ಕನಸು ನನಸಾಗಿರುವುದಕ್ಕೆ ಅತೀವ ಸಂತಸವಾಗುತ್ತಿದೆ: ಪದ್ಮನಾಭ ಪಯ್ಯಡೆ


Team Udayavani, Dec 19, 2020, 12:46 PM IST

ಕನಸು ನನಸಾಗಿರುವುದಕ್ಕೆ ಅತೀವ ಸಂತಸವಾಗುತ್ತಿದೆ: ಪದ್ಮನಾಭ ಪಯ್ಯಡೆ

ಮುಂಬಯಿ, ಡಿ. 18: ಬಂಟರು ಪರಿಶ್ರಮದ ಮೂಲಕ ಪ್ರಗತಿ ಸಾಧಿಸಿದವರು. ಬಂಟ ಸಮಾಜದ ಹಿರಿಯರ ಸಂಘಟನಾತ್ಮಕ ಚಿಂತನೆ, ಬಂಟ ಬಾಂಧವರ ಭವಿಷ್ಯದ ಕುರಿತು ವಿಶೇಷ ಕಾಳಜಿಯಿಂದ ಬಂಟರ ಸಂಘವಿಂದು ಬೆಳೆದು ಹೆಮ್ಮರವಾಗಿದೆ. ಸಂಘವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯ ದಾಪುಗಾಲಿಡುತ್ತಾ ಮುನ್ನಡೆ ಯುತ್ತಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಘದ ಕೊಡುಗೆ ಅನನ್ಯವಾದುದು ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ತಿಳಿಸಿದರು.

ಡಿ. 17ರಂದು ಬೊರಿವಲಿ ಪಶ್ಚಿಮದ ಹೋಲಿಕ್ರಾಸ್‌ ರೋಡ್‌, ಐ.ಸಿ. ಕಾಲನಿಯಲ್ಲಿ ಸಂಘದ ನೂತನ ಅಂತಾರಾಷ್ಟ್ರೀಯ ಶಾಲಾ ಕಟ್ಟಡದ ಶಿಲಾನ್ಯಾಸ ಸಮಾರಂಭ ಹಾಗೂ ಭೂಮಿ ಪೂಜೆಯ ಸಂದರ್ಭದಲ್ಲಿ ಜರಗಿದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರದ ಮಣ್ಣಿನಲ್ಲಿ ಬದುಕುತ್ತಿ ರುವ ನಾವು ಈ ಮಣ್ಣಿನ ಋಣವನ್ನು ತೀರಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಸಂಘವು ಶಿಕ್ಷಣ ಸೇವೆಯನ್ನು ವೃದ್ಧಿಸುವ ಮೂಲಕ ಮಹಾರಾಷ್ಟ್ರದ ಮುಂಬಯಿಗೆ ವಿಶೇಷ ಕೊಡುಗೆ ನೀಡುತ್ತಿದೆ ಎಂದರು. ಬಂಟ ಸಮಾಜದ ಅಗ್ರಗಣ್ಯ ರಾಜಕೀಯ ನೇತಾರ, ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರು ಸಂಘದ ಅಪ್ಪಟ ಚಿನ್ನವೆಂದು ಬಣ್ಣಿಸಿದ ಅವರು, ಸಂಘದ ಪ್ರತಿಯೊಂದು ಕಾರ್ಯದಲ್ಲಿ ಅವರ ಸಹಕಾರ ಅಪಾರ ಎಂದರು.

ಸಂಘದ ನೂತನ ಶಿಕ್ಷಣ ಯೋಜನೆ ಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ಉಪಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿ, ಕಾರ್ಯದರ್ಶಿ ಜಯ ಎ. ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್‌ ಹೆಗ್ಡೆ, ಡಾ| ಪಿ.ವಿ. ಶೆಟ್ಟಿ, ರವಿ ಶೆಟ್ಟಿ ಸಾಯಿ ಪ್ಯಾಲೇಸ್‌, ಸಂಘದ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಪರಿಶ್ರಮ ವನ್ನು ಶ್ಲಾಘಿಸುತ್ತ ಬಹುಕಾಲದ ಕನಸು ನನಸಗಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಶಿಕ್ಷಣ ಯೋಜನೆ ಯಶಸ್ವಿಯಾಗಲಿ: ಗೋಪಾಲ್‌ ಸಿ. ಶೆಟ್ಟಿ :

ಮುಖ್ಯ ಅತಿಥಿ, ಸಂಸದ ಗೋಪಾಲ್‌ ಸಿ. ಶೆಟ್ಟಿ ಮಾತನಾಡಿ, ಬೊರಿವಲಿಯ ಐಸಿ ಕಾಲನಿಯಲ್ಲಿ ಸುಮಾರು 31 ಶಾಲೆಗಳು ಈಗಾಗಲೇ ಕಾರ್ಯನಿರತವಾಗಿದ್ದು, ಇದೀಗ ಸಂಘದ ನೂತನ ಶಿಕ್ಷಣ ಯೋಜನೆಯ ಅಂತಾರಾಷ್ಟ್ರೀಯ ಶಾಲೆಯು 32ನೇ ಶಾಲೆಯಾಗಿ, ಗುಣಮಟ್ಟದಲ್ಲಿ ಇತರ ಶಾಲೆಗಳಿಗಿಂತ ಭಿನ್ನವಾಗಿ ಹೆಸರು ಗಳಿಸಲೆಂದು ಆಶಿಸುತ್ತೇನೆ. ಬಂಟರ ಭವನ ನಿರ್ಮಾಣದ ಕುರಿತು ಅವಲೋಕಿಸಿದರೆ, ಸಂಘದ ಯಶಸ್ಸಿನ ಬಗ್ಗೆ ಗೌರವ ಇನ್ನೂ ಹೆಚ್ಚುತ್ತದೆ, ಆಶ್ಚರ್ಯವೂ ಆಗುತ್ತದೆ ಎಂದು ತಿಳಿಸಿದರು. ಸಾಮಾಜಿಕ ಕಾರ್ಯದಲ್ಲಿ ಎಲ್ಲ ಪಕ್ಷಗಳು ಮತ ಭೇದ ಮರೆತು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಭಿಮಾನ ವ್ಯಕ್ತಪಡಿಸಿದ ಅವರು, ಸಂಘದ ಯಾವುದೇ ಸೇವೆಗೆ ಸದಾ ಸಿದ್ಧ ಎಂದು ಭರವಸೆ ನೀಡಿದರು.

ಸಂಘದ ಕೀರ್ತಿ ಮತ್ತಷ್ಟು ಹೆಚ್ಚಲಿ: ಐಕಳ ಹರೀಶ್‌ ಶೆಟ್ಟಿ :

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ, ಬಂಟರ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮಾತನಾಡಿ, ಬಂಟರಿಗೆ ಇಂದು ಬಹಳ ಸಂತಸದ ದಿನವಾಗಿದೆ. ಮುಂಬಯಿಯ ಉಪನಗರದಲ್ಲೊಂದು ಶಾಲೆಯ ಅಗತ್ಯವಿತ್ತು. ಬೊರಿವಲಿಯಲ್ಲಿ ಆರಂಭಗೊಳ್ಳಲಿ ರುವ ಅಂತಾರಾಷ್ಟ್ರೀಯ ಶಾಲೆಯಿಂದ ಪರಿಸರದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ನೂತನ ಶಾಲೆ ಯು ಸಂಘದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಹಾರೈಸಿದರು.

ಬಂಟರ ಸಂಘದ ಸಾಧನೆ ಅದ್ಭುತ: ಪ್ರವೀಣ್‌ ದರೇಕರ್‌ :

ಗೌರವ ಅತಿಥಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಪ್ರವೀಣ್‌ ದರೇಕರ್‌ ಮಾತನಾಡಿ, ಬಂಟರ ಸಂಘದ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಬಂಟರ ಬಗ್ಗೆ ನನಗೆ ಅಭಿಮಾನವಿದೆ. ಶೈಕ್ಷಣಿಕ ಕ್ಷೇತ್ರದಲ್ಲಂತೂ ಬಂಟರ ಸಂಘದ ಅದ್ಭುತ ಸಾಧನೆ ಮಾಡಿದೆ. ಮುಂಬಯಿ ಜಿಲ್ಲಾ ಬ್ಯಾಂಕ್‌ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ಸಹಾಯ ನೀಡಲು ಸಿದ್ಧನಿರುವುದಾಗಿ ಭರವಸೆ ನೀಡಿದರು.

ಟಾಪ್ ನ್ಯೂಸ್

ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ: ಸಚಿವೆ ಶಶಿಕಲಾ ಜೊಲ್ಲೆ

ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ: ಸಚಿವೆ ಶಶಿಕಲಾ ಜೊಲ್ಲೆ

32 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಚಮಚ : ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಾಕ್

32 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಚಮಚ : ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಾಕ್

owaisi

ಪಿಎಫ್ ಐ ಕಾರ್ಯ ವಿಧಾನವನ್ನು ಯಾವಾಗಲೂ ವಿರೋಧಿಸುತ್ತಿದ್ದೆ: ಓವೈಸಿ

“ತೋತಾಪುರಿ” ಮೇಲೆ ಸುಮನ ಗಮನ!

“ತೋತಾಪುರಿ” ಮೇಲೆ ಸುಮನ ಗಮನ!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ; ಕೇಂದ್ರ

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

firee

ಚೀನದ ರೆಸ್ಟೋರೆಂಟ್‌ನಲ್ಲಿ ಬೆಂಕಿ ಅವಘಡ: ಕನಿಷ್ಠ 17 ಜನ ಸಾವು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

TDY-1

ದೈವೀಶಕ್ತಿಯ ನಂಬಿಕೆ ಬದುಕನ್ನು ಬದಲಾಯಿಸಬಲ್ಲದು: ನಿತ್ಯಾನಂದ ಕೋಟ್ಯಾನ್‌

ಪುಣೆ ಬಂಟರ ಸಂಘ: ಸಂಭ್ರಮದ ಗಣೇಶೋತ್ಸವ, ಗಣಪತಿ ವಿಸರ್ಜನೆ

ಪುಣೆ ಬಂಟರ ಸಂಘ: ಸಂಭ್ರಮದ ಗಣೇಶೋತ್ಸವ, ಗಣಪತಿ ವಿಸರ್ಜನೆ

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ: ಸಚಿವೆ ಶಶಿಕಲಾ ಜೊಲ್ಲೆ

ಲಲಿತಾ ಪಂಚಮಿಯಂದು ದೇವಸ್ಥಾನಗಳಲ್ಲಿ ಸಾಮೂಹಿಕ ಕುಂಕುಮಾರ್ಚನೆ: ಸಚಿವೆ ಶಶಿಕಲಾ ಜೊಲ್ಲೆ

1—s-ddad

ಉಳ್ಳಾಲ ಸೀಮಂತ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಗರ್ಭಿಣಿಯ ಭಾವಚಿತ್ರ ; ವಿವಾದ

ಸಂತ್ರಸ್ತರ ಖಾತೆಗೆ ಇನ್ನೂ ಬಂದಿಲ್ಲ ಪರಿಹಾರ

ಸಂತ್ರಸ್ತರ ಖಾತೆಗೆ ಇನ್ನೂ ಬಂದಿಲ್ಲ ಪರಿಹಾರ

14.-

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ ಎರಡು ಹಸುಗಳ ಸಜೀವ ದಹನ

32 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಚಮಚ : ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಾಕ್

32 ವರ್ಷದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಚಮಚ : ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ಶಾಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.