ಇ-ಲರ್ನಿಂಗ್‌ ಸಾಧನಗಳ ಮೂಲಕ ಬೋಧನೆ ಅಗತ್ಯ: ಸಂದೀಪ್‌ ಗುಂಡ

ಪ್ರಿಸಿಜನ್‌ ಫೌಂಡೇಶನ್‌ ಮತ್ತು ಸರ್‌ ಫೌಂಡೇಶನ್‌ ವತಿಯಿಂದ ಶಿಕ್ಷಕರ ಕಾರ್ಯಾಗಾರ

Team Udayavani, Aug 13, 2019, 11:14 AM IST

ಸೊಲ್ಲಾಪುರ, ಆ. 12: ಶಿಕ್ಷಣ ಕಲಿಯುವುದು, ಕೇವಲ ನೋಡುವುದು ಮತ್ತು ಕೇಳುವುದು ಅಲ್ಲ. ಇಂದು ಪ್ರತ್ಯಕ್ಷವಾಗಿ ಇ-ಲರ್ನಿಂಗ್‌ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಬಹಳ ಮಹತ್ವದ್ದಾಗಿದೆ. ಆದ್ದರಿಂದ ಪ್ರತಿಯೊಬ್ಬ ಶಿಕ್ಷಕರು ತಮ್ಮ ಪಾರಂಪರಿಕ ಬೋಧನೆ ಕೈಬಿಟ್ಟು, ಆಧುನಿಕ ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಬೇಕೆಂದು ಇ-ಲರ್ನಿಂಗ್‌ ಸಂಕಲ್ಪನೆಯ ಮುಖ್ಯಸ್ಥರಾದ ಸಂದೀಪ್‌ ಗುಂಡ ಅವರು ವ್ಯಕ್ತಪಡಿಸಿದರು.

ನಗರದ ಹುತಾತ್ಮಾ ಸ್ಮ್ಮತಿ ಮಂದಿರದಲ್ಲಿ ಪ್ರಿಸಿಜನ್‌ ಫೌಂಡೇಶನ್‌ ಮತ್ತು ಸರ್‌ ಫೌಂಡೇಶನ್‌ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ಪರಿವರ್ತನೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳಿಗೆ ಪ್ರತಿ ದಿನ ಹೊಸ-ಹೊಸ ಜ್ಞಾನ ಕೊಡಲು ಶಿಕ್ಷಕರು ಹೊಸ-ಹೊಸ ತಂತ್ರಜ್ಞಾನಗಳ ಉಪಯೋಗ ಮೂಲಕ ಬೋಧನೆ ಮಾಡಬೇಕಿದೆ. 21ನೇ ಶತಮಾನದಲ್ಲಿ ಶಿಕ್ಷಕರು ಹಿಂದಿನ ಕಾಲದ ಅಧ್ಯಾಪನ ಮಾಡುತ್ತೇವೆ ಎಂದರೆ ನಡೆಯುವುದಿಲ್ಲ. ಬದಲಾಗು ತ್ತಿರುವ ಪರಿಸ್ಥಿತಿಗೆ ಅನುಸಾರವಾಗಿ ಶಿಕ್ಷಕರು ಬೋಧನೆಯಲ್ಲಿ ಬದಲಾವಣೆ ಮಾಡಬೇಕಿದೆ. ಆದ್ದರಿಂದ ಇ-ಲರ್ನಿಂಗ್‌ ಸಾಹಿತ್ಯಗಳ ಉಪಯೋಗದಿಂದ ಬೋಧನೆ ಮಾಡಬೇಕು ಎಂದು ಅಭಿಪ್ರಾಯಿಸಿದರು.

ಸಿಇಓ ಪ್ರಕಾಶ ವಾಯಚಳ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಪ್ರಿಸಿಜನ್‌ ಫೌಂಡೇಶನ್‌ ಉತ್ತಮ ಕಾರ್ಯ ಮಾಡುತ್ತಿದೆ. ಸುಮಾರು 120 ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ಇ-ಲರ್ನಿಂಗ್‌ ಸಾಹಿತ್ಯ ನೀಡಿ ಮಹಾನ್‌ ಕಾರ್ಯ ಮಾಡುತ್ತಿದೆ. ಸರಕಾರದ ಪ್ರತಿನಿಧಿಯಾಗಿ ಪ್ರಿಸಿಜನ್‌ ಫೌಂಡೇಶನ್‌ನ ಎಲ್ಲರಿಗೂ ಧನ್ಯವಾದಗಳು ಹೇಳಿದರು.

ಪ್ರಾಥಮಿಕ ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್‌ ಕುಮಾರ ರಾಠೊಡ್‌ ಮಾತನಾಡಿ, ಬಹಳಷ್ಟು ಮಂದಿ ಶ್ರೀಮಂತರಿದ್ದಾರೆ. ಆದರೆ ಅವರಲ್ಲಿ ದಾನ ಮಾಡುವ ಮನಸ್ಸಿರುವುದಿಲ್ಲ. ಪ್ರಿಸಿಜನ್‌ ಫೌಂಡೇಶನ್‌ ಮುಖ್ಯಸ್ಥರಾದ ಯತಿನ್‌ ಶಾಹ ಅವರು ದಾನ ಮಾಡಬೇಕೆನ್ನುವ ಮನೋಭಾವನೆ ಹೊಂದಿದ್ದಾರೆ. ಸರಕಾರ ಮಾಡದ ಕೆಲಸವನ್ನು ಪ್ರಿಸಿಜನ್‌ ಫೌಂಡೇಶನ್‌ ಮಾಡುತ್ತಿದೆ. ಹೀಗಾಗಿ ಅವರ ಕಾರ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಲಾಗಿದೆ ಎಂದು ಹೇಳಿದರು.

ಮೊದಲಿಗೆ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆಯಲ್ಲಿ ಪ್ರಿಸಿಜನ್‌ ಇ-ಲರ್ನಿಂಗ್‌ ಪ್ರಕಲ್ಪ ಪುಸ್ತಕ ಮತ್ತು ಪ್ರಿಸಿಜನ್‌ ಚರ್ಚಾಗೋಷ್ಠಿ ಕಾರ್ಯಕ್ರಮದಲ್ಲಿ ಗೌರವಿಸಲ್ಪಟ್ಟ ಸಾಮಾಜಿಕ ಸಂಸ್ಥೆಗಳ ಪರಿಚಯದ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಡಾ| ಸುಹಾಸಿನಿ ಶಾಹ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾಧವ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಸರ್‌ ಫೌಂಡೇಶನ ಮುಖ್ಯಸ್ಥರಾದ ಸಿದ್ದರಾಮ ಮಾಶಾಳೆ ವಂದಿಸಿದರು. ಸೊಲ್ಲಾಪುರ ಜಿಲ್ಲೆಯಿಂದ ಸುಮಾರು 700 ಕ್ಕಿಂತ ಹೆಚ್ಚಿನ ಪ್ರಾಥಮಿಕ ಶಿಕ್ಷಕ-ಶಿಕ್ಷಕಿಯರು ಇ-ಲರ್ನಿಂಗ್‌ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ