ಶಿಕ್ಷಣ ಸ್ವಾವಲಂಬಿ ಬದುಕಿಗೆ ಪ್ರೇರಕ ಶಕ್ತಿ: ಹರೀಶ್‌ ಸಾಲ್ಯಾನ್‌

Team Udayavani, Sep 20, 2019, 5:54 PM IST

ಮುಂಬಯಿ, ಸೆ. 19: ಸಂಸ್ಕೃತಿ, ಸಂಸ್ಕಾರಗಳರಭಸದ ಬದಲಾವಣೆಯಲ್ಲೂ ಯಕ್ಷಗಾನ ಸನಾತನ ಧರ್ಮದ ವೇದಿಕೆಯನ್ನು ಕಾಯ್ದು ಕೊಂಡಿದೆ. ಇದು ಸರ್ವ ಸಮಸ್ಯೆಗಳ ಪರಿಹಾರ ಒದಗಿಸುವ ಮಾತೃಸ್ವರೂಪಿಯಾಗಿದೆ. ಸ್ಥಳ ಪುರಾಣಗಳ ಬಯಲಾಟದ ಪ್ರದರ್ಶನದಿಂದ ತುಳುನಾಡಿನ ಪವಿತ್ರ ದೇಗುಲಗಳ ಪೌರಾಣಿಕ ಹಿನ್ನೆಲೆಗಳ ಅರಿವು ನಮಗೆ ಆಗುತ್ತದೆ. ಇದರಿಂದ ಆಯಾಯ ಊರಿನ ಸಂಪ್ರದಾಯ ಶಾಶ್ವತಗೊಳ್ಳುತ್ತದೆ ಎಂದು ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ ಥಾಣೆ ಇದರ ಅಧ್ಯಕ್ಷ ಹರೀಶ್‌ ಡಿ. ಸಾಲ್ಯಾನ್‌ ಅಭಿಪ್ರಾಯಪಟ್ಟರು.

ಸೆ. 17ರಂದು ಅಪರಾಹ್ನ ಥಾಣೆ ಪಶ್ಚಿಮದ ಘೋಡ್‌ ಬಂದರ್‌ರೋಡ್‌ ಕಾಶೀನಾಥ್‌ ಘಾಣೇಕರ್‌ ಸಭಾಗೃಹದಲ್ಲಿ ಘೋಡ್‌ ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ ಥಾಣೆ ಇದರ ಶೈಕ್ಷಣಿಕ ನೆರವು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದ ಅಮೂಲಾಗ್ರ ಬದಲಾವಣೆಯಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ. ಇದು ಸ್ವಾವಲಂಬಿ ಬದುಕಿಗೆ ಪ್ರೇರಕ ಶಕ್ತಿಯಾಗಿದೆ. ಹಲವು ವರ್ಷಗಳಿಂದ ನಮ್ಮ ಸಂಸ್ಥೆಯು ಆರ್ಥಿ ಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದಾನಿಗಳ ಹಾಗೂ ಸದಸ್ಯರ ಸಹಕಾರದಿಂದ ನೆರವು ಒದಗಿಸಿದೆ ಎಂದು ತಿಳಿಸಿದ ಅವರು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಅತಿಥಿ ಯಾಗಿ ಉಪಸ್ಥಿತರಿದ್ದ ಆನಂದ ಬಂಗೇರ ಬಜ್ಪೆ ಶುಭ ಕೋರಿ ಮಾತನಾಡಿದರು. ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ, ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ ರಾಜೇಶ್‌ ಗುಜರನ್‌ ಪಾವೂರು, ಸಂಚಾಲಕ ಬಿ. ದಯಾನಂದ ಗುಜರನ್‌ ಅವರನ್ನು ಗೌರವಿಸಲಾಯಿತು.

ವಿದ್ಯಾರ್ಥಿಗಳ ಪುರಸ್ಕಾರದ ಯಾದಿಯನ್ನು ಶೈಕ್ಷಣಿಕ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಕೊಠಾರಿ ವಾಚಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸೀಮಾ ಶೆಟ್ಟಿ ವಂದಿಸಿದರು. ಲೇಖಕ ನಿತ್ಯಾನಂದ ಬೆಳ್ವಾಯಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಘೋಡ್‌ ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ ಗೌರವ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ, ಉಪಾಧ್ಯಕ್ಷ ಲಕ್ಷ¾ಣ್‌ ಮಣಿಯಾಣಿ, ಕೋಶಾಧಿಕಾರಿ ಶ್ರೀನಾಥ್‌ ಶೆಟ್ಟಿ, ಜತೆ ಕಾರ್ಯದರ್ಶಿ ರವಿ ಕೋಟ್ಯಾನ್‌, ಜತೆ ಕೋಶಾಧಿಕಾರಿ ಸದಾಶಿವ ಮೊಲಿ, ಸಲಹೆಗಾರ ಪ್ರಶಾಂತ್‌ ನಾಯಕ್‌, ಲೆಕ್ಕ ಪರಿಶೋಧಕ ಜಯ ಪೂಜಾರಿ ಯುವ ವಿಭಾಗದ ಅಧ್ಯಕ್ಷ ವಿಶ್ವನಾಥ್‌ ಶೆಟ್ಟಿ, ಪ್ರತಿಭಾ ಶೆಟ್ಟಿ, ಅನುಪಮಾ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

ಆಡಳಿತ ಮಂಡಳಿ, ಮಹಿಳಾ ವಿಭಾಗ, ಯುವ ವಿಭಾಗ, ಸರ್ವ ಸದಸ್ಯರು ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಶ್ರೀ ಭಗವತಿ ಕ್ಷೇತ್ರ ಮಹಾತೆ¾ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

 ಚಿತ್ರ-ವರದಿ :ರಮೇಶ್‌ ಅಮೀನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ