಿಯಾ

ದಾನಿಗಳು ನೀಡುವ ದೇಣಿಗೆಯು ಉತ್ತಮ ಕಾರ್ಯಗಳಿಗೆ ವಿನಿಯೋಗವಾದಾಗ ನಮಗೆ ಸಂತೋಷ ವಾಗುತ್ತದೆ. ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರ ಘಟಕವು ಸಂಗ್ರಹಿಸಿದ ದೇಣಿಗೆಯನ್ನು ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಅನ್ನದಾನಕ್ಕೆ ಉಪಯೋಗಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಇಂತಹ ಸಮಾಜಪರ ಕಾರ್ಯಗಳು ಸಂಘ-ಸಂಸ್ಥೆಗಳಿಂದ ನಿರಂತರವಾಗಿ ನಡೆಯುತ್ತಿರಬೇಕು ಎಂದು ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಷ್‌ ಬಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.

ನ. 19ರಂದು ವಿಕ್ರೋಲಿ ಪೂರ್ವದ ಕನ್ನಮ್‌ವಾರ್‌ ನಗರದ ಕಾಮಾYರ್‌ ಕಲ್ಯಾಣ್‌ ಭವನದಲ್ಲಿ ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರ ಘಟಕದ ವತಿಯಿಂದ ನಡೆದ ನಾಟಕ ಪ್ರದರ್ಶನ ಮತ್ತು ಸಾಧಕರಿಗೆ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಕಾರ್ಯಕ್ರಮದಲ್ಲಿ ಹಿರಿಯ ಗುರುಸ್ವಾಮಿಗಳನ್ನು ಸಮ್ಮಾನಿಸುವ ಕಾರ್ಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಶರಣ್‌ ಯು. ಶೆಟ್ಟಿ ಅವರನ್ನು ಅಭಿನಂದಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಯ್ಯಪ್ಪ ಸೇವಾ ಸಮಿತಿಯು ಕೇವಲ ಧಾರ್ಮಿಕ ಕಾರ್ಯಕ್ಕೆ ಸೀಮಿತವಾಗಿರದೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನವಿಮುಂಬಯಿ ಕಲಂಬೋಲಿಯ ಹಿರಿಯ ಗುರುಸ್ವಾಮಿ ಯಾದ ವಿಟuಲ್‌ ಕೆ. ಬಂಗೇರ ಇವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.  ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ಪಡೆದ ಶರಣ್‌ ಉದಯ್‌ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.
ಆಶೀರ್ವಚನ ನೀಡಿದ ಜೆರಿಮೆರಿ ಶ್ರೀ ಉಮಾಮಹೇಶ್ವರಿ ಮಂದಿರದ ಅರ್ಚಕ ಎಸ್‌. ಎನ್‌. ಉಡುಪ ಅವರು ಮಾತ ನಾಡಿ, ನಾವು ಇನ್ನೊಬ್ಬರಿಗೆ ಒಳ್ಳೆಯದು ಮಾಡಿದರೆ ನಮಗೂ ಒಳ್ಳೆಯದಾಗುತ್ತದೆ. ಬೇರೆಯವರಿಗೆ ಕೆಡುಕನ್ನು ಬಯಸಿದರೆ ನಮ್ಮ ಬಾಳಲ್ಲೂ ತೊಂದರೆಯುಂಟಾಗುತ್ತದೆ. ಅಖೀಲ ಭಾರತೀಯ ಅಯ್ಯಪ್ಪ ಸೇವಾ ಸಂಘವು ಅಯ್ಯಪ್ಪ ಭಕ್ತರ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಹಿಂದೂ ಸಂಸ್ಕೃತಿಯಲ್ಲಿ ಅನ್ನದಾನವು ಮಹಾದಾನವಾಗಿರುತ್ತದೆ. ಈ ಕಾರ್ಯವನ್ನು ಅಯ್ಯಪ್ಪ ಸೇವಾ ಸಂಘವು ಮಾಡುತ್ತಿದೆ. ಶ್ರೀ ಅಯ್ಯಪ್ಪನ ಅನುಗ್ರಹವು ಅವರಿಗೆ ಸದಾಯಿರುತ್ತದೆ ಎಂದರು.

ಪ್ರೋತ್ಸಾಹ, ಸಹಕಾರ ಸದಾಯಿರಲಿ ಅಖೀಲ ಭಾರತೀಯ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಆರ್‌. ಶ್ರೀನಿವಾಸನ್‌ ಅವರು ಮಾತನಾಡಿ, ಬರುವ ವರ್ಷ ನಮ್ಮ ಸಂಸ್ಥೆಯು ದಶಮಾನೋತ್ಸವ ಆಚರಿಸಲಿದ್ದು, ಆ ಪ್ರಯುಕ್ತ ಅನೇಕ ಯೋಜನೆಗಳನ್ನು ನಾವು ಹಮ್ಮಿಕೊಂಡಿದ್ದೇವೆ. ಬರುವ ವರ್ಷ ಉಚಿತ ನಾಟಕ ಪ್ರದರ್ಶನವನ್ನು ಮಾಡಲಿದ್ದೇನೆ. ದಾನಿಗಳು, ಭಕ್ತರು ನೀಡುವ ಪ್ರತಿಯೊಂದು ದೇಣಿಗೆಯಲ್ಲೂ ಒಂದು ಪೈಸೆಯೂ ವ್ಯರ್ಥವಾಗದೆ ಶಬರಿಮಲೆಯ ಪಂಪೆಯಲ್ಲಿ ನಡೆಯುವ ಅನ್ನದಾನಕ್ಕಾಗಿ ಉಪಯೋಗವಾಗಲಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ. ನಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಯೋಜನೆಗಳಿಗೆ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸುರೇಶ್‌ ಶೆಟ್ಟಿ ಯೆಯ್ನಾಡಿ, ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸಿಎ ವಿಶ್ವನಾಥ ಶೆಟ್ಟಿ, ನವಿಮುಂಬಯಿ ಹೊಟೇಲ್‌ ಓನರ್ ಅಸೋಸಿಯೇಶನ್‌ ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಎಣ್ಣೆಹೊಳೆ ಸುಧಾಕರ ಶೆಟ್ಟಿ, ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಂಸುಂದರ್‌ ಶೆಟ್ಟಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.

ಉದಯ್‌ ಎಲ್‌. ಶೆಟ್ಟಿ ಪೇಜಾವರ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಅಖೀಲ ಭಾರತ ಅಯ್ಯಪ್ಪ ಸೇವಾ ಸಂಘ ಮಹಾರಾಷ್ಟ್ರವು ಕಳೆದ ಒಂಬತ್ತು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ತುಳು-ಕನ್ನಡಿಗರ ಮನ-ಮನೆಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬರುವ ವರ್ಷ ಸಂಸ್ಥೆಯು ದಶಮಾನೋತ್ಸವ ಸಂಭ್ರಮವನ್ನು ಆಚರಿಸಲಿದ್ದು, ನಮ್ಮ ಎಲ್ಲ ರೀತಿಯ ಧ್ಯೇಯೋದ್ದೇಶಗಳಿಗೆ ತುಳು-ಕನ್ನಡಿಗರು, ಭಕ್ತಾದಿಗಳ ಪ್ರೋತ್ಸಾಹ, ಸಹಕಾರ ಸದಾಯಿರಲಿ. ಸ್ವಾಮಿ ನಿಷ್ಠೆ, ಏಕಾಗ್ರತೆ, ಪರಿಶ್ರಮದಿಂದ ಈ ಸಂಘದ ಮುಖಾಂತರ ನಾವು ಸಮಾಜ ಸೇವೆಯಲ್ಲಿ ತೊಡಗಿದ್ದೇವೆ. ಇದೊಂದು ಅಯ್ಯಪ್ಪ ಸ್ವಾಮಿಯ ಕಾರ್ಯವೆಂದು ತಿಳಿದು ಕಾರ್ಯತತ್ಪರರಾಗಿದ್ದೇವೆ. ನಾವು ಸಂಗ್ರಹಿಸುವ ದೇಣಿಗೆಯು ಅನ್ನದಾನಕ್ಕೆ ಹೋಗುತ್ತಿದ್ದು, ನಮ್ಮ ಸೇವೆಗೆ ಎಲ್ಲರ ಸಹಕಾರವಿರಲಿ ಎಂದರು.

ಪ್ರಾರಂಭದಲ್ಲಿ ಗೀತಾ ಸತೀಶ್‌ ಶೆಟ್ಟಿ ಪ್ರಾರ್ಥನೆಗೈದರು. ಪೂವಪ್ಪ  ಎ. ಪೂಜಾರಿ ಪೇಜಾವರ, ಸುರೇಶ್‌ ಪಾಟ್ಕರ್‌, ಎಂ. ಕೃಷ್ಣ ಪೂಜಾರಿ, ಪ್ರವೀಣ್‌ ವಿ. ಶೆಟ್ಟಿ, ಯುಗಾನಂದ ಶೆಟ್ಟಿ, ರಾಜೇಶ್‌ ಬಂಗೇರ, ಪ್ರವೀಣ್‌ ಕೆ. ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಬಂಟರ ಸಂಘ ಕುರ್ಲಾ-ಭಾಂಡೂಪ್‌ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಹರೀಶ್‌ ಶೆಟ್ಟಿ ಉಪಸ್ಥಿತರಿದ್ದರು. ಅಮೃತಾ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು, ಉದ್ಯಮಿಗಳು, ಅಯ್ಯಪ್ಪ ವ್ರತಧಾರಿಗಳು, ಭಕ್ತಾದಿಗಳು, ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಕಲಾವಿದರಿಂದ ಕುಸಲ್ದ ರಸೆ ನವೀನ್‌ ಡಿ. ಪಡೀಲ್‌ ನಿರ್ದೇಶನದ, ಗಡಿನಾಡ ಕಲಾನಿಧಿ ಕೃಷ್ಣ ಮಂಜೇಶ್ವರ ರಚಿಸಿ, ಸುಂದರ ರೈ ಮಂದಾರ ಅಭಿನಯಿಸಿರುವ ಅಂಚಗೆ-ಇಂಚಗೆ ನೂತನ ನಾಟಕ ಪ್ರದರ್ಶನಗೊಂಡಿತು. 

ಚಿತ್ರ-ವರದಿ : ಸುಭಾಷ್‌  ಶಿರಿಯಾ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.