ನಾಟಕಗಳ ಮೂಲಕ ಉತ್ತಮ ಸಂದೇಶ ನೀಡಬೇಕು: ಸಂತೋಷ್‌ ಶೆಟ್ಟಿ


Team Udayavani, Nov 20, 2019, 5:10 PM IST

mumbai-tdy-1

ಪುಣೆ, ನ. 19: ಲಕುಮಿ ತಂಡದ ಕುಸಲ್ದ ಕಲಾವಿದೆರ್‌ ಮಂಗಳೂರು ಲ| ಕಿಶೋರ್‌ ಡಿ. ಶೆಟ್ಟಿ ಅವರ ನಿರ್ದೇಶನದಲ್ಲಿ ಮಂಗೆ ಮಲ್ಪೋಡ್ಚಿ ತುಳು ಹಾಸ್ಯ ನಾಟಕ ಕರ್ನೂರು ಮೋಹನ್‌ ರೈ ಹಾಗೂ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಸಂಚಾಲಕತ್ವದಲ್ಲಿ ನ. 14ರಂದು ಸಂಜೆ ಪುಣೆ ಕನ್ನಡ ಸಂಘದ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ ಪ್ರದರ್ಶನಗೊಂಡಿತು. ನಾಟಕದ ಮಧ್ಯಾಂತರದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ತಂಡದ ಕಲಾವಿದ ದೇವಿಪ್ರಸಾದ್‌ ಶೆಟ್ಟಿ ಬೆಜ್ಜ ಇವರನ್ನು ಸಮ್ಮಾನಿಸಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು ಮಾತನಾಡಿ, ತುಳು ನಾಟಕಗಳ ಮೂಲಕ ಕೇವಲ ಮನೋರಂಜನೆ ಮಾತ್ರವಲ್ಲ ಸಮಾಜಕ್ಕೆ ಉತ್ತಮ ಸಂದೇಶಗಳು ದೊರೆಯುತ್ತವೆ. ತುಳು ರಂಗಭೂಮಿಯನ್ನು ಉಳಿಸಲು ಶ್ರಮಿಸುತ್ತಿರುವ ಕಲಾವಿದರನ್ನು ನಾವು ಪ್ರೋತ್ಸಾಹಿಸಬೇಕಾಗಿದೆ. ಅದೇ ರೀತಿ ಯಕ್ಷಗಾನ ಹಾಗೂ ತುಳು ನಾಟಕಗಳನ್ನು ಊರಿನಿಂದ ಕರೆಸಿ ಮುಂಬಯಿ-ಪುಣೆಗಳಲ್ಲಿ ಪ್ರದರ್ಶಿಸುವ ಹೊಣೆ ಗಾರಿಕೆಯನ್ನು ಕರ್ನೂರು ಮೋಹನ್‌ ರೈಹಾಗೂ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ವಹಿಸಿಕೊಂಡು ನಿಸ್ವಾರ್ಥ ಕಲಾಸೇವೆಯನ್ನು ಮಾಡುತ್ತಿರುವುದು ಅಭಿನಂದನೀಯವಾಗಿದೆ. ಭಾಷೆ ಹಾಗೂ ಕಲೆಯನ್ನು ಉಳಿಸುವಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ಕಲಾವಿದರಿಗೆ ಹಾಗೂ ಸಂಘಟಕರಿಗೆ ಶಕ್ತಿಯನ್ನು ತುಂಬುವ ಕಾರ್ಯ ನಾವು ಮಾಡಬೇಕಾಗಿದೆ ಎಂದರು.

ಪುಣೆ ಕನ್ನಡ ಸಂಘದ ಅಧ್ಯಕ್ಷರಾದ ಕುಶಲ್‌ ಹೆಗ್ಡೆಯವರು ಮಾತನಾಡಿ, ಒಂದು ಕಾಲದಲ್ಲಿ ನಾಟಕ, ಯಕ್ಷಗಾನಗಳೇ ಮನೋರಂಜನೆಯ ಮೂಲಗಳಾಗಿತ್ತು. ಆದರೆ ಕ್ರಮೇಣವಾಗಿ ಆಧುನಿಕ ತಂತ್ರಜ್ಞಾನ ಬೆಳೆದಂತೆ ಜನರು ಇದರ ಬಗ್ಗೆ ಆಸಕ್ತಿ ಕಳೆದುಕೊಳ್ಳತೊಡಗಿದರೂ ಈ ಕಲೆಯನ್ನು ಉಳಿಸುವಲ್ಲಿ ಸಂಘಟಕರು ಹಾಗೂ ಕಲಾವಿದರು ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಇವರ ಕಾರ್ಯಕ್ಕೆ ನಮ್ಮಿಂದಾದ ಪ್ರೋತ್ಸಾಹವನ್ನು ನಾವು ನೀಡಬೇಕಾಗಿದೆ ಎಂದರು.

ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಮಾತನಾಡಿ ತುಳುನಾಡಿನ ಕಲೆ ಸಂಸ್ಕೃತಿಯನ್ನು ಹೊರನಾಡಿನಲ್ಲಿ ಬಿತ್ತರಿಸುವ ಕಾರ್ಯ ಮಾಡುತ್ತಿರುವ ಸಂಘಟಕರಿಗೆ ಕೃತಜ್ಞತೆಗಳನ್ನು ಸಲ್ಲಿಸ ಬೇಕಾಗಿದೆ. ಅರವಿಂದ ಬೋಳಾರ್‌ರಂತಹ ಕಲಾವಿದರು ಸಿನಿಮಾ ರಂಗದಲ್ಲಿ ಬಹು ಬೇಡಿಕೆಯನ್ನು ಹೊಂದಿದ್ದರೂ ಕೂಡಾ ತುಳು ರಂಗಭೂಮಿಯನ್ನು ಮರೆಯದೆ ಬೆಳೆಸುತ್ತಿರುವುದು ಅಭಿನಂದನೀಯವಾಗಿದೆ ಎಂದರು.

ಕಲಾವಿದ ಅರವಿಂದ ಬೋಳಾರ್‌ ಮಾತನಾಡಿ, ಕಲಾಭಿಮಾನಿಗಳ ಪ್ರೋತ್ಸಾಹದಿಂದಲೇ ನಾವು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಕಲಾವಿದರಿಗೆ ಕಲಾಭಿಮಾನಿಗಳ ಪ್ರೋತ್ಸಾಹವೇ ಶ್ರೀರಕ್ಷೆಯಾಗಿದೆ. ಆದುದರಿಂದ ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಮೇಲಿರಲಿ. ಪ್ರತಿ ವರ್ಷ ನಾಟಕ ತಂಡಕ್ಕೆ ಸಹಕಾರ ನೀಡುತ್ತಿರಿ ಎಂದರು.

ಲಕುಮಿ ತಂಡದ ಮುಂಬಯಿ ಸಂಚಾಲಕ ಕರ್ನೂರು ಮೋಹನ್‌ ರೈ ಅವರು ಮಾತನಾಡಿ, ಕಳೆದ 24 ವರ್ಷಗಳಿಂದ ನಾಟಕ ತಂಡಗಳನ್ನು ಊರಿನಿಂದ ಕರೆತಂದು ಮುಂಬಯಿ ಪುಣೆಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸುವ ಕಾಯಕವನ್ನು ಮಾಡುತ್ತಾ ಬಂದಿದ್ದೇನೆ. ಪ್ರತಿ ಸಂದರ್ಭದಲ್ಲೂ ಪುಣೆಯ ಕಲಾಪೋಷಕರು, ಕಲಾಭಿಮಾನಿಗಳು ನನಗೆ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ. ಅದೇ ರೀತಿ ಇಂದಿನ ನಾಟಕಕ್ಕೂ ತುಂಬು ಹೃದಯದಿಂದ ಅಭಿಮಾನದಿಂದ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಮುಂದೆಯೂ ನಿಮ್ಮೆಲ್ಲರ ಪ್ರೋತ್ಸಾಹ, ಸಹಕಾರ ನಿರಂತರವಾಗಿರಲಿ

ಎಂದರು.

ವೇದಿಕೆಯಲ್ಲಿ ಪಿಂಪ್ರಿ-ಚಿಂಚಾಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್‌, ಪುಣೆ ಬಂಟರ ಸಂಘದ ಉಪಾಧ್ಯಕ್ಷ ಸತೀಶ್‌ ಶೆಟ್ಟಿ, ಕೋಶಾಧಿಕಾರಿ ವೈ. ಚಂದ್ರಹಾಸ ಶೆಟ್ಟಿ, ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್‌. ಶೆಟ್ಟಿ, ಪಿಂಪ್ರಿ-ಚಿಂಚ್ವಾಡ್ ಡ್‌ ಹೊಟೇಲ್‌ ಓನರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಶ್ರೀ ಗುರುದೇವಾ ಸೇವಾ ಬಳಗದ ಕಾರ್ಯದರ್ಶಿ ರೋಹಿತ್‌ ಡಿ. ಶೆಟ್ಟಿ ನಗ್ರಿಗುತ್ತು, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಕೋಶಾಧಿಕಾರಿ ಪೆಲತ್ತೂರು ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.

ಅತಿಥಿಗಳನ್ನು ಹಾಗೂ ಕಲಾವಿದ ಅರವಿಂದ ಬೋಳಾರ್‌ ಇವರನ್ನು ಮುಂಬಯಿ ಸಂಚಾಲಕರಾದ ಕರ್ನೂರು ಮೋಹನ್‌ ರೈ ಹಾಗೂ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಗೌರವಿಸಿದರು. ವಿಶೇಷ ಸಹಕಾರ ನೀಡಿದ ಕಲಾಭಿಮಾನಿಗಳನ್ನು ಸತ್ಕರಿಸಲಾಯಿತು. ಪತ್ರಕರ್ತ ಕಿರಣ್‌ ಬಿ. ರೈ ಕರ್ನೂರು ಕಾರ್ಯಕ್ರಮ ನಿರೂಪಿಸಿದರು. ಅನಂತರ ನಾಟಕ ಪ್ರದರ್ಶನ ಮುಂದುವರಿಯಿತು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

-ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

ಟಾಪ್ ನ್ಯೂಸ್

ಸಿಡಿಲಕಿಡಿ ಸುಂದರ್‌ ಸಾಹಸ

ಸಿಡಿಲಕಿಡಿ ಸುಂದರ್‌ ಸಾಹಸ

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶನಿದೇವರ ಅನುಗ್ರಹದಿಂದ ಮಂದಿರ ನಿರ್ಮಾಣ: ಹರೀಶ್‌ ಜಿ. ಅಮೀನ್‌

ಶನಿದೇವರ ಅನುಗ್ರಹದಿಂದ ಮಂದಿರ ನಿರ್ಮಾಣ: ಹರೀಶ್‌ ಜಿ. ಅಮೀನ್‌

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಹಕರಿಸಿ ಭಾಷೆ ಉಳಿಸೋಣ: ರವಿ ಎ. ಬಂಗೇರ

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಹಕರಿಸಿ ಭಾಷೆ ಉಳಿಸೋಣ: ರವಿ ಎ. ಬಂಗೇರ

ಮಾನಸಿಕ, ದೈಹಿಕ ಕ್ಷಮತೆಗೆ ಅಯ್ಯಪ್ಪ ವ್ರತ ಪ್ರೇರಣೆ: ಶ್ರೀನಿವಾಸ ಗುರುಸ್ವಾಮಿ

ಮಾನಸಿಕ, ದೈಹಿಕ ಕ್ಷಮತೆಗೆ ಅಯ್ಯಪ್ಪ ವ್ರತ ಪ್ರೇರಣೆ: ಶ್ರೀನಿವಾಸ ಗುರುಸ್ವಾಮಿ

ಬಿಲ್ಲವರ ಅಸೋ. ಮುಂಬಯಿ ಮಹಿಳಾ ವಿಭಾಗ: ಮಕರ ಸಂಕ್ರಾಂತಿ ಆಚರಣೆ

ಬಿಲ್ಲವರ ಅಸೋ. ಮುಂಬಯಿ ಮಹಿಳಾ ವಿಭಾಗ: ಮಕರ ಸಂಕ್ರಾಂತಿ ಆಚರಣೆ

Untitled-1

ಕಾತ್ರಜ್‌: ಶ್ರೀ ಅಯ್ಯಪ್ಪ ಸ್ವಾಮಿ  ಮಂದಿರದಲ್ಲಿ ಮಕರ ಸಂಕ್ರಾಂತಿ ಆಚರಣೆ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಸಿಡಿಲಕಿಡಿ ಸುಂದರ್‌ ಸಾಹಸ

ಸಿಡಿಲಕಿಡಿ ಸುಂದರ್‌ ಸಾಹಸ

dಉದನೆ: ಹೆದ್ದಾರಿಯಲ್ಲಿ ಆನೆ ಸಂಚಾರ!

ಉದನೆ: ಹೆದ್ದಾರಿಯಲ್ಲಿ ಆನೆ ಸಂಚಾರ!

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.