ಹಬ್ಬ ಹರಿದಿನ ; ದೀಪಾವಳಿ ಕಥೆ, ನಂಬಿಕೆ


Team Udayavani, Nov 14, 2020, 8:25 AM IST

Editorial

ದೀಪಾವಳಿ ಹಬ್ಬದ ಮೊದಲನೇ ದಿನ ಎಣ್ಣೆ ಸ್ನಾನ ಮಾಡುವ ಪದ್ಧತಿ ಬಹುತೇಕ ಹಿಂದೂ ಸಮುದಾಯದವರ ಮನೆಯಲ್ಲಿದೆ. ಇದಕ್ಕೆ ಕಾರಣ ಈ ದಿನ ಸಮುದ್ರ ಮಂಥನದ ವೇಳೆ ಧನ್ವಂತರಿ ಅವತಾರವೆತ್ತಿದ ಶ್ರೀವಿಷ್ಣು ಅಮೃತ ಕಲಶದೊಡನೆ ಪ್ರತ್ಯಕ್ಷನಾಗುತ್ತಾನೆ. ಹೀಗಾಗಿ ಈ ದಿನ ತುಂಬಿಡುವ ಸ್ನಾನದ ನೀರಿನಲ್ಲಿ ಗಂಗೆ, ಎಣ್ಣೆಯಲ್ಲಿ ಧನಲಕ್ಷ್ಮೀ ಇರುತ್ತಾಳೆ ಎಂಬ ನಂಬಿಕೆ ಇದ್ದು ಅಭ್ಯಂಜನ ಸ್ನಾನ ಮಾಡುವುದರಿಂದ ಆಯುರಾರೋಗ್ಯ, ಆಯಸ್ಸು ವೃದ್ಧಿಯಾಗಿ ಸಕಲ ಪಾಪ ನಿವಾರಣೆಯಾಗಲಿದೆ ಎಂಬ ನಂಬಿಕೆ ಇದೆ. ನರಕಾಸುರನನ್ನು ಕೊಂದು ಶ್ರೀ ಕೃಷ್ಣನೂ ಈ ದಿನ ಎಣ್ಣೆ ಸ್ನಾನ ಮಾಡಿದ್ದ ಎನ್ನಲಾಗುತ್ತದೆ.

ನರಕ ಚತುರ್ದಶಿ
ಹಬ್ಬದ ಮೊದಲ ದಿನ ಅಂದರೆ ನ. 14ರಂದು ನರಕ ಚತುರ್ದಶಿ. ವರಾಹಾವತಾರದಲ್ಲಿದ್ದ ವಿಷ್ಣುವಿನ ಶರೀರದ ಒಂದು ತೊಟ್ಟು ಬೆವರು ಭೂಮಿಗೆ ಬಿದ್ದು ಅದರಿಂದ ನರಕಾಸುರನ ಜನನವಾಗುತ್ತದೆ. ಭೂದೇವಿ ನರಕಾಸುರನಿಗೆ ವೈಷ್ಣವಶಾಸ್ತ್ರವನ್ನು ವಿಷ್ಣುವಿನಿಂದ ಬೇಡಿ ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕ ಕಂಟಕನಾಗುತ್ತಾನೆ. ಆತನ ದುಷ್ಟತನವನ್ನು ಸಹಿಸದ ಭೂದೇವಿ ಸಹಿತ ದೇವತೆಗಳೆಲ್ಲ ಶ್ರೀ ಕೃಷ್ಣನ ಮೊರೆ ಹೋಗುತ್ತಾರೆ. ಅಶ್ವಯುಜ ಕೃಷ್ಣ ಚತುದರ್ಶಿಯಂದು ಕೃಷ್ಣ ನರಕಾಸುರನನ್ನು ಸಂಹಾರ ಮಾಡುತ್ತಾನೆ. ಆತನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಬಂಧಮುಕ್ತಗೊಳಿಸುತ್ತಾನೆ. ಹೀಗಾಗಿ ಈ ದಿನ ಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಕರೆದು ಆದರಾತಿಥ್ಯ ನೀಡುವ ಸಂಪ್ರದಾಯ ಭಾರತದಲ್ಲಿದೆ.

ಅಮಾವಾಸ್ಯೆ
ನರಕ ಚತುರ್ದಶಿಯ ಮಾರನೇ ದಿನ ನ. 15ರಂದು ಅಮಾವಾಸ್ಯೆ. ಈ ದಿನ ಸಮುದ್ರ ಮಂಥನದ ವೇಳೆ ಲಕ್ಷಿ$¾à ಉದಯಿಸಿದಳೆಂದು, ಲಕ್ಷ್ಮೀದೇವಿಯನ್ನು ಪೂಜಿಸಲಾಗುತ್ತದೆ. ವ್ಯಾಪಾರಿಗಳು ವಾಣಿಜ್ಯ ವಹಿವಾಟಿನ ನೂತನ ವರ್ಷವನ್ನು ಈ ದಿನದಿಂದ ಆರಂಭಿಸುವುದುಂಟು. ಲಕ್ಷಿ$¾àದೇವಿಗೆ ಪ್ರಿಯವಾದ ವಸ್ತುಗಳನ್ನಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಮನೆ ತುಂಬಾ ಬೆಳಕು ಇದ್ದರೆ ಲಕ್ಷಿ$¾à ದೇವಿ ಬರುತ್ತಾಳೆ ಎಂಬ ನಂಬಿಕೆ ಇದೆ.

ಬಲಿಪಾಡ್ಯ
ಮೂರನೇ ದಿನ ನ. 16ರಂದು ಬಲಿಪಾಡ್ಯಮಿ. ಬಲಿ ಚಕ್ರವರ್ತಿ ಈ ದಿನ ಭೂಲೋಕ ಸಂಚಾರಕ್ಕೆ ಬರುತ್ತಾನೆ ಎಂಬ ನಂಬಿಕೆಯಿಂದ ಈ ದಿನ ಬಲೀಂದ್ರ ಪೂಜೆ ನಡೆಸಲಾಗುತ್ತದೆ. ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ವಿಷ್ಣು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ತ್ರಿವಿಕ್ರಮನಾಗಿ ಬೆಳೆದ ವಾಮನಾವತಾರಿ ವಿಷ್ಣು ಎರಡು ಹೆಜ್ಜೆಗಳಲ್ಲಿ ಭೂಮಿ, ಆಕಾಶ ಪಡೆದು ಮೂರನೇ ಹೆಜ್ಜೆ ಎಲ್ಲಿ ಇಡಲಿ ಎಂದು ಕೇಳಿದಾಗ ತನ್ನ ಶಿರದ ಮೇಲೆ ಇಡುವಂತೆ ಬಲಿ ಚಕ್ರವರ್ತಿ ಹೇಳುತ್ತಾನೆ. ಆಗ ವಿಷ್ಣು ಆತನನ್ನು ಪಾತಾಳಕ್ಕೆ ತಳ್ಳುತ್ತಾನೆ. ಬಲಿಯ ಭಕ್ತಿ ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿ ವರ್ಷ ನಿನ್ನ ಹೆಸರಿನಲ್ಲಿ ಪೂಜೆ ನಡೆಸುವಂತಾಗಲಿ ಎಂದು ವರ ನೀಡುತ್ತಾನೆ. ಹೀಗಾಗಿ ಬಲಿ ಪಾಡ್ಯಮಿ ಆಚರಣೆ ಚಾಲ್ತಿಯಲ್ಲಿದೆ. ಇನ್ನು ಇದೇ ದಿನ ಶ್ರೀ ಕೃಷ್ಣ ಗೋವರ್ಧನ ಗಿರಿ ಎತ್ತಿ ಇಂದ್ರನನ್ನು ಸೋಲಿಸಿದ ಎನ್ನುವ ಕಥೆಯೂ ಇರುವುದರಿಂದ ಗೋಪೂಜೆ, ಗೋವರ್ಧನ ಪೂಜೆಯೂ ಇದೇ ದಿನ ನಡೆಯುತ್ತದೆ.

ನೀವು ಸಾಮುದಾಯಿಕವಾಗಿ ಆಚರಿಸಿರುವ ದೀಪಾವಳಿ ಸಂಭ್ರಮದ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ . ಕಾರ್ಯಕ್ರಮದ ವರದಿ, ಫೋಟೋ ಮತ್ತು ವೀಡಿಯೋಗಳನ್ನು ಕಳುಹಿಸಿ. [email protected]@udayavani.com 7618774529

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.